ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿಪ್ತ ಮನದ ವ್ಯಕ್ತಿ. ತನ್ನ ಕಷ್ಟ ಜೀವನದ ಮಧ್ಯೆ ಹಲವರಲ್ಲಿ ಕೆಲಸ ಮಾಡಿ ಮಾನವ ಪ್ರವೃತ್ತಿ, ಅಭ್ಯಾಸ, ಅಭಿವ್ಯಕ್ತಿಗಳನ್ನು ತಿಳಿದುಕೊಂಡ. ತನ್ನ ಗಲಿವರ್ ಟ್ರಾವಲ್ಸ್ ನಿಂದ ಲೋಕಪ್ರಸಿದ್ಧನಾದ. ರಾಜಕೀಯ ಚಾತುರ್ಯ ಹೊಂದಿದ್ದ ಅವನು ಸ್ಕಾಟ್ಲಾಂಡ್ ನ ಅನೇಕ ಗೆಲುವಿಗೂ ಕಾರಣೀಕರ್ತನಾದ. ಇಬ್ಬರೊಂದಿಗೆ ಸಂಸಾರ ಅನುಭವಿಸಿದ – ಅವರಲ್ಲಿ ಒಬ್ಬಳನ್ನು ಪ್ರೀತಿಸಿದ. ಆದರೆ ಜೀವನದ ಕೊನೆಯಲ್ಲಿ ಭಯ, ಒಂಟಿತನ ಅನುಭವಿಸಿ ತನ್ನ ೭೬ನೇ ವಯಸ್ಸಿನಲ್ಲಿ ಮಡಿದ.

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ಪುಸ್ತಕದ ಲೇಖಕ/ಕವಿಯ ಹೆಸರು
ಜೋನಾಥನ್ ಸ್ವಿಫ್ಟ್

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿಪ್ತ ಮನದ ವ್ಯಕ್ತಿ. ತನ್ನ ಕಷ್ಟ ಜೀವನದ ಮಧ್ಯೆ ಹಲವರಲ್ಲಿ ಕೆಲಸ ಮಾಡಿ ಮಾನವ ಪ್ರವೃತ್ತಿ, ಅಭ್ಯಾಸ, ಅಭಿವ್ಯಕ್ತಿಗಳನ್ನು ತಿಳಿದುಕೊಂಡ. ತನ್ನ ಗಲಿವರ್ ಟ್ರಾವಲ್ಸ್ ನಿಂದ ಲೋಕಪ್ರಸಿದ್ಧನಾದ. ರಾಜಕೀಯ ಚಾತುರ್ಯ ಹೊಂದಿದ್ದ ಅವನು ಸ್ಕಾಟ್ಲಾಂಡ್ ನ ಅನೇಕ ಗೆಲುವಿಗೂ ಕಾರಣೀಕರ್ತನಾದ. ಇಬ್ಬರೊಂದಿಗೆ ಸಂಸಾರ ಅನುಭವಿಸಿದ – ಅವರಲ್ಲಿ ಒಬ್ಬಳನ್ನು ಪ್ರೀತಿಸಿದ. ಆದರೆ ಜೀವನದ ಕೊನೆಯಲ್ಲಿ ಭಯ, ಒಂಟಿತನ ಅನುಭವಿಸಿ ತನ್ನ ೭೬ನೇ ವಯಸ್ಸಿನಲ್ಲಿ ಮಡಿದ.

ಮಸಣದ ಮಾತು

ಮಸಣದ ಮಾತು

ನಾನು ನಿನ್ನಂತಲ್ಲ
ನನಗೆ ಯಾರಿಲ್ಲ
ಒಂಟಿ ಬಡಕ
ಆದರೂ ನನ್ನವರೇ ಎಲ್ಲ
ಬರಲೇ ಬೇಕಲ್ಲ
ಒಂದಲ್ಲ ಒಂದು ದಿನ.

ರಾಕ್ಷಸಾಕಾರವಿಲ್ಲ
ಭಯವ್ಯಾಕೆ ಚಿನ್ನ?
ಮಾರು ದೂರ ಹಾಯ್ದು
ಹೋಗಲ್ಯಾಕೋ ಕಂಪನ?

ತೊಗಲೇನು? ವ್ಯಾಧಿಯೇನು?
ಬಣ್ಣ ಜಾತಿ, ಭಾಷೆ ಗೀಷೆ
ನೋಡುವುದಿಲ್ಲ ನಾ
ದೂರುವುದಿಲ್ಲ ಬಯ್ಯುವುದಿಲ್ಲ

ಬಾಲ್ಯ

ಬಾಲ್ಯ

ಅಮ್ಮನ ಸೆರಗಿನ ಹಿಂದಿನ
ಆದಿನಗಳು
ಕಾಮನ ಬಿಲ್ಲಿನ ಹಾಗೆ
ಮೂಡಣದ ನಡುವಿನ ಸೂರ್ಯ
ಗೊತ್ತಿಲ್ಲದೇ
ನೆತ್ತಿಯ ಮೇಲೇರಿದ ಹಾಗೆ.

ಮದುಮಗಳ ಹಿಂದಿಂದ
ಮಾವಿನೆಲೆ ಬಾಲ!
ಹಿಂತಿರುಗುವಷ್ಟರಲ್ಲೇ
ವರಮಾಲೆ ಕೈಯಲ್ಲಿ!

