ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...(ಭಾಗ 2)

ಪ್ರೀತಿ ಎಂದರೇನು? ಜೀವನ ಎಂದರೇನು? ಎಂಬುದನ್ನು ಪದಗಳಲ್ಲಿ ಹಿಡಿದಿಡುವಷ್ಟೇ ಕಷ್ಟವಾದ ಕೆಲಸ ಪ್ರೀತಿ ಎಂದರೇನು ಎಂಬುದನ್ನು ವಿವರಿಸುವುದು. ಜೀವನವೇ ಪ್ರೀತಿ. ಪ್ರೀತಿಯೇ ಜೀವನ. ಅದಕ್ಕಾಗಿಯೇ ಹಿರಿಯರು "ಒಲವೇ ಜೀವನ ಸಾಕ್ಷಾತ್ಕಾರ" ಎಂದಿರುವುದು. ಪ್ರೀತಿಯ ಮೊದಲ ಪಾಠ ಎಂದರೆ ಪ್ರೀತಿಗಾಗಿ ಕೇಳದಿರುವುದು. ಬರೀ ನೀಡುವುದು. ನೀಡುವುದನ್ನು ಕಲಿತರೆ, ಪ್ರೀತಿಸುವುದನ್ನು ಕಲಿತಂತೆ. ಆದರೆ, ಈಗ ನಡೆಯುತ್ತಿರುವುದು ಅದಕ್ಕೆ ವಿರುದ್ಧ. ಅವರು ನೀಡುವಾಗಲೂ ಅದು ವಾಪಸ್ಸು ಬರುತ್ತದೆಯೋ ಇಲ್ಲವೋ ಎಂದು ಆಲೋಚಿಸಿಯೇ ನೀಡುತ್ತಾರೆ. ಅದಕ್ಕೆ ಅದು ಚೌಕಾಸಿಯಾಗಿರುವುದು. ಜನ ಪ್ರೀತಿಯನ್ನು ಹಂಚಿಕೊಳ್ಳುವುದಿಲ್ಲ. ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಅವರು ಷರತ್ತಿನ ಮೇಲೆ ಹಂಚಿಕೊಳ್ಳುತ್ತಾರೆ. ಅವರು ತಾವು ನೀಡಿದ್ದು ತಮಗೆ ವಾಪಸ್ಸು ಬರುವುದೋ ಇಲ್ಲವೋ ಎಂದು ಕಾಯುತ್ತಾ ಕುಳಿತಿರುತ್ತಾರೆ.

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೩

"ನೀವು ಬದಲಾಗಿಬಿಟ್ರಿ ಸರ್ .ನಿಮಗೆ ನೆನಪಿದ್ಯಾ ೧೯೮೦ ಬ್ಯಾಕ್ ಕರ್ಕೊಂಡು ನಾವೆಲ್ಲಾ ಜೋಗಕ್ಕೆ ಹೋಗಿದ್ವಿ .ನಿಮ್ಮ ಸ್ಕ್ರಿಕ್ಟ್ ನೆಸ್ ನೋಡಿನೇ ಎಷ್ಟೋ ಜನ ತಂದೆ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನ ಟ್ರಿಪ್ಗೆ ಕಳಿಸಿದ್ರು . ಜೋಗದಲ್ಲಿ ಎಲ್ಲರಿಗೂ ಫಾಲ್ಸ್ ತೋರಿಸಿ ಕರೆಂಟ್ ಹೇಗೆ ತಯಾರಾಗುತ್ತೆ ಅಂತ ಹೇಳಿ ವಾಪಸು ಹೋಗಕ್ಕೆ ಮೇಲಕ್ಕೆ ಬಂದ್ವಿ .

ನಮ್ಮ ಸಂಪದಿಗರು!!! ಹಾಗೇ ಸುಮ್ಮನೆ........ಹಾಸ್ಯ-ಕವನ

ನಮ್ಮ ಸಂಪದಿಗರು---ಹಾಸ್ಯ ಕವನ

ನಮ್ಮ ಸಂಪದಿಗರು
ಬಲು ರಸಿಕರು
ಮನಸ ಕದ್ದರು
ಲೇಖಕರ ಕೆಲವರು
ಹಾಗೇ ಉಣಬಡಿಸಿದರು
ಲೇಖನಗಳ ಸಾರು (ಸಾಂಬಾರು)
ಚುಟುಕುಗಳ ಉಪ್ಪಿನಕಾಯಿಯ ಚೂರು-ಪಾರು
ರಾಜಕೀಯ ಸುದ್ಧಿಗಳ ಗೊಜ್ಜುಗಳ ಒಗರು
ವ್ಯಂಗ್ಯಚಿತ್ರಗಳ ಕಲಸುಮೇಲೋಗರ
ನಿಜ ಕಥನಗಳ ಕುರುಕುಲು ಕಮರು
ಸಿನಿಕತೆಯ ಸಿಹಿ ಚೂರು
ಪ್ರತಿಕ್ರಿಯೆಯ ಊಟೋಪಚಾರ
ಹೆಚ್ಚಾಯಿತು ಆದರ

