ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮಗುದೊಂದು ವಾರ

ಹಿಂದಿನೆರಡು ವಾರಗಳ ಓದಿನ ಗತಿಯನ್ನು ಕಾಯ್ದುಕೊಳ್ಳಲಾಗಲಿಲ್ಲ .
ಅದರೂ ಒಂದೆರಡು ಮಯೂರಗಳನ್ನು ಇನ್ನೊಮ್ಮೆ ಓದಿ ಇಟ್ಟೆ.
ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡ ಅಬಚೂರಿನ ಪೋಸ್ಟ್ ಆಫೀಸು ಮತ್ತು ಇತರ ಕತೆಗಳು - ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರದು . ಓದಿ ಮುಗಿಸಿದೆ . ಚೆನ್ನಾಗಿದೆ. ಇನ್ನೂ ಇಳಿಸಿಕೊಂಡದ್ದಿವೆ . ಓದಿದ ನಂತರ ಬರೆಯುನೆ.

ಬಯಸದೆ ಬಂದ ಭಾಗ್ಯಕ್ಕೆ ನಾ ಋಣಿ!

ಸರಿ ಸುಮಾರು ಒಂಬತ್ತು ವರ್ಷಗಳ ಹಿಂದೆ, ಅಂದರೇ, ೨೦೦೦ ಎಂಬ ವರ್ಷ, ನೆನಪಿಸಿಕೊಂಡರೆ ಕಣ್ಣು ಒದ್ದೆಯಾಗುತ್ತವೆ. ಅದೊಂದು, ನೋವಾ? ದುಃಖವಾ? ಸಂಕಟವಾ? ನೀವೆಲ್ಲಾ ಹೇಳುವ ಕೆಟ್ಟ ಸಮಯವಾ? ಅದೊಂದು ನನಗೆ ತಿಳಿದಿಲ್ಲ. ಆ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರಕಿಲ್ಲ, ಅದಕಿಂತ ಮಿಗಿಲಾಗಿ ಉತ್ತರ ಹುಡುಕುವ ಗೋಜಿಗೆ ಹೋಗಿಲ್ಲ. ಈ ಅಂಕಣವನ್ನು ಬರೆಯುವುದಕ್ಕೆ ಹೊರಡುವುದಕ್ಕೆ ಮುಂಚೆ ಅಂತಹ ಸಿದ್ದತೆ ಏನು ಮಾಡಿಕೊಂಡು ಹೊರಟಿಲ್ಲ ಅದಕ್ಕಿಂತ ಮಿಗಿಲಾಗಿ ನನ್ನ ಭಾವನೆಗಳ ವಿಷಯಕ್ಕೆ ಬಂದಾಗ ನಾನೆಂದು ಸಿದ್ದತೆ ಮಾಡಿಕೊಂಡು ಬರೆದಿಲ್ಲ. ಅಂತರಾಳದಲ್ಲಿ ಉದಯಿಸಿದ ಪ್ರತಿ ಪದಗಳನ್ನು ತಮ್ಮ ಮುಂದಿರಿಸಿದ್ದಿನಿ. ಇದು ನಾನು ಬಹಳ ಸಂಯಮದ ಅಥವಾ ಬಹಳ ನೇರ ನಡೆಯವನೆಂದು ತೋರಿಸುವುದಕ್ಕಲ್ಲ. ನನ್ನೊಳಗಿರುವ ಕೆಲವು ಪ್ರಶ್ನೆಗಳಿಗೆ ನೇರ ಉತ್ತರ ಹುಡುಕಲು ಹೊರಟಾಗ ಪ್ರಶ್ನೆಗಳು ನೇರವಿದ್ದರೆ ಉತ್ತಮವೆನ್ನುವುದು ನನ್ನ ಅನಿಸಿಕೆ.
ಈಗ ಸಮಯ ಮೂರು ಘಂಟೆ ಮೂವತ್ತು ನಿಮಿಷ, ಇಂಥಹ ಮಧ್ಯರಾತ್ರಿ ಬರೆಯಲು ಹೊರಟಾಗ ನನಗನಿಸಿದ್ದು, ಅಲ್ಲಾ ನನಗೆ ನಿದ್ದೆ ಬರುತ್ತಿಲ್ಲಾ ಅದನ್ನ ಒಪ್ಪಿಕೊಳಬಹುದು ಆದರೇ ಅದಕ್ಕೊಸ್ಕರವಾಗಿ ಈ ಸರಿ ಹೊತ್ತಿನಲ್ಲಿ ಬರೆಯಲು ಹೊರಟಿರುವುದು ನಾನು ಮೂರ್ಖನೆಂಬುದು ಬಹಳ ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ. ಆದರೂ ಇದನ್ನು ಬರೆಯಲು ನನ್ನ ತಲೆಯೊಳಗೆ ಕೊರೆಯುತ್ತಿರುವ ಎಕೈಕ ವಿಷಯ ನಾನು ಅದೃಷ್ಟವಂತನೆಂಬ ಕಲ್ಪನೆಯಿರುವುದು. ನನ್ನ ಅನೇಕ ಸ್ನೇಹಿತರು ಇದನ್ನು ಆಗ್ಗಾಗ್ಗೆ ನೇರವಾಗಿ ಮತ್ತು ಹಿಂದೆಯಿಂದಲೂ ಬಳಸುತ್ತಿರುತ್ತಾರೆ. ಅವರಿಗೆ ಉತ್ತರಿಸಲು ಇದನ್ನು ಬರೆಯದೇ ಇದ್ದರೂ ನನ್ನೊಳಗೆ ಇರುವ ಈ ಪ್ರಶ್ನೆಗೆ ಉತ್ತರ ಸಿಕ್ಕೀತೇನೋ ಎಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.
೨೦೦೦ ಇಸವಿಯೆಂಬ ವರ್ಷವನ್ನು ನೆನೆದರೆ ನನ್ನ ಮೈ ಒಂದು ಬಗೆಯ ಕಂಪನ ಮಿಡಿಸುತ್ತದೆ.

