ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ
ಪುಸ್ತಕದ ಬೆಲೆ
೨೦೦ ರೂ.

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲಿ ಆಳಿದ್ದವರ ಮತ್ತು ಹೆಚ್ಚೆಂದರೆ, ಅವರ ವಿರುದ್ಧ ಪಾಳೆಯದವರ ದೃಷ್ಟಿಕೋನಗಳ ಮೂಲಕ ಅಥವಾ ಅವೆರಡರ ನಡುವಿನ ಸಂಘರ್ಷದಲ್ಲಿ ಮೂಡುವ ಬದುಕಿನ ಸ್ಥೂಲ ಚಿತ್ರವಷ್ಟೇ ಅಲ್ಲಿ ದೊರಕಬಹುದು. ಈಚಿನ ದಿನಗಳಲ್ಲಿ ಇತಿಹಾಸವೆಂಬುದು ಸಾಹಿತ್ಯ, ಸಂಸ್ಕೃತಿ, ಸಮಾಜಶಾಸ್ತ್ರ ಇತ್ಯಾದಿ ನೆಲೆಗಳ ಒಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವುದಾದರೂ, ಅದಕ್ಕಿನ್ನೂ ತಾನು ದಾಖಲಿಸುವ ಕಾಲಾವಧಿಯ ಮಾನವ ಸ್ಪಂದನೆಯ ಜೀವಂತ ಚಿತ್ರವನ್ನು ಕೊಡುವ ಶಕ್ತಿ ಸಂಪನ್ನವಾಗಿಲ್ಲ. ಬಹುಶಃ ಅದು ಅದರ ಉದ್ದೇಶವೂ ಆಗಿರಲಿಕ್ಕಿಲ್ಲ.

ನನಗೂ, ನಿನಗೂ ಕಣ್ಣಲ್ಲೇ ಪರಿಚಯ

ಕಂಗಳು ಮನಸ್ಸಿನ ಭಾವನೆಗಳಿಗೆ ಕನ್ನಡಿ ಅಂತಾರೆ, ಆದರೆ ನಿನ್ನದು ಕಂಗಳಲ್ಲಿ ನಿರ್ಲಿಪ್ತತೆಯಲ್ಲೋ ಹುಡುಗ ! ಯಾಕೋ ಹೀಗೆ ?, ನಿನ್ನ ಮನಸ್ಸಿನಲ್ಲಿ ಭವನೆಗಳೇ ಇಲ್ಲವೋ ಇಲ್ಲಾ, ಅವನ್ನು ವ್ಯಕ್ತ ಪಡಿಸದೇ ಇರಲು ಕಲಿತಿರುವೆಯಾ ? ಅಲ್ಲಾ ಕಣೋ ಅದು ಹೆಂಗೋ ಇರ್ತೀಯಾ ಯಾವುದೇ ಭಾವನೆಗಳನ್ನ ತೋರ್ಪಡಿಸದೆ ?

ಮನದಾಳದಿಂದ ಮರೆಯಾಗದ ಮಾನವೀಯ ಮುಖಗಳು

ತುಂಬಾ ಹಿಂದಿನ ಘಟನೆ. ಆಗ ನಾನಿನ್ನೂ ಹುಟ್ಟಿರಲಿಲ್ಲ, 1908-10ನೇ ಇಸ್ವಿ ಇರಬಹುದು. ಅದು ನಮ್ಮ ತಾತ ಶ್ರೀನಿವಾಸರಾಯರ ಕಾಲ. ನಮ್ಮ ತಂದೆ ಎಂಟ್ಹತ್ತು ವರ್ಷದವರಿದ್ದಿರಬೇಕು. ಆಗ ನಮ್ಮ ಘಟಪ್ರಭಾದ ಪೂರ್ವಭಾಗ ಅಂದರೆ ಗೋಕಾಕ ಭಾಗ ಬರಗಾಲದ ನಾಡಾಗಿತ್ತು. ಪ್ರತಿ ಎರಡು ವರ್ಷಕ್ಕೊಮ್ಮೆ ಅಲ್ಲಿ ಬರಗಾಲ ಕಾಯಂ ಆಗಿತ್ತು. ಆ ಬಾರಿ ಡೌಗಿ ಬರಗಾಲ ಬಂದಿತ್ತು. ಡೌಗಿ ಅಂದರೆ ತಲೆಬುರುಡೆ. ಆ ಬರಗಾಲದಲ್ಲಿ ಜನರಿಗೆ ತಿನ್ನಲು ಏನೂ ಸಿಗದೆ ಕೈಕಾಲುಗಳೆಲ್ಲಾ ತೀರಾ ಕೃಶವಾಗಿ ಕೇವಲ ತಲೆಬುರುಡೆಯಷ್ಟೇ ಕಾಣುತ್ತಿತ್ತಂತೆ. ಹೀಗಾಗಿ ಅದನ್ನು ಡೌಗಿ ಬರಗಾಲ ಎನ್ನುತ್ತಿದ್ದರು.

