ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಕನ್ನಡ ಭಾಷಾ ಪರಾಕ್ರಮ.

೧.ಧಾರವಾಡ ಕನ್ನಡ, ಸಂಕೇತಿ ಕನ್ನಡ , ಹವ್ಯಕ ಕನ್ನಡ ,
ಅರೆ ಭಾಷೆ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಗನ್ನಡ...ವೈವಿದ್ಯಮಯ ಶೈಲಿಯ ನಮ್ಮ ಕನ್ನಡ.

೨.ವೈಜ್ಞ್ಯಾನಿಕವಾಗಿ ಬಳಸುಬಹುದಾದ ಕನ್ನಡ.

೩.ಬರೆದಂತೆ ನುಡಿಯುಬಹುದಾದ ಕನ್ನಡ, ನುಡಿದಂತೆ ಬರೆಯಬಹುದಾದ ಕನ್ನಡ.

೫.ಕನ್ನಡ ಚೆಲುವಿನ ಚೆನ್ನುಡಿ.

೬.ಸರಸ್ವತಿ ವೀಣೆಯಲ್ಲಿ ಉಲಿದ ಕನ್ನಡ.

ಬ್ರಹ್ಮ ರೂಪಿ ನನ್ನಾತ್ಮ ಸಖಿ

ದನಿ ಕೇಳಿ ನಿಂತಿರೇನು
ನಾನು ಸರ್ವ ಶಕ್ತೆ
ಜೀವದಾಟ ಗೆದ್ದು ಬಂದ
ನಾನು ಮಂತ್ರ ಮುಕ್ತೆ

ಜೀವವಿಲ್ಲದಂಥ ಮುಖದಿ
ನಗೆ ಸ್ಪರ್ಶ ಮಾತ್ರದಿಂದ
ಜೀವಕಳೆಯ ತುಂಬಬಲ್ಲೆ
ನಾನು ಆನಂದದಾಯಿನಿ

ನಯನಗಳಿಗೆ ತಂಪನೀವ
ಮನಸಿಗೆಲ್ಲ ಇಂಪನೀವ
ಪೂರ್ಣ ರೂಪ ಸುಂದರಿ
ನಾನು ಗೀತ ಮಾಧುರಿ

ಜೀವಸೆಲೆಯು ಬತ್ತಿದಾಗ
ಜೀವದೊರತೆ ಚಿಮ್ಮಲೆಂದು
ಶಿವ ಶಿರದಿಂ ಇಳಿದಿಹೆ

ಇವರು ಸಮೋಸನೂ ತಿಂತಾರೆ, ಮೋಸನೂ ತಿಂತಾರೆ

ನಮ್ಮ ಹಿಂದಿ ಮಾತಾಡುವ ಸಹೋದರರು ’ಧೋಕೇ ಖಾತೇ ಹೈಂ, ಸಮೋಸೇ ಭೀ ಖಾತೇ ಹೈಂ’ ಇದನ್ನು ಕನ್ನಡಕ್ಕೆ ಭಾಷಾಂತರಿಸಿದರೆ. ’ಮೋಸನೂ ತಿಂತಾರೆ, ಸಮೋಸನೂ ತಿಂತಾರೆ’ ಅಲ್ವಾ ನಮ್ಮ ಹಿಂದೀ ಸಹೋದರರು.

ನಿಮ್ಮ ಮರಣದಿನಾಂಕ ಹಾಗು ಮುಂದಿನ ಜನ್ಮದಲ್ಲಿ ಏನಾಗುತ್ತೀರಾ ಎಂದು ತಿಳಿಯಬೇಕೆ

ನೆನ್ನೆ ಟಿವಿ ೯ ನಲ್ಲಿ ಹಾಸನದೆಲ್ಲೆಡೆ ಈ ಸುದ್ದಿ ಹಬ್ಬಿದೆ ಎಂದು ತಿಳಿಯಿತು
ಅದರ ಪ್ರಕಾರ ನಾನಂತೂ ಇನ್ನೂ ಮುವ್ವತ್ತು ವರ್ಷ ಬದುಕುತ್ತೇನೆ
ಮತ್ತೆ ಸೊಳ್ಳೆಯಾಗಿ ಹುಟ್ತುತ್ತೇನಂತೆ

