ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾ ಕಂಡ ಕವಿಮನೆ

ಕಳೆದ ವರ್ಷ ಮಲೆನಾಡಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ನೀಡಿದಾಗ ನಮ್ಮ ನೋಡಲೇ ಬೇಕಾದ ಸ್ಥಳಗಳ ಲಿಸ್ಟ್ ನಲ್ಲಿ ಕವಿಶೈಲ ಮತ್ತೆ ಕವಿಮನೆ ಕೂಡ ಇತ್ತು. ಹಾಗೆಯೇ ಅಲ್ಲಿಗೆ ಹೋದೆವು ಕೂಡಾ, ಆಗ ಈ ಪಾಮರಳ ದೃಷ್ಟಿಯಲ್ಲಿ ಕಂಡ ಕವಿಮನೆಯನ್ನ ನಿಮ್ಮ ಜೊತೆಗೂ ಹಂಚಿಕೊಳ್ಳಬೇಕೆಂಬ ಇಚ್ಚೆ ಈ ಬರಹಕ್ಕೆ ಸ್ಫೂರ್ತಿ.

ಮನದಲ್ಲಿ ಮೂಡಿದ ಸಾಲುಗಳು

ನಿರೀಕ್ಷೆ
ಎಲ್ಲೋ ಮಲಗಿದೆ ಬೇಸರ
ಕಣ್ಣ ತುಂಬ ಕಾತರ
ಬರುವನೇ ನನ್ನ ಚಂದಿರ
ಕೇಳಲು ನನ್ನ ಇಂಚರ

ಮಿಂಚು
ನೀ ಬಂದಾಗ ನಾನೆಣಿಸಿದೆ
ನೀ ನನ್ನ ಬಾಳ ಬೆಳಕೆಂದು
ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು
ಆದರೆ ನೀನು ಮಿಂಚಿ ಮರೆಯಾಗುವ
ಬಾಳನ್ನೇ ಛಿದ್ರ ಮಾಡುವ ಸಿಡಿಲೆಂದು ತಿಳಿದದ್ದು
ಆ ಎದೆ ನಡುಗಿಸುವ ಶಬ್ದ ಕೇಳಿದ ನಂತರವಷ್ಟೇ….

ನೆನಪು
ಮಳೆಯ ಹನಿ ನಿಂತರು

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ!!!

ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು
ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು

ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು
ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು

ಯಾರೂ ಅರಿತಿಲ್ಲ ಸ್ವಾಮಿ ನಾಳೆ ಏನಾಗುವುದೆಂದು
ನನಗರಿವೇ ಇಲ್ಲ ನಾ ನಾಳೆ ಬೆಳಗ ಕಾಣಬಹುದೆಂದು

ನಿನ್ನೆಯದಕೆ ಕೊರಗದಿರು ನಾಳೆಯ ಚಿಂತೆ ಮಾಡದಿರು

ಲಕ್ಶ್ಮಿದೇವಿಗೆ ಕಾಲುಗಳೇ ಕೈಗಳು

ಕೈಯಿದ್ದವರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದೇ ಕಷ್ಟವಾಗಿರುವಾಗ, ಈ ಯುವತಿ ತನ್ನ ಪಾಲಕರಿಗೂ ಹೊರೆಯಾಗದೇ, ತನ್ನ ಎಲ್ಲ ಕೆಲಸಗಳನ್ನು ಕಾಲುಗಳಿಂದಲೇ ಮಾಡಿಕೊಳ್ಳುವಳೆಂದರೆ ಆಶ್ಚರ್ಯವಾಗದಿರದೇ? ನಿಜ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಂಡುಮುಣುಗು ಗ್ರಾಮದ ಲಕ್ಷ್ಮೀದೇವಿಗೆ ಕಾಲುಗಳೇ ಕೈಗಳು.

ಸರ್ಕಾರಿ ಕಛೇರಿಗಳ ಲಂಚದ ಕರ್ಮಕಾಂಡ

ನಮ್ಮ ಸರ್ಕಾರಿ ಕಛೇರಿಯೊಳಗೆ ಕಾಲಿಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಿ ಕಾಲಿಡಬೇಕು. ಬಹು ಪಾಲು ಕಛೇರಿಗಳಲ್ಲಿ ಲಂಚದ ಮಹತ್ವ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದರೆ ಲಂಚ ನೀಡುವವರಿಗೂ ನೀಡದೇ ಇರುವವರಿಗೂ ಸಿಗುವ ಮರ್ಯಾದೆ ಬೇರೆ ತರಹುದೇ ಆಗಿರುತ್ತದೆ. ಸಣ್ಣ ಜವಾನನಿಂದ ಹಿಡಿದು ದೊಡ್ಡ ಅಧಿಕಾರಿಯವರೆಗೆ ಲಂಚ ನೀಡಬೇಕು.

ಇದು ನಿಜವೇನೇ? ಗೆಳತಿ, ಇದು ನಿಜವೇನೇ?

