ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಧ್ವಾಚಾರ್ಯರು

ಇದು ನನ್ನ ಗುರುಗಳಾದ ಮಂಡ್ಯದ ಡಾ. ಪ್ರದೀಪಕುಮಾರ ಹೆಬ್ರಿಯವರು ಬರೆದ ಮಧ್ವರ ಮಹಾಕಾವ್ಯದ ಮೊದಲ ಪದ್ಯ. . ಅವರ ಪರಿಚಯ ಕುರಿತು ಇನ್ನೊಮ್ಮೆ ಬರೆಯುತ್ತೇನೆ.

ನೀವಿಲ್ಲದಿರುವಲ್ಲಿ ಹರಡಿರಲು ನಿಶೆಯಂದು
ಬೆಳಗಿದಿರಿ ಲೋಕವನು ಸತ್ಯಮಾರ್ಗದಿ ಸಾಗಿ
ಎದುರಾಗಿ ಬಂದಿರಲು ನಿಮಗಂದು ವಾದಿಗಳು
ವಾದಕ್ಕೆ ಪ್ರತಿವಾದ ನಿಮಗಿಲ್ಲ ಎದುರಾಳಿ |

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು?

ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ.

ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ.

ಈ ದಿನದ ವಿಶೇಷ ನಿಮಗೆ ಗೊತ್ತಾ!?

ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವುವರ ಸಂಖ್ಯೆಯೇ ಹೆಚ್ಚು.ಇವತ್ತಿನ ದಿನದ ವಿಶೇಷ ನಿಮಗೆ ಗೊತ್ತ ಅಂತ ಕೇಳಿಕೊಳ್ಳಿ?

ದಾರಿಯ ತೋರೋ ಸಿರಿ ರಾಮ...

ರಾಮಾಯಣದ ಸುಂದರ ಕಾಂಡವು ಬಹು ಜನಪ್ರಿಯವಾದದ್ದೇ...
ನಾನು ಈ ಸುಂದರ ಕಾಂಡದಲ್ಲಿ ಬಣ್ಣಿಸಿರುವ ಒಂದು ಸನ್ನಿವೇಶವನ್ನು ಭಿನ್ನ ರೀತಿಯಲ್ಲಿ ಚಿತ್ರಿಸ ಬಯಸುತ್ತೇನೆ...

ದಾರಿಯ ತೋರೋ ಸಿರಿ ರಾಮ
ದಾರಿಯ ತೋರೋ ಸಿರಿ ರಾಮ ದಿನವೂ
ಜಪಿಸುವೆ ನಾನು ನಿನ್ನ ನಾಮ...

ಜಾಂಬವನಿಂದಲಿ ಬಲವನು ಅರಿತೆ
ಅಂಬರದಾಚೆಗೆ ಒಮ್ಮೆಲೆ ಬೆಳೆದೆ
ಸಾಗರವನ್ನು ಸುಲುಭದಿ ಅಳೆದೆ || ದಾರಿಯ ||

ಮೈನಾಕವನು ಲಂಘಿಸಿ ನಡೆದೆ
ಲಂಕಿಣಿಯನ್ನು ಕುಟ್ಟಿ ನಾ ತರಿದೆ
ಬಿಂಕದಿ ನಾನು ಲಂಕೆಲಿ ಮೆರೆದೆ || ದಾರಿಯ ||