ನೀವೂ ನೋಡಿ
ಅಂತರ್ಜಾಲ ವಿಳಾಸ
codes.beboindia.com/deathdate.php

ನೀವೇನಾಗಿ ಹುಟ್ಟುತ್ತೀರೆಂದು ನಮಗೂ ಸ್ವಲ್ಪ ಹೇಳಿ

ಮೊಬೈಲ್ ಸಂದೇಶ

ನಮ್ಮ ದೇಶ ಯಾಕೆ ಹಿಂದಿದೆ?
ಯಾಕೆ ಅಂದ್ರೆ......
ಇರೋ 110 ಕೋಟಿ ಜನರಲ್ಲಿ ,
8.9 ಕೋಟಿ ರಿಟೈರ್ಡ್ ಜನ.
43 ಕೋಟಿ ಜನ ಸರ್ಕಾರಿ ನೌಕರರು ( ಇವರು ಕೆಲಸ ಮಾಡಲ್ಲ)
2.1 ಕೋಟಿ ಜನ IT ಎಂಪ್ಲಾಯ್ಸ್ ( ಇವರು ನಮ್ಮ ದೇಶಕ್ಕಾಗಿ ದುಡಿಯೋಲ್ಲ)
28 ಕೋಟಿ ಸ್ಕೂಲ್ ಮಕ್ಕಳು
26 ಕೋಟಿ ಜನ ನಿರುದ್ಯೋಗಿಗಳು
1.2 ಕೋಟಿ ಜನ ಯಾವಾಗ್ಲೂ ಆಸ್ಪತ್ರೆಯಲ್ಲಿ ಇರ್ತಾರೆ
79 ಲಕ್ಷದ 99 ಸಾವಿರದ 998 ಜನ ಜೈಲಿನಲ್ಲಿ ಇದ್ದಾರೆ.

ನನ್ನ ಹಾಗು ನನ್ನ ಮಗಳ ಮೊದಲ ಕದನ

ನೆನ್ನೆ ಭಾನುವಾರ ನನ್ನ ಮಗಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದೆ, ಅವಳ ಸ್ಟೆಪ್ಸ್ ಸರಿಯಾಗಿ ಬರ್ತಾ ಇಲ್ಲ ಅಂತನ್ನಿಸಿ ಒಂದೆರೆಡು ಬಾರಿ ಹೇಳಿಕೊಟ್ಟೆ , ಕೊನೆಗೆ ಬೈದೆ. ಒಂದು ಹೊಡೆದೂ ಹೊಡೆದೆ.ಅವಳು ಅದೇ ತಾಳ ಅದೇ ರಾಗ
ಕೊನೆಗೆ " ನೋಡು ಹೀಗೆ ಮಾಡಿದರೆ ಪುಷ್ಪ(ಕೆಲಸದ ಹುಡುಗಿ)ಗೆ ಹೇಳಿಕೊಡ್ತೀನಿ " ಎಂದು ಹೆದರಿಸುತ್ತಿದೆ

ವೀಕೆಂಡ್ ಪಾರ್ಟಿಗಳೂ, ಬೆಳದಿಂಗಳೂಟವೂ....

ಸಾಫ್ಟ್‌ವೇರ್‍ ಪ್ರಪಂಚದಲ್ಲಿ ವೀಕೆಂಡ್ ಪಾರ್ಟಿಗಳಿಗೆ ತುಂಬ ಮಹತ್ವವಿದೆ ಅನ್ನೋದನ್ನು ಅಲ್ಲಗಳೆಯಲಾಗದು. ಅವರವರ ಭಾವಕ್ಕೆ ಅವರವರ ಟೇಸ್ಟಿಗೆ ತಕ್ಕಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೆಳೆಯರೊಂದಿಗೆ (ಕೆಲವರು ತಂತಮ್ಮ ಗರ್ಲ್‌ ಫ್ರೆಂಡ್‌ಗಳೊಂದಿಗೆ) ಹೊರಟುಬಿಡುವುದು "ವೀಕ್"ನ ಉದ್ದೇಶ.

ನಮ್ಮ ನಾಡು ,ನುಡಿ ಮತ್ತೆ ನಮ್ಮ ಹಕ್ಕು ಗಳನ್ನ ಪಡೆಯಲ್ಲಿಕ್ಕೆ ಹೋರಾಟ, ಸಮಾರಂಭಗಳ ಪಾತ್ರ ಮುಖ್ಯನಾ................ ?

ನನ್ನ ಸುತ್ತಮುತ್ತ ಎಲ್ಲೆ ಕನ್ನಡ ಪರವಾಗಿ ಯಾವುದೇ ಸಮಾರಂಭ ವಾಗಲಿ ಅಥವಾ ಹೋರಾಟವಾಗಲಿ ನಡೆದಾಗ ತಪ್ಪದೆ ಅಲ್ಲಿ ನಾನು ಕೂಡ ಭಾಗವಹಿಸಿದ್ದೆನೆ ಆಗ ನನ್ನ ಗೆಳೆಯರಲ್ಲಿ ಕೆಲವರು ಅಪಹಾಸ್ಯ ಮಾಡಿದ್ದು ಉಂಟು ಯಾಕೆಂದರೆ ಅವರು ಹೇಳೊ ಮಾತು ಇಷ್ಟೆ ಅಲ್ಲವೋ ನೀವು ಒಬ್ಬ ಇಂಜಿನಿಯರ್ ಆಗಿ ನಿನ್ನ ಕೆಲಸದ ಕಡೆ ಗಮನ ಹರಿಸೋದು ಬಿಟ್ಟು ಯಾವುದು ಸಮಾರಂಭ ಅಂತೆ ಹೋರಾಟವಂತೆ ಅಲ್ಲ

ದನಿ ಇರದ ಮೌನ (ಕವನ)

ಪದೇ ಪದೇ ನಿನ್ನ ನೆನಪಿಸಿಕೊಂಡಾಗ
ಬಿಕ್ಕಳಿಸಿ ಅಳುತಿದೆ ಮನಸು
ಯಾರದೋ ದನಿಯ ಕೇಳಿ
ತಿರುಗಿ ನೋಡುತಿದೆ ಹೃದಯ
ನೀ ಸನಿಹ ಬಂದಿಲ್ಲವೆಂದು ತಿಳಿದು
ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು

ಪ್ರೀತಿಯು ಹೃದಯದಲ್ಲಿ ಬಂದಿಯಾಗಿದೆ
ಯಾತನೆಯ ಅನುಭವಿಸದೆ ನರಳುತ್ತಿದೆ
ಬಿಡುಗಡೆಗಾಗಿ ನಿನಗಾಗಿ ದಾರಿ ಕಾಯುತ್ತಿದೆ

ಸಾಫ್ಟ್ವೇರ್ ಕಂಪನಿಗಳನ್ನು ಸಾಮಾನ್ಯವಾಗಿ ಎಲ್ಲಿ ರಿಜೆಸ್ಟರ್ ಮಾಡಿಸುತ್ತಾರೆ?

ಸಾಫ್ಟ್ವೇರ್ ಕಂಪನಿಗಳನ್ನು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಎಲ್ಲಿ ರಿಜೆಸ್ಟರ್ ಮಾಡಿಸುತ್ತಾರೆ?
ದಯವಿಟ್ಟು ತಿಳಿದವರು ಸಹಾಯ ಮಾಡಿ.

ಧನ್ಯವಾದಗಳು