ಹೊಸ ವರ್ಷ ಅಥವಾ ಹಳೆಯ ನೆನಪು

ಗೋಡೆಯ ಮೇಲಿನ ಕ್ಯಾಲೆಂಡರ್ ಬದಲಾಗುತ್ತಿದೆ, ಅದರ ಸೂಚನೆ ಮತ್ತೊಂದು ವರ್ಷ ಮುಗಿದು ಹೋಯಿತೆಂಬುದನ್ನು ನಮಗೆ ಮನವರಿಕೆ ಮಾಡಿಕೊಡುತಿದೆ. ಹೊಸವರ್ಷವೆಂದೊಡನೆ ಏನೋ ಒಂದು ಬಗೆಯ ಸಡಗರ, ಯಾವುದಕ್ಕೊ ಸಜ್ಜಾಗುತಿದ್ದೇವೆಂದೆನಿಸುತ್ತದೆ. ಇದು ಇಂದು ನಾಳೆಯದಲ್ಲ, ನನಗೆ ತಿಳಿದಾಗಿನಿಂದಲೂ ಇದು ನಡೆಯುತ್ತಲೇ ಇದೆ.

ನನ್ನ ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ?

ನಮಸ್ಕಾರ ಗೆಳೆಯರೆ/ಗೆಳತಿಯರೆ,

ನಾನಿವತ್ತು ನಿಮ್ಮ ಮುಂದೆ ಕೆಲವು ಘಟನೆಗಳನ್ನು ಹೇಳಲಿದ್ದೇನೆ, ತುಂಬಾ ನೊಂದು ಬರೆಯುತ್ತಿದ್ದೇನೆ, ಯಾಕೆ ನಮಗೆ ನಮ್ಮ ನಾಡಿನಲ್ಲೆ ಹೀಗಾಗುತ್ತೆ? ಯಾಕೆ ನಮಗೆ ಇದನೆಲ್ಲಾ ಪ್ರತಿಭಟಿಸೋಕೆ ಸಾಧ್ಯ ಆಗ್ತಿಲ್ಲ? ಅಥವ ಪ್ರತಿಭಟಿಸೋ ಮನೋಭಾವನೆಯೆ ನಮ್ಮ ಕನ್ನಡಿಗರಲ್ಲಿ ಇಲ್ಲವಾ ? ಕನ್ನಡಿಗರು ಹೇಡಿಗಳಾ? ಕನ್ನಡಿಗರಲ್ಲಿ ಒಗ್ಗಟ್ಟಿಲ್ಲವಾ?

ನನ್ನ ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ?

ನಮಸ್ಕಾರ ಗೆಳೆಯರೆ/ಗೆಳತಿಯರೆ,

ನಾನಿವತ್ತು ನಿಮ್ಮ ಮುಂದೆ ಕೆಲವು ಘಟನೆಗಳನ್ನು ಹೇಳಲಿದ್ದೇನೆ, ತುಂಬಾ ನೊಂದು ಬರೆಯುತ್ತಿದ್ದೇನೆ, ಯಾಕೆ ನಮಗೆ ನಮ್ಮ ನಾಡಿನಲ್ಲೆ ಹೀಗಾಗುತ್ತೆ? ಯಾಕೆ ನಮಗೆ ಇದನೆಲ್ಲಾ ಪ್ರತಿಭಟಿಸೋಕೆ ಸಾಧ್ಯ ಆಗ್ತಿಲ್ಲ? ಅಥವಾ ಪ್ರತಿಭಟಿಸೋ ಮನೋಭಾವನೆಯೆ ನಮ್ಮ ಕನ್ನಡಿಗರಲ್ಲಿ ಇಲ್ಲವಾ ? ಕನ್ನಡಿಗರು ಹೇಡಿಗಳಾ? ಕನ್ನಡಿಗರಲ್ಲಿ ಒಗ್ಗಟ್ಟಿಲ್ಲವಾ?

ವಾಡೆಯ ನೆನಪಲ್ಲಿ.....

ಮತ್ತೆ ಮಾತನಾಡಹೊರಟಿರುವೆ ಆ ದಿನಗಳ ಬಗ್ಗೆ ರಾತ್ರಿ ಕಾಡಿ ಬೆಳಿಗ್ಗೆ ಬೆಂಗಳೂರಿನ ಗದ್ದಲದಲ್ಲಿ ಕಳೆದು ಹೋಗುವ ನೆನಪುಗಳ

ಬಗ್ಗೆ. ಇಂದು ಹೇಳಹೊರಟಿರುವುದು ಸ್ವಲ್ಪ ಖಾಸಗಿ ವಿಚಾರ. ನನ್ನ ಅಕ್ಕ ಆಶಕ್ಕಳ ಬಗ್ಗೆ. ನನಗೆ ಬುಧ್ದಿ ತಿಳಿದಾಗಿನಿಂದ ವಾರಕ್ಕೊಮ್ಮೆ

