ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಗಟು - ಬಿಡಿಸಿ!

ಒಗಟು - ಬಿಡಿಸಿ!

೧. ಕೊಟ್ಟು ಕೆಟ್ಟವನೊಬ್ಬ-----------------------

ಕೊಡದೆ ಕೆಟ್ಟವನೊಬ್ಬ----------------------

ಮುಟ್ಟಿ ಕೆಟ್ಟವನೊಬ್ಬ------------------------

ಮುಟ್ಟದೇ ಕೆಟ್ಟವನೊಬ್ಬ---------------------

೨. ಎದೆಯ ಮೇಲೆ ಕಣ್ಣುಂಟು
ಕೈಯನ್ನೇ ನುಂಗುವುದುಂಟು
ತಲೆಯಮೇಲೆ ಬಾಲವುಂಟು
ಹೊಟ್ಟೆಯಲ್ಲಿ ಹಲ್ಲುಂಟು
ಕಾಯುತಿರುವೆ ಅಮ್ಮನ ಗಂಟು
ಹಾಗಾದರೆ ನಾನು ಯಾರು?

ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....

ಎಲ್ಲೆಲ್ಲೂ ಮುಂಬೈದೇ ಸುದ್ದಿ..

ಅಂತರ್ಜಾಲದಿಂದ ಹಿಡಿದು ರಸ್ತೆ ಪಕ್ಕದ ಕಟ್ ಅವುಟ್ ವರೆಗೂ ಎಲ್ಲೆಲ್ಲೂ ಇದೇ ಸುದ್ದಿ. ಈ ಯುದ್ದದಲ್ಲಿ ಮಡಿದ ಯೋದರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು, ಬಾಲಿವುಡ್ ಆದಿಯಾಗಿ ’ಎಲ್ಲ’..?ರೂ ತಮ್ಮ ತಮ್ಮ ಲೆಖ್ಖಾಚಾರದಲ್ಲಿ ಮುಳುಗಿದ್ದಾರೆ.

ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?

ಮುಸ್ಲಿಮರಲ್ಲಿ ಫತ್ವ ಘೋಷಣೆಯ ಬಗ್ಗೆ ಕೇಳಿದ್ದೇನೆ. ಸಲ್ಮಾನ್ ರಶ್ಡಿ ಮತ್ತು ಇನ್ನೂ ಯಾರ್ಯಾರೋ ಮಾಡಿದ ಚಿಕ್ಕ ಪುಟ್ಟ ತಪ್ಪುಗಳನ್ನು ಖಂಡಿಸಿ, ಮುಶ್ಲಿಮ್ ಮುಖಂಡರು ಅವರನ್ನು ಕೊಲ್ಲಲು ಫತ್ವ ಫೋಷಿಸಿರುವುದನ್ನು ಓದಿದ್ದೇನೆ. ಈ ಮುಸ್ಲಿಂ ಉಗ್ರರ ವಿರುದ್ಧ ಫತ್ವ ಯಾರಾದರೂ ಮುಖಂಡರು ಘೋಷಿಸಿದ್ದಾರೋ?

ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು

ಇಂದು(೧ನೇ ಡಿಸೆಂಬರ್ ೨೦೦೮) ಸಂಜೆ ೬.೦೦ಱಿಂದ ೭.೪೫ಱವರೆಗೆ ಪಶ್ಚಿಮ ದಿಗಂತದಲ್ಲಿ ಮೞೆಮೋಡಗಳು ಅಡ್ಡ ಬರದೆ ನಮಗೆ ಸಹಕರಿಸಿದ್ದಱಿಂದಲೂ ಗುರು ಶುಕ್ರ ಮತ್ತು ಚಂದ್ರರ ಯುತಿಯನ್ನು ಪೂರ್ವಾಷಾಢ ನಕ್ಷತ್ರ ಧನೂರಾಶಿಯಲ್ಲಿ ನಾನು ನೋಡಿದೆ. ನಾಳೆ ಚಂದ್ರ ಇನ್ನೂ ಮುಂದೆ ಹೋಗಿ ಗುರು ಶುಕ್ರರನ್ನು ಸಂಧಿಸಬಹುದು ಅಥವಾ ದಾಟಿಯೂ ಹೋಗಬಹುದು. ಅದನ್ನೂ ನೋಡುವ ತವಕದಲ್ಲಿದ್ದೇನೆ.

ಕೋಳೂರಿನ ತಿಮ್ಮಪ್ಪನ ನಾಮ ಪ್ರಸಂಗ

"ಈ ಜಗವೇ ಒಂದು ಕೋಕಿಯ ಮಂದಿರ ನಾವೆಲ್ಲಾ ಬರೇ ಕೋತಿಗಳಯ್ಯಾ..." ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ ಅಂತಾನೇ ಅರ್ಥ! ಆದಿನವೆಲ್ಲಾ ಈತನ ಹೊಟ್ಟೆಯಿಂದ ಬರುವುದು ಈ ಹಾಡು ಮಾತ್ರ. ಅಚ್ಚರಿ ಪಡದಿರಿ ನಿಮ್ಮ ತಲೆಯಲ್ಲಿ ಉಧ್ಭವಿಸಿದ ಪ್ರಶ್ನೆಗೆಲ್ಲಾ ನನ್ನ ಸಿಧ್ಧ ಉತ್ತರವಿದ್ದೇ ಇದೆ. ಕೋ.ತಿ. ಅಂದರೆ ಕೋಳೂರಿನ ತಿಪ್ಪಯ್ಯಗೆ ಅವನ ಪತ್ನಿಯ (ಕಿಚ್ಚವ್ವನ) ಅಣ್ಣಂದಿರು ವರದಕ್ಷಿಣೆಯಿಲ್ಲದೇ ಜಬರ್ದಸ್ತಿ ಮದುವೆ ಮಾಡಿಸಿಕೊಟ್ಟುದರಿಂದ ಅವಳು ಧರ್ಮದ ಪತ್ನಿಯೇ ಆದಳಲ್ಲ್ವಾ?. ಇನ್ನು ದಿನ ಪೂರಾ ಏನೂ ತಿನ್ನದೇ ಇದ್ದರೆ ಹೊಟ್ಟೆಯಿಂದಲ್ಲದೇ ಇನ್ನೆಲ್ಲಿಂದ ಹಾಡು ಬರುತ್ತೆ?

ಸಕಲವೂ ಈಶ್ವರಮಯವಾದುದು

ಆ ಮಗು ಪಿಸುದನಿಯಲ್ಲಿ ಉಲಿಯಿತು
'ದೇವರೇ ನನ್ನೊ೦ದಿಗೆ ಮಾತನಾಡು.'
ಆಗ ಹಾಡಿತು ಹಸಿರು ಮಾಮರದ ಕೋಗಿಲೆಯೊ೦ದು
ಕೇಳಿಸಿಕೊಳ್ಳಲಿಲ್ಲ ಮಗು.

ಮಗು ಮತ್ತೆ ಅರಚಿತು, 'ದೇವರೇ ನನ್ನೊ೦ದಿಗೆ ಮಾತನಾಡು.'
ಆಕಾಶದಲ್ಲಿ ಗುಡುಗೊ೦ದು ಗುಡುಗಿತು.
ಆದರೆ ಮಗು ಕೇಳಿಸಿಕೊಳ್ಳಲಿಲ್ಲ.

ಸುತ್ತ ಮುತ್ತ ನೋಡಿ ಮಗು ಮತ್ತೆ ಹೇಳಿತು.
'ದೇವರೇ ನಾನು ನಿನ್ನನ್ನು ನೋಡಬೇಕು.'