ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹುಡುಕಾಟ

ತಿರುಗಾಡುತ್ತಲೇ ಇದ್ದೇನೆ
ಜೋತೆಗಾರನಿಗಾಗಿ
ನನ್ನಾತ್ಮ ಸಾಂಗತ್ಯಕೆ
ಅವನೇ ಮೇರುಗಿರಿ
ಕಳೆದೆ ಹೋಗಿದ್ದಾನೆ

ನಿನ್ನೆಗಳ ನಡುವೆ
ಅವನಿದ್ದ ಬದುಕಿದ್ದ
ಹಸಿರಾಗಿ ಉಸಿರಾಗಿ
ನನ್ನೊಳಗೆ ಅವಿತಿದ್ದ
ಗುಪ್ತ ಗೆಳೆಯನಾಗಿ

ನೋವುಗಳ ಜೊತೆಗೆ
ನಲಿವಾಗಿ ಬಂದವನು
ಎಲ್ಲಿರುವನೋ?
ಬರುವನೋ ಬಾರನೋ
ಕಾಣದೆ ಕಂಗಾಲಾಗಿದ್ದೇನೆ

ಮುಖವಾಡ ಧರಿಸಿದ ಹೇಡಿ ನಾ

ಮುಖವಾಡ ಧರಿಸಿರುವೆ ನಾ

ಮೇಲಿನ ಮುಖ ಅಪರಿಚಿತ
ಒಳಗೆ ನಡೆದಿದ್ದೆಲ್ಲಾ ಚಿರಪರಿಚಿತ

ಹೇಡಿ ನಾ , ವಿಷ ಸತ್ಯದ ಅರಿವಿದ್ದೂ
ಬಾಯಿ ಬಿಡಲಾರದ ಮತಿಗೇಡಿ ನಾ

ವಿಷ ಸತ್ಯ ಗಂಟಲಲ್ಲಿ ಸುಡುತಿದೆ
ಹೊರ ಹೋಗಲಾರದೆ ಒಳ ನುಂಗಲಾರದೆ
ಕಣ್ಣೀರಾಚೆ ಅಡಗಿದ ಸಾವಿರ ನಿಜ
ಬಯಲಾಗುವುದಾದರದು ಹೇಗೆ?

ದುರಳರ ಅಟ್ಟಹಾಸದ ಮೇಲಿನ
ವೇಷವೇ ಈ ಭೋರ್ಗರೆವ ರೋಧನ

ಅವ್ವ ... ನನ್ನವ್ವ

ಹೊತ್ತು ಮೂಡುವ ಮೊದಲೆ
ಮತ್ತೆ ಬಾಗಿಲ ತೊಳೆದು
ಸುತ್ತು ರಂಗೋಲಿಯಲಿ
ಮುತ್ತಿನ ಹಾಗೆ ಮನೆಯ
ಸಿಂಗರಿಸುವಳು ನನ್ನವ್ವ
ಅವಳಿಗೆ ಸುಸ್ತಾಗುವುದೇ ಇಲ್ಲ |

ತಣ್ಣನೆಯ ನೀರಲ್ಲಿ ಮಿಂದು
ಮಡಿಯ ಉಡುಗೆಯ ಧರಿಸಿ
ಕಣ್ಮುಚ್ಚಿ ಧ್ಯಾನಿಸುತ ದೇವರನು ನನ್ನ
ಮಣ್ಣು , ಮಕ್ಕಳು, ಪತಿಯ ಕಾಪಾಡು ತಾಯೆ
ಎಂದು ಬೇಡುವಳು ನನ್ನವ್ವ ಅವಳಿಗೆ
ತನ್ನ ನೆನಪಾಗುವುದೇ ಇಲ್ಲ |

ಮನಸ್ಸು-ಪ್ರೀತಿ

ಕನಸು, ನನಸು, ಮನಸು ಪ್ರೀತಿ, ಪ್ರೇಮ, ಪ್ರಣಯ, ಮಧುರ ಭಾವನೆಗಳ ಮಿಲನ, ಒಬ್ಬರ ನೆನಪಿನಲ್ಲಿ ಮತ್ತೊಬ್ಬರ ಜೀವನ, ಪ್ರತಿದಿನದ ಕರ್ತವ್ಯದಂತೆ ನಿದ್ದೆಯಿಂದ ಎದ್ದು ಮತ್ತೆ ಮಲಗುವವರೆಗೂ ಅವರ ಚಿಂತೆಯಲ್ಲೆ ಇರುವ ಮಲಗಿದ ಮೇಲು ಅವರ ಬಗ್ಗೆ ಕನಸುಗಳನ್ನು ಕಾಣುತ್ತ ಆತ ಅಥವಾ ಆಕೆ ನನ್ನವನು ನನ್ನವಳು ಎಂದು ಮನಸ್ಸಿನಲ್ಲಿ ಹೃದಯ ಬಡಿದಾಗೆಲ್ಲ ನೆನಪು ಮಾಡಿಕೊಂಡು ದಿನದ ೨೪ ಗಂಟೆಗಳ

ಹನಿ ಹನಿ ಧ್ಯಾನ(ಗೀತೆಗಳು)

ಹನಿ ಹನಿ ಧ್ಯಾನ(ಗೀತೆಗಳು)
೧. ಧ್ಯಾನದ ಸ್ಥಿತಿಯಲ್ಲಿ
ಕ್ಷಣಕ್ಷಣವೂ ಮರಣ,
ಪುನರಪಿ ಜನನ.

