ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನಸ್ಸು ಮರ್ಕಟನಂತೆ!!!

ಇಂದೇಕೋ ನನ್ನೀ
ಮನಸ್ಸು ಮರ್ಕಟನಂತೆ
ನಿಂತಲ್ಲೇ ನಿಲದಂತೆ
ಮಾತೊಂದ ಕೇಳದಂತೆ

ನಾ ಆಶ್ಚರ್ಯ ಪಡುವಂತಹ
ನನ್ನದೇ ನಡವಳಿಕೆಗಳು
ಈ ಮುಂಜಾವಿನಿಂದಲೂ
ವಿಚಿತ್ರಾವಿಚಿತ್ರ ಭಾವಗಳು

ವಾರ್ತೆ ಕೇಳುವಾಗ ನೃತ್ಯ
ಮಾಡಿ ಬೈಸಿಕೊಂಡೆ
ಯಾವುದೋ ಹಾಡಿಗೆ ದೊಡ್ಡ
ದನಿಯಾಗಿ ಕಿರುಚಿಕೊಂಡೆ

ರಸ್ತೆಯಲಿ ವಾಹನಕ್ಕಡ್ದ
ಬಂದವನ ಬೈದಿದ್ದಾಯ್ತು
ಯಾರನ್ನೋ ನೆನೆಸಿಕೊಂಡು

ಗೆಳೆಯನಿಗೆ ವಿದಾಯ ....

ನಡೆವೆ ನೀನು ಎನ್ನ ಬಿಟ್ಟು
ನಿನ್ನ ಬಾಳ ಗುರಿಯನು
ಸೇರಲೆಂದು ಜಗದ ಬಳಿಗೆ
ಎನ್ನ ಜೀವದ ಗೆಳೆಯನೆ

ಕಳೆದೆವೆ೦ತೊ ಹಲವು ದಿವಸ
ಕೂಡಿ ನಾವು ಹಿತದಲಿ
ಸರಸ ವಿರಸ ಕೊನೆಗೆ ಹರುಷ
ಕೂಡಿ ನಾವು ಹಂಚುತ

ಬಲಿತ ಹಕ್ಕಿ ಕಾಳು ಹೆಕ್ಕಿ
ತಿನ್ನಲೆಂದು ಹಾರುತ
ಮೇಲೆ ನೆಗೆವ ತೆರದಿ ನಾವು
ಜತೆಯ ಬಿಟ್ಟು ಅಗಲುತ

ಇರಲಿ ಪ್ರೀತಿ ಸ್ನೇಹವೆಂದು
ನಿರತ ನಮ್ಮಲೆನ್ನುತ

"ನಮ್ಮ ಸಂಪದಿಗರು"

ಇಲ್ಲಿರುವ ಸಂಪದಿಗರು (ಅಂದರೆ ಹಳೇ ಸದಸ್ಯರು)
ಬರುವ ಹೊಸ ಸದಸ್ಯರು
ಲೇಖನಗಳ ಬರೆಯುವರು
ತಮ್ಮ ಬ್ಲಾಗಿನಲಿ ತುಂಬಿಸುವರು
ಚರ್ಚೆಗೆ ಮುಂದಿಡುವರು
ಕಾರ್ಯಕ್ರಮಗಳನ್ನು ಪ್ರಕಟಿಸುವರು
ಚಿತ್ರಗಳನ್ನು ಪೇರಿಸುವರು (ಏರಿಸುವರು)
ಎಲ್ಲರು ಅದಕ್ಕೆ ಪ್ರತಿಕ್ರಿಯಿಸುವರು
ಪ್ರತಿಕ್ರಿಯೆಗಳ ಮೂಲಕ ಕೆಲವರು ಹೊಗಳುವರು
ಇನ್ನು ಕೆಲವರು ತೆಗಳುವರು

ನೆರಳು

ತನ್ನ ಹಿಂದೆ ಬರುತ್ತಿರುವುದು ನಾಯಿಯೋ ಬೆಕ್ಕೋ ಎಂದು ಕತ್ತಲಲ್ಲಿ ಕಾಣದೇ, ಮುಂದೆ ಹೋಗುವ ಆಕೃತಿ ಯಾವುದು ಎಂದು ಗುರುತಿಸಲಾಗದೇ ಆ ಹಿಂದಿರುವ ಪ್ರಾಣಿಯೂ ಹೀಗೆಯೇ ಯೋಚಿಸುತ್ತಿರಬಹುದೆಂದು ಭಾವಿಸಿ ನಾಗಪ್ಪ ಬಿರಬಿರನೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ.

ಪ್ರಖ್ಯಾತ ಅಂಕಣಕಾರರಾಗುವುದು ಹೇಗೆ?

ಈ ಹಿಂದೆ ನಾವು ಉತ್ತಮ ಕವಿಯಾಗಲು ನೀಡಿದ್ದ ಪಂಚ ಸೂತ್ರಗಳನ್ನು
ಬಳಸಿ ಅತ್ಯಂತ ಯಶಸ್ವಿ ಕವನಗಳನ್ನು ಗೀಚಿ ಕವಿಯಾದ ಅನೇಕರು ನಮ್ಮನ್ನು ಅಭಿನಂದಿಸಿದ
ಹಿನ್ನೆಲೆಯಲ್ಲಿ ಅಂದು ಶುರು ಮಾಡಿದ್ದ ಸಾಹಿತ್ಯ ಅಭಿಯಾನವನ್ನು ಮುಂದುವರೆಸಲು

ಕೋಪ

ಕೋಪವು ಮನದ ಜ್ಯೋತಿಯನ್ನು ನ೦ದಿಸಿ ಬಿಡುತ್ತದೆ

ಮದ್ವೆ - ಲವ್ ಯಾವುದು ಮೊದಲು .. ತುಂಟನ ತೀರ್ಮಾನ!

"ಲವ್ ಮಾಡಿ ಮದ್ವೆ ಆಗೋದು ಒಳ್ಳೆಯದೋ ? ಅತ್ವ ಮದ್ವೆ ಆಗಿ ಲವ್ ಮಾಡೋದು ಒಳ್ಳೆಯದೋ?!"

ಈ ಪ್ರಶ್ನೆ  ನಿಮಗೆ ಎದುರಾಗಿ ಇದ್ದೆ ಇರುತ್ತೆ.

"ಮೊದಲು ಅತ್ವ ಆಮೇಲೆ ಅದೆಲ್ಲ ಇರಲಿ... ಮದ್ವೆ ಆಗೋದು ಒಳ್ಳೇದು ಅಂತ ಹೇಳಿದ್ದು ಯಾರು?!" ಅನ್ನೋ ನಮ್ಮ ವೇದಾಂತಿ ಮಾತನ್ನು ನೀವು ಕೇಳೆ ಇದ್ದೀರಿ.

 

ಮುರಿದು ಬಿಡು, ಮೌನ!

ಸಖೀ,

"ನೀನೆಂದೂ ಇಂತಿದ್ದವಳಲ್ಲ,
ಸುಮ್ಮನಂತೂ ಇದ್ದವಳೇ ಅಲ್ಲ;
ಏಕೆ ಹೇಳು ಈ ಸುದೀರ್ಘ ಮೌನ?
ಎನ್ನೊಡನೆ ಮಾತಾಡಲೆಳಸದೆ ನಿನ್ನ ಮನ?

ನನ್ನೀ ಒಂಟಿ ಜೀವಕೆ ನಿನ್ನ ಸವಿ ನುಡಿಗಳೇ
ಆಸರೆಯಾಗಿದ್ದವೆಂದು ನೀನು ಬಲ್ಲೆ,
ಆದರೆ, ಇಂದು ಮುನಿಸಿಕೊಂಡು ಮೂಲೆ
ಹಿಡಿದು ತೆಪ್ಪಗೇ ಕುಳಿತು ಬಿಟ್ಟೆಯಲ್ಲೆ?

ಮರಳುಗಾಡಿನಲಿ ಅಪರೂಪಕ್ಕೆ
ಕಂಡು ಬರುವ ಓಯಸಿಸ್‌ನಂತೆ,