ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೇಗಿರಬಹುದು ನಮ್ಮ ಮಕ್ಕಳ ಭವಿಷ್ಯ?

ಭಯೋತ್ಪಾದಕರ ದಾಳಿಗೆ ಇಡೀ ದೇಶವೇ ತತ್ತರಿಸಿ ಹೋಗಿರುವಾಗ, ಈ ರಾಜಕೀಯ ನೇತಾರರು ಸಂಸತ್ತಿನ ಒಳಗೆ ಕಲೆಹಾಕಿಕೊಂಡು ತಮಾಷೆ ನಡೆಸುತ್ತಿದ್ದಾರೆ ಅನ್ನಿಸುತ್ತಿದೆ.

ಒ೦ದು ಮನೆಯ ಸೊಸೆಯ ಕಥೆ

ಹೀಗೊಂದು ಶುಭದಿನ ಈ ಸಿರಿವಂತನ ಮನೆಗೆ ನನ್ನ ಪ್ರವೇಶ ಆಯಿತು. ಮನೆ ಮ೦ದಿಯೆಲ್ಲಾ ಹರುಷದಿ೦ದ ಸ್ವಾಗತಿಸಿದರು. ಮನೆಗೆ ಹೊಸಬಳಾದ್ದರಿ೦ದ ನನ್ನ ಯೋಗಕ್ಷೇಮ ನೋಡಿಕೊಳ್ಳಲು ಮನೆಯ ಜನ ಟೊ೦ಕಕಟ್ಟಿ ನಿ೦ತಿದ್ದರು. ನನ್ನ ಯಜಮಾನ ಮನೆಯಲ್ಲಿ ಇಲ್ಲದಿದ್ದಾಗ ಮನೆ ಜನ ನನ್ನನು ಮಾತನಾಡಿಸಲೂ ಹೆದರುತ್ತಿದ್ದರು. ಏನಾದರೂ ವ್ಯತ್ಯಾಸವಾದೀತೂ ಎಂದು.

ಪ್ರಶ್ನೋತ್ತರಗಳ ಪರಿಧಿಯಲ್ಲಿ........

ಪ್ರಶ್ನೆ ದೊಡ್ಡದೋ ಅಥವಾ ಆ ಪ್ರಶ್ನೆಗೆ ಇರಬಹುದಾದ ಉತ್ತರ ದೊಡ್ಡದೋ? ಸಾಮಾನ್ಯವಾಗಿ ಉತ್ತರವೇ ದೊಡ್ಡದೆಂಬ ಮಾತನ್ನು ನಮ್ಮಲ್ಲಿ ಬಹುತೇಕರು ನಂಬಿದ್ದೇವೆ. ಏಕೆಂದರೆ ಬರೆಯುವ ಪರೀಕ್ಷೆಗಳಲ್ಲೆಲ್ಲ ಕೊಡುವ ಉತ್ತರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪಾಸು ಆಗಬೇಕೆಂದರೆ ಇರುವ ಪ್ರಶ್ನೆಗಳಲ್ಲಿ ಸುಲಭದ್ದನ್ನಾರಿಸಿಕೊಂಡು ಪರೀಕ್ಷೆ ಬರೆಯದಿದ್ದರೆ ಮತ್ತೆ ಓದಿದುದನ್ನೇ ಓದಬೇಕಾಗುತ್ತದೆ.

ಆದರೆ ಬದುಕಿನಲ್ಲಿ ಉತ್ತರಕ್ಕಿಂತ ಪ್ರಶ್ನೆಯೇ ಮುಖ್ಯ. ಏಕೆಂದರೆ ಪ್ರಶ್ನೆಗಳೇ ಹುಟ್ಟದಿದ್ದರೆ ಬದುಕು ಬರಡಾಗುತ್ತದೆ. ನಿಂತ ನೀರಾಗುತ್ತದೆ. ಬರಡಲ್ಲಿ ಬೆಳೆ ಅಸಾಧ್ಯ. ನಿಂತ ನೀರಿಗೆ ಕೊಳೆಯುವ ಭಯ.

