ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಳ-ಸಂಗಾತಿ!!!

ಬಾಳ-ಸಂಗಾತಿ!!!

ಆನ್ವೇಷಣೆ:

ಚೆಲುವೆಯನು ಕಂಡಾಗಲೇ
ಆಗೆಂದೆ ನನನಲ್ಲೆ ಈಗಲೇ
ಹುಸಿ-ಮುನಿಸಿನಿಂದ ನೋಡಿದಳಾಗಲೇ
ನಿಲ್ಲಿಸದಿರು ನಾ ಕೂಗುವೆನೀಗಲೇ
ಎಂದು ಕೋಪದಿ ನುಡಿದಳಾಗಲೇ

ಮಿಲನ:

ಬೆಳದಿಂಗಳಲಿ ಸಂಗಾತಿಗಾಗಿ ಹುಡುಕಿದೆ
ಬೆಳದಿಂಗಳ ಬಾಲೆಯಾಗಿ ಬಾರೆಯೆಂದೆ
ಬಂದಳು ಮೂಡಣದ ಬಿಸಿಲೇರಿ
ಬಿಡಿಸಿದಳು ಒಂಟಿತನ ಮನಸೇರಿ

ಒಲವು:

ಸಂಗಾತಿ ಸುರಿದ ಸರಸಕೆ ಸೋತೆ

ಕಲಿಕೆ

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು
ಬೇಸರದಿ ಮನವ ನಲಿಸುವುದು ಇನಿಯೆಯೊಲು
ಸಿರಿಯ ತರಿಸುವುದು ಹೆಸರ ಮೆರೆಸುವುದು 
ಏನೇನ ಮಾಡದದು ಕಲಿಕೆಯ ಕಲ್ಪತರುವು!

ಸಂಸ್ಕೃತ ಮೂಲ:

ಹಚ್ಚ ಹಸಿರ ಚೀಲ ಬಿಚ್ಚಿ...

ಹಚ್ಚ ಹಸಿರ ಚೀಲ
ಬಿಚ್ಚಿ, ಮಣಿಗಳಾ ಬಿಡಿಸಿ,
ತುರಿದು ಕಾಯ,
ತರಿದು ಎಲೆಯ,
ನೀರ ಹಾಕಿ,
ರವೆಯ ಜೊತೆ
ಬೆರೆಸಿ ಬಿಸಿ ಇಟ್ಟರೆ ...
ಸವಿಯಲು ಸಿದ್ಧವಾಯ್ತಲ್ಲ
ಅವರೇಕಾಳುಪ್ಪಿಟ್ಟು!!!

(ಅವರೇಕಾಯಿ ಸೀಸನ್ ನೆನೆಯುತ್ತಾ...)

--ಶ್ರೀ

ದಿನಕ್ಕೊಂದು ಪುಸ್ತಕದ ಓದು ?

ಓದುವ ಚಟವುಳ್ಳ ನನಗೆ ಡಿಜಿಟಲ್ ಲೈಬ್ರರಿಯಿಂದಾಗಿ ಒಂದು ನಿಧಿಯೇ ಸಿಕ್ಕಂತಾಗಿದೆ. ಕನ್ನಡದಲ್ಲಿ ೨೫ ಸಾವಿರ , ಇಂಗ್ಲೀಷಿನಲ್ಲಿ ಒಂದು ಲಕ್ಷ ಪುಸ್ತಕ ಇದ್ದು ಮನೆಗೆ ಇಂಟರ್ನೆಟ್ಟು ಬಂದು , ಅಲ್ಲಿ ಒಂದು ಸಣ್ಣ ಪ್ರೋಗ್ರಾಮ್ ಬರೆದುಕೊಂಡು ಪ್ರತಿ ದಿನಕ್ಕೆ ಸಾಧಾರಣ ನೂರು ಪುಟದ ಒಂದು ಪುಸ್ತಕ ಸುಮಾರು ೧೦ ರೂ ಖರ್ಚಿನಲ್ಲೇ ಇಳಿಸಿಕೊಂಡು ಓದುವದು ಸಾಧ್ಯವಾಗಿದೆ.

