ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಶ್ವಾಮಿತ್ರನ ತಪಸ್ಸು ಭಂಗ

ಅವಳು : ಹಲ್ಲೋ ಡಿಯರ್,

ನಾನು : ಓಹೋ ನೀನಾ, ನಮಸ್ಕಾರ

ಅವಳು : ಹೌ ಆರ್ ಯು?

ನಾನು : ನನಗೇನು ಧಾಡಿ, ನೀನ್ಹೆಗೆ ಇದ್ದೀಯ?

ಅವಳು : ಐ ಯಾಮ್ ಸುಪೆರ್ಬ್.

ನಾನು : ಕನ್ನಡ ದಲ್ಲಿ ಮಾತಾಡೆ ಮಾರಾಯ್ತಿ?

ಅವಳು : ಒಹ್ ಮೈ ಗಾಡ್, ನವಂಬರ್ ಪ್ರೆಪರಶನ್ನ್ ಮಾಡ್ತಾ ಇದ್ದೀಯ?

ನಾನು: ಇಲ್ಲ ಕಣೆ ಆಫಿಸ ಕೆಲಸ ಬಿಟ್ಟು ಉಳಿದೆಲ್ಲವೂ ಕನ್ನಡದಲ್ಲೆ,

ಅವಳು : ದೇನ್ ಹೌ ಈಸ್ ಲೈಫ್?

ಹೆಸರು ನೀಡಿ

ನಮಸ್ಕಾರ ಸ್ನೇಹಿತರೇ ನಾವು ಗರ್ಭಗೊರಳಿನ ಅರ್ಬುದ (ಸರ್ವಿಕಲ್ ಕ್ಯಾನ್ಸರ್) ಕಾಯಿಲೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಪಿಲ್ಮ್ ಮಾಡುತ್ತಿದ್ದೇವೆ. ಇದು ಗ್ರಾಮೀಣ ಜನರಿಗೋಸ್ಕರ ತಿಳುವಳಿಕೆ ನೀಡುವೆ ಉದ್ದೇಶದಿಂದ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಈ ಕಾಯಿಲೆ ಹೆಚ್ಚಾಗಿ ಇರುವುದರಿಂದ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪಿಲ್ಮ್ ಮಾಡುತ್ತಿದ್ದೇವೆ.

ಮೋಹಿನಿ ಕಾಟ

'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ
'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು
ಆದರೆ ಇಂದು "ತಂಗಾಳಿಯಲ್ಲಿ ನಾನು ತೇಲಿ ಬಂದೆ " ಎಂದು
ನೀನು "ಮೋಹಿನಿ"ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು
ಅಷ್ಟಕ್ಕೂ ನಿನಗೆ 'Drink N Drive' ಮಾಡಿ!
'ಸ್ವರ್ಗ' ಸೇರಲು ನಾ ಹೇಳಿದ್ದೆನಾ!!?

- ರಾಕೇಶ್ ಶೆಟ್ಟಿ :D

ನಿನಗಾಗಿ ನಾನು ನನಗಾಗಿ ನೀನು

“ಹೂವಂತೆ ನಿನ್ನ ಸೊಗಸು,
ಹಾಲಂತೆ ನಿನ್ನ ಮನಸು
ನನ್ನ ಪ್ರೀತಿಯ ಸೆಲೆಯಾಗಿ
ಬಂದೆ ನೀ ಕಂದನೆ
ಕಷ್ಟವೇನೇ ಬರಲಿ ನಾನದನುಂಡು
ಸುಖವ ನಿನಗೆ ನೀಡುವೆ
ನನ್ನ ಪುಟ್ಟ ಚಾಮನೆ”
“ಇಂದು ನೀನೆನ್ನ ಸಲಹುತಿಹೆ,
ಸುಖದ ಸುಪತ್ತಿಗೆ ಎನಗೆ ಹಾಸಿಹೆ
ನಾಳೆ ನನ್ನ ಸರದಿ - ಎನ್ನ
ಕಣ್ಣೊಳಿಟ್ಟು ನಿನ್ನ ಕಾಯ್ವೆ ನಾನು
ಚಿಂತೆ ಬಿಟ್ಟು ಎನ್ನೊಡನಾಡೆ ನೀನು

ಪ್ರೀತಿ ಕಳೆದುಹೋದ ಹೋತ್ತು

ಪ್ರೀತಿ ಕಳೆದುಕೊಂಡ ಹೋತ್ತು.....