ಎಂಥ ಕ್ಲಿಷ್ಟ ಪ್ರಶ್ನೆಗೂ ಉತ್ತರ ಇದ್ದೇ ಇರುತ್ತದೆಂಬ ನಂಬಿಕೆಯೇ ಬದುಕಿನುದ್ದಕ್ಕೂ ಇರುತ್ತದೆ. ಅಂಥ ಭಾವ ನಶಿಸಿದರೆ ಆ ಕ್ಷಣವೇ ಮನುಷ್ಯ ಅಧೀರನಾಗುತ್ತಾನೆ. ತಾನು ಒಂಟಿಯೆಂದು ಮರುಗುತ್ತಾನೆ. ಎಲ್ಲ ಬಗೆಯ ಪರೀಕ್ಷೆಗಳಲ್ಲೂ ಒಂದೇ ಬಗೆಯ ಸಿದ್ಧ ಉತ್ತರ ಅಥವ ಮಾದರಿ ಉತ್ತರಗಳನ್ನು  ಪ್ರಶ್ನೆಗಳೊಟ್ಟಿಗೇ  ಸೃಷ್ಟಿಸಿಕೊಳ್ಳಲಾಗುತ್ತದೆ. ಅಂದರೆ  ಪ್ರಶ್ನೆ ಹುಟ್ಟಿಸುವವರಿಗೆ ಉತ್ತರ ಎಂಬುದು ಪ್ರಶ್ನೆಗೆ ಮೊದಲೇ ಗೊತ್ತಿರುವುದರಿಂದಲೇ ಅಂಥ ಪ್ರಶ್ನೆಗಳನ್ನು ಅವರು ಕೇಳಿರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೇಳುವ ಪ್ರಶ್ನೆಗಳಲ್ಲೇ ಗೊಂದಲವನ್ನು ತುರುಕಿ ಉತ್ತರಿಸುವವನನ್ನು ತಬ್ಬಿಬ್ಬುಗೊಳಿಸಿ ಗೊತ್ತಿರುವ ಉತ್ತರಗಳು ಹೌದೋ ಅಲ್ಲವೋ ಎನ್ನುವ ಅನುಮಾನಗಳನ್ನು ಬಿತ್ತಲಾಗುತ್ತದೆ. ಆದರೆ ಬದುಕಿನ ಪ್ರಶ್ನೆಗಳಿಗೆ ಉತ್ತರ ಆಯಾ ಸಂದರ್ಭಗಳಲ್ಲಿ ಆಯಾ ವ್ಯಕ್ತಿಯು ಹುಡುಕಿಕೊಳ್ಳುವ ಮಾರ್ಗಕ್ಕೆ ಹೊಂದಿಕೊಂಡಿರುತ್ತದೆ. ಅಂದರೆ ಒಂದೇ ಥರದ ಸಮಸ್ಯೆಗಳಿಗೆ ಎಲ್ಲರ ಉತ್ತರವೂ ಬೇರೆ ಬೇರೆಯಾಗಿಯೇ ಇರುತ್ತದೆ. ಇದು ಬದುಕು ನಮಗೆ ಕಲಿಸುವ ಅನನ್ಯ ಪಾಠವಾಗಿದೆ. ಒಂದೇ ಥರದ ಪ್ರಶ್ನೆಗಳಿಗೆ ಒಂದೇ ರೀತಿಯ ಸಿದ್ಧ ಉತ್ತರವಿದೆ ಎಂಬ ವಾದವನ್ನು ಇಲ್ಲಿ ಅಲ್ಲಗಳೆದಂತಾಯಿತು.

ಇನ್ನು ಕೆಲವು ಬಾರಿ ನಮ್ಮಲ್ಲಿ ಸಿದ್ಧವಿರುವ ಉತ್ತರಗಳಿಗೆ ತಕ್ಕಂತೆ ನಮ್ಮ ಪ್ರಶ್ನೆಗಳನ್ನು ಎತ್ತಿರುತ್ತೇವೆ. ನಮ್ಮ ಧಾರ್ಮಿಕ ನಂಬುಗೆ, ಸಾಂಸ್ಕೃತಿಕ ಚಿಂತನೆ, ರಾಜಕೀಯ ಪ್ರಜ್ಞೆ ಪ್ರಶ್ನೆಗಳನ್ನೆಂದೂ ಬಯಸದ ಸದಾ ಸಿದ್ಧ ಉತ್ತರಗಳನ್ನು ಇಟ್ಟುಕೊಂಡಿರುವ ಮತ್ತು ಅದನ್ನೇ ಬಿಂಬಿಸುವ ಸಲುವಾಗಿ ನಾವೇ ನೇಯ್ದು ನಾವೇ ಬಿದ್ದ ಬಲೆಯಾಗಿರುತ್ತದೆ. ಮೋಕ್ಷವೆಂದರೆ ಏನು? ಸತ್ಯವನ್ನೆಂದು ಯಾವುದನ್ನು ಕರೆಯಬೇಕು? ಯಾವ ಧರ್ಮವು ದೊಡ್ಡದು? ಇಂತಹ ಹಲವು ಪ್ರಶ್ನೆಗಳು ತಲೆತಲಾಂತರದಿಂದ ನಮ್ಮೊಳಗಿನ ಭಾವಗಳನ್ನು ಮುಟ್ಟದೆಯೇ ಬರಿದೇ ತೋರಿಕೆಯ ಉತ್ತರಗಳಿಂದಲೇ ತುಂಬಿಹೋಗಿವೆ. ಈ ಉತ್ತರಗಳು ನಾವು ಸ್ವತಃ ಅನುಭವಿಸಿ ಕಂಡುಕೊಂಡ ಉತ್ತರಗಳಲ್ಲದಿದ್ದರೂ ಅವು ನಮ್ಮದೇ ಎಂಬಂತೆ ನಮ್ಮ ತಲೆಯ ಮೇಲೆ ಹೊತ್ತು, ನಮ್ಮ ತಲೆಯೊಳಗೂ ತುಂಬಿಕೊಂಡಿರುತ್ತೇವೆ. ಆ ಕಾರಣದಿಂದಾಗಿಯೇ ಸಿದ್ಧ ಉತ್ತರಗಳನ್ನು ಪರಿಣಾಮಕಾರಿಯಾಗಿ ಸುಂದರವಾಗಿ ಹೇಳಬಲ್ಲವರು ಜ್ಞಾನಿ ಎನ್ನಿಸಿಕೊಳ್ಳುತ್ತಾರೆ. ಅವರಿಗೆ ನಾವು ಮಹತ್ವವನ್ನು ನೀಡಿ ಅವರನ್ನೇ ಆರಾಧಿಸತೊಡಗುತ್ತೇವೆ.