ಹಾವ ತಿನ್ನುವ ಇರುವೆಗಳು

ಬೇಡ ಹಗೆ ಬಲು ಜನರೊಡನೆ
ತೊಡಕು ಗೆಲುವುದು ಗುಂಪನ್ನು;
ಕಟ್ಟಿರುವೆಗಳು ಕಚ್ಚಿ ತಿನ್ನಬಹುದು 
ಹೆಡೆಭುಸುಗುಡುತಿಹ ಹಾವನ್ನೂ!

ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ

ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ

ವಾರದ್ ಕೊನಿಗೆ ಶಿರ್ಡಿಗ್ ಹ್ವಾಗೋ ಮನ್ಸಿದ್ರೆ , ಮತ್ತೊಂದ್ ಹೊಸ್ಟ್ರೇನ್ ಹೊರ್ಡ್ತೈತ್ರಿ, ಇದೇ ಮಾರ್ಚ್, ೨೦ನೇ ತಾರೀಖ್ನಿಂದ !

ಈ ಗಾಡಿ ಪುಣೆ ಶಹರ್ನಾಗಿಂದ ಹೋಗಲ್ಲರಿ. ಅದಕ್ಕೆ ನಮಗೆ 112.5 ಕಿ. ಮೀ ಕಡಿಮೆ ಆಗೋದ್ರಿಂದ, ಲಭು ಹೋಗ್ತೀವ್ರಿ. (7 ತಾಸ್ಗಿಗಿಂತ ಇನ್ನೂ ಕಡಿಮೆ ಸಮಯ)

ಚಲೋ ಆತಲ್ರಿ...ಮತ್ತೇನ್ರಿ. ಮುಂದೆ ಸಾವ್ಕಾಶ್ ವಾಗ್ ಓದ್ರಿ. ಮತ್ತ...

ಈಗ್ ಹಾಕಿರೋದು ಫಾಸ್ಟ್ ಟ್ರೇನ್ ಅಂತ್ರಿ. ಪ್ರಯೋಗ ನಡ್ಸ್ಯಾರ್ರಿ ಒಳ್ಳೇ ರೆಸ್ಪಾನ್ಸ್ ಬಂದ್ರೆ ಇದು ಮುಂದು ವರ್ಯೊದ್ರಲ್ಲಿ ಸಂಶಯ ಇಲ್ರಿಯಪ್ಪ.

ಪತ್ರಕರ್ತರು ಮತ್ತು ವೆಬ್-ಸೈಟ್ ಬಗ್ಗೆ ಒಂದು ಸುದ್ದಿ...

ಬಿಜೆಪಿ ವೆಬ್-ಸೈಟಿನಲ್ಲಿಲ್ಲ ಕನ್ನಡದ ಮಂತ್ರ ಎಂಬ ಸುದ್ದಿಯೊಂದು ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. http://vijaykarnatakaepaper.com/epaper/pdf/2009/03/18/20090318a_002101004.jpg

ಆದರೆ ಅವರ ವೆಬ್-ಸೈಟ್ ಹೋಗಿ ನೋಡಿದರೆ ಬಹುತೇಕ ಕನ್ನಡವಿರುವುದು ಕಂಡುಬಂತು. http://bjpkarnataka.org/kan/

ಒಂದು ವೆಬ್-ಸೈಟು ಬಗ್ಗೆ ಬರೆಯುವ ಮೊದಲು ಒಮ್ಮೆ ಅದಕ್ಕೆ ಭೇಟಿ ನೀಡಿ ಪರಿಶೀಲಿಸುವ ವ್ಯವಧಾನವೂ ಆ ಪತ್ರಕರ್ತರಿಗಿಲ್ಲವೇ?

ನಮ್ಮೂರ ATM ನಮ್ಮ ಬಳಕೆಗೆ ತಾನೇ ?

