ವಾಡೆಯ ನೆನಪಲ್ಲಿ.....

ವಾಡೆಯ ನೆನಪಲ್ಲಿ.....

ಮತ್ತೆ ಮಾತನಾಡಹೊರಟಿರುವೆ ಆ ದಿನಗಳ ಬಗ್ಗೆ ರಾತ್ರಿ ಕಾಡಿ ಬೆಳಿಗ್ಗೆ ಬೆಂಗಳೂರಿನ ಗದ್ದಲದಲ್ಲಿ ಕಳೆದು ಹೋಗುವ ನೆನಪುಗಳ

ಬಗ್ಗೆ. ಇಂದು ಹೇಳಹೊರಟಿರುವುದು ಸ್ವಲ್ಪ ಖಾಸಗಿ ವಿಚಾರ. ನನ್ನ ಅಕ್ಕ ಆಶಕ್ಕಳ ಬಗ್ಗೆ. ನನಗೆ ಬುಧ್ದಿ ತಿಳಿದಾಗಿನಿಂದ ವಾರಕ್ಕೊಮ್ಮೆ

ಯಾದರೂ ಅವಳನ್ನು ತೋರಿಸುವ ಕಾರ್ಯಕ್ರಮ ಇರುತ್ತಿತ್ತು. ಮನೆಯಲ್ಲಿ ಅವ್ವ ಮಾಡಿದ ಉಪ್ಪಿಟ್ಟಿನ ಘಮಘಮ ಮನೆತುಂಬ

ಪಸರಿಸುತ್ತಿತ್ತು..... ಹೊರಗೆ ಹಾಲ್ ನಲ್ಲಿ ಅಣ್ಣಾಜಿ ಮನೆಯಿಂದ ತಂದ ಕುರ್ಚಿ ಮೂಲೆಯಲ್ಲಿ ಹಚ್ಚಿದ ಊದಿನಖಡ್ಡಿ ಯ ವಾಸನೆ

ಖಾಸ್ ಈ ಸಂಧರ್ಭಕ್ಕೆಂದೇ ಒಳಗಡೆಯಿಂದ ತೆಗೆದ ಕುತನೀ ಜಮಖಾನಿ. ಗಂಡಿನವರು ನಾಲ್ಕು ಘಂಟೆಗೆ ಬರುವೆವು ಎಂದು

ಹೇಳಿದ್ದರೂ ಎರಡೂವರೆ ಯಿಂದಲೇ ವಾಚು ನೋಡಿ ಕೊಳ್ಳುತ್ತ ಅಂಗಳದಲ್ಲಿ ಅಡ್ಡಾಡುತ್ತಿದ್ದ ಅಪ್ಪ . ಗಂಡಿನವರು ಕೇಳಿದ ಪ್ರಶ್ನೆಗಳಿಗೆ

ಉತ್ತರ ಖುಶಿಯಿಂದಲೇ ಕೊಡುತ್ತಿದ್ದ ಅಕ್ಕ ಅವರ ಉತ್ತರ ಒಂದೆರಡು ದಿನ ಬಿಟ್ಟು ಬಂದಾಗ ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು.

ಮೇಲಿನ ಸೀನು ಅನೇಕ ಬಾರಿ ರಿಪೀಟ ಆಗಿತ್ತು ಆದರೇನು ಅವ್ವ ಮಾಡುತ್ತಿದ್ದ ಉಪ್ಪಿಟ್ಟಿನ ರುಚಿ, ಆಶಕ್ಕಳ ಅಳು

ಕಮಿಯಾಗಲಿಲ್ಲ...... ಮುಂದೊಂದು ದಿನ ಬರೀ ಚಹಾದ ಮೇಲೆ ಅದೂ ದೂರದ ಕಿರ್ಲೋಸ್ಕರ್ ವಾಡಿ ಯಲ್ಲಿ ಆಶಕ್ಕಳಿಗೆ

ಕನ್ಯಾಪರೀಕ್ಶೆಯಿಂದ ಮುಕ್ತಿ ದೊರಕಿತು.

ಈಗ ಆಶಕ್ಕ ಇಲ್ಲ ಅವಳ ಮಗಳೂ ಸಹ ಹೆಚ್ಚಿನ ಪರೀಕ್ಶೆಗಳಿಲ್ಲದೇ ಮದುವೆಯಾಗಿ ಮಗಳೊಡನೆ ಆರಾಮವಾಗಿದ್ದಾಳೆ.

ನಾನು ನೋಡಿದ್ದು ಎರಡೇ ಕನ್ಯಾ ನಾ ಆರಾಮ ವಾಗಿರುವೆ.

ನಾ ಹೇಳಬೇಕೆಂದಿರುವುದು ಕನ್ಯಾ ಪರೀಕ್ಶೆ ಸಹ ಹೆಣ್ಣನ್ನು ಕೀಳಾಗಿ ಕಾಣುವ ಒಂದು ವಿಧ...

ಈ ಅವಸ್ಥೆ ಯಾವ ಹೆಣ್ನು ಮಕ್ಕಳಿಗೂ ಬರದಿರಲಿ .... ದೂರದಿಂದ ಆಶಕ್ಕ ಸಹ ಹೀಗೆ ಹರಿಸುತ್ತಿರ ಬೇಕು.

Rating
No votes yet