ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಫೆಬ್ರವರಿ 14 : ಅದ್ಯರಾ ದಿನವೋ?

ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ.

೧.'ಪಬ್ ಭರೋ' ಚಳುವಳಿ

೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ'

೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'

ಆದರೂ ಚಿಂತಿಲ್ಲ ಒಂದ್ವೇಳೆ ಕರ್ನಾಟಕದ ಕೇಸರೀಕರಣ

ಆದರೂ ಚಿಂತಿಲ್ಲ ಒಂದ್ವೇಳೆ ಕರ್ನಾಟಕದ ಕೇಸರೀಕರಣ
ತಡೆಯಿರಿ ನೋಡೋಣ ಆಗದಂತೆ ದೇಶದ ಇಟಲೀಕರಣ

ಅವರ ಇದಿರು ನಿಂತು ಯಾಕೆ ಯಾರೂ ಉಸಿರೆತ್ತುವುದಿಲ್ಲ
ನಮ್ಮವರ ಬೆನ್ನಿಗೇ ಇಲ್ಲಿ ಹಿಂದಿನಿಂದ ಚೂರಿ ಹಾಕುವರಲ್ಲಾ

ಆಶಾಢಭೂತಿತನದ ಪ್ರದರ್ಶನ ನಡೆದಿದೆ ಇಲ್ಲಿ ನಿರಂತರ
ಮತದಾರ ಮತ ನೀಡಿದರೂ ಆಳಲು ಬಿಡಲಾರ ಬರಹಗಾರ

`ತಿಂಗಳು' ಬೆಳಕಿನಲ್ಲಿ ಜಿ.ಪಿ.ಬಸವರಾಜು!

 

 

`ಮಯೂರ'ಕ್ಕೆ ಹೊಸ ರೂಪ, ಘನತೆ ತಂದುಕೊಟ್ಟು ಸಾಹಿತ್ಯ ಪತ್ರಿಕೆಗಳ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡೂ ಜನಪ್ರಿಯ ಮಾಸಿಕವೊಂದನ್ನು ನಡೆಸಿದ, ಹೊಸ ಪರಂಪರೆಯನ್ನು ಸೃಷ್ಟಿಸಿದ ಜಿ.ಪಿ.ಬಸವರಾಜು ಈಗ ಹೊಸ ಪತ್ರಿಕೆಯೊಂದರ ಕೊಡುಗೆಯೊಂದಿಗೆ ನಿಂತಿದ್ದಾರೆ. ಕನ್ನಡದಲ್ಲಿ ಸಾಹಿತ್ಯವನ್ನೇ ಜೀವಾಳವಾಗಿರಿಸಿಕೊಂಡ ಗುಣಮಟ್ಟದ ಒಳ್ಳೆಯ ಮಾಸ ಪತ್ರಿಕೆಯ ಕೊರತೆಯನ್ನು ನೀಗಿ `ಮಯೂರ'ವನ್ನು ಅನನ್ಯವಾಗಿಸಿದ ಜಿಪಿ, ಒಳ್ಳೆಯ ಸಾಹಿತ್ಯದ ಓದನ್ನು ಪ್ರತಿ ತಿಂಗಳೂ ನಮಗೆಲ್ಲ ದಕ್ಕಿಸಿದ್ದರು. ಅದು ಮಾರ್ಕೆಟ್ ಆಕರ್ಷಣೆಗಳಿಗೆ ತಕ್ಕಂತೆ ಬದಲಾಗದಂತೆ ಕೂಡ ಎಚ್ಚರವಹಿಸಿದ್ದರು. `ಮಯೂರ' ನೋಡಿದರೆ ನಮಗೆಲ್ಲ ಜಯಂತ ಕಾಯ್ಕಿಣಿಯವರ `ಭಾವನಾ' ನೆನಪಾಗುವಂತಿತ್ತು. ಇವತ್ತು ಅದನ್ನು ಕನ್ನಡದ ಪ್ರಮುಖ ಕತೆಗಾರ ರಘುನಾಥ ಚ.ಹ. ಇನ್ನೂ ಒಂದು ಮಜಲು ಮೇಲೆ ಕೊಂಡೊಯ್ಯುತ್ತಿದ್ದಾರೆಂದರೆ ಜಿಪಿ ಅದಕ್ಕೆ ಪೂರ್ವಭಾವಿಯಾಗಿ ಸೃಜಿಸಿಕೊಟ್ಟ ನೆಲೆಗಟ್ಟು ಕೂಡಾ ಕಾರಣವೆನ್ನಬಹುದು.

ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "

ಯಾವುದಕೆ ನೀವು ಕಾದಾಡುವಿರಿ ಸೋದರರೆ
ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ
ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ
ಅದು ಸಾಕು ಜೀವನಕೆ ತರಲು ಹರುಷ ||

ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ
ಪ್ರೀತಿ ಇಹುದೆಂದೇ ಅದರ ಇರವು
ಪ್ರೀತಿಯೊಂದಕ್ಕಾಗಿ ಎಲ್ಲ ಮರುಳಾಗಿಹುದು
ಸಪ್ತ ಲೋಕವು ಜತೆಗೆ ಇಹವು ಪರವು ||

ಪ್ರೀತಿಗೆಂದೇ ತಾನೆ ಈ ಎಲ್ಲ ಯುದ್ಧಗಳು

ಮೂರು ಮಹಾಜಾತ್ರೆಗಳು

ಮೊದಲನೆಯದು ಸಿದ್ಧಗಂಗೆಯ ಯತಿಗಳ ಶತಮಾನೋತ್ಸವ. ಉಳುವಿಯ ನಂತರ ನನಗೆ ಅತ್ಯಂತ ಇಷ್ಟವಾದ ತಾಣ ಸಿದ್ಧಗಂಗಾ ಕ್ಷೇತ್ರ. ಸಿದ್ದಗಂಗಾ ಶ್ರೀಗಳ ಮುಂಜಾನೆಯ ಪೂಜೆಯನ್ನು ನೋಡಲೂ ಪುಣ್ಯ ಬೇಕು ಎನ್ನುತಾರೆ. ಆ ಪ್ರಕಾರ ಪುಣ್ಯವಂತ ನಾನು. ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತದೆ ಇಷ್ಟಲಿಂಗ ಪೂಜೆ. ನಮಗೆ (ಸಾಮಾನ್ಯ ಜನರಿಗೆ) ಸುಮಾರು ನಾಲ್ಕು ಮುಕ್ಕಾಲಿಗೆ ಒಳಪ್ರವೇಶ.

ಪ್ರೀತಿ ಬೇರೆಯಲ್ಲ!

ಸಖೀ,
ಪ್ರೀತಿ ಅಂದರೇನೆಂದು
ಕೇಳಿದರೆ ನೀನು,
ಬೇರೆ ಏನ
ಹೇಳಿಯೇನು ನಾನು?
ನಿನ್ನ ಕಂಗಳಲಿ ಸದಾ
ಮಿಂಚುತಿರುವ ಆ ಹೊಳಪು,
ನಿನ್ನ ಮಧುರವಾದ ನುಡಿಗಳು
ನನ್ನ ಕಿವಿಗಳಿಗೀವ ಇಂಪು,
ನೀನು ಮನಬಿಚ್ಚಿ ನಗುವಾಗ
ನನ್ನ ಕಣ್ತುಂಬುವ ನಿನ್ನ ಒನಪು,
ನಾ ಎಲ್ಲೇ ಇದ್ದರೂ ಕ್ಷಣ
ಕ್ಷಣವೂ ಕಾಡುವ ನಿನ್ನ ನೆನಪು,
ಜೀವನದ ಪ್ರತಿ ಗಳಿಗೆಯೂ
ನಿನ್ನೊಂದಿಗೆ ಕಳೆಯಬೇಕೆನ್ನುವ

