ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಲಿಸದ ಮೆಟ್ಟಿಲುಗಳು...

ಕಲಭಾಗದ ಚರ್ಚ್ ಗೋಡೆಯ ಬಣ್ಣ ಬಿಳಿಯದಾಗಿದ್ದರೂ ಸ್ವಲ್ಪ ಕೆಂಪಾಗಿ ಕಾಣಲು ಸಂಜೆ ಆರು ಗಂಟೆಯ ಸೂರ್ಯ ಕಾರಣವಾಗಿದ್ದ. ಬೆಳ್ಳಕ್ಕಿಗಳು ದುಡಿದು ಬಂದು ಸುಸ್ತಾದವರಂತೆ ಮರದ ಎತ್ತರದ ಟೊಂಗೆಯ ಮೇಲೆ ಕುಳಿತು ಮಾತಾಡುತ್ತಿದ್ದವು. "ಲೇಟಾಗೋಯ್ತು... ಇವತ್ತು" ಎಂದು ತನ್ನಷ್ಟಕ್ಕೇ ಮಾತಾಡುತ್ತಾ ಚರ್ಚ್ ನ ಮುಂದುಗಡೆ ಇರುವ ಲೈಬ್ರರಿಯ ಮೆಟ್ಟಿಲೇರುತ್ತಿದ್ದ ಮಾಬ್ಲಣ್ಣನಿಗೆ ಏಕೋ ಎವತ್ತು ಯಾವತ್ತಿಗಿಂತ ಲೈಬ್ರರಿ ಎತ್ತರದಲ್ಲಿದೆ ಎನಿಸುತ್ತಿತ್ತು.. ರವಿ ಜಾರುತ್ತಲೇ ಇದ್ದ.. ವಯಸ್ಸಾಗುತ್ತಿದ್ದ ಮಾಬ್ಲಣ್ಣನಿಗೆ ಮೆಟ್ಟಿಲುಗಳು ಆ ನಸುಗತ್ತಲಿನಲ್ಲಿ ಸರಿಯಾಗಿ ಕಾಣದಿದ್ದರೂ ಇಪ್ಪತ್ತೆರಡು ವರ್ಷಗಳಿಂದ ದಿನದ ಹಾದಿಯಾಗಿದ್ದರಿಂದ ಒಮ್ಮೆಯೂ ಮೆಟ್ಟಿಲುಗಳ ಬಗ್ಗೆ ಗಮನಿಸದೆ ಏನೋ ಆಲೋಚನೆ ಮಾಡುತ್ತಾ ನಡೆಯುತ್ತಿದ್ದ... ಏಕೆಂದರೆ ಮೆಟ್ಟಿಲುಗಳು ತಮ್ಮ ಜಾಗ ಬಲಿಸುವುದಿಲ್ಲ.

ಶಾಸ್ತ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಇದ್ದಾಗ ಕಂಡ ಹಳದೀ ಕವರಿನ ಗೃಹಪ್ರವೇಶದ ಆಮಂತ್ರಣ ಪತ್ರಿಕೆಯೊಂದು ಆತನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಜವಳಿ ಅಂಗಡಿಯಲ್ಲಿನ ಗೌಜಿಗೆ ಮರೆತೇ ಹೋಗಿದ್ದ ಅವನ ಸಣ್ಣ ಗುರಿಗೆ ಆ ಪತ್ರಿಕೆ ಕಲ್ಲು ಬೀಸಿತ್ತು.. ಗುರಿ ತಪ್ಪಲಿಲ್ಲ.. ಅಪ್ಪನ ಆಸ್ತಿ ಎಂದು ಅವನಿಗಿದ್ದದ್ದು ಒಂದು ಸಣ್ಣ ಮನೆಯೊಂದೇ.. ಈಗ ಅಪ್ಪನೂ ಇಲ್ಲ.. ತನಗೊಂದು ದೊಡ್ದ ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಮೂಡಿದ್ದು ಶಾಲೆಗೆ ಹೋಗುವಾಗ.. ಈ ಆಮಂತ್ರಣ ಪತ್ರಿಕೆ ಅದನ್ನು ನೆನಪಿಸಿತ್ತು...ತೆಗೆದು ಓದಿದ.. ನಾಗರಾಜ ಶೆಟ್ಟಿ ಸುರ್ಕಟ್ಟೆಯಲ್ಲಿ ಹಾಲಿನ ಡೇರಿ ಪ್ರಾರಂಭಿಸಿ ನಾಲ್ಕೈದು ವರ್ಷಗಳೊಳಗೆ ಮನೆ ಕಟ್ಟಿಸಿದ್ದ.. ಜೊತೆಗೆ ಸ್ವಲ್ಪ ಜನರನ್ನೂ ಸಂಪಾದಿಸಿದ್ದ.. ಮಾಬ್ಲಣ್ಣ ಕವರು ಮಾತ್ರ ಅಲ್ಲಿಯೇ ಬಿಟ್ಟು ಕರೆಯೋಲೆಯನ್ನು ಕಿಸೆಯಲ್ಲಿ ಹಾಕ್ಕೊಂಡು ಮನೆಯ ಬಸ್ ಹತ್ತಿದ..

