ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುನ್ಯಪ್ಪಾರ್ ಆಸೀರ್ವಾದ ತಗಳಾನ ಅಂತ ಬಂದೆ, ಏನೋ ಅವ್ಸ್ರವ್ಸ್ರ, ಯಾರ್ಗು ಕೊನೆಗಳ್ಗೆ ವರ್ಗೂ, ಅಮ್ರೆಕಕ್ಕ್ ಹೋಗೊ ವಿಷ್ಯ ಹೇಳಕ್ಕೇ ಆಗ್ಲಿಲ್ಲ, ನೋಡಿ

ಎಂಕ್ಟೇಸಪ್ಪ: ನಮಸ್ಕಾರ ಅಡ್ಬಿದ್ದೆ, ಮುನ್ಯಪ್ನೋರ್ಗೆ. ದೊಗ್ನಾಳ್ ಮುನ್ಯಪ್ಪಾರ್ ಆಸೀರ್ವಾದ ತಗಳ್ದೆ, ನಾವು ಮುಂದ್ವರ್ಯಕ್ಕಾಗತದಾ; ವಸಿ ನೀವೇ ಏಳಿ ! ನನ್ಗಿಂತ ಎಂಟ್ ವರ್ಸ ಹಿರೇರು ಅಲ್ವ್ರ ತಾವು ! ಅಲ್ಗೆ, ಓಗಕ್ಕಿಂತ ಮೊದ್ಲು ಬರ್ಬೇಕಾಗಿತ್ತು. ಏನೋ ಯಾವ್ದು ಸರ್ಯಾಗ್ ತಿಳೀವಲ್ದು... ಎಲ್ಲಾ ಸೌಖ್ಯವೇ ? ಈರಮ್ಮಾರ್ ಎಂಗವ್ರೆ ? ....ನಾಗೇಶ ಹೇಗಿದಾನೆ ?

ಒಂದು ಜೋಕು

ವಿವಾಹ ವಿಚ್ಛೇದನ ಸಲುವಾಗಿ ಕೋರ್ಟ್ ಹತ್ತಿದ ಜೋಡಿಗಳ ಸಂಭಾಷಣೆ:
ನ್ಯಾಯಮೂರ್ತಿ: ನೀವೆಷ್ಟು ಜನ ಮಕ್ಕಳು
ಆಕೆ: 3 ಮಕ್ಕಳು ಸಾರ್
ನ್ಯಾಯಮೂರ್ತಿ: 3 ಮಕ್ಕಳಾದ್ದರಿಂದ ನೀವು ಹೇಗೆ ಹಂಚಿ ಕೊಳ್ಳುತ್ತೀರಾ?
ಆತ: ಬಾರೆ ಮುಂದಿನ ವರ್ಷ ಬರೋಣ

ಭಾಷಾನುವಾದವೇನು?

Air to Air Missile ಇದರ ಕನ್ನಡ ಭಾಷಾನುವಾದವೇನು?

ದಯವಿಟ್ಟು ತಿಳಿಸಿ ..ಸಂಪದಿಗರು ನನ್ನ ಸಂಶಯ ಪರಿಹರಿಸುತ್ತಾರೆ ಎಂಬ ವಿಶ್ವಾಸವಿದೆ..

ಧನ್ಯವಾದಗಳೊಂದಿಗೆ,

ರಶ್ಮಿ

ಅಲಾರಾಂಗೆ ಸಲಾಂ!

ಅಲಾರಾಂಗೆ ಚಳಿಗಾಲವಿಲ್ಲ.

ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ.

ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬಡಿದುಕೊಳ್ಳುತ್ತಾ, ನಮ್ಮನ್ನೂ ಬಡಿದು ಎಬ್ಬಿಸುತ್ತದೆ. ಅಥವಾ ಎಬ್ಬಿಸಲು ಬಡಿದಾಡುತ್ತದೆ.

ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.

ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.