ಸೈಕಲ್ ಸವಾರಿಯ ಮಜ.

ಸೈಕಲ್ ಸವಾರಿಯ ಮಜ.

ನಾನೂ ಸೈಕಲ್ ಕಲಿಯಬೇಕು ಅನ್ನಿಸಿದ್ದು ಬಹುಷ: ಸುಮಾರು ೧೦ ನೇ ವಯಸ್ಸಿನಲ್ಲಿ. ಆಗ ನಮ್ಮ ಮನೆಯಲ್ಲಿ ಸೈಕಲ್ ಕೊಡಿಸುವುದಿರಲಿ, ಯೋಚಿಸಲೂ ಆಗದಂತಹ ಪರಿಸ್ಥಿತಿ. .
ನಮ್ಮಪಕ್ಕದ ಮನೆಯವರ ಬಳಿ ಎರೆಡು ಕುರಿಗಳಿದ್ದವು. ಬೇಸಿಗೆಯ ರಜಾ ಅನ್ನಿಸುತ್ತೆ
ಆ ಮನೆಯ ಹುಡುಗ(ಆನಂದ ಮತ್ತು ರವಿ ಅಣ್ಣ ತಮ್ಮಂದಿರು) ರು ಅವುಗಳನ್ನು ಕುರಿ ಮೇಯಿಸುವುದಕ್ಕೆ ಹೋಗ್ತಿದ್ದರು, ನನಗೂ ಏನೂ ಕೆಲಸವಿರಲಿಲ್ಲ ಅವರ ಜೊತೆ ನಾನು ಕುರಿ ಕಾಯೋಕೆ ಹೋಗ್ತಿದ್ದೆ.
ಕುರಿಗಳು ಅವುಗಳ ಪಾಡಿಗೆ ಮೇಯ್ತಿದ್ವು
ಗೋಲಿ ಆಡೋದು, ಮ್ಯಾಚ್ ಬಾಕ್ಸ್ ಪೊಟ್ಟಣ್ ಹೊಡೆಯೋದು ಯಾವ್ಯಾವ್ದೋ ಆಟ ಆಡ್ತಿದ್ವಿ
ನಂಗೆ ಕತೆ ಹೇಳೊ ದುರಭ್ಯಾಸ . ಅವರಿಬ್ಬರನ್ನುಕೂರಿಸ್ಕೊಂಡು ನಾನು ಒದಿದ್ದ ಕತೆ ಎಲ್ಲಾ ಹೇಳ್ಕೊಂಡು ಹಾಡೇಳ್ಕೊಂಡು ಇರ್ತಿದ್ವಿ.
ಅವಾಗ ನನ್ನ ಕಣ್ನಿಗೆ ಆ ಸೈಕಲ್ ಬಿತ್ತು. ಅಲ್ಲೀವರೆಗೆ ಮಾಮೂಲಿ ಸೈಕಲ್ ನೋಡಿದ್ದ ನಾನು ಅಷ್ಟೊಂದು ಚೆನ್ಮಾಗಿದ್ದ ಸೈಕಲ್ ನೋಡಿದ್ದು ಅದೇ ಮೊದಲು
ಕೆಂಪು ಕೆಂಪುಗೆ ಒಳ್ಳೆ ಸ್ಟೈಲ್ ಆಗೂ ಇತ್ತು
ಅದರ ಸವಾರನೂ ಒಳ್ಳೆ ಹೀ ಮ್ಯಾನ್ ಥರ ಇದ್ದ. ಬೇಕಾಗೆ ನಮ್ಮ ಮುಂದೆ ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲಿಗೆ ಸೈಕಲ್ ಓಡಿಸುತ್ತಾ ಜಂಭ ಮಾಡ್ತಿದ್ದ
ನಮಗೆಲ್ಲ ಏನೋ ಒಂದು ಬಗೆಯ ಅಸೂಯೆ . ಸ್ವಲ್ಪ ಬೆಳ್ಲಗೆ ಇದ್ದ್ದ . ಜೊತೆಗೆ ನಮಗೆಲ್ಲರಿಗಿಂತ ದೊಡ್ಡವನು
ಅದಕ್ಕೆ ಅವನನ್ನ ಲಂಬೂ ಲಟ್ಟ ಬಂಬೂ ಬಟಾಕ್ ಅಂತ ಕರ್ಯೋದು ಅಂತ ನಿರ್ಧಾರ ಮಾಡಿದ್ವಿ.
ಒಂದೆರೆಡು ಸಲ ಸುಮ್ಮನಿದ ಅವನೂ ಕೊನೆಗೆ ಜಗಳಕ್ಕೆ ಬಂದ. ನಾವು ಕಾಲು ಕೆರೆದು ಜಗಳಕ್ಕೆ ನಿಂತೆವು
ಅವನ ಹೆಸರ್ ಹೇಮಂತ್ ಅಂತ
ನಮ್ಮ ಬಳಿ ಪಂದ್ಯ ಕಟ್ಟಿದ.
"ಧೈರ್ಯ ಇದ್ದರೆ ಎರೆಡೂ ಕೈ ಬಿಟ್ಟು ಸೈಕಲ್ ತುಳಿಯಿರಿ" ಅಂತ
ನನ್ನ ಸ್ನೇಹಿತರಿಬ್ಬರಿಗೂ ಸೈಕಲ್ ಗೊತ್ತಿತ್ತು. ಆದರೆ ಕೈ ಬಿಟ್ಟು ತುಳಿಯುವ ಧೈರ್ಯ ಅವರಿಗಿಲ್ಲ
ನನಗಂತೂ ಸೈಕಲ್ ಏರಿ ಸಹಾ ಗೊತ್ತಿಲ್ಲ .
ಆಯ್ತು ಆದರೆ ನಂಗೆ ಸೈಕಲ್ ಓಡಿಸೋಕೆ ಬರಲ್ಲ . ನನ ಹತ್ರ ಸೈಕಲ್ ಇಲ್ಲ , ನೀನೆ ಹೇಳ್ಕೊಡೊ, ಆಮೇಲೆ ಕೈ ಬಿಟ್ತು ಓಡಿಸ್ತೀನಿ
"ನೀನ್ ಇವಾಗ ಕಲ್ತುಕೊಂಡೆ ಅದಾಯ್ತು, ಸುಮ್ನೆ ಸೋತುಬಿಟ್ಟೆ ಒಪ್ಕೊಳ್ಳೆ "ಅಂದ
"ನಿಂಗೆ ಅಪ್ಪಯ್ಯ ಭಯ ನಾನೆ ಕಲ್ತು ಕೊಂಡರೆ ಸೋತ ಹೋಗ್ತೀನೊ ಅನ್ನೋ ಭಯ ನಿಂಗೆ" ಅಂದೆ"
ಕೊನೆಗೆ ನನ್ನ ಸೈಕಲ್ ಕಲಿಕೆ ಸ್ಟಾರ್ಟ್ ಆಯ್ತು.
ನಾಕೈದು ಸಾರಿ ಬಿದ್ದಿದ್ದು ಆಯ್ತು
ಅವನೂ ಬೇಕಂತಾನೆ ನನ್ನ ಬೀಳಿಸ್ತಿದ್ದ.
ಕಡೆಗೂ ಪೆಡಲ್ ತುಳಿಯೋದು ಕಲಿತೆ
ಹಾಗೂ ಹೀಗೂ ಸೈಕಲಕಲಿತೆ .
ಈಗ ಕೈ ಬಿಟ್ಟು ಕಲಿಯಬೇಕಿತ್ತು
ಆದರೆ ಹೇಮಂತ ನಂಗೆ ಅವಕಾಶ ಕೊಡಲಿಲ್ಲ.
"ನಾಳೆ ಹ್ಯಾಂಡಲ್ಸ್ ಹಿಡೀದಲೆ ಸೈಕಲ್ ಓಡಿಸಿ ತೋರಿಸು "ಅಂದ
ಆ ನಾಳೆ ಬಂತು
ಲಂಬೂ ಸೈಕಲ್ ತಂದೇ ಬಿಟ್ಟ.
ನನಗೋ ನಡುಕ ಬೆನಕ ಬೆನಕ ಹೇಳ್ಕೊಂಡು ಹತ್ತಿದೆ
ಸರಿ ಸ್ವಲ್ಪ ದೂರ ಹ್ಯಾಂಡಲ್ ಹಿಡ್ಕೊಂಡೆ ಸವಾರಿ ಮಾಡಿದೆ