ಕಿರು ಸಂದೇಶ ಮೂಲಕ "ಪದಾರ್ಥ" ತಿಳಿಯಿರಿ


ಕಾಸರಗೋಡಿನ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ
ನಿಘಂಟು ಸೇವೆ ನೀಡುವ ಸಾಹಸಕ್ಕೆ ಮುಂದಾಗಿದ್ದಾರೆ.SMSGYAN ಎಂಬ ಪದದ ಬಳಿಕ ಅರ್ಥ
ತಿಳಿದುಕೊಳ್ಳಲು ಬಯಸುವ ಶಬ್ದವನ್ನು  09894974926 ಸಂಖ್ಯೆಗೆ ಎಸ್ ಎಂ ಎಸ್ ಮಾಡಿದರೆ,
ಶಬ್ದಾರ್ಥ ಮರು ಸಂದೇಶವಾಗಿ ಬರುತ್ತದೆ. ಜಾಹೀರಾತು ಮೂಲಕ ಆದಾಯ ಗಳಿಸಿ, ಉಚಿತ ಸೇವೆ

ಎರಡು ಶಬ್ದಗಳು- ಸೋಡಾಚೀಟಿ , ಪೂರ್ವಗ್ರಹ

೧) ಸಾಮಾನ್ಯವಾಗಿ ಬೆಂಗಳೂರು ಕಡೆಯ ಪತ್ರಿಕೆಗಳಲ್ಲಿ , ಟೀವೀ ಚಾನೆಲ್ ಗಳಲ್ಲಿ , ಮತ್ತೆ ಜನ ಕೂಡ ಮಾತಾಡುವಾಗ ಡೈವೋರ್ಸ್ ಗೆ ಸೋಡಾಚೀತಿ ಅಂತ ಬಳಸುತ್ತಾರೆ . ಸರಿಯಾದ ಶಬ್ದ ಸೋಡ್ ಚೀಟಿ ಅಥವಾ ಸೋಡಚೀಟಿ ಆಗಿದೆ .

ಸೋಡ್ ಅಂದ್ರೆ ಬಿಡುವದು .. ಹಿಂದಿ ಛೋಡ್ , ಮರಾಠೀ ಸೋಡ್ ಆಗಿ ಸೋಡ್ ಚೀಟಿ ಶಬ್ದ ಬಂದಿದೆ . ಇನ್ನಾದರೂ ಸಂಬಂಧಪಟ್ಟವರು ಗಮನಿಸಿ , ತಿದ್ದಿಕೊಳ್ಳುವರೇ ?

೨)

ಸುಲಭಕನ್ನಡಕೈಗನ್ನಡಿ- (ಆವೃತ್ತಿ ೨.೦)

ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ .. ಇಲ್ಲಿ ಸುಮಾರು ೨೫೦ ಶಬ್ದಗಳಿವೆ.

(ಸು)ದೀರ್ಘ -ಉದ್ದ
ಅಂತರಂಗ-ಒಳಗು
ಅಂತ್ಯ - ಕೊನೆ , ಕಡೆ
ಅಂಧಕಾರ - ಕತ್ತಲು, ಕತ್ತಲೆ
ಅಕಸ್ಮಾತ್ತಾಗಿ-ಪಳಚ್ಚನೆ
ಅಗೋಚರ - ಕಾಣದ
ಅಗ್ನಿ -ಬೆಂಕಿ , ಕಿಚ್ಚು
ಅಗ್ನಿಜ್ವಾಲೆ - ಬೆಂಕಿಯ (ಕೆನ್)ನಾಲಿಗೆ
ಅಜ್ಞಾತ - ತಿಳಿಯದ
ಅಧಿಕ - ಹೆಚ್ಚು
ಅನೇಕ - ಬಹಳ
ಅಪಕ್ವ - ಎಳಸು , ಹಣ್ಣಾಗದ
ಅಪೇಕ್ಷಿತ - ಬಯಸಿದ
ಅಪೇಕ್ಷೆ - ಬಯಕೆ
ಅಭಿಮತ , ಅಭಿಪ್ರಾಯ - ಅನಿಸಿಕೆ
ಅಭಿವೃದ್ಧಿ-ಏಳಿಗೆ
ಅಲರ್ಟ್- ಎಚ್ಚರ , ಕಟ್ಟೆಚ್ಚರ
ಅವನತಿ = ಕೀಳ್ಮೆ , ಇಳಿಥರ
ಅವಿಭಕ್ತ ಕುಟುಂಬ - ಕೂಡುಕುಟುಂಬ
ಅಶುದ್ಧ - ಬೆರಕೆ
ಅಸತ್ಯ -ಸುಳ್ಳು , ಸಟೆ , ಹುಸಿ
ಅಸ್ತಿತ್ವ- ಉಳಿವು , ಇರವು , ಇರುವಿಕೆ

ಗುರು ಶುಕ್ರರು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿ

ಪ್ರತಿದಿನ ಸಂಜೆ ೬.೩೦ಱಿಂದ ೭.೩೦ಱವರೆಗೆ ಗುರು ಶುಕ್ರರು ಸಮೀಪಿಸುತ್ತಿರುವುದನ್ನು ಕಳೆದ ಹತ್ತು ದಿನಗಳಿಂದ ನೋಡುತ್ತಿದ್ದೇನೆ. ಶುಕ್ರ ವೇಗವಾಗಿ ಗುರುವಿನತ್ತ ಬರುವುದನ್ನು ನೀವು ಪ್ರತಿದಿನ ವೀಕ್ಷಿಸಬಹುದು. ಇನ್ನು ಕೆಲವೇ ದಿನಗಳಲ್ಲಿ ಗುರುವಿರುವ ರಾಶಿಗೆ(ಕುಂಭ) ಶುಕ್ರನ ಪ್ರವೇಶವಾಗುವುದನ್ನು ನೀವು ನೋಡಬಹುದು.