ದಾಸರ ದಾಸರಾದ ಕನಕದಾಸರು

ಉಡುಪಿಯಲ್ಲಿ ಕನಕದಾಸರಿಂದ ಆದ ಚಮತ್ಕಾರ ಎಲ್ಲರೂ ತಿಳಿದದ್ದೇ. ಅಂತಹಾ ಮಹಾನ್ ಭಕ್ತ ಬೇಲೂರಿನಲ್ಲಿ ದಾಸರ ದಾಸರಾಗಿ ಊಳಿಗ ಮಾಡಿದ್ದು, ಅದನ್ನು ಮಹಾಪುಣ್ಯದ ಕೆಲಸ ಎಂದು ಅವರು ಭಾವಿಸಿದ್ದು ಅವರ ವೈಶಿಷ್ಟ್ಯ.
ಬೇಲೂರಿನಲ್ಲಿ ವೈಕುಂಠದಾಸರೆಂಬ ಹರಿಭಕ್ತರಿದ್ದರು. ಕನಕದಾಸರ ದೀಕ್ಷಾ ಗುರುಗಳಾದ ತಿರುಮಲೆ ತಾತಾಚಾರ್ಯರೇ ಇವರಿಗೂ ದೀಕ್ಷೆ ಕೊಟ್ಟವರೆಂದು ಹೇಳುತ್ತಾರೆ. ಇವರು ಬೇಲೂರು ಬಿಟ್ಟು ಹೊರಗೆಲ್ಲೂ ಹೋದವರಲ್ಲ. ಆದರೂ ಅವರ ಖ್ಯಾತಿಯಂತೂ ಎಲ್ಲಾಕಡೆ ಹರಡಿತ್ತು. ಕನಕದಾಸರು ವೈಕುಂಠದಾಸರ ಹಿರಿಮೆಯನ್ನು ಮೊದಲೇ ಕೇಳಿದ್ದರು. ಅವರನ್ನು ಕಾಣಲೆಂದು ಬೇಲೂರಿಗೆ ಹೋದರು. ವೈಕುಂಠದಾಸರೂ ಕನಕದಾಸರ ವಿಚಾರವನ್ನು ತಿಳಿದವರಾಗಿದ್ದರು. ಪರಸ್ಪರ ಗೌರವ ವಿಶ್ವಾಸಗಳು ಬೆಳೆದಿದ್ದವು, ಆದರೆ ಪರಸ್ಪರ ಭೆಟ್ಟಿಯಾಗಿರಲಿಲ್ಲ ಅಷ್ಟೇ. ಕನಕದಾಸರು ಬೇಲೂರಿಗೆ ಬಂದು ವೈಕುಂಠದಾಸರ ಮನೆಯನ್ನು ಹುಡುಕಿಕೊಂಡು ಹೋಗಿ, ಅವರಲ್ಲಿ ಊಳಿಗಕ್ಕೆ ಸೇರಿದರು. ತಾವು ಇಂಥವರು ಎಂದು ವೈಕುಂಠದಾಸರಿಗೆ ತಿಳಿಯಪಡಿಸದೇ ಅವರು ಹೇಳಿದ ಕೆಲಸಗಳನ್ನೆಲ್ಲಾ ನಿಷ್ಠೆಯಿಂದ, ಭಕ್ತಿಯಿಂದ, ಬೇಸರಪಡದೇ ಮಾಡುತ್ತಿದ್ದರು. ಆದರೆ ಒಂದು ದಿನ ವೈಕುಂಠದಾಸರಿಗೆ ತನ್ನಲ್ಲಿ ಊಳಿಗ ಮಾಡುತ್ತಿರುವವರು ಕನಕದಾಸರು ಎಂಬ ವಿಚಾರ ತಿಳಿದು ಹೋಯಿತು. ಆಗ ವೈಕುಂಠದಾಸರಿಗೆ ಆದ ಸಂಕಟ ಅಷ್ಟಿಷ್ಟಲ್ಲ. ಇಷ್ಟು ದೊಡ್ಡ ಹರಿದಾಸರು ತನ್ನ ಮನೆಯಲ್ಲಿ ಇದ್ದರೂ ತಾನು ಗುರುತಿಸಿ ಗೌರವಿಸಲಾರದೇ ಹೋದೆನೇ ಎಂದು ಮರುಗಿದರು. ಕನಕದಾಸರ ಕಾಲು ಹಿಡಿದು ತಪ್ಪನ್ನು ಮನ್ನಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡರು.