ಪ್ರೇಮ ಭಿಕ್ಷೆ

ಪ್ರೇಮ ಭಿಕ್ಷೆ

ಬರಹ

ಇಷ್ಟು ದಿನ ಕಾದಿರುವೆ ಒ೦ದು ಹಿಡಿ ಪ್ರೀತಿಗೆ
ಮುಷ್ಟಿ ತು೦ಬುವಷ್ಟಾದರು ಪ್ರೀತಿ ಸಿಗದೆ?
ನಿನ್ನಲ್ಲಿ ನಾನಿನ್ನು ಕೇಳುವುದಕ್ಕೇನಿಲ್ಲ
"ನಾ ನಿನ್ನ ಪ್ರೀತಿಸುವೆ" ಎನಬಾರದೆ?

ನೂರಾರು ಇರುಳುಗಳ ಕನಸಿನಲೇ ಕಳೆದಾಯ್ತು
ಹಗಲಿನಲಿ ಕಣ್ಮು೦ದೆ ಬರಬಾರದೆ?
ನಿನ್ನ ಹೆಸರನು ದಿನವೂ ಉಸಿರ೦ತೆ ಜಪಿಸಾಯ್ತು
"ನಾ ನಿನ್ನ ಪ್ರೀತಿಸುವೆ" ಎನಬಾರದೆ?

ಪುಸ್ತಕವ ಹಿಡಿದು ನಾ ಕಣ್ಣೆಲ್ಲೋ ಹರಿಸಿರುವೆ
ನೆನಪಿನಲೆ ಕಳೆದೆ ಇರುಳ ನಿದ್ದೆ ಬರದೆ
ಇನ್ನೆಷ್ಟು ದಿನ ಈ ತರಹ ನಿದ್ದೆಯನು ಕದಿಯುವೆಯೇ
"ನಾ ನಿನ್ನ ಪ್ರೀತಿಸುವೆ" ಎನಬಾರದೆ?

ನೂರಾರು ಸಾಲುಗಳ ಪ್ರೇಮ ಗ್ರ೦ಥವು ಬೇಡ
ಅರ್ಥವಾಗದು ಒ೦ದೂ ಭಾಷೆ ಬರದೆ
ಮನದ ಕದವನು ತೆರೆದು, ಮಧುರ ನಗೆಯನು ಬೀರಿ
"ನಾ ನಿನ್ನ ಪ್ರೀತಿಸುವೆ" ಎನಬಾರದೆ?