ತಂತ್ರಜ್ಞಾನದ ಚಂಚಲತೆ

ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ.ಗಳಿಗೆ ಟೈಟಲ್ ಇರಲಿಲ್ಲ. ಹಾಗೆ ಕೆಲವುಗಳಿಗೆ ಕವರ್ಗಳು ಇರಲಿಲ್ಲ. ಬಹಳ ಒಳ್ಳೆಯ ಸಂಗ್ರಹಗಳು ಇದ್ದವು. ಅದರಲ್ಲಿ ಟಿ.ಕೆ.ರಂಗಾಚಾರಿ, ಜಿ.ಎನ್.ಬಾಲಸುಬ್ರಮಣ್ಯಂ ಮೊದಲಾದ ಸಂಗೀತ ದಿಗ್ಗಜರ ಕಚೇರಿಗಳಿದ್ದವು. ಹಾಗೆ MIT ಪ್ರಾಧ್ಯಾಪಕರಾದ ಗಿಲ್ಬೆರ್ಟ್ ಸ್ಟ್ರಾಂಗ್ ಅವರ ಬೀಜಗಣಿತದ ಸಿ.ಡಿಗಳೂ ಇದ್ದವು.

ಇವುಗಳನ್ನೆಲ್ಲ ಕೂಡಿ ಇಡುವುದಕ್ಕೆ ಒಂದು ಸಿ.ಡಿ. ಪೌಚನ್ನು ತರಲು ಯೋಚಿಸಿದೆ.ಸ್ನೇಹಿತನೊಬ್ಬ ಮನೆಗೆ ಬರುವವನಿದ್ದ. ಹೇಗೂ ಅವನು ಕೃಷ್ಣರಾಜ ಮಾರುಕಟ್ಟೆ ಮೂಲಕವೇ ಬರಬೇಕು. ಹಾಗೆ ನಾನು ಬರುವಾಗ ಒಂದು ಪೌಚ್(೧೨೦ ಸಿ.ಡಿ ಸಾಮರ್ಥ್ಯ) ತರಲು ಫೋನ್ ಮಾಡಿ ಹೇಳಿದೆ. ಆಗ ಅವನು"ಈಗ ಯು.ಎಸ್.ಬಿ ಸ್ಟೋರೇಜ್ ಮಾಮೂಲಿ ಆಗಿದೆ. ನೀ ಇನ್ನು ಸಿ.ಡಿ. ಕಾಲದಲ್ಲೇ ಇದಿಯಲ್ಲ" ಅಂತ ಹಿಯಾಳಿಸಿದನು. ನನಗೂ ಹಾಗೆ ಎನಿಸಿತು. ಅವನ ಮಾತಿನಿಂದ ನನಗನಿಸಿದ್ದು ತಂತ್ರಜ್ಞಾನದ-ಚಂಚಲತೆ(technology-volatility) ಅಂದಾಜು ಮಾಡುವುದು ಬಹಳ ಕಷ್ಟ. ಆದರೂ ಹಳೆ ಸಿ.ಡಿ.ಗಳನ್ನು ಇಡಲು ಪೌಚ್ ಬೇಕಿತ್ತು. ಅದಕ್ಕೆ ತರಿಸಿದೆ.

ಹಾಗಾದರೆ ಇನ್ನು ಸಿ.ಡಿ, ಮಾಗ್ನೆಟಿಕ್ ಟೇಪ್ ಹಾಗೂ ಫ್ಲಾಪಿಯ ಹಾದಿ ಹಿಡಿಯುವುದು ನಿಶ್ಚಿತ ಅನ್ನಿಸುತ್ತದೆ. ಬಹುಷಃ ಡಿವಿಡಿ ಕೂಡ ಇದೆ ಹಾದಿ ಹಿಡಿಯುವುದೇನೋ? ಸೋನಿಯ ಬ್ಲೂ-ರೇ ಮುಂದೆ ಸೋಲುಂಡ ತೋಶಿಬಾ HD-ಡಿವಿಡಿ, ಸಿಕ್ಕಾಪಟ್ಟೆ ನಷ್ಟ ಅನುಭವಿಸಿತು. ಮಾತು ಅದಲ್ಲ. ಸೋನಿಯ ೫೦ಜಿಬಿ ಬ್ಲೂ-ರೇ ಡಿಸ್ಕ್ ಎಲ್ಲಿ, ೭೦೦ಎಮ್.ಬಿ ಸಿ.ಡಿ ಅಥವಾ ೭ಜಿಬಿ ದ್ವಿಮುಖ-ಪದರದ(dual-layer) ಡಿವಿಡಿ ಎಲ್ಲಿ? ಸೋನಿಯ ಬ್ಲೂ-ರೇ ಈಗ ಬಹಳ ದುಬಾರಿ ಇರಬಹುದು. ಯಾವುದು ದುಬಾರಿ ಇರಲಿಲ್ಲ ಹೇಳಿ. ಉಳ್ಳವರಿಗೆ ಮಾತ್ರ ಇದ್ದ ಮೊಬೈಲ್ ಫೋನ್, ಈಗ ನಾಯಿ ಬಾಲಕ್ಕೂ ಇದೆ ಎಂದು ಹಳ್ಳಿಯವರೂ ಹೇಳುತ್ತಾರೆ. ಅದೇ ರೀತಿಯಲ್ಲಿ ಬ್ಲೂ-ರೇ ಕೂಡ ಅಗ್ಗವಾಗುವುದರಲ್ಲಿ ಸಂಶಯವಿಲ್ಲ.

