ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬ್ರಹ್ಮಗಿರಿ ಚಾರಣ

ಡಿಸೆಂಬರ್ ೨೫-೨೮ ರವರೆಗೆ ಬ್ರಹ್ಮಗಿರಿ ಮತ್ತು ತಡಿಯಂಡಮೋಲ್ ನಲ್ಲಿ ಚಾರಣಕ್ಕೆ ಹೋಗುವ ಮನಸ್ಸಿದೆ. ಸ್ನೇಹಿತರ್ಯಾರು ಬರಲು ಸಿದ್ದರಿಲ್ಲ. ಜೊತೆಗಾರರಿಗಾಗಿ ಎದುರು ನೋಡುತ್ತಿದ್ದೇನೆ. ಜೊತೆಗಾರಗಲು ಇಚ್ಚೆಯಿದ್ದವರು ಪ್ರತಿಕ್ರಿಯಸಿ.

ಕೋದಂಡರಾಮಯ್ಯನವರಿಗೊಂದು ಉದ್ದಂಡ ನಮಸ್ಕಾರ

ಇತ್ತೀಚೆಗೆ ಪ್ರಜಾವಾಣಿಯಲ್ಲಿ ಓದಿದ ಒಂದು ಸುದ್ದಿಯಲ್ಲಿ ಮಾಜಿ ಪೊಲೀಸ್ ಅಧಿಕಾರಿಯಾದ ಶ್ರೀಯುತ ಕೋದಂಡರಾಮಯ್ಯನವರು ಸಾರ್ವಜನಿಕ ಹೇಳಿಕೆ ನೀಡುತ್ತಾ, ನಮ್ಮ ಪೊಲೀಸರು ಸ್ವಾಮಿಗಳಿಗೆ ಯೂನಿಫಾರಂ ಹಾಕಿಕೊಂಡು ತಲೆ ತಗ್ಗಿಸಿ ನಮಸ್ಕಾರ ಮಾಡಿದರೆ, ಅದು ಸರಕಾರಕ್ಕೆ, ಡಿಪಾರ್ಟ್ ಮೆಂಟಿಗೆ ಅವಮಾನವಾದಂತೆ, ಸರಕಾರಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದಿದ್ದಾರೆ.

ಸೈಕಲ್ ಸವಾರಿಯ ಮಜ.

ನಾನೂ ಸೈಕಲ್ ಕಲಿಯಬೇಕು ಅನ್ನಿಸಿದ್ದು ಬಹುಷ: ಸುಮಾರು ೧೦ ನೇ ವಯಸ್ಸಿನಲ್ಲಿ. ಆಗ ನಮ್ಮ ಮನೆಯಲ್ಲಿ ಸೈಕಲ್ ಕೊಡಿಸುವುದಿರಲಿ, ಯೋಚಿಸಲೂ ಆಗದಂತಹ ಪರಿಸ್ಥಿತಿ. .
ನಮ್ಮಪಕ್ಕದ ಮನೆಯವರ ಬಳಿ ಎರೆಡು ಕುರಿಗಳಿದ್ದವು. ಬೇಸಿಗೆಯ ರಜಾ ಅನ್ನಿಸುತ್ತೆ

ಸೋತೆ ಎಂದು ಕೈ ಚೆಲ್ಲುವ ಕ್ಷಣದ ಮುಂಚಿನ ಪ್ರಯತ್ನ ಖಂಡಿತಾ ಕೈಗೂಡುತ್ತದೆ

ಇದು ನನ್ನ ಅನುಭವ.
ಬಹುಷ: ಮರಳಿ ಯತ್ನವ ಮಾಡು ಎನ್ನುವುದೂ ಇರಬಹುದು
ಇದನ್ನ ಯಾಕೆ ಹೇಳುತಾ ಇದೀನಿ ಅಂದ್ರೆ

