ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾಜ್ಯ ಮಟ್ಟದ ಚಾರಣ 2008 - ಉಡುಪಿ ಯೂತ್ ಹಾಸ್ಟೆಲ್

ಉಡುಪಿ ಯೂತ್ ಹಾಸ್ಟೆಲ್ 2008 ನವೆಂಬರ್ 13, 14, 15, ಮತ್ತು 16ರಂದು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದೆ.

ಚಾರಣ ಹಾದಿಯ ವಿವರಗಳು ಈ ಕೆಳಗಿನಂತಿವೆ.

ರಾಜ್ಯ ಮಟ್ಟದ ಚಾರಣ 2008 - ಉಡುಪಿ ಯೂತ್ ಹಾಸ್ಟೆಲ್

ಉಡುಪಿ ಯೂತ್ ಹಾಸ್ಟೆಲ್ 2008 ನವೆಂಬರ್ 13, 14, 15, ಮತ್ತು 16ರಂದು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದೆ.

ಚಾರಣ ಹಾದಿಯ ವಿವರಗಳು ಈ ಕೆಳಗಿನಂತಿವೆ.

ಮತ್ತದೇ ಬೇಸರ...ಅದೇ ಸಂಜೆ...

ಆಕೆಯ ನೆನಪು ಇನ್ನು ಮಾಸಿಲ್ಲ. ಮರಳಲಾರದ ಶಿಲ್ಪ ಮರೆಯಾಗಿಲ್ಲ. ಆಗಲೇ ಮತ್ತೊಂದು ನೋವು. ಮತ್ತದೇ ಬೇಸರ. ಮತ್ತದೇ ಸಂಜೆ. ಮತ್ತದೇ ಏಕಾಂತ. ಅದೇಕೋ, ದೂರದ ಹತ್ತಿರದವರು, ದೂರವಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೇ ರಜೆ ಹಾಕಿ, ಊರಿಗೆ ಹೋಗಿದ್ದೆ. ದಸರೆ ಹೆಸರಿನಲ್ಲಿ ವಿಶ್ವಕ್ಕೊಂದು ವೇದಿಕೆ ನೀಡಿದ್ದ ‘ಮೈ’ಸೂರು ಇನ್ನು ತನ್ನ ವೈಭವದಿಂದ ಹೊರಬಂದಿರಲಿಲ್ಲ.

ಪಿತೃ ವಾತ್ಸಲ್ಯ

ನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮುಗಿಲೆದ್ದು, ವಿವಿಧಾಕೃತಿಯನ್ನು ತಳೆದು, ಬಣ್ಣ ಬಳಿದುಕೊಂಡ ಆಗಸ ಆಕರ್ಷಕವಾಗಿ ಕಾಣಿಸತೊಡಗಿತು. ಮಧ್ಯಾಹ್ನದಿಂದ ಒಂದೇ ಸಮನೆ ಓದುತ್ತಿದ್ದ ನನಗೆ, ಮನದ ವಿಶ್ರಾಂತಿಗಾಗಿ ಬದಲಾವಣೆಯ ಅಗತ್ಯ ತೋರಿದ್ದರಿಂದ, ಅಮ್ಮನಿಗೆ ತಿಳಿಸಿ, ನನ್ನ ಸೈಕಲ್ ಏರಿ, ಮನೆಯಿಂದ ೧ ಕಿ.ಮೀ. ದೂರವಿರುವ ಕಡಲಿನ ಕಡೆಗೆ ತೆರಳಿದೆನು. ಹೊರಡುವಾಗ ಸೂರ್ಯ ಮುಳುಗಿದ ಕೆಲವು ಗಳಿಗೆಯಲ್ಲಿ ಮನೆ ಸೇರುತ್ತೇನೆ ಎಂದೂ, ನೀರಿಗಿಳಿಯುವುದಿಲ್ಲ ಎಂದು ಮನೆಯವರಿಗೆ ಭರವಸೆಯಿತ್ತು ಬಂದಿದ್ದೆ.

ದಾರಿಯ ಇಕ್ಕೆಲಗಳಲ್ಲಿ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ, ತೆನೆ ತುಂಬಿ, ಸುಳಿದಾಡುವ ಗಾಳಿಗೆ ತೆಲೆದೂಗುವ ಭತ್ತದ ಗದ್ದೆ, ಮಧ್ಯದಲ್ಲಿ ಅಲ್ಲಲ್ಲಿ ಎತ್ತರವಾಗಿ ತಲೆಯೆತ್ತಿ ನಿಂತ ತಾಳೆ ಮರಗಳು, ಅದರ ಗರಿಗಳಿಗೆ ಜೋತು ಬಿದ್ದಂತೆ ಕಟ್ಟಿದ ಗೀಜಗನ ಗೂಡು, ದಾರಿಯಲ್ಲಿ ಕಡಲಿನ ಹಿನ್ನೀರಿಗೆ ಹಾಕಿದ ಪುಟ್ಟ ಸೇತುವೆ, ಅದರ ಮಗ್ಗುಲಲ್ಲಿರುವ ಮೀನಿನ ಕಾರ್ಖಾನೆ, ಮುಂದೆ ಸಿಗುವ ಹೊಯಿಗೆಯ ಬೆಟ್ಟು, ಅದರ ನೆತ್ತಿಯಲ್ಲೊಂದು ಬೊಬ್ಬರ್ಯನ ಗುಡಿ, ಸುತ್ತ ಗಾಳಿ ಮರ, ಪಕ್ಕದಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಆಡುತ್ತಿರುವ ಹುಡುಗರ ತಂಡ, ಚಿಕ್ಕ ಪುಟ್ಟ ಅಂಗಡಿಗಳು, ಮೀನು ಸಂರಕ್ಷಣೆಗಾಗಿ ತಯಾರಿಸುವ ಮಂಜುಗಡ್ಡೆ ಕಾರ್ಖಾನೆ, ಬಂಡೆಯಂತಹ ಮಂಜುಗಡ್ಡೆಯನ್ನು ದೊಡ್ಡ ದೊಡ್ಡ ಸುತ್ತಿಗೆಯಲ್ಲಿ ಪುಡಿ ಮಾಡಿ ಮೀನಿನ ಲಾರಿಯಲ್ಲಿ ತುಂಬಿಸುವ ಮೊಗವೀರರು, ಕಳ್ಳಿನಂಗಡಿ, ಪುಡಿ ಮೀನು ಮಾರುವ ಬೆಸ್ತರ ಹೆಂಗಸರು, ಅವರು ಬಿಸಾಕಬಹುದಾದಂತಹ ಹಾಳಾದ ಮೀನಿಗಾಗಿ ಆಸೆಯಿಂದ ನೋಡುತ್ತಿರುವ ನಾಯಿಗಳು, ಬೆಕ್ಕುಗಳು, ಆಗ್ಗೆ ಸುಮಾರು ೧೦ ವರ್ಷದಿಂದಲೂ ನೋಡುತ್ತಿರುವುದು ಇದೇ ಸನ್ನಿವೇಷದ ಪುನರಾವರ್ತೆನೆಯಾದರೂ, ಆ ದಾರಿಯಲ್ಲಿ ಸಾಗುವುದು ಇಂದಿಗೂ ಕೂಡ ನನಗೆ ಪ್ರಿಯವಾಗಿದೆ.

’ಅನ್ವೇಷಣೆ,’-ಹೀಗೊಂದು ಪದ್ಯವಿದೆ

೨೦೦೭ ರ, ಅಕ್ಟೋಬರ್, ೨೫ ರ, ಸುಧಾ, ವಾರ-ಪತ್ರಿಕೆಯಲ್ಲಿ.. ಈ ಪದ್ಯ ನನಗಿಷ್ಟವಾಯಿತು.

 

ಅಲಾರಾಂ ಸದ್ದಲ್ಲಿ ಬೆಳಗು ಕಾಣುತ್ತಾ.

 

ಬಿಸಿನೀರಿಗೆ ಒಲೆ ಒಟ್ಟುತ್ತಾ..

 

ಕಾಫಿಯನು ಫಿಲ್ಟರ್ ನಲ್ಲಿ ಹನಿಸುತ್ತ..

 

ಅಕ್ಕಿ ಬೇಯಿಸಿ, ಅನ್ನ ಬಸಿದು ಸಾಸಿವೆ ಸಿಡಿಸುತ್ತಾ.

 

ಮಕ್ಕಳ ಹೆಗಲಿಗೆ ಪಾಠಿ ಚೀಲ ಹಾಕುತ್ತಾ.

 

ಗಂಡನ ಬಗಲಿಗೆ ಬುತ್ತಿ ಗಂಟನ್ನು ಸಿಕ್ಕಿಸುತ್ತಾ.

 

ಬಸ್ಸಿನ ಬಾಗಿಲು -ಬೆವರು ತೊಗಲಿನೊಡನೆ ಗುದ್ದಾಡುತ್ತಾ

 

ಕಂಪ್ಯೂಟರ್ ಫ್ಯಾಕ್ಸ್ ಗಳಿಗೆ ಎಸ್ ಬಾಸ್ ಎನ್ನುತ್ತಾ.

 

ಕೀಲು ಬೊಂಬೆಯಂತೆ ತರಕಾರಿ ಕತ್ತರಿಸುತ್ತಾ...

 

ಹಾಟ್ಸ್ ಆಪ್ ಇಂಡಿಯಾ

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.

"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು

ಫೈಲ್ಸ್ ಗಳನ್ನು Attach ಮಾಡೋದು ಹೇಗೆ?