ಪ್ರತಿ ಯುವಕ/ಯುವತಿಯ ಮನದಲ್ಲೂ ಜೀವನದಲ್ಲಿ ಎಲ್ಲೋ ಒಮ್ಮೆ ಈ ಅನುಭವ ರಾತ್ರಿಯ ಸುಂದರ ಕನಸಿನಂತೆ ಬಂದು ಹೋಗಿ ಕಾಡುತ್ತಿರುತ್ತದೆ. ನಿಮ್ಮ ಮನದಾಳದ ಮಾತು ಹಂಚಿಕೊಳ್ಳ ಬಯಸಿದರೇ ಈ ಬ್ಲಾಗ್ ಸಾರ್ಥಕತೆ ಪಡೆಯುವುದು. ನಿಮ್ಮೆಲ್ಲರಿಗೂ ಆದರದ ಸುಸ್ವಾಗತ.

ಅರವಿಂದ

ನಾಕು ಕನಸು

ಮುಂಜಾವೇ ಹಂಗ
ಕನಸು ಮುಗಿದೊಡನೆ ಬೆಚ್ಚೆದ್ದು ಕುಳಿತಿದ್ದೆ ಹಿಂಗ

ಹಸಿರೆಲೆಯ ಮೊಗ್ಗಿನ್ನೂ ಅರಳಿರಲಿಲ್ಲ,
ಮೃದುವಾಗಿ ಎಳೆತಂದು
ಮಡಿಲೊತ್ತಿಕೊಂಡಿದ್ದೆ, ಕಣ್ಬಿಟ್ಟಾಗ
ಮೊಗ್ಗಿರಲಿಲ್ಲ - ಈ ಮುಂಜಾವೇ ಹಂಗ...

ತಿರುಗಿ ಮಲಗಿದರೆ ಮನೆ ತುಂಬಾ ಮೊಗ್ಗಿನದೇ ಕಂಪು
ಗಮಗಮನೆ ಮೂಗೇರಿ ಮನವನಾವರಿಸಿತ್ತು ತಂಪು
ಸ್ವರ್ಗಕ್ಕೆ ಮೂರೇಗೇಣು; ಎಚ್ಚೆತ್ತು ನೋಡಿದರೆ

ಜಗರ್ನಾಟ್

ಜಗರ್ನಾಟ್
ಕೆಲವು ದಿನಗಳ ಕೆಳಗೆ ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದಾಗ ಇಬ್ಬರು ಯುವಕರು ಸ್ವಲ್ಪ ದೂರದಲ್ಲಿ ಮಾತನಾಡುತ್ತಿದ್ದುದು ನನ್ನ ಕಿವಿಗೆ ಬಿತ್ತು.
ಒಬ್ಬ, “ನಾನು ಇವತ್ತು ಒಂದು ಹಳೇ ಇಂಗ್ಲಿಷ್ ಮೂವಿ ನೋಡ್ದೆಕಣೊ ತುಂಬಾ ಚೆನ್ನಾಗಿತ್ತು.”
ಇನ್ನೊಬ್ಬ, “ಹೌದಾ? ಯಾವುದೋ ಅದು ?” ಎಂದು ಕೇಳಿದ.
“ಅದರ ಹೆಸರು ಜಗರ್ನಾಟ್ ಅಂತಕಣೊ”

ಲಿನಕ್ಸಾಯಣ - ೨೭ - ಇದು ಲೈಫ್ ರಿಯಾ

ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ?

ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ
ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್
ಸೈಟ್ಗಳು ಎಷ್ಟಿವೆ ಅಂತಂದ್ರೆ  ಎಲ್ಲರೂ ನೂರು ನೂರೈವತ್ತು ಕೊಂಡಿಗಳನ್ನ  ಬುಕ್

ಸಣ್ಣ ಕತೆ: ನಾನು, ಅವನು, ಮೋನಪ್ಪ.