ನೀರು ಹರಿಯುವುದು ಕಡಲಿನ ಕಡೆಗೆ

ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ಬೆಟ್ಟದ ಮೇಲೆ ಬೀಳುತ್ತಿರುವ ಮಂಜಿನಿಂದಲೋ? ಯಾಕೋ ಬಗೆಹರಿಯದು. ಬಿಡಿ. ಒಂದು ಒಳ್ಳೇ ಮಾತು ಹೇಳಲು ಪೀಠಿಕೆ ಬೇರೆ ಬೇಕಾ?

ಬಿಡಿ.. ಬಿಡಿ.. ಕನ್ನಡಿಗರು ಬಿಡಿ..

ಅಥವಾ ಬಿಡಿ, ಬಿಡಿ ಕನ್ನಡಿಗರು ಬಿಡಿ ಅನ್ನಬೇಕೆ? ಯಾವುದೇ ಪದವನ್ನು ಹಿಂದೆ ಮುಂದೆ ಮಾಡದೆ ಕೇವಲ ಚಿನ್ಹೆಗಳಲ್ಲೇ ವಾಕ್ಯದ ಅರ್ಥವನ್ನೇ ಬದಲಾಯಿಸುವ ಸ್ವಾತಂತ್ರ್ಯ ಕೇವಲ ಕನ್ನಡದಲ್ಲಿ ಮಾತ್ರ ಇರೋದು ಅನ್ಸುತ್ತೆ. ಈ ಎರಡೂ ವಾಕ್ಯದಲ್ಲಿ ಇರೋ ಸಾಮ್ಯ ಏನಪ್ಪಾ ಅಂದ್ರೆ ಪದಗಳ ಜೋಡಣೆ ಅಷ್ಟೆ ಆದ್ರೆ ಅರ್ಥ ಬೇರೆಯದ್ದೆ ಆಗಿದೆ.

ಆಭರಣ

ನಿಸರ್ಗ ರಚಿಸಿದ ಆಭರಣ, ಧರಿಸಲಾಗದು, ಕಣ್ಮನ ತುಂಬಿಕೊಳ್ಳಬಹುದಷ್ಟೆ - ಕೂರ್ಗಿನ ಟೀ ಎಸ್ಟೇಟಿನಲ್ಲಿ ಮುಂಜಾನೆ ಕಂಡ ಒಂದು ಕಲಾಕೃತಿ.

ವಿದ್ಯಾರ್ಥಿಗಳ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿಯುವುದೇ?

ಕೆಲವು ವಾರಗಳ ಹಿಂದೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರ್ ಎಂಬಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯಾನೊಂದು ಹಾಯ್ದು 9 ಮುಗ್ದ ಮಕ್ಕಳನ್ನು ಬಲಿ ತೆಗೆದುಕೊಂಡ ಘಟನೆ ನಡೆಯಿತು. ಇದರಲ್ಲಿ ಮಡಿದ ಮಕ್ಕಳು ಎಲ್ ಪಿ ಶಾಲೆಯಲ್ಲಿ ಕಲಿಯುತ್ತಿದ್ದು, ಮೊಗ್ಗರಳುವ ಮುನ್ನವೇ ವಿಧಿಯ ಕ್ರೂರ ಲೀಲೆಗೆ ಒಳಗಾಗಿದ್ದು ಬೇಸರದ ಸಂಗತಿ.