ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾಕ್ಷಿಗಳು!

ಸಖೀ,
ನಿನ್ನ ಕೋಣೆಯ
ಬಾಗಿಲನು ನಾನು
ಬಡಿಯುತಿದ್ದೇನೆ
ಎಂದೆನಿಸುವುದು,
ಕಿಟಕಿಯ ಹಿಂದೆ
ನಾನು ನಿಂತಿದ್ದೇನೆ
ಎಂದೆನಿಸುವುದು,
ಗವಾಕ್ಷದ ಮೂಲಕ
ನಾನು ಇಣುಕುತಿದ್ದೇನೆ
ಎಂದೆನಿಸುವುದು,
ಇವೆಲ್ಲಾ ಮುನಿಸಿನಿಂದ,
ಇನ್ನು ಮನದ ಬಾಗಿಲನು
ನನಗಾಗಿ ತೆರೆಯಲಾರೆ
ಎನುತಿರುವ ನೀನು,
ನನ್ನನ್ನು,
ಇನ್ನೂ ಮರೆತಿಲ್ಲ
ಎನ್ನುವುದಕೆ
ಸಾಕ್ಷಿಗಳೇ ತಾನೆ?!
*-*-*-*-*-*-*

ಅಸಮಾನ್ಯ ಕಲೆಗಾರ ಈ ರಾಜು....

ಎಲ್ಲ ಬಲ್ಲವರಿಲ್ಲ ಅನ್ನುವುದು ಹಳೆಯ ಮಾತು ಈಗ ಗೊತ್ತಿಲ್ಲದ್ದು ಏನೂ ಉಳಿದಿಲ್ಲ...ರಾಜು ಮಾಡಿದ ಅವಾಂತರದ ಮುಂದೆ ಇದೀ

ಭಾರತ ತಲೆ ತಗ್ಗಿಸಬೇಕಾಗಿದೆ. ಯಾರ ಮೇಲೆ ವಿಶ್ವಾಸವಿಡಬೇಕು ಈ ಪ್ರಶ್ನೆ ಕಾಡಿದೆ ಯಾಕೆಂದರೆ management science ನಲ್ಲಿ

ಕಲಿಸುವ ವಿಚಾರ ಅಂದರೆ ಕಂಪನಿಗಳ balance sheet ಅಭ್ಯಾಸ ಮಾಡಿ ಹಣ ಹೂಡಬೇಕು ಅಂತ ಆದರೆ ಇಲ್ಲಿ ಆಗಿರುವುದೆಲ್ಲ

ಹೇಗೆ ತಪ್ಪಾಯ್ತು?

ಸಖೀ,
ಅಂದು ಮೇನಕೆ,
ವಿಶ್ವಾಮಿತ್ರನ
ತಪಸ್ಸನ್ನು
ಭಂಗ ಪಡಿಸಿದ್ದು
ತಪ್ಪಾಗಿರದಿದ್ದಲ್ಲಿ,
ಇಂದು,
"Bus Stop" ನಲ್ಲಿ
ನಿಂತಿದ್ದ
ಹುಡುಗಿಯ,
ಹುಡುಗನೋರ್ವ
ಚುಡಾಯಿಸಿದ್ದು
ಹೇಗೆ ತಪ್ಪಾಯ್ತು?!
*********

ಇದೇಕೆ ಹೀಗೆ?

ಸಖೀ,
ನೀ ನಿನ್ನ
ಬಾಹುಗಳಿಂದ
ನಿನ್ನ ಮಗುವನು
ತಬ್ಬಿಕೊಂಬಾಗ,
ಅದರ ಮೈಮೇಲೆ
ಚುಂಬನದ
ಮಳೆಗರೆಯುವಾಗ,
ಮಗು ನಿನ್ನ
ಎದೆ ಹಾಲ
ಸವಿಯುತಿರುವಾಗ,
ನಿನ್ನ ಜೊತೆಯಲೇ
ಮತ್ತೆ ರಾತ್ರಿಯನು
ಕಳೆಯುವಾಗ,
ನನ್ನ ಮೈಮನ
ಕುದಿಯುತದೆ,
ನಿನ್ನ ಮಗುವಿನ
ಮೇಲೆ ಮತ್ಸರದ
ಕಿಚ್ಚು ಹಚ್ಚಿಕೊಳ್ಳುತ್ತದೆ.
ಇದೇಕೆ ಹೀಗೆ?
ಸಖೀ,
ಹೇಳೆಯಾ?
ಇದೇಕೆ ಹೀಗೆ?
*******

ಬದು ಕಲಿಸುವ ಬದುಕು (ರೈತರೇ ಬದುಕಲು ಕಲಿಯಿರಿ-೫)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಮನೆಗೆ ಬಂದದ್ದು: ಕಾಫ್ಕಾ ಕಥೆ

ವಾಪಸ್ಸು ಬಂದಿದೇನೆ. ಚಪ್ಪರ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ನಡೂ ಮಧ್ಯೆ ಒಂದಿಷ್ಟಗಲ ಕೆಸರು ನೀರು. ಮಹಡಿ ಮೆಟ್ಟಿಲಿಗೆ ಅಡ್ಡವಾಗಿ ಕೆಲಸಕ್ಕೆ ಬಾರದ ಹಳೆಯ ಸಾಮಾನುಗಳ ರಾಶಿ. ಮೆಟ್ಟಿಲ ಮೇಲೆ ಮಲಗಿರುವ ಬೆಕ್ಕು. ನಾವು ಆಟವಾಡುವಾಗ ಕೋಲಿಗೆ ಸುತ್ತಿಕೊಳ್ಳುತ್ತಿದ್ದ ಬಟ್ಟೆ ಚೂರು ಹಳೆಯದಾಗಿ ಗಾಳಿಯಲ್ಲಿ ಅಲ್ಲಾಡುತ್ತಾ ಬಿದ್ದಿದೆ.

ಹಸಿರೇ ಉಸಿರು

ಸಂಪದದೊಳಗ ವಾತಾವರಣದ ಬಗ್ಗೆ ಕಾಳಜಿ ನೋಡಿ ಭ್ಹಾಳ ಖುಶಿ ಆತು. ಇವತ್ತು ಆಫ್ಹಿಸನಾಗ ನಾವು (ಗ್ರೀನ್ ಟೀಮು) ವಿದ್ಯುಚ್ಯಕ್ತಿ ಉಳಿತಾಯದ ಬಗ್ಗೆ ಚರ್ಚಿಸುತಿದ್ದಾಗ ಈ ಕೊಂಡಿ ಕಣ್ಣಿಗೆ ಬಿತ್ತು.

http://www.youtube.com/watch?v=cF5g0FgZQsA

ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?

ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.

ಕೊಳಲ ನಾದದ ಗುಂಗು..

ಕೃಷ್ಣ ಗೋಕುಲ ತೊರೆದು ಹೊರಟಿದ್ದಾನೆ, ಜಗತ್ತನ್ನು ಉದ್ಧರಿಸಲಂತೆ.ಸಂಭ್ರಮದಲ್ಲಿದ್ದಾನೆ. ಈ ಮರುಳು ರಾಧೆಯೋ ಅಂಗಲಾಚುತ್ತಿದ್ದಾಳೆ "ಬೇಡ ನನ್ನುಸಿರೆ,ತೊರೆಯ ಬೇಡ ನನ್ನನ್ನ. ಬದುಕುವ,ಜೀವಿಸುವ ಹಂಬಲ ನನಗೆ.ಬಿಟ್ಟು ಹೋಗಬೇಡ ನನ್ನ..."