ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾತಕ ಎಂಬ ಕವನ

ನಿನ್ನೆಯ ತನಕ ಅಲ್ಲಿ ಇಲ್ಲಿ
ತಕಪಕ ಕುಣಿಯುತ್ತಿದ್ದ ಮನೆಯ ನಾಯಿ
ತಟಪಟ ಕೈಕಾಲು ಬಡಿದು ಸತ್ತಾಗಲೇ
ಶುರುವಾಗಿತ್ತು ನನ್ನಮ್ಮನ ಮನದಲ್ಲಿ
ಸಂಶಯದ ಕೀಟ

ಮಾಡಿರಬಹುದೇ ಯಾರಾದರೂ ಮಂತ್ರ ಮಾಟ
ವಾರದಲಿ ಮುದಿ ದನವೊಂದು ಗೊಟಕ್ಕೆನ್ನಬೇಕೇ?
ಅಪ್ಪನಿಗೇರಿತು ಹಳೆಯ ದಮ್ಮಿನ ಹುಮ್ಮು
ಅಮ್ಮನಿಗೆ ಗಾಬರಿಯೋ ಗಾಬರಿ
ಗ್ರಹಗತಿಯ ಗ್ರಹಚಾರ ಸರಿಇರದೆಂಬ ಖಾತರಿ

ಮತ್ತೊಂದು ವಾರದ DLI ನ ಓದು

ಈ ವಾರ ಐದು ಪುಸ್ತಕಗಳನ್ನಷ್ಟೇ ಓದಿದೆ .

೧) ಮೋಹನ್ ರಾಕೇಶರ ಇನ್ನೊಂದು ಹಿಂದಿ ನಾಟಕದ ಅನುವಾದ - ಅಲೆಗಳಲ್ಲಿ ರಾಜಹಂಸ - ಬುದ್ಧನ ಕುರಿತಾದ ನಾಟಕ .. ಸರಿಯಾಗಿ ನಾಟಕದ ಕಥೆ ಮತ್ತು ಉದ್ದೇಶ ನನಗೆ ಗೊತ್ತಾಗಲಿಲ್ಲ ;
೨) ಮಕ್ಕಳು ಅಡಿಗೆ ಮನೆ ಹೊಕ್ಕರೆ - ಒಂದು ಬೇಂದ್ರೆ ನಾಟಕ - ಇದೂ ಹಾಗೆಯೇ

ಅಧರ್ಮೀಯರಾಗುವುದೇ ದಾರಿ


-೧-
ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ.

ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ ಶಕ್ತಿಯಲ್ಲಿ ನಂಬಿಕೆಯನ್ನು ಅನುಮೋದಿಸುವ ವಿಚಾರಧಾರೆ. ಆ ವಿಚಾರಧಾರೆಯನ್ನು ಉಳಿಸಿಕೊಳ್ಳಲು ಅದರ ಸುತ್ತ ಆಚರಣೆ. ಧರ್ಮದ ಆ ದೇವರು ಒಂದೇ ಹೆಸರಲ್ಲಿರಬಹುದು, ಕೋಟ್ಯಾಂತರ ಹೆಸರಲ್ಲಿರಬಹುದು. ಧರ್ಮದ ಈ ನಂಬಿಕೆಯೇ "ಮೂಲ ಬೌದ್ಧ" ಹಾಗು ನಾಸ್ತಿಕತೆಗಳನ್ನು ಧರ್ಮದಿಂದ ಹೊರಗೆ ಉಳಿಸುತ್ತವೆ. ಧರ್ಮಶಾಸ್ತ್ರದವರ ಈ ವಿವರಣೆ ಧರ್ಮದ ಬಗ್ಗೆ ಒಂದು ಮೌಲಿಕ ಆಧಾರದ ವಿವರಣೆ ಅಷ್ಟೆ.