ಮಕ್ಕಳು ಮುಗ್ಧತೆ ಮತ್ತು ಪ್ರಬುದ್ಧತೆ

ಮಕ್ಕಳು ಮುಗ್ಧತೆ ಮತ್ತು ಪ್ರಬುದ್ಧತೆ
ಇನ್ನೊಂದು ಹತ್ತು ದಿವಸ ನಮಗೆ ರಜ, ಕ್ರಿಸ್ಮಸ್ ಪ್ರಯುಕ್ತ.ಇಡೀ ಕಂಪೆನಿಗೆ ರಜ (ಯಾಕೋ ನಿಮ್ಮ ಹತ್ರ ಎಲ್ಲಾ ಹೇಳಿಕೊಳ್ಳಬೇಕೆನಿಸುತ್ತದೆ) . ಮೇಲಿನ ವಿಷಯದ ಬಗ್ಗೆ ನಿಮಗೆ ಏನೆನಿಸುತ್ತದೆ ಅಂತ ಬರೆಯಿರಿ. ನಾನು ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆ
ಇತಿ
ನಿಮ್ಮ ಹರೀಶ್ ಆತ್ರೇಯ

ಹೂವು ಮತ್ತು ದಾರ

'ಒಂದು, ಎರಡು, ಮೂರು
ಮಳ ಮೂರು , ಕೊಡಿ ಆರು' .
'ಹೂ ಹೂವಿಗೆ ಇಷ್ಟೊಂದು ಅಂತರ,
ಮೂರಕ್ಕೆ ಆರು ಹೆಚ್ಚಾಯಿತು'
'ನಿಜ, ಅಂತರ !, ಆದರೆ ಹೂವಿಗಲ್ಲ,
ನನಗೆ ನಿಮಗೆ' ಮುಖ ಪೆಚ್ಚಾಯಿತು.
'ಹೂ ಹೂವಿಗೂ ದೂರ,ಅದನು
ಬೆಸೆಯಲೊಂದು ದಾರ
ಹೂದಾರಕೆ ಏನಿದೆ ನಂಟು
ಬಿಡಿಸಲಾಗದ ಬ್ರಹ್ಮ ಗಂಟು',
'ಮಾತು ಹೆಚ್ಚಾಯಿತು
ಮೂರು ಐದಕ್ಕದರೆ ಸರಿ'
'ಇಲ್ಲ ಸ್ವಾಮಿ,ಹೂ ಕೆಜಿಗೆ ನೂರು,

ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?

ಕೆಲವು ಚಿತ್ರಗಳಿರುತ್ತವೆ. ಯಾವುದೊ ಕಾರಣಕ್ಕೆ ನಮಗೆ ತುಂಬಾ ಅಚ್ಚುಮೆಚ್ಚಿನದಾಗಿರುತ್ತದೆ. ನೋಡಿದ ಕೆಲವು ದಿನಗಳಿರಬಹುದು, ಅಥವ ತಿಂಗಳುಗಳಿರಬಹುದು ಇನ್ನೂ ಕೆಲವು ವರ್ಷಾನುಗಟ್ಟಲೆಯೂ ಮನದಲ್ಲೇ ಇರಬಹುದು

ಹಾಡು ಬೇಕಾಗೇತ್ರೀ....

ಶರಣ್ರೀ ಗೆಳೆಯರೆ,

ಬಾಳ ದಿವಸದಿಂದ ನನಗ ಒಂದು ಹಾಡು ಬೇಕಾಗೇತಿ..ಅದು ಇಲ್ಲಿ ನನಗ ಸಿಗಬಹುದು ಅಂತ ತಿಳಿದೀನಿ..
ಹಾಡು ಹಿಂಗೈತಿ ನೋಡ್ರಿ...

ಹೂವಂತ ಹೃದಯವನು ಹಿಂಡುವಿರೇಕೆ, ಹಾಲಂತ ಮನಸನ್ನು ಕಲಕುವಿರೇಕೆ
ಜೇನಂತ ಪ್ರೀತಿಯನು ಕದಡುವಿರೇಕೆ...ಲಲಲಾ ಲಲಲಲಲ ಲಲಲಲಲಲಲ...

ಈ ಹಾಡಿನ ಸಾಹಿತ್ಯ ಬೇಕಾಗೇತ್ರಿ...ನಿಮಗ ಗೊತ್ತಿದ್ರ ನನಗೆ ದಯಮಾಡಿ ಮಿಂಚಂಚೆ ಕಳಿಸ್ರೀ...