ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೈಸೂರಿನಲ್ಲಿ ಕನ್ನಡದ ಸ್ಥಿತಿ ಗತಿ

ಮೈಸೂರು ನಗರದಲ್ಲೆಲ್ಲಾ ನಿವು ಗಮನಿಸಿರಬಹುದು, ಎಲ್ಲಾ english hording ಮತ್ತು englishಅಲ್ಲಿ ಬರೆದಿರೊ ಅಂಗಡಿ ಫಲಕಗಳಿಗೆ ಕನ್ನಡಪರ ಚಳುವಳಿಗಾರರು ಕಪ್ಪು ಮಸಿ ಬಳಿದಿದಾರೆ, ಆದರೆ ಮೈಸೂರಿನ ಅಂದರೆ ಹೆಬ್ಬಾಳದಲ್ಲಿರೊ ಈ Pertol Bunk ಅಲ್ಲಿ ಇರೊ hordingನಲ್ಲಿ, ಯಾರೊ ಕನ್ನಡ ದ್ರೊಹಿಗಳು ಮಾಡಿರೊ ಕೆಲಸನಾ ನೊಡಿ !!

ತ್ರಿಪದಿ ೨೧-೨೨-೨೩

ನಿನ್ನ ಕೊರಳಿಗೆ ನನ್ನ ಮಾಂಗಲ್ಯವಿರಲಿ
ನಿನ್ನ ಬೆರಳಿಗೆ ನನ್ನ ಕಾಲುಂಗುರವಿರಲಿ
ನಿನ್ನ ಕರುಳಿಗೆ ನನ್ನ ಕುಡಿಯಿರಲಿ ಪ್ರಭುಶಂಕರ

ಒಳ್ಳೆಯ ನುಡಿ ಒಳ್ಳೆಯ ನಡೆ
ಒಳ್ಳೆಯ ಕುಡಿ ಬಾಳಿನಲ್ಲಿರಲು
ಕೊಳ್ಳಿಗೂ ಭಯವಿರದು ಪ್ರಭುಶಂಕರ

ಎತ್ತ ಹೋದರು ಸತ್ತ್ವದಲಿ ನೀನಿರಲು
ಅತ್ತಿತ್ತ ಸುಳಿದು ಬಂದರು ಮತ್ತೆ ನಿನ್ನ
ಹತ್ತಿರವೇ ಬರುವೆ ಪ್ರಭುಶಂಕರ

ಹಾಸ್ಯ - ೧

ಪ್ರಸಿದ್ದವಾದ ಪತ್ರಿಕೆ
ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು?
ರಾಜು : ಲಗ್ನ ಪತ್ರಿಕೆ ಸಾರ್ !!!

ಐಟಿ ದೇವರುಗಳು
ಬ್ರಹ್ಮ : ಸಿಸ್ಟಮ್ ಇನ್‍ಸ್ಟಾಲರ್
ವಿಷ್ಣು : ಸಿಸ್ಟಮ್ ಸಫೋರ್ಟರ್
ಶಿವ : ಡಿಲೀಟ್ ಸ್ಪೆಷಲಿಷ್ಟ
ನಾರದ : ಡಾಟಾ ಟ್ರಾನ್ಸ್‍ಫರರ್
ಅಪ್ಸರೆ : ಡೌನ್‍ಲೋಡ್ ವೈರಸ್

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.

ಮನುಷ್ಯನನ್ನು ಹೀನ ಮಾಡಿದ ಮನುಷ್ಯ!

ಮನುಷ್ಯನನ್ನು ಹೀನ ಮಾಡಿದ ಮನುಷ್ಯ!
What man has made of man -Wordsworth
ಒಬ್ಬ ನಿಪುಣ ಕಲಾಕಾರನಿದ್ದ. ಒಮ್ಮೆ ಅವನಿಗೆ ಭಗವ೦ತನ ಚಿತ್ರ ಬರೆಯಬೇಕೆ೦ಬ ಆಸೆಯಾಯಿತು.

ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !

ನನ್ನ ಅಮೆರಿಕದ ಯಾತ್ರೆ, ಯ ವಿವರಗಳನ್ನು ಬರೆಯುತ್ತಿರುವ, ದಿನಪ್ರತಿದಿನದ ಸನ್ನಿವೇಷಕ್ಕೆ ಸುಮಾರಾಗಿ ತೆರೆಯೆಳೆಯಬಹುದೇನೋ, ಅನ್ನಿಸಿದೆ. ಹೇಳಲು ಇನ್ನೂ ಸುಮಾರು ವಿಷಯಗಳಿವೆ. ತೆಗೆದ ಚಿತ್ರಗಳೂ ಇವೆ. ಈಗ ಅಮೆರಿಕಕ್ಕೆ ಯಾರು ಹೋಗಲ್ಲಾ , ಹೇಳಿ ?

ಬೆಂಗಳೂರು ವಿಶ್ವವಿದ್ಯಾಲಯದ ೩ನೆ ಸೆಮಿಸ್ಟರ್ ಪಠ್ಯದ ಅವ್ಯವಸ್ಥೆ

ಮೂರನೆಯ ಸೆಮಿಸ್ಟರ್ ಬಿ.ಎ, ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಹುಮುಖಿ - ೩ ,ಕಾಲೇಜ್ ಪ್ರಾರಂಭವಾಗಿ ತಿಂಗಳ ನಂತರ ಮುದ್ರಣಗೊಂಡು ಮಾರುಕಟ್ಟೆಗೆ ಬಂದಿತು. ಅದರ ಗಾತ್ರ ನೋಡಿ ಸಮಾಧಾನವಾಯಿತು. ಕಾರಣ ಹಿಂದಿನ ಎರಡು ಸೆಮಿಸ್ಟರ್ ಗಳಲ್ಲೂ ತಲಾ ಮುನ್ನೂರು ಪುಟಗಳ ಪಠ್ಯ ನಿಗದಿಯಾಗಿತ್ತು. ( ೨೯೦+೩೪೦ ). ಈ ಬಾರಿ ೧೩೦ ಪುಟಗಳ ಪುಸ್ತಕ ನೋಡಿ ಸಮಾಧಾನವಾಗದಿರುತ್ತದೆಯೇ ?