ಹೊಸ ಧರ್ಮಿಷ್ಠರು ಮತ್ತೊಂದು ಅರ್ಥವನ್ನು ಹೇಳುತ್ತಾರೆ : ಅದೊಂದು ಜೀವನ ಶೈಲಿ/ಪದ್ಧತಿ ಅಂತ. ಧರ್ಮದ ನಂಬಿಕಸ್ತರೆಲ್ಲಾ ಒಂದು ಬಗೆಯಲ್ಲಿ ಬದುಕುತ್ತಾರೆ ಹಾಗಾಗಿ ಅದೊಂದು ಜೀವನ ಶೈಲಿ/ಪದ್ಧತಿ ಹೌದಲ್ಲವೆ ಅನಿಸುತ್ತದೆ. ಆದರೆ ತುಸು ಗಮನಿಸಿ ನೋಡಿದರೆ, ಧರ್ಮ ನಮ್ಮ ಯೋಚನೆಗಳನ್ನು ಪ್ರಭಾವಿಸುವುದರಿಂದ - ಅದೊಂದು ಜೀವನ ಶೈಲಿಯಾಗಿ ಕಾಣಿಸಿಕೊಳ್ಳುತ್ತದೆ ಅಷ್ಟೆ. ಜೀವನ ಪದ್ಧತಿ/ಶೈಲಿಗೆ ಬರೇ ಧರ್ಮವಲ್ಲ; ಹಣ, ರಾಜಕೀಯ, ಭೂಗೋಳ, ಪರಿಸರ ಹೀಗೆ ಹಲವು ಅಂಶಗಳೂ ಸ್ಪೂರ್ತಿ/ಒತ್ತಡಗಳಾಗುತ್ತವೆ. ದೇವರಲ್ಲಿ ನಂಬಿಕೆಯನ್ನು ಪ್ರಚೋದಿಸಿ, ಆಚರಣೆಗಳ ಮೂಲಕ ಅದನ್ನು ಪ್ರಚುರಪಡಿಸುವ ಧರ್ಮ ಜೀವನಶೈಲಿಯನ್ನು ರೂಪಿಸುವ ಒಂದು ಅಂಶವಷ್ಟೆ. ಹಾಗಾಗಿ ಒಂದು ಜೀವನ ಪದ್ಧತಿ/ಶೈಲಿಯನ್ನೇ ಧರ್ಮ ಎನ್ನಲಾಗುವುದಿಲ್ಲ.

ಪ್ರತಿದಿನ ಬದಲಾಗುವ ಸಂಸ್ಕೃತಿ ಹಾಗು ಸಮಾಜವು ಧರ್ಮವನ್ನು ಬದಲಾಗುವಂತೆ ಒತ್ತಾಯಿಸುತ್ತದೆ. ಧರ್ಮ ಅಳುತ್ತಾ ಕೂಗುತ್ತಾ ಬದಲಾಗುವುದಕ್ಕೆ ಇಷ್ಟವಿಲ್ಲದೆ ತುಸುತುಸುವೇ ಬದಲಾಗುತ್ತದೆ. ಹಾಗಾಗಿ ಧರ್ಮ ಅಂದರೆ ಏನು ಎಂಬುದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥವಿರುತ್ತದೆ. ಮೂಲದಲ್ಲಿ ಮೇಲೆ ಹೇಳಿದ ಧರ್ಮಶಾಸ್ತ್ರದವರ ವಿವರಣೆ ಎಲ್ಲ ಕಾಲಕ್ಕೂ ಹೊಂದುತ್ತದೆ. ಆದರೆ ಎಲ್ಲ ಸಂದರ್ಭಕ್ಕೂ ಹೊಂದದಿರಬಹುದು.

ಹೊಸಬೆಳಗು

ಹರಿಪ್ರಸಾದರ ಸೊಗಸಾದ ಚಿತ್ರಕ್ಕೆ ಬಹಳಷ್ಟು ಸಂಪದಿಗರು ತಮ್ಮ ಪದ್ಯ-ಗದ್ಯಗಳಿಂದ ಮತ್ತಷ್ಟು ಮೆರುಗು ಕೊಟ್ಟಿದ್ದಾರೆ. ಅವೆಲ್ಲವನ್ನು ಬರೆದವರಿಗೂ ಹಾಗೂ ಅವೆಲ್ಲವುಗಳನ್ನು ಒಂದೆಡೆ ಕಲೆ ಹಾಕಿದ ಗುರು ಬಾಳಿಗರಿಗೆ ವಂದನೆಗಳು. ನನಗನಿಸಿದ್ದು ಇಲ್ಲಿದೆ.

ಹಾರು ಹಕ್ಕಿಗಳಾಡುಂಬೋಲದೊಳದೋ
ಅರುಣನ ತೇರು, ಮರುದಿನವೆ ಇನ್ನೇನು!
ಏರಲಾಗದೆತ್ತರಗಳ ಪ್ರತೀಕ ಅಕೋ ಅಲ್ಲಿ

ಸ್ವಾಮಿಯೇ ಶರಣಂ ಅಯ್ಯಪ್ಪ.

ಸ್ವಾಮಿಯೇ ಶರಣಂ ಅಯ್ಯಪ್ಪ.

ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :(
ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ. ಕಾರಣ ಹೋದ ವಾರ ತುಂಬಾ ಕೆಲಸವಿತ್ತು. ಹಗಲು ರಾತ್ರಿ ದುಡಿದಿದ್ದೆ. (ಹೊಸ ಪ್ರಾಜೆಕ್ಟ್ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಟೆಂಡರ್‍ Quote ಮಾಡಿದ್ದೆ. ಪ್ರಾಜೆಕ್ಟ್ ಸಿಕ್ಕರೆ ಸಂತೋಷ ಆಗುತ್ತೆ.) :)

ಇರ್ಲಿ. ಆ ವಿಷಯ ಈಗ ಬೇಡ.

