ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗ್ರಹ ಭೇದ

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡೋದು ನಿಮಗೇ ಬಿಟ್ಟದ್ದು.

ಹಿಂದೂ ಅಮೆರಿಕನ್ ಫೌಂಡೇಶನ್!!!

ಬಹಳ ದಿನಗಳಿಂದಲೂ ಈ ಸಂಸ್ಥೆಯ, ಸ್ಥಾಪಕರ ಕುರಿತು ಸಂಪದದಲ್ಲಿ ಬರೆಯೋಣ ವೆಂದಿದ್ದೆ. ಆದರೆ ಯೋಗ (ಒಂದು ತರಹ ಲಗ್ನ) ಕೂಡಿ ಬಂದಿರಲಿಲ್ಲ ಇಲ್ಲಿಯವರೆಗೆ. ಇವತ್ತು ಬುದುವಾರ, ವೆಂಕಟೇಶನ ಪ್ರೀತಿಯದಿನ! ಹೇಗೋ ಮಾಡಿ ತನ್ನ ಮಹಿಮೆಯನ್ನೊಳಗೊಂಡ ಧರ್ಮದ ಬಗ್ಗೆ ಅವನೇ ಹೇಳಿ ಬರೆಸುತ್ತಿದ್ದಾನೆ ( ಅರ್ಥಾತ್ ನನಗೆ ಸಾಕಷ್ಟು ಕಾಲಾವಕಾಶ ಕೊಟ್ಟಿದ್ದಾನೆ-ಬರೆಯಲು).

ವಾರಾಂತ್ಯದ ಲಾಗ್

ಕಳೆದ ವಾರಾಂತ್ಯ ತೀರ ಬಿಡುವಿಲ್ಲದಂತಾಗಿಬಿಟ್ಟಿತ್ತು. ಶನಿವಾರ ಬೆಳಗಾಗಿ ಫೋನ್ ಮಾಡಿದ ಅಕ್ಕ, "ಏ ಮನೆ ಕ್ಲೀನ್ ಇಟ್ಕೊಳೋ" ಎಂದೇ ಪ್ರಾರಂಭ ಮಾಡುತ್ತ "ಮನೆಗೆ ಬರುತ್ತಿದ್ದೇನೆ, ಒಂದೆರಡು ದಿನ ಇದ್ದು ಹೋಗುತ್ತೇನೆ" ಎಂದಾಗ ಸ್ವಲ್ಪ ಗಾಬರಿಯಾದದ್ದುಂಟು. ಬೆಳಗಾಗಿ ಅವಳ ಫೋನ್ ಕಾಲ್ ಕರ್ಟನ್ನುಗಳ ಧೂಳು ಹೊಡೆಯುತ್ತ, ಇಡಿಯ ಮನೆಯೆಲ್ಲ ವ್ಯಾಕ್ಯೂಮ್ ಮಾಡುತ್ತ ಸುಮಾರು ಹೊತ್ತು ಕಳೆಯುವಂತೆ ಮಾಡಿತು. ಮನೆ "ಕ್ಲೀನ್ ಆಗಿ ಇಲ್ಲ" ಎಂದರೆ ಅವಳಿಗೆ ಸುತಾರಾಂ ಇಷ್ಟವಾಗೋದಿಲ್ಲ. "ಏನೋ, ಮನೆ ಇಷ್ಟು ಗಲೀಜಾಗಿ ಇಟ್ಟುಕೊಂಡಿದ್ದೀಯ....", "ಏನೋ ಹರಿ, ಇಲ್ಲಿ ಇಷ್ಟೊಂದು ಧೂಳಿದೆ, ಕಂಪ್ಯೂಟರ್ ಮೇಲೆ ನೋಡೋ ಎಷ್ಟೊಂದು ಧೂಳಿದೆ." ಎಂದು ಒಂದೇ ಸಮನೆ ಶುರುಮಾಡಿಬಿಡುತ್ತಾಳೆ.

ಇನ್ನೇನು ಮನೆ ಧೂಳು ಹೊಡೆಯೋದು ಮುಗಿಸಿದ್ದೆ, ಮುರಳಿ ಬಂದ. ಅವನಿಗೆ ನಾನು ಕ್ಲೀನ್ ಮಾಡಿದ್ದು ಕಾಣಿಸಲಿಲ್ಲ ಅನ್ಸತ್ತೆ, "ಏನೋ ಇಷ್ಟೊಂದು ಹರಡ್ಕೊಂಡಿದೀಯ? ನೀಟಾಗಿ ಜೋಡಿಸಿ ಇಟ್ಕೋ ಮಾರಾಯ" ಅಂದ. :-) ಮುರಳಿ ಟೆಕ್ ಸಂಪದ ಕುರಿತು ಚರ್ಚೆ ಮಾಡೋಣ ಎಂದು ಬಂದಿದ್ದ. ಕೊನೆಗೂ ಕುಳಿತು ಟೆಕ್ ಸಂಪದದ ಚಹರೆ ಬದಲಿಸಿದೆವು. ಆದರೆ ಸಂದರ್ಶನಗಳ ಎಡಿಟಿಂಗ್ ಮುಗಿಸಲಾಗಲಿಲ್ಲ.

ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು.

ಬೂಟ್‌ ಸೇವೆಗೆ ನಕ್ಕ ಬುಷ್‌ ಇದು ಮುಕ್ತ ಸಮಾಜ ಎಂದ

ಆತ ಅಮೆರಿಕಾ ಅಧ್ಯಕ್ಷ. ಅಮೆರಿಕಾವೋ ಇಡೀ ವಿಶ್ವಕ್ಕೆ ದೊಡ್ಡಣ್ಣ. ಅಂತಹ ರಾಷ್ಟ್ರದ ಪ್ರಥಮ ಪ್ರಜೆ ಜಾರ್ಜ್‌ ಬುಷ್‌. ಬುಷ್‌ ಇರಾಕ್‌ಗೆ ಹೋಗಿ ಅಲ್ಲಿನ ಪ್ರಧಾನಿ ಜೊತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಸುದ್ದಿಯಾಗಿಲ್ಲ. ಸುದ್ದಿಯಾಗಿದ್ದು ಆತನ ಮೇಲೆ ಇರಾಕಿ ಪತ್ರಕರ್ತ ಬೂಟ್ ಎಸೆದುದು.

ನಾನೂ , ಸಂಪದವೂ , ಲೀನಕ್ಸೂ , ಸಮಸ್ಯೆಯೂ

ನಾವು ಯೂನಿಕ್ಸಿನಲ್ಲಿ 1992 ರಿಂದಲೇ ಕೆಲಸ ಮಾಡುತ್ತಿರುವೆವದರೂ ಲೀನಕ್ಸ್ ಬಗ್ಗೆ ಗೊತ್ತಿದ್ದದ್ದು ಕಡಿಮೆ . ಲೀನಕ್ಸು ಅಂತ ಒಂದಿದೆ , ಕಾಪಿಲೆಫ್ಟ್ , GNU ಇತ್ಯಾದಿ ಕೇಳಿ/ಓದಿ ಗೊತ್ತಿತ್ತು ಅಷ್ಟೆ . ಸಂಪದಕ್ಕೆ ಬಂದ ಮೇಲೆ ಉಬುಂಟು ಬಗ್ಗೆ ಓದಿ , ಪುಕ್ಕಟೆಯಗಿ ಸೀಡೀ ತರಿಸಿಕೊಂಡು ..

ಥಂಡಿ ಡಿಸೆಂಬರ್ ನ ಬೆಚ್ಚನೆಯ ನೆನಪು....

ಪ್ರಿಯ ಡಿಸೆಂಬರ್,

ಅದೇನು ಮಾಯೆಯೋ ನಿನ್ನಲ್ಲಿ, ಅದೋ ನಾನು ನಿನ್ನ ಮಾಯೆಯೊಳೋ ಅಂತಾ ಗೊತ್ತಿಲ್ಲ. ಆದರೂ ನೀನೆಂದರೆ ನನಗೆ ತುಂಬಾ ಇಷ್ಟ. ಯಾಕೆಂತ ಹೇಳಲಾ? ಈ ಚುಮು ಚುಮು ಚಳಿ ಎಷ್ಟು ರೊಮ್ಯಾಂಟಿಕ್ ಅಂದ್ರೆ ಕುಳಿತರೆ ನಿಂತರೆ ನಿನ್ನದೆಯ ಅನುರಾಗ..., ನನ್ನ ಭಾವನೆಗಳನ್ನು ಪುಳಕಗೊಳಿಸುವ ನಿನ್ನ ಸಾನಿಧ್ಯ ..ಇವೆಲ್ಲಾ ನನ್ನೊಡಲ ಕವಿ ಭಾವನೆಗೆ ಪ್ರೇರಣೆ ನೀಡಲು ಸಾಲದೇನು?

ಅನಾಥ ಸೋಲು

ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರೆಂದ ಮಾತ್ರಕ್ಕೆ ಅದು ಗೆಲುವಲ್ಲ .. ಸೋತರೆಂದ ಮಾತ್ರಕ್ಕೆ ಸೋಲಲ್ಲ.. ಗೆದ್ದು ಸೋತವರಿರುತ್ತಾರೆ.. ಸೋತು ಗೆದ್ದವರಿರುತ್ತಾರೆ..

ಭಾವ

ಮದುವೆಗೂ ಮುಂಚೆ
ಹುಡುಗಿಯ
ಹಾವಭಾವಕ್ಕೆ
ಮರುಳಾದ
ಆತ,
ಮದುವೆಯ ನಂತರ
ಅದೇ ಹುಡುಗಿಯ
'ಹಾವ'
ಭಾವಕ್ಕೆ
ಹೆದರಿ ನಡುಗಿದ..