ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯೇ ಇಲ್ಲದ ಮೇಲೆ..

ಹೊಟ್ಟೆಯೊಳಗೆ ಏನೋ ತಳಮಳ. ಬ್ಲಿಂಕ್ ಆಗ್ತಾ ಇರುವ ಕೆಂಪು ದೀಪ ಫೋನ್ನಲ್ಲಿ ಯಾವುದೋ ಸಂದೇಶ ಇದೆ ಅಂತ ಹೇಳುತ್ತಿತ್ತು. ಮೆಸೇಜ್ ಗುಂಡಿ ಒತ್ತುವಾಗ ಇವಳ ಕೈ ನಡುಗಿತು. ಅವಳೇನಾದರೂ ಕರೆ ಮಾಡಿದ್ದರೇ..ಮತ್ತೊಮ್ಮೆ ಹೊಟ್ಟೇಲಿ ತಿರುವಿ ಹಾಕಿದಂತಾಯಿತು. ತಾನು ಬಸುರಿ ಅನ್ನೋದನ್ನೂ ಕೇರ್ ಮಾಡ್ದೇ ಯಾವ್ದೋ ಕ್ಷುಲ್ಲಕ ಕಾರಣಕ್ಕೆ ಹಿಂದೆ ಅವಳು ಕಟುವಾಗಿ ಬರೆದ ಪತ್ರ ಓದಿ ಪಟ್ಟ ಪಾಡು ನೆನಪಾಯಿತು. ಕೆಲಸಕ್ಕೆ ಬಾರದ ಜಾಹಿರಾತಿನ ಸಂದೇಶ ಕೇಳಿ ಇವಳಿಗೆ ಒಟ್ಟಿಗೆ ದುಃಖ ಹಾಗೂ ನಿರಾಳವಾಯಿತು.

ಆಡುತ್ತಿದ್ದ ಮಕ್ಕಳಲ್ಲಿ ಏನೋ ಜಗಳವಾಗಿ ವಾಸ್ತವಕ್ಕೆ ಬಂದಳು. ಮಕ್ಕಳ ಜಗಳ ಬಿಡಿಸಿ ಬುದ್ಧಿ ಹೇಳಿ ಇವತ್ತು ರಾತ್ರಿ ಸೋದರ ಪ್ರೇಮ ತುಂಬಿರುವ ಕಥೆ ಹೇಳಲು ನಿರ್ಧರಿಸಿದಳು.

ಸಂಜೆಹೊತ್ತಿಗೆ ತಾನು ದುಡುಕಿ ಫೋನ್ ಮಾಡಿದ್ದು ಶುದ್ಧ ಮೂರ್ಖತನದ ಕೆಲಸ ಅಂತ ಇವಳಿಗೆ ತೀವ್ರತರವಾಗಿ ಅನ್ನಿಸತೊಡಗಿತು. ಅವಳನ್ನ ನೋಡಿ ಯುಗ ಯುಗಗಳಾಗಿದೆ! ಈಗ ಯಾಕೆ ಬೇಕಾಗಿತ್ತು ಈ ರಗಳೆಯೆಲ್ಲ? ಎಲ್ಲಾರಿಗೂ ಎಲ್ಲಾದಕ್ಕೂ ಬೆನ್ನು ತಿರುಗಿಸಿ ಹೋದವಳಿಗೆ ಬರುವ ರಜೆಯಲ್ಲಿ ನಮ್ಮೂರಿಗೆ ಮಗಳೊಟ್ಟಿಗೆ ಬರಲಿಷ್ಟ ಪಡುತ್ತೀಯ ಅಂದಷ್ಟೆ ಸಂದೇಶ ಬಿಟ್ಟು ಸಂಪರ್ಕ ಕಡಿದಿದ್ದಳು. ಇನ್ನೇನು ತಾನೆ ಹೇಳಬಹುದಿತ್ತು? ಕರುಳ ಕಿತ್ತು ಕೊಟ್ಟರೆ ಹುರಿ ಹಗ್ಗವೆಂದವಳಿಗೆ ಬೇರೇನು ಹೇಳಬೇಕಾಗಿತ್ತು?

"ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

ಅರ್ಘ್ಯಂ ಸಂಸ್ಥೆಯು ಪ್ರಾರಂಭಿಸಿರುವ ವಾಟರ್ ಪೋರ್ಟಲ್ ಯೋಜನೆಯ ಕನ್ನಡ ಆವೃತ್ತಿಗೆ ನೀವೆಲ್ಲರೂ ಈಗಾಗಲೇ ಭೇಟಿ ಕೊಟ್ಟಿರುತ್ತೀರಿ. ಈ ಯೋಜನೆ ಸಂಪದದ ಸಹಯೋಗದಿಂದ ಮೂಡಿಬರುತ್ತಿದೆ. ಸಹಯೋಗದ ಭಾಗವಾಗಿ ಮತ್ತೊಂದು ಲೇಖನ ನಿಮ್ಮೆಲ್ಲರ ಮುಂದೆ.ಲೇಖನ: ಹರ್ಷವರ್ಧನ್ ಶೀಲವಂತ್, ಚಿತ್ರಗಳು: ಕೇದಾರನಾಥ್, ಜೆ ಜಿ ರಾಜ್

"ತಮ್ಮ..ಅದನೇನ್ ನೋಡ್ತಿ..ನಮ್ಮನೇನ್ ಕೇಳ್ತಿ..? ಒಂದ ಮಾತಿನ್ಯಾಗ ಹೇಳ್ಯಾ..?
- ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"


ಆಹೆಟ್ಟಿ ಗ್ರಾಮದ ಕಮಲಮ್ಮನ ಮಾತುಗಳಿವು. ಕೇಳಿದ ನನಗೂ, ಗೆಳೆಯ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೂ ಕರುಳು ಕಿತ್ತು ಬಂದಂತಹ ಅನುಭವ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’  ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಇಲ್ಲಿನ ಗ್ರಾಮಸ್ಥರ ದಾಹ ತೀರಿಸಿಕೊಳ್ಳುವ ಪರಿ ಶೋಚನೀಯ. ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಒಮ್ಮೆ ನಿಂತು ಯೋಚಿಸಬೇಕಾದಷ್ಟು ಗಂಭೀರ ಸ್ಥಿತಿ ಇಲ್ಲಿದೆ.

ಆಹೆಟ್ಟಿ ಗ್ರಾಮದ ಹೆಣ್ಣು ಮಕ್ಕಳು, ಗಂಡಸರು ತಮ್ಮ ಚಿಕ್ಕ ಮಕ್ಕಳೊಂದಿಗೆ ನೀರು ಹೊರುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ನಿತ್ಯ ೪-೬ ಕಿಲೋ ಮೀಟರ್ ದೂರ ಕ್ರಮಿಸಿ ಕುಡಿಯಲು ಕಲುಷಿತ ನೀರು ಒಗ್ಗೂಡಿಸುವುದೇ ಹರಸಾಹಸದ ಕೆಲಸ. ಗ್ರಾಮದ ಪಕ್ಕದಲ್ಲಿ ಹರಿದಿರುವ ‘ತುಪರಿ ಹಳ್ಳ’ ದಲ್ಲಿ ‘ಒರ್ತಿ’ ತೋಡಿ ಕಪ್ಪಾದ ನೀರನ್ನು ಪ್ಲಾಸ್ಟಿಕ್ ಬಿಂದಿಗೆಗಳಲ್ಲಿ ತಾಸುಗಟ್ಟಲೇ ತುಂಬಿಸುವುದು ಅವರಿಗೆ ಅನಿವಾರ್ಯ. ಹೊತ್ತುಕೊಂಡು, ಇಲ್ಲವೇ ಸೈಕಲ್, ಎತ್ತಿನ ಬಂಡಿ, ಕೈಗಾಡಿ, ಟ್ರ್ಯಾಕ್ಟರ್ ಹೀಗೆ ನೂರೊಂದು ರೀತಿಯಲ್ಲಿ ಬಣ್ಣದ ಪ್ಲಾಸ್ಟಿಕ್ ಕೊಡಗಳಲ್ಲಿ ಕಲುಷಿತ ನೀರು ‘ಕುಡಿಯಲು’ ಹೊತ್ತೊಯ್ಯದೇ ಉಪಾಯವಿಲ್ಲ.

ಮುಂದೆ ಓದಿ >>

ಮತಾ೦ತರ ಹಾಗೂ ಹಿ೦ದೂ ಧರ್ಮ

ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ.

ಮತಾ೦ತರ

ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ.

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨

ತುಂಬಾ ಸಿಂಪಲ್ ಆದ ಪ್ರಶ್ನೆಯೊಂದು ಹೇಗೆ ನಿಮ್ಮ ತನು-ಮನಗಳನ್ನು ಮತ್ತು ದಿನ-ಮನಗಳನ್ನು ಕಾಡಬಹುದು ಎಂಬುದನ್ನು ನೋಡಿಯಾದಮೇಲೆ, ನಾನು ಯೋಚನೆ ಮಾಡದೆ ಆಶ್ವಾಸನೆ ಕೊಡುವುದನ್ನು ಬಿಟ್ಟು ಬಿಟ್ಟೆ, ಬಿಟ್ಟು ಬಿಟ್ಟೆ ಅನ್ನುವದಕ್ಕಿಂತ ಬಿಡಿಸಲಟ್ಟೆ ಎನ್ನುವುದು ಸೂಕ್ತವಾದೀತೇನೋ. ಅಲ್ಲಿಗೆ ನನ್ನ ಈ ಲೇಖನದ ಸಮಸ್ಯೆ ಆರಂಭವಾಯಿತು..ಅದುವೇ ನನ್ನ ರೆಸ್ಪಾನ್ಸ್ ಟೈಮ್.

ನೈನ್-ನೈಂಟಿ(990) ನರ್ವಸ್!

ಸಾಮಾನ್ಯವಾಗಿ ಸಂಪದದಲ್ಲಿ ಅಂಕಗಳು(http://www.sampada.net/userpoints) ಪಡೆದಾಗ ಏನೋ ಖುಷಿ...
ಕಳೆದೆರಡು-ಮೂರು ತಿಂಗಳು ನಾನು ಸಂಪದದಲ್ಲಿ ಸ್ವಲ್ಪ ಹೈಪರ್-ಆಕ್ಟೀವ್ ಆಗಿ, ಒಂದರ ಮೇಲೊಂದು ಪೋಸ್ಟ್ ಮಾಡಿದಾಗ, ನನ್ನ ಅಂಕಗಳು ಸಾವಿರದ ಅಂಚಿಗೆ ಬಂತು...
ಆಗ 'ಓಹ್ ! ಇನ್ನೇನು ಸಾವಿರ ಆಗತ್ತೆ' ಅಂತ ಮನದಲ್ಲೇ ಮಂಡಿಗೆ ಹಾಕತೊಡಗಿದೆ...