ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚುಟುಕು ಕವನಗಳು

ಚಂಪೂಕಾವ್ಯ
-------------
ನಾನೊಂದು ಬರೆದೆ ಪದ್ಯ
ಅದರಲ್ಲಿ ಹೆಚ್ಚಾಗಿದ್ದುದೆ ಗದ್ಯ
ಅದಕೊಂದು ಬೇರೆ ಪದವಿದೆ ಸದ್ಯ
ಅದೇ ಪದ್ಯ ಗದ್ಯದಿಂದ ಕೂಡಿದ ಚಂಪೂಕಾವ್ಯ !

ಗಂಭೀರವಧನೆ !
-------------------
ಮಾತಾಡು ಮಾತಾಡು ಗಂಭೀರವಧನೆ
ಸ್ವಲ್ಪವೂ ನಗಲಾರೆಯ ನನ್ನ ಮನಧನ್ನೇ
ನಿನ್ನ ನಗುವಿಲ್ಲದ ಮುಖವು ತರಿಸುತದೆ ನನಗೆ ಬೇನೆ
ಹೀಗೆ ಆದರೆ, ಆಗುತ್ತದೆ ನನ್ನ ಕೊನೆ!

-- ಕಾಂತು

ನಮ್ಮ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ನಿಮಗೆ ಎಷ್ಟು ಗೊತ್ತು?..

ಇಲ್ಲಿ ನಾನು ಏನನು ಬರೆಯಬೇಕಿಲ್ಲ, ನಾನು ಕೊಟ್ಟಿರುವ ಲಿಂಕ್ http://www.discoverbangalore.com/airport.htm ಪ್ರೆಸ್ ಮಾಡಿದರೆ ಅಲ್ಲಿ ಎಲ್ಲ ಇನ್ಫೊ ಸಿಗುತ್ತದೆ,
ಅಲ್ಲಿ ಏನಿದೆ ಏನಿಲ್ಲ, ಒಟ್ಟಿನಲ್ಲಿ ಉಪಯುಕ್ತ ಮಾಹಿತಿಯಂತೂ ಖಂಡಿತಾ ಸಿಗುತ್ತೆ.

ಅವ್ವ

ಎರಿ ಮಣ್ಣಿನ ಕರಿ ಬಣ್ಣದ್ಹಾಂಗ
ಇರೋ ನನ್ನವ್ವ
ಅಂಥಾ ಗಂಡನ್ನ ಕಟಗೊಂಡು
ಪಡಬಾರದ್ದ ಪಟ್ಟು
ಏಗಬಾರದ್ದ ಏಗಿ
ಊರಾಗ ನಾಲ್ಕು ಮಂದಿ
ಹೌದು ಹೌದು ಅನ್ನೋಹಾಂಗ
ಬಾಳೆ ಮಾಡಿದಾಕೆ.

ಅಂಥಾ ಎಡಾ ಹೊಲದಾಗ
ದುಮು ದುಮು ಬಿಸಲಾಗ
ಬಂಗಾರ ಬೆಳಿತೇನಿ ಅಂತ ಹೋದಾಕಿ.
ಬಂಗಾರ ಇಲ್ದ ಬೆಳ್ಳಿ ಇಲ್ದ
ಬರೆ ಎರಡು ಸೀರ್ಯಾಗ
ಜೀವನಾ ಕಂಡಾಕಿ.

ಹೊಲ್ದಾನ ಹ್ವಾರೆನೂ ಮಾಡಿ
ಮನ್ಯಾಂದೂ ನೋಡಿ

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?

ನೀರು ಸೇದಿ ಸೇದಿ
ನೆಲವ ಅಗೆದು, ಅಗೆದು
ಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!
ಬೀಡಿ, ಸಿಗರೇಟ್ ಸೇದಿ ಸೇದಿ
ಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದು
ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!

ನುಡಿಮುತ್ತು

"ಸಸಿಯ ನೆಟ್ಟು ಫಲವ ಬಯಸಿ,ಕಾಯುತ್ತ ಕುಳಿತು ಮನಕೆ ಇಂದು ತಿಳಿದಿದೆ ಅಂದು ನೆಟ್ಟ ಸಸಿಯು ಯಾವುದಕ್ಕು ಪ್ರಯೋಜವವಿಲ್ಲ"

"ತುತ್ತು ಕೂಳಿಗಾಗಿ,ಹೆತ್ತಿ ಹೋತ್ತಿ ದುಡಿದರು ಒಪ್ಪೊತ್ತಿಗೆ ಸಾಲುತ್ತಿಲವೆಂಬ ಬೀತಿ
ಇನ್ನೂ ಸತ್ತ ಮೇಲೆ ಹೋತ್ತು ಹೋಗುವುದೆ"

"ಬಡವರು ನಾವು ನಮಗಿಲ್ಲ ಯಾವುದೇ ವರಮಾನ,ನಮಗಿರುದೇ ಅಪಮಾನ ನೋವು ನಿಂದನೆ, ನಮಗೆ ಬೇಕು

ಸೌರಸಂಗೀತದಿಂದ ವಿದ್ಯುತ್ ಉತ್ಪಾದನೆ

ಅಗಣಿತ ತಾರಾಗಣಗಳ ನಡುವೆ ನಮ್ಮ ಸೂರ್ಯನೊ೦ದು ಸಾಧಾರಣವಾದ ನಕ್ಷತ್ರ. ಆದರೆ, ಭೂಮಿಯನ್ನು ಹೊರತುಪದಿಸಿದರೆ ಬಹುಶಃ ನಮಗೆ ಅತಿಮುಖ್ಯವಾದ ಮತ್ತೊಂದು ಆಕಾಶಕಾಯ ಸೂರ್ಯ. ಭುವಿಯ ಮೇಲಣ ಸಮಸ್ತ ಶಕ್ತಿಮೂಲಗಳು, ಹವಾಮಾನ, ಜೈವಿಕ ವ್ಯವಸ್ಥೆ ಹೀಗೆ ಎಲ್ಲಾ ವರ್ತಮಾನಗಳಿಗೂ, ನಮ್ಮ ಸೃಷ್ಥಿ, ಸ್ಥಿತಿ, ಲಯಗಳಿಗೂ ಕಾರಣಕರ್ತ ಈ ಸೂರ್ಯ.