[2004 ರ ಜನವರಿಯಲ್ಲಿ, ಅಂದರೆ ಸುಮಾರು ಐದು ವರ್ಷಗಳ ಹಿಂದೆ ಬರೆದ ಕಥೆ ಇದು. ಮೊದಲು ನನ್ನ ಪುಸ್ತಕದಲ್ಲಿ ಪ್ರಕಟವಾಗಿತ್ತು. 2003 ರ ಕೊನೆಯಲ್ಲಿ ಕರ್ನಾಟಕದ ಸಾಹಿತ್ಯಕ-ಸಾಂಸ್ಕೃತಿಕ ರಂಗದಲ್ಲಿ ನಡೆದ ಕೆಲವು ಘಟನೆಗಳು ಹಾಗೂ ನಿರಂಕುಶಮತಿಯಂತೆ ಕಾಣಿಸುತ್ತಿದ್ದ ಸ್ನೇಹಿತನೊಬ್ಬ ಹೇಳಿದ ಅಂಧಾಭಿಮಾನ ಎನ್ನಿಸಿದ ಮಾತು ಈ ಕಥೆಗೆ ಮೂಲ ಪ್ರೇರಣೆ. ಇದನ್ನು ಬರೆಯುವಾಗ ಈ ಕತೆ ಈಗ ಮಾತ್ರ ಪ್ರಸ್ತುತ ಎನ್ನಿಸುತ್ತಿತ್ತು. ಆದರೆ, ನಾಲ್ಕೈದು ವರ್ಷಗಳ ನಂತರವೂ ಇದು ಪ್ರಸ್ತುತವಾಗುತ್ತಲೆ ಹೋಗುತ್ತಿದೆ. ದಟ್ಸ್‌ಕನ್ನಡದಲ್ಲಿದ್ದ ಕೊಂಡಿ ಈಗ ಕೆಲಸ ಮಾಡುತ್ತಿಲ್ಲವಾದ್ದರಿಂದ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ.-ರವಿ, 22-10-08]

ಎಂದಿನ ಕೆಲಸದ ದಿನದಂತೆ ಅಂದೂ ನಾನು ಅವನು ಕ್ಯಾಂಟೀನ್‌ನಲ್ಲಿ ಕಲೆತು ಊಟ ಮಾಡಲು ಹೋದೆವು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪಕ್ಕ ಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ನಾವು ಯಾವುದೇ ಒತ್ತಡವಿಲ್ಲದೆ ಸಾವಧಾನವಾಗಿ ನಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದ ಜಾಗ ಕ್ಯಾಂಟೀನ್. ಅಲ್ಲಿ ಕುಳಿತು ಈ ಅಮೇರಿಕನ್ನರ ತಿಂಡಿ, ಅದನ್ನವರು ತಿನ್ನುವ ಪರಿ, ಅವರ ನಡವಳಿಕೆ, ಎಲ್ಲವನ್ನೂ ಅಂದಿನ ಭಾವಕ್ಕೆ ಭಕುತಿಗೆ ತಕ್ಕಂತೆ ಟೀಕಿಸುತ್ತ, ಮೆಚ್ಚುತ್ತ, ನಮ್ಮದನ್ನು ಹೋಲಿಸಿಕೊಳ್ಳುತ್ತಾ, ಹೆಮ್ಮೆ, ದ್ವಂದ್ವ, ಗೊಂದಲ ನಿರಾಳಗಳಲ್ಲಿ ಊಟದ ಅವಧಿಗಿಂತ ಹೆಚ್ಚಿಗೆ ಅಲ್ಲಿ ಕಳೆಯುತ್ತಿದ್ದೆವು. ಕೆಲಸವಿದ್ದಲ್ಲಿ ರಾತ್ರಿಯೆಲ್ಲಾ ಕುಳಿತು ಮಾಡುತ್ತಿದ್ದರಿಂದ ನಮ್ಮಿಬ್ಬರಿಗೂ ಮ್ಯಾನೇಜರ್ ಏನೆಂದುಕೊಳ್ಳುತ್ತಾನೋ ಎಂಬ ಭಯವೇನೂ ಇರಲಿಲ್ಲ. ಅವನಿಗೆ ಈ ಅಮೇರಿಕನ್ನರ ಉಪ್ಪು ಖಾರ ಕಮ್ಮಿ ಇರುವ ಊಟ ಸಪ್ಪೆಯೆಂದು ಸೇರುತ್ತಿರಲಿಲ್ಲವಾದ್ದರಿಂದ ತಪ್ಪದೆ ಮನೆಯಿಂದಲೇ ಊಟ ತರುತ್ತಿದ್ದ. ನಾನು ಬೆಳಿಗ್ಗೆಯ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಬಾರಿ ಮಾತ್ರ ತರುತ್ತಿದ್ದೆನಾದರೂ ಸಾಮಾನ್ಯವಾಗಿ ಕ್ಯಾಂಟೀನ್‌ನಲ್ಲಿ ದೊರಕುತ್ತಿದ್ದುದ್ದನ್ನೆ ತಿನ್ನುತ್ತಿದ್ದೆ. ಅವನಿಗೆ ನಾನು ಏನು ತಿಂದರೂ ಆಕ್ಷೇಪಣೆ ಇಲ್ಲದಿದ್ದರೂ "ಈ ಉಪ್ಪು ಹುಳಿ ಇಲ್ಲದ್ದನ್ನು ಹೇಗೆ ತಿನ್ನುತ್ತೀಯೋ, ಮಾರಾಯ?" ಎನುತ್ತಿದ್ದ. ನಾನು ಸಣ್ಣ ಸಣ್ಣ ಉಪ್ಪಿನ, ಮೆಣಸಿನ ಪುಡಿಯ ಪ್ಯಾಕೆಟ್‌ಗಳನ್ನು ಅವನ ಮುಂದೆ ಸರಿಸುತ್ತಿದ್ದೆ.

