ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

ಬರಹ

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿಪ್ತ ಮನದ ವ್ಯಕ್ತಿ. ತನ್ನ ಕಷ್ಟ ಜೀವನದ ಮಧ್ಯೆ ಹಲವರಲ್ಲಿ ಕೆಲಸ ಮಾಡಿ ಮಾನವ ಪ್ರವೃತ್ತಿ, ಅಭ್ಯಾಸ, ಅಭಿವ್ಯಕ್ತಿಗಳನ್ನು ತಿಳಿದುಕೊಂಡ. ತನ್ನ ಗಲಿವರ್ ಟ್ರಾವಲ್ಸ್ ನಿಂದ ಲೋಕಪ್ರಸಿದ್ಧನಾದ. ರಾಜಕೀಯ ಚಾತುರ್ಯ ಹೊಂದಿದ್ದ ಅವನು ಸ್ಕಾಟ್ಲಾಂಡ್ ನ ಅನೇಕ ಗೆಲುವಿಗೂ ಕಾರಣೀಕರ್ತನಾದ. ಇಬ್ಬರೊಂದಿಗೆ ಸಂಸಾರ ಅನುಭವಿಸಿದ – ಅವರಲ್ಲಿ ಒಬ್ಬಳನ್ನು ಪ್ರೀತಿಸಿದ. ಆದರೆ ಜೀವನದ ಕೊನೆಯಲ್ಲಿ ಭಯ, ಒಂಟಿತನ ಅನುಭವಿಸಿ ತನ್ನ ೭೬ನೇ ವಯಸ್ಸಿನಲ್ಲಿ ಮಡಿದ. ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ : ಗಲಿವರ್ ಎಂಬ ಇಂಗ್ಲಿಷ್ ನಾವಿಕ ಸಮುದ್ರ ಪ್ರಯಾಣಿಸುತ್ತಾ ಲಿಲಿಪುಟ್ ಸಾಮ್ರಾಜ್ಯ ಸೇರುತ್ತಾನೆ. ಲಿಲಿಪುಟ್ ಜನರು ನಮ್ಮ ಬೆರಳುದ್ದದ ಜನರಾಗಿದ್ದೂ ಗಲಿವರನನ್ನು ಅಕ್ರಮ ಪ್ರವಾಸಿಗ ಎಂದು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಏನಾದರೂ ಪ್ರತಿರೋಧ ಸೂಚನೆ ಕಂಡರೆ ವಿಷಪೂರಿತ ಬಾಣಗಳಿಂದ ಹಿಮ್ಮೆಟ್ಟಿಸುತ್ತಾರೆ. ಆದರೆ ಬೇರೆಲ್ಲಾ ರೀತಿಯಲ್ಲಿ ಚೆನ್ನಾಗಿ ನೋಡುತ್ತಾರೆ. ಅವರ ರಾಜನ ಸ್ನೇಹಪಾತ್ರನೂ ಆಗುತ್ತಾನೆ. ಬ್ಲೆಫಾಸ್ಸು ಎಂಬ ನೆರೆಯ ದ್ವೀಪದವರ ದಾಳಿಯಿಂದ ಲಿಲ್ಲಿಪುಟ್ ದ್ವೀಪ ರಕ್ಷಿಸುವಲ್ಲಿ ಸಹಾಯ ಮಾಡುವ ಈತ ಇವರೀರ್ವರ ವಿರೋಧದ ಮೂಲದ ಅಭ್ಯಾಸ ಮಾಡುವ. ಮೊಟ್ಟೆಯನ್ನು ಅದರ ವಿಶಾಲ ಕೊನೆಯಲ್ಲಿ ಒಡೆಯಬೇಕೆಂದು ಒಂದು ಗುಂಪು, ಅದರ ಚೂಪು ಕೊನೆಯಲ್ಲೆಂದು ಇನ್ನೊಂದು ಗುಂಪು. ಮುಂಚೆ ಒಂದಾಗಿದ್ದ ಈ ದ್ವೀಪಗಳು ಈ ಭಿನ್ನಾಭಿಪ್ರಾಯದಿಂದ ಒಡೆದು ಬೇರೆಯಾದವು. ಮೊಟ್ಟೆ ಒಡೆದಾಗ ತನ್ನ ಕೈಗೆ ಪೆಟ್ಟಾದ ಕಾರಣ ವಿಶಾಲ ಕೊನೆಯಲ್ಲಿ ಒಡೆಯೋದೇ ಸರಿ ಎಂದ ಲಿಲ್ಲಿಪುಟ್ ರಾಜ ಈ ನಿಯಮ ಅನುಷ್ಠಾನಗೊಳಿಸಲು ಭಯಂಕರ ಪ್ರತಿರೋಧ ಎದುರಿಸಿ ಕೊನೆಗೆ ದೇಶ ಪಾಲಾಗುವ ನಿರ್ಣಯವಾಗುತ್ತದೆ. ಗಲಿವರ್ ತನ್ನ ರಾಜಕೀಯ ಮುತ್ಸದ್ಧಿತನದಿಂದ ಈ ಎರಡು ದ್ವೀಪವನ್ನೂ ಒಂದು ಮಾಡುತ್ತಾನೆ (ಮುಂಚೆ ಪ್ರಸ್ತಾಪಿಸಿದ ಯುದ್ಧಾನಂತರ). ಇದೆಲ್ಲಾ ಘರ್ಷಣೆಯಿರುವ ಅವರ ಸಮಾಜದಲ್ಲಿಯೂ ಕೆಳಗಿನ ಕಟ್ಟಳೆಗಳು ಉತ್ತಮ ಗುಣವಿಶೇಷವಾಗಿ ಕಾಣುತ್ತವೆ ಗಲಿವರ್ ನಿಗೆ : . ಲಿಲಿಪುಟ್ ಜನರಲ್ಲಿ ಮಕ್ಕಳನ್ನು ರೆಸಿಡೆಂಶಿಯಲ್ ಸ್ಕೂಲ್ ಗೇ ಸೇರಿಸಬೇಕು. ಏಕೆಂದರೆ ಅವರ ಅಪ್ಪ ಅಮ್ಮ ಮಕ್ಕಳನ್ನು ನೋಡಿಕೊಳ್ಳಲು ಅನುಪಯುಕ್ತರು. ತಮ್ಮ ಆಕಸ್ಮಿಕ ತಪ್ಪಿಗೆ ಹೊಣೆ ತೆರುವುದು ದೊಡ್ದ ಉಪಕಾರವೆಂದು ಭಾವಿಸಿ ಮಕ್ಕಳನ್ನು ಹಿಂಸಿಸುತ್ತಾರೆ . ಮಕ್ಕಳನ್ನು ನೋಡಲೂ ಅಪ್ಪ ಅಮ್ಮ ಒಮ್ಮೊಮ್ಮೆ ಮಾತ್ರ ಬಂದು ಶಿಕ್ಷಕರ ಮುಂದೆಯೇ ಮಾತಾಡಿ ಹೋಗಬೇಕು. ಅತಿ ಮುದ್ದಿಸುವುದೂ ಅಪರಾಧ . ಪ್ರಚೋದಕ ಉಡುಪುಗಳು ಅಪರಾಧ. ಉಡುಪುಗಳ ನೀತಿಸಂಹಿತೆ ಪಾಲಿಸತಕ್ಕದ್ದ್ದು . ಲಿಲಿಪುಟ್ ನ್ಯಾಯದೇವತೆಗೆ ಆರು ಕಣ್ಣು – ಮುಂದೆ / ಹಿಂದೆ ಎರಡು, ಪಕ್ಕಗಳಲ್ಲಿ ಒಂದೊಂದು. ಇದರರ್ಥ ನ್ಯಾಯವನ್ನು ಯಾವಾಗಲೂ ಪೂರ್ಣ ದೃಷ್ಟಿಕೋನದಿಂದ ಅಥವಾ ದೃಕ್ ಸ್ಥಿತಿಯಲ್ಲಿ ಗಮನಿಸಬೇಕು ಎಂದು. . ನ್ಯಾಯದೇವತೆಯ ಒಂದು ಕೈಯಲ್ಲಿ ತಕ್ಕಡಿ, ಇನ್ನೊಂದು ಕೈಯಲ್ಲಿ ಬಹುಮಾನ ಇರುವುದು. ಏಕೆಂದರೆ ಪುರಸ್ಕಾರವಿಲ್ಲದೆ ಯಾರೂ ಒಳ್ಳೆಯವನಾಗಲಾರ . ವ್ಯಕ್ತಿಯ ಆಶಯಗಳು ಅವನ ಕೃತ್ಯಕ್ಕಿಂತ ಶಿಕ್ಷಾರ್ಹ. ಏಕೆಂದರೆ ಕೃತ್ಯಕ್ಕಿಂತ ಆಶಯ ಒಬ್ಬನ ಬಹು ಹೀನ ಕೃತ್ಯಕ್ಕೆ ಮುನ್ಸೂಚನೆಯು ಇವುಗಳ ಮಧ್ಯೆ ಒಂದು ಅನಾಹುತವಾಗಿ ಲಿಲಿಪುಟ್ ಅರಮನೆಗೆ ಬೆಂಕಿ ಬೀಳುತ್ತದೆ. ಆವಸರದಲ್ಲಿ, ಅಸಹಾಯಕ ಪರಿಸ್ಥಿತಿಯಲ್ಲಿ ತನ್ನ ಬಹಿರ್ದೆಸೆಯಿಂದಲೇ ಅದನ್ನಾರಿಸುವ ಪ್ರಮೇಯ ಗಲಿವರ್ ಗೆ ಒದಗುತ್ತದೆ. ಅವನ ರಾಜಕೀಯ ಹಿತಶತ್ರುಗಳಿಗೆ ಇದೇ ಸದವಕಾಶವಾಗಿ ಅವನನ್ನು ತನಿಖೆಗೆ ಒಳಪಡಿಸುತ್ತಾರೆ. ಆಪಾದನೆಗಳೆಂದರೆ – ತನ್ನ ಮೂತ್ರ ವಿಸರ್ಜನೆಯಿಂದ ಅರಮನೆಯ ಪಾವಿತ್ರ್ಯನಾಶ; ರಾಣಿಯವರನ್ನು ಅನೇಕ ಬಾರಿ ಏಕಾಂತದಲ್ಲಿ ಸಂಧಿಸಿದ ಅಪರಾಧ. ಈ ತನಿಖೆಯ ತೀರ್ಪು : ಒಂದೇ ಮರಣದಂಡನೆ, ಇಲ್ಲಾ ಮೈಯಲ್ಲೆಲ್ಲಾ ಕಿತ್ತುಕೊಳ್ಳುವಂತಹಾ ಉರಿ ಹುಟ್ಟಿಸುವ ಬಾಣ ಸುರಿಮಳೆಯೊಂದಿಗೆ ಜೀವಾವಧಿ ಕಾರಾಗ್ರಹ ಶಿಕ್ಷೆ. ಗಲಿವರ್ ಈ ಸಮಯದಲ್ಲಿ ಗುಟ್ಟಾಗಿ ಬ್ಲೆಫಾಸ್ಸು ದ್ವೀಪಕ್ಕೆ ಹೋಗಿ ತನ್ನ ಹಿತಕ್ಕಾಗಿ ಆ ರಾಜನ ಮಧ್ಯಸ್ಥಿಕೆ ಬೇಡುತ್ತಾನೆ. ಈ ಕೋರಿಕೆ ಮನ್ನಿಸಿದ ಬ್ಲೆಫಾಸ್ಸು ರಾಜ, ಲಿಲ್ಲಿಪುಟ್ ರಾಜನಿಗೆ ಗಲಿವರನ ಹಿಂದಿನ ಕೊಡುಗೆಗಳ ಸ್ಮರಣೆ ಮಾಡಿಸಿ, ಪುನರ್ ನ್ಯಾಯ ಮಂಡನೆಗೆ ಆಗ್ರಹಿಸುತ್ತಾನೆ. ಅದು ಪ್ರತಿಫಲಿಸಿ ಕೊನೆಗೆ ಕನಿಷ್ಟ ಎಚ್ಚರದೊಂದಿಗೆ ಗಲಿವರ್ ನನ್ನು ತನ್ನ ಸ್ವದೇಶ ಇಂಗ್ಲಂಡ್ ಗೆ ಕಳಿಸಲಾಗುತ್ತದೆ. ಹೋಗುವಾಗ ಹಡಗಿನಲ್ಲಿ ಅನೇಕಾನೇಕ ಆಹಾರಸಾಮಗ್ರಿ, ಹಾಲು ಕರೆಯಲು ಹಲವು ಹೈನುಗಳನ್ನು ಇಡಿಸಲಾಗುತ್ತದೆ. ಹೈನುಗಳನ್ನು ಇಂಗ್ಲಂಡ್ ತಲಪಿದ ನಂತರ ಹಲವರಿಗೆ ಸ್ಮರಣಿಕೆಯಂತೆ ಕೊಟ್ಟು ಮತ್ತೆ ಬ್ರಾಡಿಂನಾಗ್ ಎಂಬಲ್ಲಿಗೆ ಪ್ರವಾಸ ಹೊರಡುತ್ತಾನೆ, ಸಾಹಸಿ ಗಲಿವರ್. ಹೆಂಡತಿ, ಮಕ್ಕಳನ್ನು ಬಿಟ್ಟು ಹೊರಡುವಾಗ ಎರಡು ಕಂಗಳಲ್ಲೂ ನೀರಾಡುತ್ತದೆ. ಹೀಗಿದೆ ಲಿಲಿಪುಟ್ ಕತೆ. ಬ್ರಾಡಿಂನಾಗ್ ಕತೆ ಮುಂದಿನ ಸಲ ಬರೆಯಲೇ. ಸೂಚನೆ : ಈ ಕತೆಗಳನ್ನು ಇಂಗ್ಲೀಷ್ ನಲ್ಲಿ ಓದಲು ಬಹಳ ಚೆನ್ನಾಗಿದೆ. ಜೋನಾಥನ್ ಸ್ವಿಫ್ಟ್ ನ ಭಾಷೆಯ ಮುಗ್ಧ, ಸರಳ ಪ್ರಯೋಗಗಳು ಮನಮುಟ್ಟುತ್ತವೆ.