ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗ್ರಹವೀಕ್ಷಣೆಯಲ್ಲಿ ಆಸಕ್ತಿದಾಯಕವಾದ ತಿಣುಕಾಟಗಳು

ಗ್ರಹವೀಕ್ಷಣೆ ಕೆಲವರಿಗೆ ಆಸಕ್ತಿದಾಯಕ ವಿಷಯ. ಮೊದಲಿಗೆ ಗ್ರಹಗಳನ್ನು ನಕ್ಷತ್ರಗಳನ್ನು ಸರಿಯಾಗಿ ಗುಱುತಿಸುವುದು ಹೇಗೆ?

ಅಟ ಮುಗಿಸಿದ ಕೆರೆಮನೆ ಶಂಭುಹೆಗ್ಗಡೆ

ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹಾನ್ ಚೇತನ ಇನ್ನು ಇತಿಹಾಸದ ಪುಟಗಳಲ್ಲಿ ಮಾತ್ರ!

ಕೇರಳದಲ್ಲಿ ಕಥಕ್ಕಳಿ ನಾಡಿನ ಸಾಂಸ್ಕೃತಿಕ ರಂಗದ ಮಾನ್ಯತೆ ಪಡೆದಿದೆಯೋ ಹಾಗೆಯೇ ಯಕ್ಷಗಾನ ಕರ್ನಾಟಕದಲ್ಲಿ ಅಗ್ರಪಂಕ್ತಿಯ ಕಲೆಯಾಗಿ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂಬ ತಮ್ಮ ಮಹದಾಸೆಯನ್ನು ಇಟ್ಟುಕೊಂಡಿದ್ದ ಹೆಗಡೆಯವರು, ಅನುಷ್ಟಾನಕ್ಕಾಗಿ ಬಹಳಷ್ಟು ಶ್ರಮಿಸಿದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ಔದ್ಯೋಗಿಕತೆಗೆ ಸಿಕ್ಕಿ ಜಾನಪದ ಕಲಾಪ್ರಕಾರಗಳು ನಾಶವಾಗುತ್ತಿದ್ದು, ಜಾನಪದ ಕಲಾಪ್ರಕಾರಗಳನ್ನು ಉಳಿಸುವ ಕೆಲಸವನ್ನು ಕಲಾವಿದರು, ಪ್ರೇಕ್ಷಕರು ಮಾಡಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಮ್ಮಿಂದ ಒಳ್ಳೆಯದಾಗಿದೆಯೋ ಇಲ್ಲವೋ, ಕೆಟ್ಟದಂತೂ ಆಗಬಾರದು ಎನ್ನುವ ಕಳಿಕಳಿ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಹಾಗೂ ರಂಗಭೂಮಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿದ್ದರು.

ಸೌಂದರ್ಯೋಪಾಸನೆ

ಬಸ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು.

ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

ರಾಷ್ಟ್ರಪತಿಯೇ ಆಗಲಿ ಅಥವಾ ಯಾವ ಒಬ್ಬ ಸಾಮಾನ್ಯನೇ ಆಗಿರಲಿ, ಹುಟ್ಟಿದ ಮೇಲೆ ಸಾಯುವುದು ಸಹಜ ಧರ್ಮ. ಅಂದರೆ ಎಲ್ಲಾ ಸಜೀವ ವಸ್ತುಗಳಿಗೂ ಸಾವು ನಿಶ್ಚಿತ. ಸಾವು ಕೆಲವೊಮ್ಮೆ ಸಹಜ ಮತ್ತು ಕೆಲವೊಮ್ಮೆ ಅಸಹಜ. ಹಲವಾರು ಸಂಶೋಧನೆಗಳು ಈ ತಲೆಮಾರಿನಲ್ಲಿ ಮನುಷ್ಯನ ಸರಾಸರಿ ಆಯುಷ್ಯ ೭೫-೮೦ ಎನ್ನುತ್ತವೆ.

ಸರಣಿ ೪ ಡಾ!! ಎಚ್. ನರಸಿಂಹಯ್ಯ - ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ?

ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳಿಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಪ್ರಕೃತಿಯ ಘಟನೆಗಳು ಆದಿಮಾನವನಿಗೆ ಭಯ ಭಕ್ತಿಯನ್ನುಂಟು ಮಾಡಿದ್ದು, ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡವು.

ಹಾಸ್ಯ - ಹಾಡುಗಳು

ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು.

* ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗಾನ, ಎದೆ ಜಲ್ಲ್ಲನೆ ಹೂವಿನ ಬಾಣ"

* ಪೇಪರ್ ಪೆನ್ ಗೆ ಹೇಳಿತಂತೆ: "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ"

ಬರಲಿದೆ: ಅರವತ್ತು ವರ್ಷ ಬಾಳಿಕೆ ಬರಲಿರುವ ವಿದ್ಯುತ್ ಬಲ್ಬ್ - ಅದೂ 75 % ಕಡಿಮೆ ವೆಚ್ಚದಲ್ಲಿ

ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ. ಸಿ.ಎಫ್.ಎಲ್. ಗಳು ಕಡಿಮೆ ವಿದ್ಯುತ್ ಬಳಸುತ್ತವೆಂದೂ ಹೆಚ್ಚು ಬಾಳಿಕೆ ಬರುತ್ತವೆಂದೂ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆದರೆ ಈ ಸಿ.ಎಫ್.

ಹೊಸ ಕ್ಯಾಮೆರಾ ಮತ್ತು ಕಲಿಕೆ

ಇಬ್ಬರು ಗೆಳೆಯರು...

"ಮಗಾ!...  ನಾನೊಂದು ಕ್ಯಾಮೆರಾ ತಗೊಂಡೆ"

"ಸೂಪರ್ ಕಣೋ "

"ನೀ ಸಕತ್ ಫೋಟೋ ತೆಗೀತಿರ್ತೀಯಲ್ಲ ನಂಗೂ ಹೇಳಿಕೊಡೋ" 

"ಹು  ಕಣೋ... ಮುಖ್ಯವಾಗಿ ISO, ಎಕ್ಸ್ ಪೋಸರ್ ಬಗ್ಗೆ ತಿಳ್ಕೊಂಡ್ರಾಯ್ತು ಅಷ್ಟೆ" 

"ಹೌದಾ!"