ಈಗ೦ತೂ ಎಲ್ಲಾರೂ ಎಟಿಎಂ ಸೌಲಭ್ಯ ಬಳಸುತ್ತಿದ್ದಾರೆ. ಹಾಗೆಯೇ ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಕನ್ನಡದ ಆಯ್ಕೆ ಇದ್ದಿದ್ದ್ರೆ ಚೆನ್ನಾಗಿರುತ್ತಿತ್ತು... ಅನ್ಕೊ೦ಡು ಸುಮ್ಮನಾಗೋರು ಕೂಡಾ ಸಾಕಷ್ಟು ಮ೦ದಿ ಇದ್ದಾರೆ. ಆದರೆ ಕರ್ನಾಟಕದಲ್ಲಿ ಬ್ಯಾ೦ಕ್ ಗಳು ಇ೦ತಹ ಮೂಲಭೂತವಾದ ಸೇವೆಗಳನ್ನೂ ಸಹ ಕನ್ನಡದಲ್ಲಿ ಕೊಡದೆ ಇರುವುದು ನಿಜವಾಗಲೂ ದುಃಖದ ಸ೦ಗತಿ.

ಕಲ್ಲಿಹಳ್ಳಿ ಅವರ ತೋಟದ ಈ ಬಿಳಿ ಹಾವು ಹೆಗ್ಗಣ ನುಂಗಿತ್ತೋ...? ಅಥವಾ ಗರ್ಭಿಣಿಯಾಗಿತ್ತೋ!

ತ.ರಾ.ಸು. ಬದುಕಿರಬೇಕಿತ್ತು. ಹಾಗೆಯೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಕೂಡ.

ಖಾತ್ರಿ ನಮ್ಮ ಸುಬ್ಬರಾಯರು ತಮ್ಮ ಐತಿಹಾಸಿಕ ಕಾದಂಬರಿ ‘ನಾಗರಹಾವು’ ಶೀರ್ಷಿಕೆ ತಿದ್ದಿ ’ಬಿಳಿ ನಾಗರಹಾವು’ ಎಂದು ಬರೆಯುತ್ತಿದ್ದರು!

ಹಾಗೆಯೇ ನಮ್ಮ ಪುಟ್ಟಣ್ಣನವರು ತಮ್ಮ ಚಲನಚಿತ್ರದ ಹೆಸರನ್ನು ಸಹ ’ಬಿಳಿ ನಾಗರಹಾವು’ ಎಂದು ಬದಲಾಯಿಸುತ್ತಿದ್ದರು ಎಂದು ನಾನಂದರೆ ನೀವು ನಂಬಬೇಕು.

ಬೇಕಿದ್ದರೆ ‘ನಾಗರಹಾವಿನ’ ನಮ್ಮ ಚಾಮಯ್ಯ ಮೇಷ್ಟ್ರು..ಕೆ.ಎಸ್.ಅಶ್ವಥ್ ಅವರನ್ನು ಈಗ ಕೇಳಲು ಅಡ್ಡಿ ಇಲ್ಲ!

ಕಾರಣ ಮೊನ್ನೆ ನಮ್ಮ ಏಲಕ್ಕಿ ಕಂಪಿನ ನಾಡು ಹಾವೇರಿಯ ಜಿಲ್ಲೆ ವ್ಯಾಪ್ತಿಯ ಗ್ರಾಮ ಯೆಲ್ಲಾಪುರದಲ್ಲಿ ಸುಂದರವಾದ ಬಿಳಿ ಹಾವು ಏಕಾಏಕಿ ಪ್ರತ್ಯಕ್ಷವಾಗಿತ್ತು. ಕಪ್ಪು ಮಣ್ಣಿನ ಮಣ್ಣಿನ ಮಸಾರಿ ಭೂಮಿಯಲ್ಲಿ ಈ ವಿಚಿತ್ರ ಉಪದ್ರವ ಜೀವಿಯ ಅವತರಣ ಆ ಭಾಗದಲ್ಲಿ ವಿಶೇಷ ಸಂಚಲನ ಮೂಡಿಸಿತ್ತು. ಗ್ರಾಮದ ಭೀಮಪ್ಪಜ್ಜ ಮೂಗೇರಿಸಿ, ಕನ್ನಡಕದಲ್ಲಿ ದಿಟ್ಟಿಸಿ ನೋಡಿ.."ಅಯ್ಯೋ..ಇದ..ಬಿಳಪ ಹತ್ತಿದ ಹಾವು!" ಅಂತ ಅಂದ್ರು. ನಮ್ಮಂತಹ ನೋಡುಗರ ಆಸಕ್ತಿ ಉಡುಗಿಯೇ ಹೋಗಿತ್ತು. ‘ಹಾವಿಗೂ ತೊನ್ನು ರೋಗ ಬರುತ್ತದೆಯೇ?’