ನಾನು ತಟ್ಟೆಯಲ್ಲಿ ಅಂದಿನ ತಿಂಡಿಯನ್ನಿಟ್ಟುಕೊಂಡು ಕೌಂಟರ್‌ನಲ್ಲಿ ಕ್ಯೂ ನಿಂತು ಹಣ ಪಾವತಿಸಿ ಬರುವಷ್ಟರಲ್ಲಿ ಅವನು ಟೇಬಲ್ ಹಿಡಿದು ತನ್ನ ಊಟ ಸಿದ್ದಪಡಿಸಿಟ್ಟುಕೊಂಡು ನನಗೆ ಕಾಯುತ್ತಿದ್ದ. ಅಂದು ಹಸಿವಾಗಿತ್ತೇನೊ, ನಾನು ಕುಳಿತ ತಕ್ಷಣ ತನ್ನದನ್ನು ತಿನ್ನಲಾರಂಭಿಸಿ ಒಂದೆರಡು ನಿಮಿಷದ ನಂತರ ನೆಮ್ಮದಿಯಾದವನಂತೆ ನಿಧಾನಿಸಿ, "ನಾಳಿದ್ದು ನಮ್ಮ ಜಗಲಿಗೆ ರಾಜ್ಯ ಪ್ರಶಸ್ತಿ ವಿಜೇತ, ಇಲ್ಲಿಯೇ ದಕ್ಷಿಣ ರಾಜ್ಯದಲ್ಲಿರುವ ಸಾಹಿತಿ ಶಿವರಾಮ್ ಬರುತ್ತಿದ್ದಾರಂತೆ ಮಾರಾಯ." ಎಂದ. "ಜಗಲಿ" ಎನ್ನುವುದು ನಮ್ಮಲ್ಲಿಂದ ಇಲ್ಲಿಗೆ ದುಡಿಯಲು ಬಂದಿದ್ದ ಕೆಲವು ಸಮಾನಮನಸ್ಕರು ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ತಿಂಗಳಿಗೋ, ಎರಡು ತಿಂಗಳಿಗೋ ಒಂದು ಸಾರಿ ಸಭೆ ಸೇರಿ ಚರ್ಚಿಸಲು ಮಾಡಿಕೊಂಡಿದ್ದ ಸಣ್ಣ ಗುಂಪು. ಅವನು ಈ ದೇಶಕ್ಕೆ ನನಗಿಂತಲೂ ಹಳಬನಾಗಿದ್ದರಿಂದ, ನಾನು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ನಮ್ಮಿಬ್ಬರಿಗೂ ಪರಿಚಯವಾಗಿ, ನಂತರ ನನ್ನ ಸಾಹಿತ್ಯಾಸಕ್ತಿಯನ್ನು ತಿಳಿದು ಜಗಲಿಗೆ ಪರಿಚಯಿಸಿದ್ದ. ಜಗಲಿಯಲ್ಲಿ ತಮ್ಮದೇ ಕಂಪನಿಗಳನ್ನು, ಸ್ವಂತ ವೈಯಕ್ತಿಕ ಕಛೇರಿಗಳನ್ನು ಹೊಂದಿದ್ದ ಕೆಲವು ಸದಸ್ಯರೂ ಇದ್ದಿದ್ದರಿಂದ, ವಾರದ ಕೊನೆಯ ರಜಾ ದಿನಗಳಲ್ಲಿ ಅಂತಹ ಸ್ಥಳಗಳಲ್ಲಿಯೇ ಸಭೆ ಸೇರುತ್ತಿತ್ತು. ಅದರ ಕಾರ್ಯಕ್ರಮ ನಿರ್ವಹಣಾ ಸಮಿತಿಯಲ್ಲಿ ಅವನೂ ಒಬ್ಬ.