ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಿಯೊಳಗಿನ ಆನೆ

ಅರಿಗರಪಾರ ಗುಣಗಳೂ ಕಿರಿದು
ತೋರೀತು ಕೀಳ್ಮನಸಿನ ಕಂಗಳಿಗೆ
ತೋರಿಕೆಯಿರುವುದು ನೋಡುವ ಮಟ್ಟಕೆ
ಕಿರುಗನ್ನಡಿಯೊಳಗಾನೆಯು ಕಂಡಂತೆ

ಸಂಸ್ಕೃತ ಮೂಲ:

ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ
ಆಧಾರಾಧೇಯಭಾವೇನ ಗಜೇಂದ್ರ ಇವ ದರ್ಪಣೇ

-ಹಂಸಾನಂದಿ

 

ಚಿತ್ರ ಕೃಪೆ: ಗೂಗಲ್ ಇಮೇಜಸ್

ವ್ಯಾಲಂಟೈನ್ಸ್ ಡೇ

ತ್ರಿಲೋಕ ಸಂಚಾರಿಯಾದ ನಾರದರು ಈ ನಡುವೆ ಭೂಲೋಕ ಸುತ್ತುವುದು ಹೆಚ್ಚಾಯಿತು. ಹೊಸದಾಗಿ ಬಂದ ಮಂತ್ರಿವರ್ಗ ಸುಮ್ಮ ಸುಮ್ಮನೆ ಫ಼ಾರಿನ್ ಟ್ರಿಪ್ ಹಾಕುವ ಹಾಗೆ. ಎಷ್ಟೇ ಆಗಲಿ ’ಸ್ವರ್ಗವಾಣಿ’ ಪತ್ರಿಕೆಯ ಖಾಯಂ ವರದಿಗಾರ ಆಗಿರುವುದರಿಂದ ಯಾರೂ ಅವರನ್ನು ತಡೆಯುತ್ತಿರಲಿಲ್ಲ. ವಾಪಸ್ಸು ಬಂದ ಮೇಲೆ ಅವರ ಬಿಲ್ ಸರಿಯಾಗಿ ಚುಕ್ತಾ ಆಗುತ್ತಿತ್ತು.

‘ಪ್ರತಿದಿನವೂ ಪ್ರೀತಿಸೋಣ’

ಅವನು ಮಿರ ಮಿರ ಮಿಂಚುವ ಬಟ್ಟೆತೊಟ್ಟು ಓಡೋಡಿ ಬರುತ್ತಿದ್ದ. ಮುಖದಲ್ಲಿ ನಗುವಿನ ಚಿಲುಮೆ. ಆಕೆ ಕಾಲೆಳೆದುಕೊಂಡು, ತಲೆ ಬಗ್ಗಿಸಿಕೊಂಡು ವೇಗವಾಗಿ ನಡೆಯುತ್ತಿದ್ದಾಳೆ. ಅವನು ಅಕೆಗೆ ಪ್ರಪೋಸ್‌ ಮಾಡಿದ್ದ. ಅಂದು ಫೆಭ್ರವರಿ ೧೪ !

ವರ್ಷದ ಭಾರತೀಯ

NDTV ಆಯೋಜಿಸಿದ್ದ "ವರ್ಷದ ಭಾರತೀಯ-೨೦೦೮" ಪ್ರಶಸ್ತಿ ಕುರಿತ ಸಂವಾದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ಓರ್ವ ಸಭಿಕರು ಹೇಳಿದ ಈ ಮಾತುಗಳು ನಮ್ಮನ್ನು ಯೋಚನೆಗೆ ಹಚ್ಚುವುದರಲ್ಲಿ ಸಂಶಯವಿಲ್ಲ:

[quote]

ಚಂದಿರನೆತ್ತರಕ್ಕೇರುವಾಸೆಯೇ?

ಮನಸ್ಸು ನೂರೊಂದನ್ನು ಬಯಸುತ್ತದೆ. ಯಾವಾಗಲೂ ಹೊಸದನ್ನ ಬಯಸುತ್ತ, ಹಕ್ಕಿಯಂತೆ, ದಿಗಂತದ ಅನಂತಾನಂತ ಅನಂತತೆಯ ಅಗಮ್ಯ ಎತ್ತರಕ್ಕೆ ಏರಲೆತ್ನಿಸುತ್ತದೆ. ಚಂದ್ರಮನತ್ತ ಮಾನವ ಮುಖಮಾಡಿ ನೋಡಿದಾಗ, ಅಲ್ಲಿಗೆ ತಾನು ಸರಿಯಬಹುದೆ ಅಂದುಕೊಂಡದ್ದೇ ಅಲ್ಲಿಗೆ ಹೋಗಲಿಕ್ಕೆ ಬೇಕಾದ ಇಂದನವನ್ನ ತುಂಬಿಸಿದ್ದಿರಬಹುದು.

ನನ್ಗೂ ಹೀಗನ್ಸತಿದೆ ಇದೆ... ನಿಮ್ಗೆ ಏನನ್ಸುತ್ತೆ..?

ಪತ್ರಿಕೆಗಳನ್ನು ನೋಡೋದಿಕ್ಕೆ ಭಯವಾಗ್ತಾ ಇದೆ.... ಟಿ.ವಿ. ನ್ಯೂಸ್ ಅಂದ್ರೆ ರೇಜಿಗೆ ಹುಟ್ತಾ ಇದೆ....

ಈ ವಿಷಯಗಳ ಬಗ್ಗೆ ತಲೆ ಕೆಡಿಸ್ಕೋ ಬಾರ್ದು ಅಂತಾನೆ ಇದ್ದೆ..

ಮೊನ್ನೆ ಹಳ್ಳಿಗೆ ಹೋಗೋವರ್ಗು...
ನಮ್ಮ ಹಳ್ಳಿಯ ಯುವ ನಾಯಕ್ರೊಬ್ಬರು ತಲೆಗೆ ಹುಳ ಬಿಡೋವರ್ಗೂ...

ಕವಿತೆ ಸತ್ತುಹೋಯಿತು!

(ಪ್ರೇಮಿಗಳ ದಿನಕ್ಕೊಂದು ಕವಿತೆ)
 
ಕವಿತೆ ಅಂದು ಸತ್ತುಹೋಯಿತು
ಅಕ್ಷರಗಳು ಮೊದಲೇ ಸತ್ತಿದ್ದವು
ಒಡಲಲ್ಲಿ ಬೆಚ್ಚಗಿದ್ದ ಭಾವನೆಗಳು
ಬಿಕ್ಕಿಬಿಕ್ಕಿ ಅಳುತ್ತಿದ್ದವು
 
ಬಹಳ ದಿನಗಳಿಂದ ಈ ಅಕ್ಷರಗಳು 
ರೋಗಪೀಡಿತವಾಗಿದ್ದವು
ಬಳಲಿದ್ದವು, ಬೇಸರಗೊಂಡಿದ್ದವು

ಬೀಜ ಬಿತ್ತನೆಗೆ ಮುನ್ನ... (ರೈತರೇ ಬದುಕಲು ಕಲಿಯಿರಿ-೧೪)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವದಾರಿ ತೋರುವ ಕೈಪಿಡಿ)

ಬೀಜಾಮೃತ ಸಿದ್ಧಪಡಿಸುವ ವಿಧಾನ

ಬೀಜ ಬಿತ್ತುವ ಮುನ್ನ ಅನುಸರಿಸಬೇಕಾದ ವಿಧಾನವಿದು. ಇಲ್ಲಿ ಕೊಟ್ಟಿರುವ ಪ್ರಮಾಣ ಒಂದು ಎಕರೆ ಪ್ರದೇಶಕ್ಕೆ ಮಾತ್ರ.

ಬಿತ್ತುವ ಹಿಂದಿನ ದಿನ ಸಂಜೆ ಆರು ಗಂಟೆಗೆ ಸುಮಾರು ೬೫ ಲೀಟರ್ ನೀರು ಸಂಗ್ರಹ ಸಾಮರ್ಥ್ಯವುಳ್ಳ ಸಿಮೆಂಟ್ ತೊಟ್ಟಿ ಅಥವಾ ಪ್ಲಾಸ್ಟಿಕ್ ಡ್ರಮ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಜೋಳ, ರಾಗಿ, ಅಲಸಂದೆ, ಶೇಂಗಾ, ಕಡಲೆ, ಅವರೆ, ಹೆಸರು, ಉದ್ದು, ಭತ್ತ, ಗೋದಿ ಮುಂತಾದ ಚಿಕ್ಕ ಕಾಳುಗಳ ಧಾನ್ಯಗಳನ್ನು ಬಿತ್ತುವವರು ೨೦ ಲೀಟರ್ ನೀರನ್ನು ಹಾಗೂ ಅಡಿಕೆ, ತೆಂಗು, ಗೆಡ್ಡೆ-ಗೆಣಸು, ಭತ್ತದ ಸಸಿ, ರಾಗಿಯ ಸಸಿ, ಅಥವಾ ಇತರ ಗಿಡಗಳ ಸಸಿಗಳನ್ನು ನೆಡುವವರು ೫೦ ಲೀಟರ್ ನೀರನ್ನು ಬೀಜಾಮೃತ ತಯಾರಿಗೆ ಬಳಸಬೇಕು.

ಈ ಪ್ರಮಾಣದ ನೀರಿಗೆ ೫ ಕೆಜಿ ಜವಾರಿ (ನಾಡ) ಆಕಳಿನ ಸಗಣಿ, ೫ ಲೀಟರ್ ಗೋಮೂತ್ರ ಮತ್ತು ೫೦ ಗ್ರಾಮ್ ಸುಣ್ಣ ಬೇಕಾಗುತ್ತದೆ.

ಇಷ್ಟನ್ನು ಸಿದ್ಧಪಡಿಸಿದ ನಂತರ ಈಗ ೫ ಕೆಜಿ ಸಗಣಿಯನ್ನು ಒಂದು ತೆಳುವಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ ಅದನ್ನು ನೀರಿರುವ ಡ್ರಮ್‌ನೊಳಗೆ ಇಳಿಬಿಡಿ. ಡ್ರಮ್‌ಗೆ ಅಡ್ಡಲಾಗಿ ಕಟ್ಟಿಗೆಯೊಂದನ್ನು ಇಟ್ಟು, ಅದಕ್ಕೆ ಸಗಣಿ ಕಟ್ಟಿದ ಬಟ್ಟೆಯನ್ನು ಕಟ್ಟಿದರಾಯಿತು. ಈ ಗಂಟು ಡ್ರಮ್‌ನ ಅಕ್ಕಪಕ್ಕದ ಪ್ರದೇಶ ಅಥವಾ ತಳವನ್ನು ತಾಕುವಂತಿರಬಾರದು. ಇನ್ನೊಂದೆಡೆ ೫೦ ಗ್ರಾಮ್ ಸುಣ್ಣವನ್ನು ಒಂದು ಲೀಟರ್ ನೀರಿರುವ ಪಾತ್ರೆಯಲ್ಲಿ ನೆನೆ ಹಾಕಿ.