ಅಲ್ಲ ಅಲ್ಲ ಎನ್ನು! ನೀನು ಗೆಲ್ಲುವೆ- ಓಶೋ ಕಥಾಮಾಲಿಕೆ

ಮನಸ್ಸು ಎ೦ದಿಗೂ ನಕಾರಾತ್ಮಕ, ಹೃದಯ ಸಕಾರಾತ್ಮಕ. ಮನಸ್ಸಿನ ಭಾಷೇ 'ಇಲ್ಲ' ಎ೦ಬುದರಲ್ಲೇ ಬೇರೂರಿದೆ. ಹೆಚ್ಚೆಚ್ಚು ನೀವು ಇಲ್ಲ ಎ೦ದಾಗ ನೀವು ದೊಡ್ಡ ಜ್ಞಾನಿ ಎ೦ದು ಭಾವಿಸಿಕೊಳ್ಳುತ್ತೀರಿ. ಮನಸ್ಸು ಅಸ್ವೀಕೃತಿಯ ಮೂರ್ತರೂಪ, ಸ್ವೀಕೃತಿ ಹೃದಯದ ಮೂರ್ತರೂಪ.
ನಾನು ನಿಮಗೊ೦ದು ಪುಟ್ಟ ಕಥೆಯನ್ನು ಹೇಳುತ್ತೇನೆ.
ಒಮ್ಮೆ ಒ೦ದು ಊರಿನಲ್ಲಿ ಒಬ್ಬ ಮನುಷ್ಯನನ್ನು ಆ ಊರಿನಲ್ಲೇ ಅತ್ಯ೦ತ ಮೂರ್ಖ, ಪೆದ್ದ ಎ೦ದು ಜನ ಲೇವಡಿಮಾಡುತ್ತಿದ್ದರು. ಆತ ಏನೇ ಹೇಳಿದರೂ ಜನ ಹಾಸ್ಯಮಾಡುತ್ತಿದ್ದರು. ನೊ೦ದ ಆತ ಆ ಊರಿನ ಒಬ್ಬ ವೃದ್ಧ ವಿವೇಕಿಯ ಬಳಿ ಹೋದ. ತಾನು ಇನ್ನು ಬದುಕಿ ಏನು ಪ್ರಯೋಜನವಿಲ್ಲವೆ೦ದು ಅವನಲ್ಲಿ ಅತ್ತ. ಇನ್ನು ಅವಮಾನ, ಲೇವಡಿ ನಾನು ಸಹಿಸಲಾರೆ. ದಯೆಮಾಡಿ ನನಗೆ ಏನಾದರೂ ಸಹಾಯ ಮಾಡಿ ಇಲ್ಲದಿದ್ದರೆ ನಾನೇ ಕೈಯಾರೆ ಪ್ರಾಣ ಕಳೆದುಕೊಳ್ಳುತ್ತೇನೆ' ಅ೦ಗಲಾಚಿದ ಆತ. ಆ ವೃದ್ಧ ಜ್ಞಾನಿ ನಕ್ಕು ನುಡಿದ, 'ಚಿ೦ತಿಸಬೇಡ, ಒ೦ದು ಕೆಲಸ ಮಾಡು. ನೀನು ನಕಾರಾತ್ಮಕನಾಗಿರು, ಇಲ್ಲ ಅಥವಾ ಅಲ್ಲ ಎನ್ನು. ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕುತ್ತಾ ಹೋಗು. ಯಾರಾದರೂ ನಿನಗೆ 'ನೋಡು ಆ ಸೂರ್ಯಾಸ್ತಮಾನ ಎಷ್ಟೊ೦ದು ಸು೦ದರ! ಎ೦ದು ಹೇಳಿದರೆ ನೀನು ತಕ್ಷಣ 'ಅಲ್ಲಿ ಯಾವ ಸೌ೦ದರ್ಯವಿದೆ? ನನಗೆ ವಿವರಣೆ ಕೊಡು' ಎ೦ದು ಹೇಳು. ಇದೇ ಕೆಲಸವನ್ನು ಎಲ್ಲದಕ್ಕೂ ಮಾಡುತ್ತಾ ಹೋಗು. ಒ೦ದು ವಾರದ ನ೦ತರ ಬ೦ದು ನನ್ನನ್ನು ಕಾಣು."

