ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಹೊಸತರ

ಹಾಗೆ ಶುರುವಾಗಿದೆ ಮನದಿ
ಪ್ರೀತಿಯ ಹಂಬಲ
ಕನಸೇ ಇರದೆ ಕಾಡಿದೆ
ಅವಳ ಒಲವ ಚಂಚಲ
ಹೇಳದೆ ಕಾಡಿದೆ, ಒಲವನು ಬೇಡಿದೆ
ನಾ ಹೇಗೆ ತಿಳಿಸಲಿ ಈ ತಳಮಳ................!!...!!

ಈ ಮೌನದ ಇರುಳಲಿ ಅವಳ ನೆನಪುಗಳು
ನಾ ಹೇಗೆ ಸಹಿಸಲಿ
ಈ ಮುಸುಕಿನ ಮುಂಜಾನೆಯಲಿ ಅವಳ ಒಲವಿನ ಕಾತರ
ಸಹಿಸದಾದೇನೂ ಈ ಹೊಸತರ ......!!..!!

ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?


"ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ."
-ವಿನೋಬಾ ಭಾವೆ

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು
ಆರದಿರಲಿ ನಿನ್ನ ಮನದ ಮನೆಯ ನಂದಾದೀಪ
ಕೊನೆಯಿರದ ನಿಮ್ಮ ಪ್ರೇಮ ಸಾಗರದಲಿ
ಮುಳುಗದಿರಲಿ ನಿಮ್ಮ ಬಾಳ ನೌಕೆ

ವಸಂತವು ಬರಲಿ ನಿಮ್ಮ ಜೀವನದಲಿ
ಮಾವು ಚಿಗುರಲಿ ನಿಮ್ಮ ಒಡನಾಡಿಯಲಿ
ಕೋಗಿಲೆಯ ಸವಿಗಾನವು ತುಂಬಲಿ ಪ್ರತಿ ಮಾತಿನಲಿ
ಹರ್ಷದ ಹುಣ್ಣಿಮೆ ಬರಲಿ ಪ್ರತಿ ರಾತ್ರಿಯಲಿ

ಎಂದೂ ಬಾಡದ ಹೂದೋಟವಾಗಿರಲಿ ನಿಮ್ಮ ಬಾಳು

ಭಯ

ನಾನಿಲ್ಲಿ ವಿಚಾರಿಸಿ ಹೊಱಟಿರುವ ವಿಚಾರ ಮನುಷ್ಯನ ಆಂತರಿಕ ಭಯ. ಸಹಜವಾಗಿ ಬೆಂಕಿ ಸುಡುತ್ತದೆನ್ನುವ ಭಯ, ಬೀೞುವ ಭಯ ನಮ್ಮ ಅನುಭವದ ಮೂಲಕ ಕಂಡುಕೊಂಡ ಭಯ. ಇವೆಲ್ಲ ನಮ್ಮನ್ನು ಗೋಜಲಿಗೆ ಸಿಕ್ಕಿಸುವುದಿಲ್ಲ. ಆದರೆ ನಾನು ಹೇೞುವ ಭಯ ಮಾನಸಿಕ ಭಯ ಉದಾಹರಣೆಗೆ ಹಾವಿನ ಭಯ, ಏಕಾಂತದ ಭಯ ಇತ್ಯಾದಿ. ಹಾವಿನ ಮೇಲೆ ನಮಗೇಕೆ ಭಯ. ಯಾಕೆಂದರೆ ಹಾವಿನ ವಿಷಯವಾಗಿ ನಮಗಿರುವ ಅಜ್ಞಾನ.

ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದರೆ ಎಲ್ಲ?
ಕ್ಷಮೆಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ.

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪ ನಾಗೈದಂತೆ
ಬಾಯ್ದೆರೆಯದಿದ್ದೊಡೆ ಅನಾಹುತಕ್ಕೆ ಕಾರಣನಾದಂತೆ

ದುರ್ಜನರ ಸಹವಾಸ ಹಾವಿನೊಂದಿಗಿನ ಸರಸದಂತೆ
ಯಾವಾಗ ಎಲ್ಲಿ ಕಡಿಯುವುದೋ ನಮಗರಿಯದಂತೆ

ಮೇಲೆಳೆದುಕೊಂಡು ಮೈ ಎಲ್ಲಾ ಪರಚಿಕೊಳ್ಳಲೇಕೆ?

ಮತ್ತದೇ ನೆನಪು

ಕಿವಿಗಳೆರಡೂ ತೂತಾಗಿವೆ
ಮತ್ತದೇ ಮಾತು ಕೇಳಿ,
ಸೂರ್ಯ ಬಂದ,
ಬೆಳಕಾಯ್ತು,
ಹಾಲು ತಂದ್ಯ ?, ಸ್ನಾನ ಆಯ್ತಾ?,
ತಿಂಡಿ ರೆಡಿನಾ?,
ಅಯ್ಯೋ ! ಆಫೀಸಿಗೆ ಲೇಟಾಯ್ತು,
ಬೇರೇನಿದೆ,ಆಯ್ತು, ಹೋಯ್ತು ಇಷ್ಟೇ
ಇದನ್ನೇ ಒಪ್ಪಿಕೊಂಡಿದ್ದೇನೆ.
ಮತ್ತು ಮಾಡುತ್ತಿದ್ದೇನೆ.
ಆಫೀಸಿನ ಗೌಜು ಗದ್ದಲದ ನಡುವೆ
ಒಂದು ಮುಖ, ಮತ್ತದರ ನಗು
ಬೇಡವೆಂದರೂ ಹಿಂಬಾಲಿಸುತ್ತದೆ.
ನಾನೂ ಹಂಬಲಿಸುತ್ತೇನೆ.

ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್

ಅಂತೂ ಗೆದ್ದದ್ದು ನಾವೇ. ಇತ್ತೀಚೆಗೆ ನಾನೊಂದು ಕದನದಲ್ಲಿ ತೊಡಗಿಸಿಕೊಂಡಿದ್ದೆ.ಕಳಪೆ ಗುಣಮಟ್ಟದ ಸೇವೆಗೆ ರಿಲಿಯನ್ಸ್ ದೂರಸಂಪರ್ಕ ಸಂಸ್ಥೆಯನ್ನು ಗ್ರಾಹಕ ನ್ಯಾಯಾಲಯಕ್ಕೆ ಅನಿವಾರ್ಯವಾಗಿ ಎಳೆಯಬೇಕಾಯಿತು. ಮೂರು ತಿಂಗಳಿನಿಂದ ವಾಯಿದೆಯಾಗುತ್ತಿದ್ದ ತೀರ್ಪು ಕೊನೆಗೂ ಹೊರಬಂದಿದೆ.

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಮೊದಲನೇ ಭಾಗದಿಂದ ಮುಂದುವರೆದಿದೆ .....

ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು.

ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.

 

"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.