ಪ್ರೇಮಿಗಳ ದಿನದ ಸಲುವಾಗಿ ಬರೆದಿದ್ದು..ನನ್ನ ಲೇಖನದೊಳಗೆ ಸೇರಿಸಿದ್ದರಿಂದ ಸಮಸ್ತ ಓದುಗ ವೃಂದಕ್ಕೆ ತಲುಪಿರಲ್ಲಿಲ್ಲ ಎನ್ನುವುದು ನನ್ನ ಭಾವನೆ. ಅದಕ್ಕೊಸ್ಕರ ಮತೊಮ್ಮೆ ಈ ಕವನವನ್ನು ನಿಮ್ಮ ಮುಂದೆ ಇರಿಸಿದ್ದೇನೆ.

ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಆ ಹಾಲು ಬೆಳದಿಂಗಳ ಚಂದಿರ│ ಅವನಿದ್ದರೂ ಅಷ್ಟು ಸುಂದರ│

ಗಣಿ ಮಹಾತ್ಮೆ

Mining೨೦೦೩ ರ ನಂತರ ಜಗತ್ತಿನೆಲ್ಲೆಡೆ ಎಕಾನಮಿ ಬೂಮ್. ಅದರ ಜೊತೆಗೆ ಬಂತು ಚೀನಾದ ಒಲಂಪಿಕ್ಸ್ ಆಟ. ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಿತ್ತು ಟನ್ ಗಟ್ಟಲೆ ಸ್ಟೀಲ್. ಇದಕ್ಕೆ ಸಹಕರಿಸಿದವರು ನಮ್ಮ ರಾಜ್ಯದ ಗಣಿ ಸಾಮ್ರಾಟರು. ಶುರುವಾಯಿತು ಗಣಿ ರಂಪಾಟ, ಕೇಳುವವರಿಲ್ಲ ಜನರ ಪರದಾಟ. ಚೀನಾದ ಕೃಪೆಯಿಂದ ಮಣ್ಣಿಗೂ ಬಂತು ಹೊನ್ನಿನ ಬೆಲೆ. ಲಾರಿ ತಯಾರಿಕರಿಗಂತೂ ಹಬ್ಬವೋ ಹಬ್ಬ. ಹಾಗೆ ರಾಜ್ಯದ ಬಂದರುಗಳು ಭರ್ಜರಿ ಹಣವನ್ನು ಎಣಿಸುತ್ತಿದ್ದವು. ರಾಜ್ಯದ ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶಗಳು ಬಯಲು ಪ್ರದೇಶವಾದವು. ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೀಮೆಯ ಕೆಲವೇ ಮಂದಿ ದಿಡೀರ್ ಶ್ರೀಮಂತರಾದರು. ಯುವಕರು ಗಣಿ ಕೆಲಸಕ್ಕೆ ಇಳಿದರು. ಹಲವಾರು ಮಂದಿ ಕೃಷಿ ಬಿಟ್ಟು ಗಣಿಗೆ ಕೈ ಚಾಚಿದರು. ಗಣಿ ನಾಯಕರು ಪ್ರತ್ಯೇಕ ಹೆಲಿ-ಪಾಡ್ ಗಳ ಒಡೆಯರಾದರು.

ಆದರೆ ಇದರಿಂದ ಆದ ದುಷ್ಪರಿಣಾಮಗಳು ಯಾರಿಗೂ ಬೇಡ. ಕರ್ನಾಟಕದಲ್ಲಿ ಅತ್ಯಂತ ಭಯಾನಕ ಮತ್ತು ಹದೆಗೆಟ್ಟ ರಾಷ್ಟ್ರೀಯ ಹೆದ್ದಾರಿಗಳೆಂದರೆ ೧೭,೪೮,೬೩,೧೩. ಇವುಗಳಲ್ಲಿ ಅನೇಕ ಹೋಲಿಕೆಗಳು ಇದೆ. ಎಲ್ಲ ಹೆದ್ದಾರಿಗಳು ಕರಾವಳಿ ಮತ್ತು ಮಲೆನಾಡಿನ ಭಾಗ. ಹಾಗೆ ಎಲ್ಲ ಹೆದ್ದಾರಿಗಳು ಸಿಕ್ಕಾಪಟ್ಟೆ ಮಳೆ ಬೀಳುವ ಪ್ರದೇಶಗಳು. ಅಷ್ಟೇ ಅಲ್ಲ , ಎಲ್ಲ ಹೆದ್ದಾರಿಗಳು, ಗಣಿ ಲಾರಿಗಳು ಸಂಚರಿಸುವ ರಸ್ತೆಗಳು. ೨೦ ಟನ್ ಸಾಗಿಸಬೇಕೆಂಬ ನಿಯಮ ಇದ್ದರೂ ಸಹ ೪೦ ಟನ್ ಸಾಗಿಸುತ್ತಿದ್ದ ಲಾರಿಗಳಿಂದ, ಹೆದ್ದಾರಿ ಸಂಪೂರ್ಣ ಕುಸಿದುಹೊಗಿತ್ತು. ಅದರಲ್ಲೂ ಶಿರಾಡಿ ಘಾಟಿ(೪೮), ಉಡುಪಿ-ಕುಂದಾಪುರ(೧೭) ರಸ್ತೆಗಳು national-highway ಬದಲು notional-highwayಗಳಾಗಿದ್ದವು. ಸುಮಾರು ಎರಡು ವರ್ಷದ ಹಿಂದೆ ಕರಾವಳಿಯಲ್ಲಿ ಕಾಣಿಸುತ್ತಿದ್ದ ರಸ್ತೆಗಳು ಮೂರೇ ಬಗೆಯವು. ಒಂದು ಕೆಟ್ಟ ರಸ್ತೆ, ಎರಡನೆಯದು ಅತಿ ಕೆಟ್ಟ ರಸ್ತೆ, ಮೂರನೆಯದು ರಸ್ತೆಯೇ ಇಲ್ಲ. ಇದು ಗ್ರಾಮೀಣ ರಸ್ತೆ ಸ್ಥಿತಿ ಅಲ್ಲ, ಬದಲಾಗಿ ರಾಷ್ಟ್ರೀಯ ಹೆದ್ದಾರಿಗಳ ಅವಸ್ಥೆ. ಕಡೆಗೂ ಹೆದ್ದಾರಿ ಬಂದ್ ಮಾಡಿಸಿ ರಸ್ತೆ ದುರಸ್ತಿ ಆಯಿತು. ಇನ್ನು ಹೆದ್ದಾರಿ-೧೩ ಕ್ಕೆ ಬಂದರೆ ಆ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಹೇಗೆ ಕೊಟ್ಟರೋ ತಿಳಿಯದು. ಕೇವಲ ಒಂದು ಬಸ್ಸು ಹೋಗುವಷ್ಟು ಜಾಗ ಇರುವ ಕಡಿದಾದ ಮಾರ್ಗ. ಇದರಲ್ಲೂ ರಾಜಕೀಯ ನಡೆದಿರಬಹುದು. ತುಮಕೂರಿನಿಂದ ಸಾಗಿಸುವ ಗಣಿಗಳಿಗೆ ಮಂಗಳೂರಿಗೆ ಹೋಗಲು ಅತ್ಯಂತ ಸಮೀಪದ ಮಾರ್ಗ ಈಗಿರುವ ಹೆದ್ದಾರಿ-೧೩. ಗಣಿ ಲಾರಿಗಳಿಗೆ ರಾಷ್ಟ್ರೀಯ-ಹೆದ್ದಾರಿ ಬಿಟ್ಟರೆ ಬೇರೆ ಯಾವ ರಸ್ತೆಗಳಲ್ಲೂ ಅವಕಾಶವಿಲ್ಲ. ಅದಕ್ಕೆ ಇಂತಹ ಮಾರ್ಗಗಳನ್ನು ಸಹ ರಾಷ್ಟ್ರೀಯ-ಹೆದ್ದಾರಿಯಾಗಿ ಮಾರ್ಪಾಡು ಮಾಡಲಾಯಿತು.

ಜೋಕೆ! ಕೆಮ್ಮಿನ ಸಿರಪ್ ವಿಷವಾದೀತು

ಸಂಪದಿಗರೇ,

೨೫ನೇ ತಾರೀಖಿನಂದು ಕನ್ನಡ ಪ್ರಭ ದಿನಪತ್ರಿಕೆ ಆರೋಗ್ಯ ಪುಟದಲ್ಲಿ ಬಂದಂಥ ಲೇಖನ ಕೆಳಗಿನ ಕೊಂಡಿಯಲ್ಲಿ ಇದೆ.
http://www.kannadaprabha.com/NewsItems.asp?ID=KP820090224024757&Title=ArogyaPrabha&lTitle=A%C1%E6%E0%DEV%DA%C0%AE%DA%C3%BA%DA&Topic=0&ndate=2/25/2009&Dist=0

ಸ್ಲಮ್ ಚಿತ್ರದ ಮಕ್ಕಳಿಗೆ ಸರ್ಕಾರದಿಂದ ಮನೆಗಳಂತೆ!?

ಆಸ್ಕರ್ ಪ್ರಶಸ್ತಿ ವಿಜೇತ ಆಂಗ್ಲ ಚಿತ್ರ ಸ್ಲಮ್ಡಾಗ್ ನಲ್ಲಿ ನಟಿಸಿದ್ದ ಬಡ ಮಕ್ಕಳಿಗೆ ಸರಕಾರ ಮನೆಗಳನ್ನು ನೀಡಲಿದೆಯಂತೆ.
http://news.bbc.co.uk/2/hi/entertainment/7909660.stm
ಆ ಮಕ್ಕಳನ್ನು ಚಿತ್ರದಲ್ಲಿ ದುಡಿಸಿ, ಆ ಚಿತ್ರದಿಂದ ಕೋಟ್ಯಾನುಕೋಟಿ ಸಂಪಾದಿಸುತ್ತಿರುವ ನಿರ್ಮಾಪಕರುಗಳು ಈ ಕೆಲಸ ಮಾಡಬೇಕಿತ್ತಲ್ಲವೇ?