ಪಂಜರದೊಳಗಿನ ಪ್ರಾಣಿಯ ಚಿತ್ರ ತೆಗೆಯಲೊಂದು ಸಲಹೆ

ಶಿವಮೊಗ್ಗದ ತಾವರೆಕೊಪ್ಪದಲ್ಲಿ ಪಂಜರದ ಒಳಗಿದ್ದ ನರಿಯ ಚಿತ್ರ. ಪಂಜರದ ಸಮೀಪ ಕ್ಯಾಮರಾ ಹಿಡಿದು (ಎಷ್ಟಾಗುತ್ತೋ ಅಷ್ಟು ಹತ್ರ), Aperture ದೊಡ್ಡದು ಮಾಡಿ (ಇಲ್ಲಿ f/೪.೦), ಫೋಕಲ್ ಲೆಂತ್ ಜಾಸ್ತಿ ಮಾಡಿದರೆ (ಜಾಸ್ತಿ ಜೂಮ್ -ಇಲ್ಲಿ ೫೧mm) ಈ ಚಿತ್ರದಲ್ಲಿರುವಂತೆ ಪಂಜರ ಔಟ್ ಆಫ್ ಫೋಕಸ್ ಆಗುತ್ತದೆ.

ಎಸೆದ ಬೂಟು ಮೊದಲು ತಾಗುವುದು ಪತ್ರಿಕಾಧರ್ಮಕ್ಕೆ ..

ಮೊನ್ನೆ ಮೊನ್ನೆ ಬುಶ್ ಮಾತಾಡುವಾಗ ಇರಾಕಿ ಪತ್ರಕರ್ತ ಬೂಟು ಎಸೆದ ಸಂಗತಿ ಇನ್ನಿಲ್ಲದ ವಿಷಯದ ಚರ್ಚೆಗೆ ಗ್ರಾಹ್ಯವಾಗಿದೆ. ಬುಶ್ ಇಡೀ ತನ್ನ ಆಡಳಿತದ ಕಾಲಾವಧಿಯಲ್ಲಿ ಮಾಡಿದ ಹಲವಾರು ತಪ್ಪುಗಳಿಗೆ ಮುಖ್ಯವಾಗಿ ಇರಾಕಿನ ಮೇಲಿನ ಧಾಳಿಗೆ ಮನನೊಂದ ಆ ದೇಶದ ಪತ್ರಕರ್ತನೊಬ್ಬ ಮಾಡಿದ ಕೃತ್ಯವಿದು.

ಅಭಿಮಾನಿ ದೇವ್ರು!!!

ನನ್ನ ಅಭಿಮಾನಿ ದೇವ್ರು!!!!!!
ಇವರ ಮುಗ್ದ (?) ಅಭಿಮಾನ ನೋಡಿ ಆನಂದ ಭಾಷ್ಪ ಬಂತು ರೀ, ಆಹಾ! ಎಲ್ಲಾರಿಗೂ ಇಂತ ಚಂದನೆಯ ಅಭಿಮಾನಿಗಳಿದ್ದರೆ ಎಷ್ಟು ಚಂದ ಅಲ್ವಾ!! :D

ವಿಶ್ವದ ಅತಿ ಚತುರ ವ್ಯಾಪಾರ ತಜ್ಞ ಯಾರು ಗೊತ್ತೇ?

 

 

 

ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಓದಿರುವ ಕೆಲವು ಕವನಗಳು- ೩ ಗುರುವೆ! -- ಕವಿ:- ಅಂಬಿಕಾತನಯದತ್ತ

ಹೆಗಲ ಮೇಲಿರಲಿ ನಿನ್ನ ಕೈ ಗುರುವೆ!
ನಿನ್ನ ಶೂಲಕ್ಕೆ, ನನ್ನ ಕೈ
ನಿನ್ನ ಜೊತೆಗಿಹುದು ನನ್ನ ಮೈ
ನೀನೆ ನನ್ನನ್ನು ಎತ್ತಿ ಒಯ್
ಭಾರವೆಂದರೂ ಹಗುರೆ ಸೈ
ಜೀವ ಕುಣಿಯುವುದು ಥಕ್ ಥೈ
ಹಣವ ಮುರಿಸಿದರೆ ಆಣೆ ಪೈ
ಮರದ ಬಾಳನ್ನು ಅಮರಗೈ
ಧರ್ಮ ಜಯ್. ಧರ್ಮ ಜಯ್,
ಧರ್ಮ ಜಯ್.
ಹೆಗಲ್ನೆರಡನ್ನು ರೆಕ್ಕೆಗೈ,
ಮುಂದೆ ವೈ, ಮೇಲೆ ವೈ
ಹಾಸು ಹೊಕ್ಕನ್ನು ಹೀಗೆ ನೆಯ್