ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.

ಮಳೆ ಹನಿ

ಮಳೆ ಹನಿ

ತುಸು ಮಣ್ಣ ಬಿಸಿ ನೆಲಕೆ
ಬರಡಾದ ಬಡ ಮನಕೆ
ಕುದಿಯುತಿಹ ಇಳೆ ತಳಕೆ
ಪ್ರೀತಿ ಹೊನಲಿನ ದಡಕೆ
ಸಾಯುತಿಹ ಮರಿ ಮೊಳಕೆ
ಬಿಸಿಲ ಬೇಗೆಯ ಝಳಕೆ
ಎಲ್ಲರಲೂ ಬತ್ತಿಹುದು
ಮಳೆ ಹನಿಯ ಬಯಕೆ.

ಬಿಸಿಲ ರಶ್ಮಿಯ ಬಿಸಿಗೆ
ಹಸಿರು ಚಿಗುರಿದ ಎಲೆಗೆ
ಅಡಗಲಾಗದು ಹೊರಗೆ
ತವಿಸಲಾಗದು ಬೇಗೆ
ಕುಸಿದ ಕನಸಿನ ಕೆಳಗೆ
ದೂರ ಮನಗಳ ಬೆಸುಗೆ
ಕೊನೆಯುಸಿರು ಕಾಯುವುದೆ

ನ್ಯಾನೊ ಗೆ ಧಾರವಾಡ ಬೇಡವಾಯ್ತು

ಕರ್ನಾಟಕಕ್ಕೆ ಸಿಗಬಹುದಾರ ೨,೦೦೦ ಕೋಟಿ ರೂಪಾಯಿಗಳ ಬ೦ಡವಾಳ ಮತ್ತು ಸುಮಾರು ೧೦,೦೦೦ ಕುಟು೦ಬಗಳಿಗೆ ಸಿಗಬಹುದಾದ ಉದ್ಯೋಗಾವಕಾಶ ಎಲ್ಲವೂ ಇ೦ದು ಸ೦ಜೆ ನಮ್ಮ ಕೈತಪ್ಪಿ ಹೋಯಿತು. ನ್ಯಾನೋ ಉದ್ದಿಮೆಯು ಕೊನೆಗೂ ಗುಜರಾತಿನ ಅಹಮದಾಬಾದಿನಿ೦ದ ೩೦ ಕಿ.ಮಿ. ದೂರದಲ್ಲಿರುವ ಸನ೦ದ್ ನಗರಿಯ ಪಾಲಾಯಿತು.

ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು

 ಹಳೆಯ ಡಾಸ್ ಗೇಮ್ ಗಳನ್ನ ನೆನೆಸಿಕೊಳ್ತಿದ್ದೀರಾ? ಅವನ್ನ ಈಗಲೂ ನಿಮ್ಮ ಕಂಪ್ಯೂಟರ್ನಲ್ಲಿ ಉಪಯೋಗಿಸ ಬಹುದು. ಹ್ಯಾಗೆ ಅಂತೀರಾ? ಇಲ್ಲಿದೆ ನೋಡಿ "ಡಾಸ್ ಬಾಕ್ಸ್".

ಇಂಟರನೆಟ್ ಎಕ್ಸಪ್ಲೊರರ್ ೬ ರೇ ಗ್ರೇಟು!

ನನಗಂತೂ ಈ ಇಂಟರ್ನೆಟ್ ನ ಹೊಸ ಆವೃತ್ತಿಗಳ ಮೇಲೆ ಭರವಸೆಯೇ ಇಲ್ಲ! ಮುಖ್ಯವಾಗಿ ಇತ್ತೀಚಿನ ಆವೃತ್ತಿಗಳಲ್ಲಿ ಏಕರೂಪತೆಯೇ ಇಲ್ಲ. ಉದಾ ಗೂಗಲ್ ಕ್ರೋಮ್ ನಲ್ಲಿ ವೆಬ್-ಸೈಟ್ ನ ರೂಪ ಒಂದು ರೀತಿ ಇದ್ರೆ ಇಂಟರನೆಟ್ ಎಕ್ಪ್ಲೊರರ್ ೮ ರಲ್ಲಿ ಅದರ ರೂಪ ಹಾಗು ಆಕಾರ ಬೇರೆನೇ ಇರುತ್ತೆ. ಎನಂತಿರಾ? ನಿಮ್ಮಲ್ಲಿ ಇದಕ್ಕೆ ಪರಿಹಾರ ಇದೆಯೇ?

ಸ್ವಲ್ಪ ನಗಿ

ಗುಂಡ ಪರೀಕ್ಷೆ ಬರಿಯೋದಕ್ಕೆ ಕಾಲೇಜಿಗೆ ಬಂದ, ಬೆಂಕಿ ಆಕಸ್ಮಿಕ ಸಂಭವಿಸಿ ಪ್ರಶ್ನೆಪತ್ರಿಕೆಗಳಿದ್ದ ಕೊಠಡಿ ಸುಟ್ಟು ಸಂಪೂರ್ಣ ಭಸ್ಮವಾಯಿತು. ಏನು ಮಾಡುವುದೆಂದು ಪ್ರಿನ್ಸಿಪಾಲ್, ಲೇಚ್ರರ್ಸ್ ಗಳು ಮಾತನಾಡುತ್ತಿದ್ದರು, ಗುಂಡ ಅವರ ಹತ್ತಿರ ಬಂದ.

ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ

"ಅಮ್ಮ ಆರ್ ವಿ ದೇರ್ ಯೆಟ್?"
ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು.
"ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ"
"ಓ..ಇನ್ನು ಒನ್ ಅವರ್ರಾ..ಸೋ ಬೋರಿಂಗ್"
ಆದಿಯ ಕುಯ್ಯೊಮರ್ರೊ ಕೇಳಿ ಹಿಂದಿನ ಸೀಟಲ್ಲಿ ಕುಳಿತಿದ್ದ ಗೌರಜ್ಜಿ ಎರಡು ಸೀಟುಗಳ ಸಂದಿಯಲ್ಲಿ ಮೂಗು ತೂರಿಸಿ
"ಹುಚ್ಚ ಮುರುವ ಹುರಳೀ ಬಿತ್ದ ಹೊತ್ತಿಗ್ ಮೂರ್ಸಲ ಕಿತ್ ಕಿತ್ ನೋಡ್ದ ಅನ್ನೊ ಹಾಗೆ ಘಳಿಗ್ ಘಳಿಗೆಗೂ ಊರು ಬಂತಾ ಬಂತಾ ಅಂದ್ರೆ ಬಂದ್ಬುಡತ್ತೇನೋ? ಸಮಾಧಾನವಾಗಿ ಕೂತ್ಕೊಬೇಕಪ್ಪ. ಲೇ ಅನು ನಿನಗಿರೊ ವ್ಯವಧಾನ ನಿನ್ನ ಮಗನಿಗೆ ಬರಲಿಲ್ಲ ಬಿಡು. ಎಲ್ಲಾ ಪ್ರಶಾಂತಂದೇ ಪಡಿಯಚ್ಚು" ಎಂದರು.
"ಕಿರೀಕು ಕಣೆ ನಿಮ್ಮಜ್ಜಿ. ಚಾನ್ಸ್ ಸಿಕ್ತು ಅಂದ್ರೆ ಸಾಕು ನಂಗೇ ಬತ್ತಿ ಇಡಕ್ಕೆ ನೋಡ್ತಿರತ್ತೆ. ಮಾಲಿ ಮದ್ವೇಗ್ಬೇರೆ ಕರ್ಕೊಂಡು ಹೋಗ್ತಾ ಇದೀವಿ. ಏನೇನೋ ಮಾತಾಡಿ ಆಭಾಸ ಮಾಡ್ದೇ ಇರೋ ಹಾಗೆ ನೀನೆ ಸ್ವಲ್ಪ ಕಂಟ್ರೊಲ್ ಮಾಡ್ಬೇಕು.ಬಾಲ ಅಂಕಲ್ ಬೇರೆ ಒಂಥರಾ" ಪ್ರಶಾಂತ ಪಿಸುಗುಟ್ಟಿದ.
ಗೌರಜ್ಜಿಯ ಬಾಯಿಗೆ ಬೀಗ ಹಾಕುವಂತಹ ಯಾವುದೇ ಪೊಳ್ಳು ಪ್ರಾಮಿಸ್ ಮಾಡಲು ಹೆದರಿ "ಸೋಚನಾ ಕ್ಯಾ ಜೋಭಿ ಹೋಗ ದೇಖಾ ಜಾಯೇಗ" ಹಾಡೊಂದನ್ನು ಗುನುಗಿ ಅವನ ಕೈ ಅಮುಕಿದೆ. ಯಾಕೋ ತಣ್ಣಗೆ ಕೊರೆಯುತ್ತಿತ್ತು.ಆಜ್ಜಿ ಆಡೋ ಗಾದೆಗಳನ್ನೋ ಅಥವಾ ತೆಗೆದ ತಗಾದೆಗಳನ್ನು ನೆನೆಸ್ಕೊತಾ ಇದ್ನೋ ಏನೊ! ಮಗಳು ಆದ್ಯ ಮಾತ್ರ ಬೆಚ್ಚಗೆ ಅವನೆದೆಗೊರಗಿ ನಿದ್ದೆ ಹೋಗಿದ್ದಳು.

ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?

ಬೆಂಗಳೂರು ದೂರದರ್ಶನದ ಹೊಸತರಲ್ಲಿ ಪರಿಸರದ ಬಗ್ಗೆ, ಪರಿಸರ ಮಾಲಿನ್ಯ ತಡೆಯೋದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋವಂತಹ ಕೆಲವು ಹಾಡುಗಳನ್ನ ಪ್ರಸಾರ ಮಾಡುತ್ತಿದ್ದರು.ಅದರಲ್ಲಿ ಈ ಕೆಳಗಿನದ್ದೂ ಒಂದು..

"ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ...

ಗೋಕಾಕ ಮಾದರಿಯ ಚಳುವಳಿ ಎಂದರೇನು?

ನಾನು ತುಂಬಾಸರ್ತಿ ಕೇಳಿರೋಪದ "ಗೋಕಾಕ ಮಾದರಿಯ ಚಳುವಳಿ" ಏನು ಈ ಚಳುವಳಿ.. ಏನಿದರ ವಿಶೇಷತೆ?
ಇವತ್ತು ಸಂಪದದಲ್ಲೇ ಒಬ್ಬರು ಈ ಪದವನ್ನ ಪ್ರಯೋಗಿಸಿದ್ದಾರೆ..
http://sampada.net/article/12332#comment-31461

----------
ವಿನಾಯಕ