ನಿನಗಾಗಿ ನಾನು ನನಗಾಗಿ ನೀನು

ನಿನಗಾಗಿ ನಾನು ನನಗಾಗಿ ನೀನು

ಬರಹ

“ಹೂವಂತೆ ನಿನ್ನ ಸೊಗಸು,
ಹಾಲಂತೆ ನಿನ್ನ ಮನಸು
ನನ್ನ ಪ್ರೀತಿಯ ಸೆಲೆಯಾಗಿ
ಬಂದೆ ನೀ ಕಂದನೆ
ಕಷ್ಟವೇನೇ ಬರಲಿ ನಾನದನುಂಡು
ಸುಖವ ನಿನಗೆ ನೀಡುವೆ
ನನ್ನ ಪುಟ್ಟ ಚಾಮನೆ”
“ಇಂದು ನೀನೆನ್ನ ಸಲಹುತಿಹೆ,
ಸುಖದ ಸುಪತ್ತಿಗೆ ಎನಗೆ ಹಾಸಿಹೆ
ನಾಳೆ ನನ್ನ ಸರದಿ - ಎನ್ನ
ಕಣ್ಣೊಳಿಟ್ಟು ನಿನ್ನ ಕಾಯ್ವೆ ನಾನು
ಚಿಂತೆ ಬಿಟ್ಟು ಎನ್ನೊಡನಾಡೆ ನೀನು
ನೆನ್ನೆ ಇಂದು ನಾಳೆ ಎಲ್ಲಾ ನಮ್ಮದೇ
ಸುಖದ ಬಾಳೇ ಮುಂದಿದೆ
ನಾನು ನೀನು ಒಂದುಗೂಡಿ ಜಗವ ಗೆಲ್ಲುವಾ.”