ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ನೀನು ಇನ್ನೊಂದು ಮಧು

ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು
ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು
*** *** ***
ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ
ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ
*** *** ***
ಮೊಗದಲ್ಲಿರುವ ತುಟಿಗಳು ತುಟಿಗಳಲ್ಲ: ಅವು

ಈಗ ಬೇಡ ಬಿಡಿ

ನಾವಿರೋದೇ ನಿಮ್ಮ ಸೇವೆಗಾಗಿ
ನೀವು ಮೈಕಿನಲ್ಲಿ ಭಾಷಣ ಬಿಗಿಯೋ ಮುನ್ನ
ಸ್ಟೇಜಿನಲ್ಲಿ ಟೇಬಲ್ ಹಾಕಿ
ಬ್ಯಾನರ ಕಟ್ಟಿ, ಹಾರತುರಾಯಿ ರಡಿಮಾಡಿ
ಮೈಕಿನಲ್ಲಿ ಒಂಟುತ್ರಿ-ತ್ರಿ ಟು ಒನ್
ಹೇಳೋಕಾಗಿಯೇ ನಾವಿರೋದು ಬಿಡಿ||
ಮನೆ ಮನೇಗೆ ಹೋಗಿ ಕದತಟ್ಟಿ
ಕೈ ಮುಗಿದು ಚೀಟಿ ಕೊಟ್ಟು
ನೂರು ಜನ ಕರೆದ್ರೆ ಮೂರು ಜನ ಬರುಲ್ಲ ಅಂತ ಗೊತ್ತಿದ್ದೂ
ಅದನ್ನೇ ಪ್ರತಿ ಭಾರಿಯೂ ಮಾಡುವ

ವ್ಹಾಟ್ ಇಸ್ ಕಂಪ್ಯೂಟರ್..?

ಅರ್ಧ ಬೆಂಗಳೂರ್ ಸುತ್ತಾಡಿ, ಅವ್ಯನ್ಯೂ ರೋಡಿಂದ ಸೀದಾ ಬಸವೇಶ್ವರ ಸರ್ಕಲ್ ಗೆ ಬಂದು, ಆ ರೋಡಿಂದ, ಎದುರಿಗೆ ಮೂರ್ನಾಲ್ಕು ಜೋಡಿ-ಹಾವಿನ ಚಿತ್ರಗಳಂತೆ ಕಾಣುತ್ತಿದ್ದ ಟ್ರಾಫಿಕ್ ಸೈನ್-ಬೋರ್ಡ್ ಗಳನ್ನ್ decipher ಮಾಡಕಾಗ್ದೆ, ಡಿವೈಡರ್ ಇಲ್ದಿರೋ(ರಿಪೇರಿ ಅಂತ ಕಿತ್ತಾಕಿದ್ದು) ರೇಸ್-ಕೋರ್ಸ್ ರೋಡಿನ ಆ ಲೇನ್ ನಿಂದ ಈ ಲೇನ್ ಗೆ ಜಂಪ್ ಮಾಡಿದ್ದನ್ನ , ಸರ್ಕಲ್ ನಡುವೆ ನಿಂತಿದ್ದ ಮಾಮ ನೋಡಿ, ನಾ ಇನ್ನೇನು ಸರ್ಕಲ್ ಸುತ್ತಬೇಕು ಅನ್ನೋವಾಗ, ನನ್ನ ಜೊತೆ-ಜೊತೆಗೆ ನನ್ನಂತೆ ಇನ್ನೊಬ್ಬ ಬೈಕಿ-ಯನ್ನ ಹಿಡಿದು, ನನ್ನ ಲೈಸೆನ್ಸ್, ಅವ್ನ ಎಲ್ಲೆಲ್ಲಾರು ಕಸ್ಕಂಡು, ದೊಡ್ಡಮಾಮನ (ದೊಮಾ) ಹತ್ರ ಕರ್ಕಂಡೋಗಿ, "ನೋ ಎಂಟ್ರಿ ನುಗ್ಗವರೆ, ಸಾರ್" ಅಂತ ಪಿರ್ಯಾದಿಸಿ, ಇವ್ರದು ಎಲ್ಲೆಲ್ಲು ಅಂತ ಒತ್ತಿ ಹೇಳಿದಾಗ, ಪಾಪಾ, ನನ್ನ ಜೊತೆಗಿರುವನ ಮೀಟರ್‍ ಆಪಾಗಿದ್ದು ನೋಡಿ, ಒಳಗೊಳಗೆ ನಗು ಬಂದಿದ್ದು, "have u put the L board on your bike..?", ಅಂತ ದೊಮಾ ಅವನ್ನ ಕೇಳಿದಾಗ, ಅವನು "ಆ೦.. ಆ೦.." ಅಂತ ನನ್ನ ಕಡೆ ಪ್ಯಾಲ್ಪ್ಯಾಲಿ ತರ ನೋಡ್ದಾಗ, ತಡ್ಕಣಕಾಗ್ದೆ, ಜೋರಾಗಿ ನಕ್ಕಾಗ, ದೊಮಾ ನನಗೆ, "Didn't you see the board..?", ಅಂದಾಗಲೆ ನಾ ಸ್ವಲ್ಪ ರೈಸಾಗಿ, ಕನ್ನಡದಲ್ಲೇ ದೊಮಾ ನಿಗೆ, "ನಿಮ್ಮ ಬೋರ್ಡ್ಗ್ ಗಳು ಅರ್ಥ ಆಗಲ್ಲಾ.., ಅದು... ಇದು..", ಅಂತ ರೋಪ್ ಹಾಕಣ ಅಂತ ಟ್ರೈ ಮಾಡೋವಾಗ "talk like an educated" ಅಂತ(ಅಂದ್ರೆ, ಇಂಗ್ಲೀಶ್ ಲ್ಲಿ ಮಾತಾಡು) ದೊಮಾ ನನ್ನ ಬಾಯ್ಮುಚ್ಸಿ, "I will put 100 rupee fine on both of u", ಅಂತ ಡಿಕ್ಳೇರ್ ಮಾಡಿ, ಪ್ರಿಂಟರ್(ಸಣ್ಣ-ಪೋರ್ಟೇಬಲ್) ತಗಂಬಾ, ಅಂತ ಮಾಮಾನಿಗೆ, ಹೇಳಿ, ತನ್ನ blackberry-ಯಲ್ಲಿ, ನಮ್ಮ ಕುಲ-ಗೋತ್ರ ಎಲ್ಲಾ ಫೀಡ್ ಮಾಡಿ, ಒತ್ತಿದ್-ತಕ್ಷಣ, ಪ್ರಿಂಟ್ ಬಂದಿದ್ದು ನೋಡಿ
ನಾನು, "ಸಾರ್ ಅದು bluetoothಆ..?", ಅಂತ ಕೇಳ್ದಾಗ, ಒಂಥರಾ ಮೆಚ್ಚುಗೆಯಿಂದ ನನ್ನನ್ನ ನೋಡಿ, "yes" ಅಂದಾಗ, ನನ್ನ ಜೊತೆ ಸಿಕ್ಕವನು , ನೂರು ರುಪಾಯಿ ಮಡಗಿ, ರಸೀತಿನೂ ಕೇಳ್ದೆ, ಕಾಲ್ಕಿತ್ತ.