೨. ಧ್ಯಾನ ಎಂದರೆ ಅಳಿವು,
ನಾವಿಟ್ಟುಕೊಂಡ ನಂಬಿಕೆಗಳ
ಭ್ರಮೆಗಳ, ಸತ್ಯಗಳ
ಸಾವು.

೩. ಧ್ಯಾನ ಎಂದರೆ
ಸಂತೆಯಲ್ಲಿನ ಶಬ್ದಕ್ಕೆ
ಕಿವುಡಾದ ಮನ.

೪.ಧ್ಯಾನ ಎಂದರೆ ಪ್ರೀತಿಯ ಚಲನ,
ಮೊಗೆದಷ್ಟೂ ಬರಿದಾಗದೇ
ನಿಶ್ಚಿಂತವಾಗಿ ಹರಿವ ಗಂಗೆ

ಇಲ್ಲಾಂದ್ರೆ ರದ್ದಾಗಬಹುದು ನಮ್ಮ ಬ್ಲಾಗು !!!

ನಮ್ಮ ಬೀದಿಯ ನಾಯಿಗಳು ನೀಡುತ್ತಿವೆ ನನಗೆ ಹೊಸ ಲುಕ್ಕು
ಅವುಗಳ ತಲೆಗೇರಿದಂತಿದೆ ನಿನ್ನೆಯಿಂದ ಎನೋ ಒಂಥರಾ ಕಿಕ್ಕು

ಕವಿತೆ ಪ್ರಕಟವಾದ ಬ್ರೇಕಿಂಗ್ ನಿವ್ಸ್ ಅವುಗಳಿಗೂ ತಲುಪಿದಂತಿದೆ
ಅವುಗಳಿಗೆ ನನ್ನ ಮೇಲೀಗ ಕೆಂಡದಂತಹಾ ಕೋಪ ಬಂದಿರುವಂತಿದೆ

ಯಾರು ಯಾರೋ ಬೀದಿ ಬೀದಿಗಳಲ್ಲಿ ನಾಳೆ ಆಡಿದರೆ ಜಗಳ
ಆದೀತೆಂದಿದ್ದೆ ನಾನು ಖಂಡಿತಕ್ಕೂ ಅದು ಬರೀ ನಾಯಿ ಜಗಳ

ಮತಾಂತರ ..... ಮತ್ತು ಯಕ್ಷಗಾನ ಸೇವೆ ಆಟ.... ...

ಕೆಲವೇ ತಿಂಗಳ ಹಿಂದೆ ಪ್ರಸಿದ್ದ ದಿನ ಪತ್ರಿಕೆಯೊಂದು ಭೈರಪ್ಪನವರ ವಿಚಾರಧಾರೆಯೊಂದಿಗೆ " ಮತಾಂತರ " ಕುರಿತ ಚರ್ಚೆಯನ್ನು ನಡೆಸಿತ್ತು .
ಸಾಕಷ್ಟು ಹಿಗ್ಗಾಮುಗ್ಗಾ ಎಳೆದಾಡಿ ತಮ್ಮ ಅದ್ಬುತ ವಿಷಯ ಮಂಡನೆಯಿಂದ ಚುರುಕು ಮುಟ್ಟಿಸಿದ ಎಲ್ಲ ಬರಹಗಾರರೂ ತಮಗೆ ತೋಚಿದಂತೆ ಅಪ್ಪಣೆ ಕೊಡಿಸಿದರು.
ಕೆಲವರಂತೂ ಚರ್ಚೆ ಆರಂಭಿಸಿದವರನ್ನು ಟೀಕಿಸಿ ಸಂತ್ರುಪ್ತಿಪಟ್ಟರು!

ಆರ್ಥಿಕ ಹಿಂಜರಿತ ಕೇರಳ ರಾಜ್ಯಕ್ಕೆ ಯಾಕಿಲ್ಲ

ಮಾನಿನಿಯರೇ

ನಿಮಗಿದು ಪ್ರೇಮಿಗಳ ದಿನಕ್ಕಾಗಿ ನನ್ನ ವಿಶೇಷ ಕೊಡುಗೆ,
ನೋಡಿ ಹೊಟ್ಟೆಉರಿದುಕೊಳ್ಳದಿರೀ :)

ಈ ಪಾಟಿ ಬಂಗಾರ ಹಾಕೊಂಡ್ರೆ ಇನ್ನೂ ಬಂಗಾರ ಅಂತಾ ಪ್ರೀತಿಯಿಂದ ಕರಿದೇ ಇರೋಕಾಗುತ್ತಾ

ಇನ್ನೂ ಗಂಡಂದಿರೇ/ಪ್ರಿಯತಮರೇ ಹುಷಾರು ಮರೆತು ನಿಮ್ಮ ಹೆಂಡತಿ/ಪ್ರೇಯಸಿಗೆ ತೋರಿಸದಿರೀ, ಆಮೇಲೆ ಕ್ರೆಡಿಟ್ ಕಾರ್ಡು ಬ್ಯಾಲೆನ್ಸ್ ಜಾಸ್ತಿಯಾದರೆ ನಾನಲ್ಲ ಹೊಣೆ :)