ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....

ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....

ಬರಹ

ಎಲ್ಲೆಲ್ಲೂ ಮುಂಬೈದೇ ಸುದ್ದಿ..

ಅಂತರ್ಜಾಲದಿಂದ ಹಿಡಿದು ರಸ್ತೆ ಪಕ್ಕದ ಕಟ್ ಅವುಟ್ ವರೆಗೂ ಎಲ್ಲೆಲ್ಲೂ ಇದೇ ಸುದ್ದಿ. ಈ ಯುದ್ದದಲ್ಲಿ ಮಡಿದ ಯೋದರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು, ಬಾಲಿವುಡ್ ಆದಿಯಾಗಿ ’ಎಲ್ಲ’..?ರೂ ತಮ್ಮ ತಮ್ಮ ಲೆಖ್ಖಾಚಾರದಲ್ಲಿ ಮುಳುಗಿದ್ದಾರೆ.

ಈ ಘಟನೆಯ ಸಂದರ್ಭದಲ್ಲಿ ಪ್ರತಿಯೊಂದು ವಿಷಯವನ್ನು ಸುದ್ದಿಮಾಡಿ ಟಾಂ ಟಾಂ.. ಹೊಡೆಯುವುದು ತಮ್ಮ ಜನ್ಮ ಸಿದ್ದ ಹಕ್ಕೆಂದು ಭಾವಿಸಿ live ನೆಪದಲ್ಲಿ ದೇಶದ ಜನತೆಗಿಂತ ಒಳಗಡೆ ಅಡಗಿದ್ದ ಉಗ್ರರಿಗೇ ಹೆಚ್ಚು ಸುದ್ದಿಯನ್ನು ಒದ್ದಾಡಿ, ಬಿದ್ದಾಡಿ, ಓಲಾಡಿ, ಹೋರಾಡಿ...? ಪ್ರಸಾರ ಮಾಡಿದ ಮಾದ್ಯಮದವರು, ಯುದ್ದ ಮುಗಿಯುವ ಮೊದಲೇ ಮಡಿದ ವೀರ ಯೋದರಿಗೆ ನಮನ ಸಲ್ಲಿಸುವುದರಲ್ಲಿಯೂ ಸಹ ಹಿಂದೆ ಬೀಳದೆ ಪ್ರಸಾರ ಮಾಡಿದ್ದೇ ಮಾಡಿದ್ದು.

ಈ ರೀತಿ ಯುದ್ದ ಮುಗಿಯುವ ಮೊದಲೇ ಪ್ರಸಾರ ಮಾಡುವುದರಿಂದ ನಮ್ಮ ಯೋದರ ಬಗ್ಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಾಗು ಒಳಗಿರುವ ಒತ್ತೆಯಾಳುಗಳ ಬರುವನ್ನೇ ಕಾದು ಕುಂತಿರುವ ಅವರ ಸಂಬಂದಿಕರಿಗಾಗಲಿ ಯೋದರ ಮೇಲೆ ಯಾವ ರೀತಿಯ ಅಬಿಪ್ರಾಯ ಮೂಡುತ್ತದೆ ಎಂದು ಕಿಂಚಿತ್ತೂ ವಿವೇಕವಿಲ್ಲದೆ ವರ್ತಿಸಿಯೂ ಬಿಟ್ಟರು.

ಘಟನಾ ಸ್ಥಳದಲ್ಲಿ ನಡೆದ ಪ್ರತಿಯೊಂದು ಸಿಕ್ಕ ಪ್ರತಿಯೊಂದು ಸೂಕ್ಷ್ಮವನ್ನು ಹಿಡಿದಿಡಿದು ಪ್ರಸಾರ ಮಾಡಿದ ಮಾದ್ಯಮದವರಿಗೆ ಮಡಿದ ಯೋದರ ಬಗ್ಗೆ ಎಷ್ಟು ತಾತ್ಸಾರ ಮನೋಬಾವ ಇತ್ತೆನ್ನೆವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಇಲ್ಲಿಯವರೆಗೂ ನಾನು ಕಂಡಂತೆ ಇವರು ತಮ್ಮ ನಮನ ಸಲ್ಲಿಸಿದ್ದು ಕೇವಲ ಮುಖ್ಯ ನಾಲ್ಕು ಅಧಿಕಾರಿ ಯೋದರಿಗೆ ಮಾತ್ರ.

ಯುದ್ದದಲ್ಲಿ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದು ಈ ನಾಲ್ಕು ಜನ ಅದಿಕಾರಿ ಯೋದರು ಮಾತ್ರವೆ..?

ಉಳಿದವರು ಹಾಗೆ ಸತ್ತು ಹೋದರೆ... ಅವ್ರ್ಯಾರು ಯುದ್ದಮಾಡಲೇ ಇಲ್ಲವೆ..?

ಅಥವಾ ಅವರು ಯಾರೂ ಭಾರತ ಮಾತೆಯ ವೀರ ಪುತ್ರರಲ್ಲವೆ..?

ಅಥವಾ ಅವರ ಜೀವಕ್ಕೆ ಬೆಲೆ ಇಲ್ಲವೆ..?

ಅಥವಾ ಅಷ್ಟು ಯೋದರ ಬಗ್ಗೆ ವಿವರ ಸಂಗ್ರಹಿಸಿ ಪ್ರಸಾರ ಮಾಡುವಷ್ಟು ಸಮಯ ಮಾದ್ಯಮದವರ ಬಳಿ ಇಲ್ಲವೆ..?

ಭಯೋತ್ಪಾದಕರ ಬಗ್ಗೆ ತಪ್ಪಿತಸ್ಥರ ಬಗ್ಗೆ ಅವರ ಹುಟ್ಟು ಪೂರ್ವೋತ್ತರ ಬಗ್ಗೆ ಇಂಚಿಂಚು ಶೋದಿಸಿ ಪ್ರಸಾರ ಮಾಡಿ ತಮ್ಮ ಟಿ.ಆರ್.ಪಿ ಯನ್ನು ಹೆಚ್ಚಿಸಿಕೊಳ್ಳುವ ಮಾದ್ಯಮದವರಿಗೆ ಇಂತಹ ಸಾಮಾನ್ಯ ಯೋದರ ಜೀವ ಬರೀ
"ಹಾಗೂ ಮಡಿದ ಎಲ್ಲಾ ಯೋದರಿಗೆ"
ಎನ್ನುವ ನಾಲ್ಕು ಪದಗಳಿಗೆ ಸೀಮಿತವಾದುದೆ..?

ಅಂದರೆ ಮಾದ್ಯಮದವರ ದ್ರುಷ್ಟಿಯಲ್ಲಿ ಭಾರತವೆಂಬ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಯಕ ಎನಿಸಿಕೊಂಡವರ ಜೀವಕ್ಕೆ ಮಾತ್ರ ಬೆಲೆ ಇನ್ನುಳಿದ ಸಾಮಾನ್ಯರ ಜೀವ ನಗಣ್ಯವೆ..?

ಘಟನೆ ಮುಗಿದ ಶನಿವಾರದಿಂದ ಆ ಇನ್ನಿತರ ವೀರ ಅ’ಸಾಮಾನ್ಯ’ ಯೋದರ ಬಗ್ಗೆ ಮಾಹಿತಿ ಹುಡುಕ್ಕುತ್ತಿರುವೆ ದಯವಿಟ್ಟು ಸಂಪದಿಗರಿಗೆ ದೊರೆತ್ತಿದ್ದಲ್ಲಿ ದಯವಿಟ್ಟು ವಿವರಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿ....