ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Bengaluru Decoded 3

ಹಲಸೂರು

ಅಲಸೂರು ಇವತ್ತು ಹಲಸೂರು ಆಗಿದೆ. ಹೆಚ್ಚಾಗಿ ತಮಿಳರು ವಾಸಿಸುವ ಈ ಏರಿಯ, ದೇವಸ್ಥಾನಗಳು ಹಾಗು ಇಕ್ಕಟ್ಟಾದ ರಸ್ತೆಗಳಿಗೆ ಪ್ರಸಿಧ್ಧವಾಗಿದೆ.

ಹೆಬ್ಬಾಳ

ವಿದಾಯ ಸಂಗಾತಿ-ಭಾರದ ಮನಸಿನಿಂದ

ಹೋಗಲೇ ಬೇಕಿದೆ ದೂರ
ಸಂಗಾತಿ ಮರೆತು ನಾ ತೋರಿದೆಲ್ಲಾ
ಪ್ರೀತಿ ಅವರಿಗೂ ಬೇಕಿದೆ ನಿನ್ನದೇ
ಶೃತಿ , ಭಾರದ ಮನಸಿನಿಂದ ಒಮ್ಮೆ
ನಿನಗೆ ವಿದಾಯ

ಬಾಳತಿರುವಿನಲ್ಲೊಮ್ಮೆ ನಿನ್ನ
ಪರಿಚಯವಾಯ್ತು ,ನನಗಾಗಲೆ
ಮತ್ತೊಬ್ಬರೊಡನೆ ಬಂಧನವಾಗಿತ್ತು
ಆದರೂ ನಿನ್ನಾಕರ್ಷಣೆಗೆ ಮನ
ಮರುಳಾಯ್ತು, ಎರೆಡು ದೋಣಿಗಳ ಮೇಲೆ
ಕಾಲಿಟ್ಟಂತೆ ಒಮ್ಮೆ ನೀನು
ಮತ್ತೊಮ್ಮೆ ಅವರು

ವರಕವಿ ಬೇಂದ್ರೆಯವರಿಗೆ ನಮನಗಳು ; ಹಿರಿಯಕವಿ, ಡಾ. ಚನ್ನವೀರಕಣವಿಯವರು, ತಮ್ಮ ಗುರುಗಳಾದ ಬೇಂದ್ರೆಯನ್ನು, ಸ್ಮರಿಸಿಕೊಂಡರು !

ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕನ್ನಡಭಾಷೆಯ ಸಾಹಿತ್ಯಪರಂಪರೆಯನ್ನು ಸುಮಾರು ೮ ದಶಕಗಳ ಕಾಲ ಮೆರೆಸಿ, ಕನ್ನಡ ಸಾರಸ್ವತಲೋಕವನ್ನು ಸಮೃದ್ದಿಮಾಡಿತು.

ನಿರೀಕ್ಷೆ

ಆ ಮೌನಗಳು
ಇದ್ದ ನೋಟಗಳಲ್ಲಿನ
ನೂರು ಭಾವಗಳನರಿಯಲು
ತುಡಿತ
ನಿಜ-ಮಾತಿಲ್ಲದವು ಎಷ್ಟೋ?
ತಲ್ಲಣ
ಜರಡಿ ಹಿಡಿದರೆ
ಚರಟ ಶೂನ್ಯ-ಶೂನ್ಯ

ತವಕ
ಮಾತುಗಳು ಏನಿದ್ದವೋ?
ಹುಡುಕ ಹೊರಟರೆ
ಮೈಲಿಗಲ್ಲುಗಳಿಲ್ಲ
ಮಾರ್ಗಸೂಚಕಗಳಿಲ್ಲ
ದಾರಿ ಹೇಳಲು
ಇದ್ದೇ ಇವೆಯಲ್ಲ
ಬರೀ ಮಾತೇ ತುಂಬಿರುವ
ಆ ಮೌನಗಳು

(ಚಿತ್ರ-ಗೆಳೆಯ ಮನೋಹರನದು-ಜೋಗಿಮಟ್ಟಿ, ಚಿತ್ರದುರ್ಗ)

ಹೀಗೊಂದು ಎಸ್. ಎಂ.ಎಸ್.

ಗಂಡ ಮತ್ತು ಹೆಂಡತಿ ಜಗಳವಾಡಿಕೊಂಡಿದ್ದರು

ಗಂಡ : (ಆಪೀಸಿನಿಂದ ಹೆಂಡತಿಗೆ ಪೋನ್ ಮಾಡಿ) " ಇವತ್ತು ರಾತ್ರಿ ಏನು ಅಡಿಗೆ ? "

ಹೆಂಡ್ತಿ : "ವಿಷ"

ಗಂಡ : ಸರಿ ಹಾಗಾದ್ರೆ, ನನಗಾಗಿ ಕಾಯಬೇಡ, ನೀನು ಊಟ ಮುಗಿಸಿ ಮಲಗು.

:)

ಅರವಿಂದ್

ಗೆಳತಿಗೊಂದು ಪತ್ರ

ಪಾರಿಜಾತ ಉದುರಿವೆ
ಅಂಗಳತುಂಬ....
ರಾತ್ರಿಯ ಆಸರೆ ತೊರೆದು
ಬದುಕು ತೆರೆದಿದೆ ನೀ ಬರೆದು
ಅಳಿಸದೇ ಹೋದ ಪುಟಗಳ...

ಉರಿಯುತ್ತಿದೆ ಭುವಿ ಬೇಗೆ ನುಂಗಿ
ಚಂದ್ರನ ತಂಪಿಗಾಗಿ ಕಾದಿದೆ
ಅರಿವಿಲ್ಲ ಅದಕೆ ಆ ಸುಖ
ಕ್ಶಣಿಕ ಎಂದು....

ಬದುಕು ನಿತ್ಯ ಉರಿಉವ ಧಗೆ
ಚಂದ್ರನ ಸಾಂಗತ ನೆಪ ಮಾತ್ರ
ರಾತ್ರಿ ಹರಡಿದೆ ನೀ ಬಿತ್ತಿಹೋದ
ಬಯಕೆಗಳ

ನಮ್ಮ ಸಂಸ್ಕೃತಿ-ಪರಂಪರೆಗಳೇ ನಮಗೆ ಶ್ರೀರಕ್ಷೆ

[ಹೊಳೇನರಸೀಪುರದಲ್ಲಿನ ಶ್ರೀ ಲಕ್ಷ್ಮೀನರಸಿಂಹ ವಿದ್ಯಾಮಂದಿರವು ಎರಡು ದಶಕಗಳ ಹಿಂದೆ ಆರಂಭವಾದ ಕೆಲವು ಗೆಳೆಯರ ಆಶಯದ ಕೂಸು. ನಾವು ಗೆಳೆಯರು ನೆಟ್ಟ ಸಸಿ ಫಲಕೊಡಲು ಆರಂಭಿಸಿದೆ. ಅದೇ ಸಂತಸದಲ್ಲಿ ಶಾಲೆಯ ಒಂದು ಸ್ಮರಣ ಸಂಚಿಕೆ ಹೊರ ಬರುತ್ತಿದೆ. ಶಾಲೆಯ ಆರಂಭದಲ್ಲಿದ್ದ ನಾನು ಸಸಿ ನೆಡುವಾಗಷ್ಟೇ ಇದ್ದೆ. ಆಮೇಲೆಲ್ಲಾ ಮರವಾಗಿ ಬೆಳೆಸಿದವರು ನೂರಾರು ಮಂದಿ ಸಹೃದಯಿಗಳು.