ಸಂಪದ ಸಮುದಾಯದ ಅಂತರ್ಜಾಲ ಪುಟಗಳಲ್ಲಿ ಫೈಲ್ಸ್ ಗಳನ್ನು Attach ಮಾಡೋದು ಹೇಗೆ?

ಯಾರಾದ್ರೂ ತಿಳಿಸಿ...

ನಂಗೆ ಗೊತ್ತಾಗ್ತಿಲ್ಲ...

ಈ ಹಾಡನ್ನು ಬರೆದವರು ಯಾರು?

ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು.

ಈ ಹಾಡನ್ನು ಬರೆದವರು ಯಾರು ಎಂಬುದು ಗೊತ್ತಿದ್ದರೆ, ದಯವಿಟ್ಟು ತಿಳಿಸಿರಿ.

ಕಣ್ಣಿಲ್ಲದಿದ್ದವರ ಬಗ್ಗೆ ಕಣ್ಣಾರೆ-ಕಂಡ ಕೆಲ ಸಂಗತಿಗಳು !

ನಾನು ಅಮೆರಿಕಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಆದೇಶದ ಅಂಗವಿಕಲರ ಬಗ್ಗೆ , ಆದೇಶದ ಜನ ತೋರಿಸುತ್ತಿದ್ದ ನೈಜ-ಕಳಕಳಿ, ಹಾಗೂಸಹಾಯ ಹಸ್ತವನ್ನು ಗಮನಿಸುತ್ತಾ ಬಂದಿದ್ದೇನೆ. ಅವೆಲ್ಲಾ ಕೇವಲ ತೋರಿಕೆಗಂತೂ ಇರಲಿಲ್ಲವೆಂಬ ನನ್ನ ಅಭಿಮತವನ್ನು ನನ್ನ ಗೆಳೆಯರೆಲ್ಲಾ ಮುಕ್ತವಾಗಿ ಅನುಮೋದಿಸಿದರು. ವಿಮಾನ ನಿಲ್ದಾಣಗಳಲ್ಲಿ, ರಸ್ತೆಗಳನ್ನು ದಾಟುವ ಸಮಯದಲ್ಲಿ, ರೈಲ್ವೆ ನಿಲ್ದಾಣದಲ್ಲಿ, ಬಸ್ ಹತ್ತುವ ವೇಳೆಯಲ್ಲಿ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ, ಕೊನೆಯಲ್ಲಿ ಒಂದು ಸಾರ್ವಜನಿಕ ಉದ್ಯಾನಕ್ಕೆ ಹೋದಾಗಕೂಡ ಅವೆಲ್ಲಾ ಫಕ್ಕನೆ ನಮ್ಮೆದುರಿಗೆ ನಡೆಯಿತು.

ಒಮ್ಮೆ, ನಾವೆಲ್ಲಾ ಪರಿವಾರ ಸಮೇತ ಹತ್ತಿರದ (ಶೆಲ್ಟರ್ ಇನ್ಷೂರೆನ್ಸ್ ಪಾರ್ಕ್), ಉದ್ಯಾನಕ್ಕೆ ಹೋದೆವು. ಅಲ್ಲಿ ಕೆಲವು ಅಂಧವ್ಯಕ್ತಿಗಳು ನೋಡಲುಬಂದಿದ್ದರು. "ಇವರೆಲ್ಲಾ ಹೇಗೆ ಈ ಸಸ್ಯರಾಶಿಗಳ ಸೌಂದರ್ಯವನ್ನು ಅನುಭವಿಸಬಲ್ಲರು" ? ಎಂದು ನಮಗೆ ಮೊದಲು ಅನ್ನಿಸಿತು. ಆಮೇಲೆ ಅವರೆಲ್ಲರಜೊತೆ ನಾವೂ ವಿಶೇಷ ಅನುಭವಗಳನ್ನು ಮೈಗೂಡಿಸಿಕೊಂಡು ಆನಂದಿಸಿದೆವು. "ಅಯ್ಯೋ ಅವರಿಗೆ ಕಣ್ಣೇಕಾಣಿಸಲ್ಲ ; ನಾವೇನು ಮಾಡಕ್ಕಾಗುತ್ತೆ " ಅಂತ, ಒಮ್ಮೆಲೇ ಮಾತನ್ನು ತಳ್ಳಿಹಾಕುವ ಸ್ವಭಾವ ನಮ್ಮದು. ಒಂದುವೇಳೆ ನಮ್ಮ ಮನೆಯಲ್ಲೇ ನಮ್ಮ ಅಣ್ಣ-ತಮ್ಮ, ಮಕ್ಕಳಿಗೇ ಈ ಅಂಧತ್ವ ಸೇರ್ಪಡೆಯಾಗಿದ್ದಾಗ ನಮಗೆ ಅದರ ಅನುಭವವಾಗುತ್ತಿತ್ತೇನೋ!