ಗ್ರಹಗಳ ಕೂಟ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ

ಶುಕ್ರಚಂದ್ರರ ಯುತಿಯನ್ನು ಮತ್ತೊಮ್ಮೆ ಫೆಬ್ರುವರಿ ೨೭ ಮತ್ತು ೨೮ಱ ನಡುವೆ (ಅಂದರೆ ಬೇಱೆ ದೇಶದವರಿಗೆ ಸರಿಯಾದ ಯುತಿ) ನಮಗೆ ಫೆಬ್ರುವರಿ ೨೭ಱಂದು ಚಂದ್ರ ಶುಕ್ರನಿಗೆ ಸ್ವಲ್ಪ ಹಿಂದೆ (ಪಶ್ಚಿಮದೆಡೆ)ಮತ್ತು ಫೆಬ್ರುವರಿ ೨೮ಱಂದು ಶುಕ್ರನಿಗೆ ಸ್ವಲ್ಪ ಮುಂದೆ (ಪೂರ್ವ ದಿಕ್ಕಿನೆಡೆ) ಸಮೀಪ ಬರುವುದನ್ನು ಸಂಜೆ ೬.೨೦ಱಿಂದ ೮.೨೦ಱವರೆಗೆ ನೋಡಿ.

ಮೈಕಲ್ ವುಡ್ ನ ’ದ ಸ್ಟೋರಿ ಆಫ್ ಇಂಡಿಯಾ’ ದ ತಪ್ಪು ಚಿತ್ರಣಗಳು

ಇತ್ತೀಚೆಗೆ ಪಿ.ಬಿ.ಎಸ್ ದಲ್ಲಿ ಮೈಕಲ್ ವುಡ್ ಎಂಬಾತನ ’The Story of India' ಎನ್ನುವ ಸಾಕ್ಷ್ಯ ಚಿತ್ರ ಪ್ರಸಾರವಾಯಿತು.

ಈ ದಿನ ನನಗೆ ಸುದಿನ

ಅನನ್ಯ publications ಅವರು ನಡೆಸಿದ ಕವನ ಸ್ಪರ್ಧೆಯಲ್ಲಿ ನನ್ನ ಕವನ "ಮಂಜಿನ ಹನಿ" ಆಯ್ಕೆಯಾಗಿದೆ.

ಅವರು ಹೊರ ತರುತ್ತಿರುವ ಹೊಸ ಕವನ ಸಂಕಲನ " ಕವಿಗಳ ಕಲರವ" ದಲ್ಲಿ ನಲ್ಲಿ ನನ್ನ ಕವನ ಪ್ರಕಟಗೊಳ್ಳುತ್ತಿದೆ. ಅವರಿಗೆ ಬಂದಿದ್ದ 781 ಕವನಗಳಲ್ಲಿ, 100 ಕವನಗಳನ್ನು ಆಯ್ಕೆ ಮಾಡಿದ್ದಾರೆ.

ಸರಳ ಲೆಕ್ಕಾಚಾರ!

ಇಂದು ನಸುಕಿನಲ್ಲಿ ನಮ್ಮತ್ತಿಗೆ ಮಗಳು ಈ ಸಮೋಸ ಕಳುಹಿಸಿ ನನ್ನ ತಲೆ ಚುರುಕುಗೊಳಿಸಿದಳು:

೧ = ೫
೨ = ೨೫
೩ = ೧೨೫
೪ = ೬೨೫
ಆದರೆ,
೫ = ಎಷ್ಟು

ಉತ್ತರ ಹೇಳಿ

-ಆಸು ಹೆಗ್ಡೆ.

ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್’ನಲ್ಲಿ ಮಹಾಭಾರತ ನೋಡಿದ್ದರ ಫಲವೋ ಏನೋ, ಇಂದು ಮುಂಜಾನೆ ಎದ್ದಾಗಿನಿಂದ ಬರೀ ಅದರ ಪಾತ್ರಗಳ ಸುತ್ತಲೇ ನನ್ನ ಮನ ಸುತ್ತುತ್ತಿದೆ. ಬೆಳಿಗ್ಗೆ, ಕಿಟಕಿಯಿಂದ ತೂರಿ ಬಂದ ಸೂರ್ಯನ ರಶ್ಮಿಗೆ ನಮಿಸಿ ಅಂದುಕೊಂಡೆ, ಯಾರನ್ನೂ ಸುಟ್ಟು ಭಸ್ಮ ಮಾಡುವಷ್ಟು ಶಕ್ತಿಯಿದ್ದೂ, ಕುಂತಿಯಲ್ಲಿ ಹುಟ್ಟಿದ ನಿನ್ನ ಮಗ ಕರ್ಣನಿಗೆ ಆಗುತ್ತಿದ್ದ ಅನ್ಯಾಯ ಕಂಡೂ ಸುಮ್ಮನೇಕಿದ್ದೆ ? ಪ್ರತಿ ಕ್ಷಣವೂ ಜಗತ್ತನ್ನು ಕಾಣುವ ನಿನಗೆ, ಈ ವಿಷಯ ಏಕೆ ಕಾಣಲಿಲ್ಲ ? ಅಥವಾ ಅದ್ಭುತ ಶಕ್ತಿಯ ಜೊತೆ ಅಷ್ಟೇ ತಾಳ್ಮೆಯೂ, ಕ್ಷಮಾ ಗುಣವೂ ಇದೆಯೋ ನಾನರಿಯೆ !
ಶನಿವಾರವಾದ್ದರಿಂದ ಸ್ನಾನ ಬಿಟ್ಟು ಮಿಕ್ಕ ನಿತ್ಯಕರ್ಮ ಮುಗಿಸಿ ಮಹಡಿ ಇಳಿದು ಅಡಿಗೆ ಮನೆಗೆ ಕಾಫಿ ಕುಡಿಯಲು ಬಂದೆ. ನನ್ನಾಕೆ ಯಾರೊಂದಿಗೋ ಫೋನಿನಲ್ಲಿ ಹೇಳುತ್ತಿದ್ದಳು ’ಚಳಿಗೆ ಮಜ್ಜಿಗೆ ಆಗಲಿಲ್ಲ ಅಂತ ಒವನ್’ನಲ್ಲಿಟ್ಟೆ. ಮಧ್ಯಾನ್ನದ ಹೊತ್ತಿಗೆ ಮಜ್ಜಿಗೆ ಆಗಿತ್ತು’.
ಗಾಂಧಾರಿಯು ತನ್ನ ಗರ್ಭ ಹೊತ್ತು ಒಂದು ವರ್ಷವಾದರೂ ಹಡೆಯದಿರುವುದನ್ನು ಕಂಡು ಎಲ್ಲರಿಗೂ ಅಲೋಚನೆಯಾಯಿತು. ಭೀಷ್ಮರು ವ್ಯಾಸರನ್ನು ಭೇಟಿಯಾದರು. ಅವರು ಮತ್ತೊಂದು ವರ್ಷ ಕಾಯಲು ತಿಳಿಸಿದರು. ಮತ್ತೊಂದು ವರ್ಷ ತುಂಬಲು, ದೊಡ್ಡ ಮಾಂಸದ ಮುದ್ದೆಯನ್ನು ಹೆತ್ತಳು ಗಾಂಧಾರಿ. ವ್ಯಾಸರು ಬಂದು, ಆ ಮುದ್ದೆಯನ್ನು ನೂರು ಭಾಗ ಮಾಡಿ ಬೆಣ್ಣೆಯ ಜಾರಿಯಲ್ಲಿಟ್ಟು, ಉಳಿದ ಸ್ವಲ್ಪ ಮಾಂಸದ ಮುದ್ದೆಯನ್ನು ನೂರೊಂದನೆಯ ಜಾರಿಯಲ್ಲಿಟ್ಟು ಭೀಷ್ಮರಿಗೆ ಒಪ್ಪಿಸಿ ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಹೇಳಿದರು. ಮತ್ತೆರಡು ವರ್ಷ ಕಳೆಯಲು ಮಾಂಸದ ಮುದ್ದೆಗಳು ಮಕ್ಕಳಾಗಿ ಕೌರವರು ಎನಿಸಿಕೊಂಡರು. ಮೊದಲ ನೂರು, ಗಂಡು ಮಕ್ಕಳಾದರೆ ಕೊನೆಯದು ಹೆಣ್ಣು ಮಗು, ದುಷ್ಯಲೆ.