ಭೂಮಿಗೆ ವಿಷ ಉಣಿಸುವುದು ಸಾಕು (ರೈತರೇ ಬದುಕಲು ಕಲಿಯಿರಿ-೧)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಇದನ್ನೊಮ್ಮೆ ಓದಿ ಬಿಡಿ!

ಇಂಥದೊಂದು ಪುಸ್ತಕವನ್ನು ಬರೆಯುವ ಆಸೆ ಬಹಳ ವರ್ಷಗಳ ಹಿಂದಿನದು.

ಮಗುವಾಗುವಾಸೆ

ಮಗುವಾಗುವಾಸೆ


ಮನದೊಳಗೆ ಮಡುಟ್ಟಿರುವ
ವಿಷಯ-ವಿಷವ
ಹೊರಗಟ್ಟಿ
ಮಗುವಾಗುವಾಸೆ|


ಗತ್ತು ಗಮ್ಮತ್ತುಗಳ
ಕಿತ್ತೆಸೆದು
ಬೆತ್ತಲಾಗುವಾಸೆ|


ಅಳುಕು ತಳುಕುಗಳ
ಹೊಗಳಿಕೆ ತೆಗಳಿಕೆಗಳ
ಹುಳುಕು ಕೊಳಕುಗಳ ಹೊರಚೆಲ್ಲುವಾಸೆ|


ಒಳಗಿರದ
ತೋರಿಕೆಯ ನಗುವ ನಗದೆ
ಮನಬಿಚ್ಚಿ ಬಿಕ್ಕಳಿಸಿ ಅಳುವ ಆಸೆ|

ಮಂಜಿನ ಹಾಗೆ

ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ
ಮಂಜಿನೊಳಗೆ ಮಂಜಿನ ಹಾಗೆ
ನಡೆದು ಬಂದ.
ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ
ಅವನಾಗಲೇ ನನ್ನ ತಲೆಯೊಳಗಿದ್ದ.
ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ
"ಯಾರೀತ? ಎಂಥ ಹೂಗಳು?"
ನನ್ನ ಪಕ್ಕದಲ್ಲಿ ಕುಳಿತು ಒಂದೊಂದೇ
ಹೂಗಳಿಂದ ನನ್ನ ಮುಚ್ಚುತ್ತಾ ಹೇಳುತ್ತಾನೆ
"ಇವೆಲ್ಲ ನಿನಗೆ, ನಿನಗೊಬ್ಬಳಿಗೆ ಮಾತ್ರ

ಪ್ರತಿಕ್ರಿಯೆ ಹಾಗು ಬ್ಲಾಗ್ ಗಳನ್ನು ತೆರೆಯಲಾಗುತ್ತಿಲ್ಲ..

ನನಗೆ ಸಂಪದದಲ್ಲಿ ಯಾವ ಪ್ರತಿಕ್ರಿಯೆ ಹಾಗು ಬ್ಲಾಗ್ ಗಳನ್ನು ತೆರೆಯಲಾಗುತ್ತಿಲ್ಲ.. :( page cannot be displayed ಅಂತ ಬರ್ತಿದೆ :’( . ತಿಳಿದವರು ಸಹಾಯ ಮಾಡಿ ..