ನಮ್ಮದು ದೊಡ್ಡ ಜಮೀನ್ದಾರಿಕೆಯ ಮನೆತನ. ಎಷ್ಟು ದೊಡ್ಡದು ಅಂದರೆ 200 ಕೂರಿಗೆ ಅರ್ಥಾತ್ 800 ಎಕರೆಯಷ್ಟು ಜಮೀನು ನಮ್ಮದು. ಆ ಜಮೀನು ಮೂರ್‍ನಾಲ್ಕು ಗ್ರಾಮಗಳಲ್ಲಿ ವ್ಯಾಪಿಸಿತ್ತು. ಇಷ್ಟು ದೊಡ್ಡ ಜಮೀನ್ದಾರರಾದರೂ ನಾವು ಶ್ರೀಮಂತರಾಗಿದ್ದಿಲ್ಲ. 800 ಎಕರೆ ಜಮೀನಿನಿಂದ ಆ ಬಾರಿ ಬಂದ ಫಸಲು ಎಷ್ಟಿತ್ತು ಎಂದರೆ ಒಂದು ಸಣ್ಣ ಸೀಮೆಎಣ್ಣೆ ಡಬ್ಬದಲ್ಲಿ ತುಂಬಬಹುದಾದಷ್ಟು ಮಾತ್ರ! ನಮ್ಮದೋ ಸುಮಾರು 25 ಮಂದಿ ಇದ್ದ ಅವಿಭಕ್ತ ಕುಟುಂಬ ಮತ್ತು ಪಕ್ಕಾ ಸಾಂಪ್ರದಾಯಿಕ ಕುಟುಂಬ. ದಿನಾ ಒಂದಲ್ಲಾ ಒಂದು ಹಬ್ಬ-ಹರಿದಿನ ಇದ್ದೇ ಇರುತ್ತಿತ್ತು. ಪಿತೃಪಕ್ಷಕ್ಕೆ ಪುರೋಹಿತರನ್ನು ಊಟಕ್ಕೆ ಕರೆದಾಗ ಅವರಿಗೆ ಕೊಡಬೇಕಾದ ಒಂದು ಆಣೆ ದಕ್ಷಿಣೆಯನ್ನು ಕೂಡಾ ಉದ್ದರಿ ತರುತ್ತಿದ್ದರು. ಆ ವರ್ಷದ ಉದ್ದರಿಯನ್ನು ಸಾಲ ಕೊಟ್ಟವರು ಸುಗ್ಗಿ ವೇಳೆಯಲ್ಲಿ ಬಂದು ಹಣ ವಾಪಸು ಪಡೆದು ಹೋಗುತ್ತಿದ್ದರು. ಅಂಥಾ ಬಡತನ ನಮ್ಮದು.

ಚಿತ್ರ ಸಂತೆ

http://sampada.net/image/15989,
http://sampada.net/image/15988,
http://sampada.net/image/15987,
http://sampada.net/image/15986,
http://sampada.net/image/15985, ,
http://sampada.net/image/15983,
http://sampada.net/image/15982,
http://sampada.net/image/15981,

ಸಂಪದಿಗರ ಸ್ನೇಹ ಸಮ್ಮಿಲನಕ್ಕೆ ಬರಲಾಗದ ವ್ಯಥೆಯೊಂದಿಗೆ ..

ಈ ಭಾನುವಾರ ಮತ್ತೊಮ್ಮೆ ಸೇರುವ ಆಸೆಯೊಂದಿಗೆ ಸಂಪದಿಗರಿಗೆ ಹಾಗು
ಕಲಾ ಪ್ರೇಮಿಗಳಿಗೆ, ಕಲಾಸಕ್ತರಿಗೆ, ಕಲಾ ವಿರೋದಿಗಳಿಗೆ ;-)

ಮಾತು - ಮೌನ

ಮೌನ
ಅಂದು ಮನವ ಕಾಡಿದ್ದು ಮೌನ. ಏನೂ ಹೇಳದೆ ಏನೆಲ್ಲ ಹೇಳಿಬಿಟ್ಟಿತ್ತು. ಮರೆತು ಎಂದಿನಂತೆ ದಿಶೆ ಬದಲಾಯಿಸಲು ಹೊರಟರೆ ಮತ್ತೆ ಎಳೆತಂದಿತ್ತು ತನ್ನೆಡೆಗೆ.
ಏನೋ ದುಗುಡ. ಅರ್ಥವಾಗದ್ದು ಎನಿಸುವಷ್ಟು ಒಮ್ಮೆಮ್ಮೆ. ಅರ್ಥವಾಯಿತು ಎಂದುಕೊಂಡಂತೆ ಏನೂ ಅರ್ಥವಾಗದು. ಅರ್ಥವಾದದ್ದೂ ತೇಲಿ ಹೋಯ್ತು ಕರಗಿ ಏನೂ ಉಳಿಯದಂತೆ!

ಏನೆಲ್ಲ ಹೇಳಿಹೋಗಿತ್ತು ಮೌನ! ಆದರೆ ಏನೂ ಬಿಡಿಸದೆ ಒಮ್ಮೆಲೇ ಎಲ್ಲವನ್ನೂ ಬಿಡಿಸುತ್ತ ಕಣ್ಣಮುಚ್ಚಾಲೆಯಾಡುತ್ತ ತುಡಿದಿತ್ತು ಮನದಲ್ಲಿ; ಹಿಡಿದು ತಡೆದಿತ್ತು ಮನದ ಹೊರಳು, ಎಲ್ಲೋ ಇದ್ದುಕೊಂಡು ಇನಿತು ದೂರದಲ್ಲೇ ಇರುವಂತೆ.
ಎಂದೂ ನಿಲ್ಲದ ಮನಸ್ಸಿಗೆ ಅಂದು stalemate.

ಎಲ್ಲಿದೆ ಹಾದಿ? ಎಲ್ಲಿರುವುದು ಮೌನದೊಳಿದ್ದ ಸಮನಾದ ಪ್ರಶ್ನೆ-ಉತ್ತರ - ಇವುಗಳಿಗೆ ಉತ್ತರ?