ಈಗ ವಿಷಯಕ್ಕೆ ಬರುವೆ.
ಶಬರಿಮಲೆಗೆ ಹೋಗಬೇಕೆನ್ನುವ ಆಸೆ ಮುಂಚಿನಿಂದಲೂ ಇತ್ತು. ಕಾರಣಾಂತರಗಳಿಂದ ಹೋಗೋದಕ್ಕೆ ಆಗಿರ್ಲಿಲ್ಲ. ಈ ಬಾರಿ ಮಾಲೆ ಹಾಕಿಕೊಂಡು ವ್ರತ ಮಾಡಿ ಅಯ್ಯಪ್ಪನ ಕೃಪೆಗೆ ಪಾತ್ರನಾಗುವ ಅವಕಾಶ ಸಿಕ್ಕಿತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.

ಇಂದು ಬೆಳಿಗ್ಗೆ ಬೇಗ ಎದ್ದು ತಣ್ಣೀರಿನ ಸ್ನಾನ ಮಾಡಿ, ಮನೆದೇವರಾದ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಆತನ ಅಪ್ಪಣೆ ಪಡೆದು, ನಂತರ ಅಯ್ಯಪ್ಪನಿಗೂ ಕಾಣಿಕೆ ಸಲ್ಲಿಸಿದೆ.

I J ಇತಿಹಾಸ

ಮೊದಲು ಇಂಗ್ಲಿಷಿನಲ್ಲಿ J Iನ ಭಿನ್ನ ರೂಪವಾಗಿದ್ದು ಎರಡಕ್ಕೂ I ನ್ನೆ ಬೞಸುತ್ತಿದ್ದರಂತೆ. ೧೭ನೇ ಶತಮಾನ(ಹದಿನೇೞನೆಯ ಶತಮಾನ)ದಿಂದೀಚೆಗಷ್ಟೆ I ನ್ನು ಕೆೞಗೆ ಸ್ವಲ್ಪ ಎಡಕ್ಕೆ ತಿರುಚಿ ಹೊಸ ಸಂಕೇತವನ್ನು ಬೞಸಲು ಪ್ರಾರಂಭಿಸಿದರಂತೆ.

ಮನಸನ್ನು ಮೀಟುತ್ತಿರುವ ನಾಕು ತಂತಿ

ಇಂದು ಬೆಳಿಗ್ಗೆ ಯಿಂದ ಒಂದು ಹಾಡು ನನ್ನ ಮನಸ್ಸು ಮತ್ತು ಬಾಯಿಯಿಂದ ಹೋಗ್ತಾನೆ ಇಲ್ಲಾ. ಬೇಂದ್ರೆ ಯವರ ನಾಕು ತಂತಿ ಹಾಡನ್ನು ಕೇಳಿದ ನಂತರ ನನಗೆ ಅದರ ಬಗ್ಗೆ ಸ್ವಲ್ಪವಾದರು ತಿಳಿದುಕೊಳ್ಳಬೆಕು ಎನಿಸಿತು. ಅದರಂತೆ ಅವರ ನಾಕು ತಂತಿ ಯ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿ ಕಲೆ ಹಾಕಿದೆ.

ನಾನು ನೀನು ಆನು ತಾನು ನಾಕೆ ನಾಕು ತಂತಿ

ಗೊತ್ತಿರಲಿಲ್ಲಾ..

ಗೊತ್ತಿರಲಿಲ್ಲಾ.. ನನಗೆ

ಆ ದಿನದ ನಿನ್ನೊಂದಿಗಿನ ಸಂಜೆಯ ಸಂಗ
ಮುಂಬರಲಿರುವ ಬರಗಾಲದ ಬದುಕಿಗೆ ಪ್ರಾರಂಬ ಅಂತ
ಗೊತ್ತಿರಲಿಲ್ಲ ನನಗೆ....

ಆ ದಿನದ ನಿನ್ನ ಹೂವಿನಂತಾ ನಗು
ಮುಂದಿನ ನನ್ನ ಬಾಳಿಗೆ ಮುಳ್ಳಾಗಿ ಕಾಡಬಹುದೆಂದು
ಗೊತ್ತಿರಲಿಲ್ಲಾ ನನಗೆ

ಆ ದಿನದ ನಿನ್ನ ಕಣ್ಣ ಕಾಂತಿ
ಮುಂದೆ ಬಂದೆರಗಲಿರುವ ಸಿಡಿಲಾಗುವುದೆಂದು
ಗೊತ್ತಿರಲಿಲ್ಲಾ ನನಗೆ