ಅಪ್ಪನ ಛಡಿಯೇಟು
ಅಣ್ಣನ ಕಣ್ಗೆಂಪು
ಜೊತೆಯಲ್ಲಿ ಐಸ್ಕೆಂಡಿ
ಕೈ ಒಣಗುವ ಮೊದಲೇ

ಪ್ರೇಮ ಭಿಕ್ಷೆ

ಇಷ್ಟು ದಿನ ಕಾದಿರುವೆ ಒ೦ದು ಹಿಡಿ ಪ್ರೀತಿಗೆ
ಮುಷ್ಟಿ ತು೦ಬುವಷ್ಟಾದರು ಪ್ರೀತಿ ಸಿಗದೆ?
ನಿನ್ನಲ್ಲಿ ನಾನಿನ್ನು ಕೇಳುವುದಕ್ಕೇನಿಲ್ಲ
"ನಾ ನಿನ್ನ ಪ್ರೀತಿಸುವೆ" ಎನಬಾರದೆ?

ನೂರಾರು ಇರುಳುಗಳ ಕನಸಿನಲೇ ಕಳೆದಾಯ್ತು
ಹಗಲಿನಲಿ ಕಣ್ಮು೦ದೆ ಬರಬಾರದೆ?
ನಿನ್ನ ಹೆಸರನು ದಿನವೂ ಉಸಿರ೦ತೆ ಜಪಿಸಾಯ್ತು
"ನಾ ನಿನ್ನ ಪ್ರೀತಿಸುವೆ" ಎನಬಾರದೆ?

ಹರೆಯ

ಹರೆಯ

ಹದಿ ಬ0ದಿತು, ಕುದಿ ತ0ದಿತು, ಸರಿಸಿ ಬಾಲ್ಯ ತೆರೆಯ
ಹಾರುತಿದ್ದ ಬಿಚ್ಚು ಮನಕೆ ತ೦ದು ಮುಚ್ಚು ಮರೆಯ
ಸ್ವಛ್ಛ ಮನವ ತೂರಾಡಿಸಿ, ಕುಡಿಸಿ ಯಕ್ಷ ಸುರೆಯ
ಸುಪ್ತ ಶರಧಿ ಹೊರ ಚಿಮ್ಮಿತು ಹರಿಸಿ ಪ್ರೇಮ ತೊರೆಯ
ಬ೦ದಿತಾಹಾ ಹರೆಯ, ಬ೦ದಿತಾಹಾ ಹರೆಯ.........

ಕ೦ಡ ಹುಡುಗಿಯ ಕಣ್ಣ ಮಿ೦ದು ತೋಯುವ ತವಕ
ಹುಡುಗಿ ಸ೦ಗಡ ನಡಿಗೆ ಮನೆಯ ತನಕ
ಅವಳ ಅಣ್ಣನ ಹೊಡೆತ, ಅಪ್ಪ ಎಳೆದ ಬರೆಯ

ಗೋಕುಲ ನಿರ್ಗಮನ

ಯಮುನೆ ತೀರದಲ್ಲಿ ಮೌನ
ಬರಡಾಗಿದೆ ಬೃ೦ದಾವನ
ಎದ್ದು ಹೋದ ಮುದ್ದು ಕ್ರಿಷ್ಣ, ಸದ್ದು ಮಾಡದೆ
ಹೃದಯವಷ್ಟೆ ಕದ್ದು ಒಯ್ದ, ಮತ್ತೆ ಬಾರದೆ.

ರಾಧೆ ಕೇಳೆ ಮುರಳಿಯನ್ನ, ಹೊಸ ಮೋಹನ ರಾಗವನ್ನ
ನಿನಗಾಗಿಯೆ ಸಿ೦ಗರಿಸಿಹೆ ಎ೦ದೆ ನಗುತಲಿ
ತೊಡೆಯ ಮೇಲೆ ತಲೆಯನಿಟ್ಟು, ಕನಸ ಕಟ್ಟುತಿದ್ದ ನನ್ನ
ನೆನಪ ಮುರಿದು ನಡೆದೆಯಲ್ಲೋ ನಡು ರಾತ್ರಿಯಲ್ಲಿ.

ನಿನ್ನ ನೆನಪಲ್ಲಿ

೧) ಈ ಮನದ

ಖಾಲಿಹಾಳೆಗಳ ಮೇಲೆ ನಿನ್ನ

ನೆನಪು ಕವಿತೆ ಗೀಚಿದೆ....

೨) ನಿನ್ನೆ ಸವೆಸಿದ ಹಾದಿಗುಂಟ

ಹರಡಿದ ಮುಳ್ಳುಗಳ ಗಾಯವಿನ್ನು ಆರಿಲ್ಲ

ಆದರೂ ನಾಳೆಯ ಅನೂಹ್ಯದಲಿ

ನನ್ನ ಅಸ್ತಿತ್ವ ಹುಡುಕುತಿರುವೆ.....

೩) ಆಗೆಲ್ಲ ಕದ ತೆರೆದಾಗ

ಎದೆ ತುಂಬ ನೀನೇ ಇದ್ದೆ

ಹತಾಶೆ ನಿರಾಶೆಗಳು