ಪರಿಶುದ್ದವಾದ ಪ್ರೀತಿ

ಪ್ರಪಂಚವು ಮಾನವೀಯ ಮೌಲ್ಯಗಳಿಂದ ಕೂಡಿದ್ದು, ಅದರ ಕೊಂಡಿಯು ನಿಷ್ಕಲ್ಮಶವಾದ ಸ್ನೇಹ ಮತ್ತು ಪ್ರೀತಿಯಿಂದ ಬೇಸದಿದೆ. ಅಮ್ಮ ಮಡಿಲಲ್ಲಿ ಬೆಳೆಯುವ ಮಗುವು ಕಪ್ಪಗಿದ್ದರು, ಬೆಳ್ಳಗಿದ್ದರು ತಾಯಿಯ ಪ್ರೀತಿಯು ಎಲ್ಲವನ್ನು ಕಡೆಗಣಿಸಿ, ತನ್ನ ಒಡಲನ್ನು ಹಂಚಿಕೊಂಡು ಹೊರಬಂದ ಮಗುವಿಗೆ ಅಮೃತತ್ವದ ಹಾಲನ್ನು ಹುಣಿಸುವಾಗ ತಾಯಿಯ ಆನಂದಕ್ಕೆ ಎಲ್ಲೆಯೇ ಇಲ್ಲ.

ನಮ್ಮ ಅಂಕಲ್ ಇನ್ನಿಲ್ಲ

ಊರೆಲ್ಲಾ ಬಣ ಬಣ ಎಂದೆನಿಸುತಿದೆ. ಅವರು ಕಟ್ಟಿಸಿದ ದೇವಸ್ಥಾನಕ್ಕೆ ಹೋದರೂ ಮನಸ್ಸು ಭಾರವಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲೂ ಆಗದೆ ಕಾಲೆಳೆದುಕೊಂಡು
ಬರುವಂತಾಗುತ್ತಿದೆ.
ಕಣ್ಣು ಮುಚ್ಚಿದರೆ ಅವರ ಮಾತು, ರೂಪ ಕಣ್ತುಂಬಿ ಅಂಕಲ್ ಬಂದು ಬಿಟ್ಟರೇನೋ ಎಂದು ಭಾಸವಾಗಿ ಕಣ್ತೆರೆಯುವಂತಹ ವ್ಯಕ್ತಿತ್ವ ಅವರದ್ದು.

ಬೇಸರ

ಸೂರ್ಯ ರಶ್ಮಿ ಇಣುಕುತಿರಲು
ಮ೦ಜಿನ ತೆರೆ ಸರಿಯುತಿರಲು
ಮನದಲದೇಕೋ ಕಾತರ
ಸುಖ ನಿದ್ದೆಯನ್ನು ಗೆದ್ದು
ಹೊದ್ದ ಹೊದಿಕೆಯಿ೦ದ ಎದ್ದು
ಹೊರಬರಲದೇಕೋ ಬೇಸರ