ಕೈ ಬಿಡೇ ಕೈ ಬಿಡೇ ಅಂತ ಆ ಲಂಬೂ ಕೂಗ್ತಾ ಇದ್ದ

ದೇವರೇ ಗತಿ ಅನ್ಕೊಂಡು ಬಿಟ್ಟೆ ಕೈ ಬಿಟ್ಟೆ

ಹೋಯ್ತು ಹೋಯ್ತು ಸೈಕಲ್ ಹೋಯ್ತು ಎಲ್ಲಿಗ್ ಹೋಗ್ತಾ ಇದೆ ಅಂತಾನೊ ತಿಳೀಲಿಲ್ಲ

ಯಾಕಂದ್ರೆ ಕಣ್ಣು ಮುಚ್ಕೊಂಡಿದ್ದನ್ನಲ್ಲ

ಕೊನೆಗೆ ದುಡುಮ್ ಅಂತ ಶಭ್ದ ಆಯ್ತು. ಹಿಂದೇನೆ ದೊಪ್ ಅಂತ ಬಿದ್ದಿದ್ದೆ .

ಡಿಕ್ಕಿ ಹೊಡೆದದ್ದು ಎದುರುಗಡೆ ಇದ್ದ ಪೆಟ್ಟಿಗೆ ಅಂಗಡೀಗೆ.

ಹಾಗು ಹೀಗೂ ಸುಮಾರು ದೂರ ಬಂದು ಬಿಟ್ತಿದ್ದೆ

ಆ ಲಂಬೂಗೆ ಪಾಪ ನಾನು ಕಣ್ಮುಚ್ಕೊಂಡಿದ್ದು ತಿಳೀಲಿಲ್ಲ

ಪರ್ವಾಗಿಲ್ಲ ಕಣೇ ರೂಪ ಇಷ್ಟೊಂದು ದೂರ ಬಂದು ಬಿಟ್ಟಿದೀಯ ಅಂತ ಹೊಗಳಿದ.

ಅವನೇ ಸೋತ ಅಂತ ಒಪ್ಕೊಂಡ .ನನ್ನ ಸೈಕಲ್ ಎಲ್ಲಾ ಹಾಳು ಮಾಡಿ ಬಿಟ್ಟೆ ಅಂತಾನು ಬೈದ

ನಾನು ಏನೂ ಮಾತಾಡದೇ ಮನೆಗೆ ಓಡಿದೆ

ಯಾಕಂದ್ರೆ ಪೆಟ್ಗೆ ಅಂಗಡಿ ಸಣ್ಣಮ್ಮ ಬೈಕೊಂಡು ಬರ್ತಿದ್ಳು

Rating
No votes yet

Comments