ಹಿಂದೂ ಅಮೆರಿಕನ್ ಫೌಂಡೇಶನ್!!!

ಹಿಂದೂ ಅಮೆರಿಕನ್ ಫೌಂಡೇಶನ್!!!

ಬರಹ

ಬಹಳ ದಿನಗಳಿಂದಲೂ ಈ ಸಂಸ್ಥೆಯ, ಸ್ಥಾಪಕರ ಕುರಿತು ಸಂಪದದಲ್ಲಿ ಬರೆಯೋಣ ವೆಂದಿದ್ದೆ. ಆದರೆ ಯೋಗ (ಒಂದು ತರಹ ಲಗ್ನ) ಕೂಡಿ ಬಂದಿರಲಿಲ್ಲ ಇಲ್ಲಿಯವರೆಗೆ. ಇವತ್ತು ಬುದುವಾರ, ವೆಂಕಟೇಶನ ಪ್ರೀತಿಯದಿನ! ಹೇಗೋ ಮಾಡಿ ತನ್ನ ಮಹಿಮೆಯನ್ನೊಳಗೊಂಡ ಧರ್ಮದ ಬಗ್ಗೆ ಅವನೇ ಹೇಳಿ ಬರೆಸುತ್ತಿದ್ದಾನೆ ( ಅರ್ಥಾತ್ ನನಗೆ ಸಾಕಷ್ಟು ಕಾಲಾವಕಾಶ ಕೊಟ್ಟಿದ್ದಾನೆ-ಬರೆಯಲು). ನಾನು ಬರೆಯಲು ಹೊರಟಿರುವುದು ಒಂದು ಸಂಸ್ಥೆಯ ಬಗ್ಗೆ- ಅದೇ "ಹಿಂದೂ ಅಮೆರಿಕನ್ ಫೌಂಡೇಶನ್". ಈ ಸಂಸ್ಥೆಯು ವಯಸ್ಸಿನಲ್ಲಿ ತುಂಬಾ ಚಿಕ್ಕದು-ಕೇವಲ ೫ ವರ್ಷಗಳ ಹಿಂದಷ್ಟೇ ಸ್ಥಾಪಿಸಲ್ಪಟ್ಟತು. ಯಾರಿಂದ? ಯಾವ ರಾಜಕೀಯ ಪುಢಾರಿಗಳಿಂದಲ್ಲ, ಅಮೇರಿಕದಲ್ಲಿ, ಭಾರತೀಯ ತಂದೆ-ತಾಯಿಯರಿಗೆ ಹುಟ್ಟಿ, ಅಮೇರಿಕನ್ ಸಿಟಿಸನ್ ಆದರೂ, ನಮ್ಮ ಒಂದು ಹೆರಿಟೇಜ್ ಬಗ್ಗೆ ಅಧ್ಯಯನ ಮಾಡಿ, ಅದರ ಬಗ್ಗೆ ಹೆಮ್ಮೆಯಿಂದ " ನಾನೂ ಒಬ್ಬ ಹಿಂದೂ" ನನ್ನ ಈ ಜನ್ಮ ಧನ್ಯ, ಮಾನ್ಯ ಎಂದು ತಿಳಿದು, ಅದನ್ನು ಸಾರ್ಥಕಪಡಿಸುವ ದಾರಿಯಲ್ಲಿ, ವಿದ್ಯಾಭ್ಯಾಸದಿಂದ ವೃತ್ತಿಯಲ್ಲಿ "ಎಮರ್ಜೆನ್ಸಿ-ಮೆಡಿಸಿನ್-ಲ್ಲಿ ವೈದ್ಯನಾಗಿ ಅಮೇರಿಕ ಪ್ರತಿಷ್ಟಿತ ಆಸ್ಪತ್ರೆ "ಕೈಸರ್ ಪೆರ್ಮನೆಂಟೆ" ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಜೊತೆಗೆ ಕಾಲಾವಕಾಶ ಮಾಡಿಕೊಂಡು, ಇನ್ನೂ ೫-ಜನ ರೊಂದಿಗೆ (ಒಂದೇ ರೀತಿಯಲ್ಲಿ ಚಿಂತನೆ ಮಾಡುವ) ೫- ವರ್ಷಗಳ ಹಿಂದೆ "ಡಾಕ್ಟರ್ ಮಿಹಿರ್ ಮೇಘನಿ ಯವರು" ಈ ಸಂಸ್ಥೆಯನ್ನು ಸ್ಥಾಪಿಸಿದರು. ೫-ವರ್ಷಗಳು ತುಂಬಾ ಕಷ್ಟಕರವಾಗಿ ೧೦ ವರ್ಷಗಳಾಗಿ ಕಂಡವಂತೆ, ಏಕೆಂದರೆ ಎಲ್ಲ ಅಮೇರಿಕಾದ ಹಿಂದೂಗಳು ಕೇಳುತ್ತಿದ್ದ ಪ್ರಶ್ನೆ ಒಂದೇ ಒಂದು ""ಈ ಸಂಸ್ಥೆ ನಮಗೆ ಇಲ್ಲಿ ಈಗ ಬೇಕಿತ್ತೆ"? ಈಗ ಮುಂಬೈ-ಬಾಂಬ್ ಆದಮೇಲೂ ಯಾರಾದರೂ ಈ ಪ್ರಶ್ನೆ ಕೇಳಿದ್ದೇ ಆದರೆ, "ಮೂರ್ಖರು" ಎಂದು ಕಣ್ಮುಮುಚ್ಚಿ ಯಾವ ಸಣ್ಣ ಮೂರ್ಖ ಹೇಳಿದರೂ ಅದು ತಪ್ಪಾಗುವುದಿಲ್ಲ. ನಿಮಗೆಲ್ಲರಿಗೂ ಈ ಒಂದು ಪ್ರಶ್ನೆ ಮನಸ್ಸಿಗೆ ಬಂದರೂ, ಬರದಿದ್ದರೂ ಅದಕ್ಕೆ ಉತ್ತರ ಕೆಳಗೆ ಓದಿದಾಗ ಸಿಗುತ್ತದೆ. ಈ ಸಂಸ್ಥೆಯ ಉದ್ಧೇಶಗಳೇನು? ೫-ವರ್ಷದಲ್ಲಿ ಏನೇನು ಸಾಧನೆ ಮಾಡಿದೆ ಈ ಸಂಸ್ಥೆ? ಇದರ ಮುಂದಿನ ಯೋಜನೆಗಳೇನು? -ಇವೆಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಈ ಸಂಸ್ಥೆಯ ಜಾಲತಾಣಕ್ಕೆ ಭೇಟ್ ಕೊಡಿ ಅದು ಹೀಗಿದೆ "www.hinduamericanfoundation.org"

ಅಮೇರಿಕದ- ಫ್ಲಾರಿಡ-ರಾಜ್ಯದಲ್ಲಿ ಒಬ್ಬ ಬ್ರಾಹ್ಮಣನನ್ನು ಜೈಲಿಗೆ ಹಾಕಿದ್ದಾರೆ. ಇವನು ಯಾಕೆ ಜೈಲಿಗೆ ಹೋಗಿದ್ದಾನೆ ಅನ್ನುವುದು ಇಲ್ಲಿ ಹೇಳುವ ವಿಷಯಕ್ಕೆ ಸಂಬಂಧಪಟ್ಟಿಲ್ಲ. ಇವನು ಒಬ್ಬ ಹಿಂದೂ ಬ್ರಾಹ್ಮಣ, ಇವನಿಗೆ ಜೈಲಿನಲ್ಲಿ ಕಳೆದ ೨-ವರುಷಗಳಿಂದ ಮಾಂಸಾಹಾರಗಳ್ನ್ನೊಳಗೊಂಡ ತಟ್ಟೆಯನ್ನು ಕೊಡುತ್ತಿದ್ದರು. ಎಷ್ಟು ಸಲ ಜೈಲಿನ ಅಧಿಕಾರಿಗಳಿಗೆ ಮನೆ ಮಂದಿಯವರೆಲ್ಲ ಹೇಳಿದರೂ ಅವರಿಗೆ "ಹಿಂದೂ ಆಹಾರ ಏನು? ಅವರು ಮಾಂಸಾಹಾರ ಏತಕ್ಕೆ ತಿನ್ನಲ್ಲ? ಬ್ರಾಹ್ಮಣ ಹಿಂದೂಗಳು ಸಸ್ಯಾಹಾರಿಗಳು " ಈ ವಿಷಯಗಳು ಅವರ ಮನಸ್ಸಿಗೆ ತಟ್ಟಲೇ ಇಲ್ಲ. ಈ ವಿಷಯಕ್ಕೆ ಅವರುಗಳು ಹೇಳಿದ ಉತ್ತರ ಕೇಳಿದರೆ, "ಹಿಂದೂ ಬ್ರಾಹ್ಮಣರ" ಬಗ್ಗೆ ಅವರಿಗಿರುವ ತಿಳಿವಳಿಕೆ ಎಳ್ಳಷ್ಟೂ ಇಲ್ಲ ಅಂತ ಸುಲಭವಾಗಿ ಹೇಳಬಹುದು. " ಹಿಂದೂ ಬ್ರಾಹ್ಮಣರು ಭಾರತದಲ್ಲಷ್ಟೇ ಅಲ್ಲವೇ ಇರುವುದು, ಅವರು ಭಾರತದಿಂದ ಹೊರಗೆ ಬರುವುದಿಲ್ಲ ಅಲ್ಲವೇ? " ವಿಧವಿಧವಾದ ಪೆದ್ಧತನದ ಪರಮಾವಧಿಗಳ ಹಾಗೆ ಕೇಳಿ ಹೇಳುತ್ತಿದ್ದರು. ಈ ಬ್ರಾಹ್ಮಣ ಖೈದಿಯಾದರೋ ಬರೀ ನೀರು, ಹಣ್ಣುಗಳನ್ನಷ್ಟೇ ತಿಂದು ಸರಿಯಾದ ಆಹಾರವಿಲ್ಲದೇ ಮೈಎಲ್ಲಾ ಚಕ್ಕಳವಾಗಿ ಸಾವು ಹತ್ತಿರಬರುವಂತಾಗಿತ್ತು. ಇವನ ಮನೆಯವರು ಹಿಂದೂ ಅಮೇರಿಕನ್ ಫೌಂಡೇಶನ್ ಗೆ ತಿಳಿಸಿದ ನಂತರ, ಯು.ಎಸ್. ಕಾಂಗ್ರೆಸ್ ವರೆಗೂ ಹೋಗಿ, ಮೂಲಭೂತ ಹಕ್ಕಿಗೆ ಹೋರಾಡಿ ಈ- ಹಿಂದೂ ಬ್ರಾಹ್ಮಣನಿಗೆ ಸಸ್ಯಾಹಾರವನ್ನು ಕೊಡುವ ಹಾಗೆ ಮಾಡಲಾಯಿತು. ಅನ್ನ-ನೀರು ಮನುಷ್ಯನಿಗೆ ಮೂಲಭೂತ ಹಕ್ಕುಗಳಲ್ಲಿ ಒಂದು ( ಅವನ ನಿಯಮಕ್ಕನುಸಾರವಾಗಿ). ಹಸು ತಿನ್ನುವ ದೇಶದಲ್ಲಿದ್ದರೇನು? ಅವರವರ ಭಾವಕ್ಕೆ ಅವರವರ ಭಕುತಿಗೆ ಅವರಿಗೆ ಆಹಾರ ಕೊಡುವುದು ಒಂದು ಮೂಲಭೂತ ಹಕ್ಕು ಮತ್ತು ಕರ್ತವ್ಯ. ಇದನ್ನು ಸರಿಪಡಿಸಲು ಅಮೇರಿಕಾದಲ್ಲಿ, ಇವನಿಗೋಸ್ಕರ ಹೋರಾಡಲು ಇಂತ ಒಂದು ಸಂಸ್ಥೆಯ ಅವಕಾಶ ಎಷ್ಟು ಇತ್ತು ಅಂತ ನಿಮಗೆಲ್ಲಾ ಈಗ ಮನದಟ್ಟಾಯಿತಲ್ಲ. ಈಗ ಒಂದು ಪಕ್ಷ ಇಂತಹ ಒಂದು ಸಂಸ್ಥೆ ಇಲ್ಲದಿದ್ದರೆ (ಹೋರಾಡಲು) ಈ ಹಿಂದೂ ಬ್ರಾಹ್ಮಣ ಅನ್ನ ನೀರಿಲ್ಲದೇ ಜೈಲಿನಲ್ಲಿ ಸಾಯುತ್ತಿದ್ದಿದ್ದು ಖಂಡಿತ. ಅಮೇರಿಕಾದಂತ ಮುಂದುವರೆದ ದೇಶದಲ್ಲಿ ಇಂತಹ "ಅಮಾನುಷ್ಯ" ಕೃತ್ಯಗಳನ್ನು ನೋಡುವಾಗ, ಬೇರೆ ಬೇರೆ ಸಣ್ಣ ದೇಶಗಳ ಗತಿ ಏನು? ಈ ವಿಷಯಗಳು ಸಹಾಯಕ್ಕೆ ಬರುವವರೆಗೂ ಹೊರಗೆ ಬರುವುದಿಲ್ಲ. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಹಲವಾರು ಕೃತ್ಯಗಳಿಗೆ "ನಮ್ಮ ಧರ್ಮ, ಅದರ ತತ್ವಗಳಿಗೆ ಅನುಸರಿಸುವವರಿಗೆ" ಫ್ರೀಡಮ್ ಆಫ಼್ ಪ್ರಾಕ್ಟೀಸಿಂಗ್ ಎನಿ ರಿಲಿಜಿಯನ್, ಮೂಲಭೂತ ಹಕ್ಕಿನ ಸ್ವಾತಂತ್ರ ವನ್ನು ಕಲ್ಪಿಸುವುದಕ್ಕಾದರೂ ಇಂತ ಸಂಸ್ಥೆಗಳು ಬೇಕು. ನೀವು ಯಾವುದೇ ರೀತಿಯಲ್ಲಾದರೂ ಇಂತಹ ಸಂಸ್ಥೆಗಳಿಗೆ ಸಹಾಯ ಮಾಡಬಹುದು. ನಿಮ್ಮ ಹೆರಿಟೇಜ್ ಗೆ, ಹಿಂದೂ ಅಮೇರಿಕನ್ ಸಂಸ್ಥೆಗೆ ಸಹಾಯ ಕೋರಿ ನನ್ನ ಈ ಲೇಖನವನ್ನು ಮುಗಿಸುತ್ತೇನೆ. "ಸತ್ಯಮೇವ ಜಯತೆ"!!!!!!!!!!!