ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು

ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು

 ಹಳೆಯ ಡಾಸ್ ಗೇಮ್ ಗಳನ್ನ ನೆನೆಸಿಕೊಳ್ತಿದ್ದೀರಾ? ಅವನ್ನ ಈಗಲೂ ನಿಮ್ಮ ಕಂಪ್ಯೂಟರ್ನಲ್ಲಿ ಉಪಯೋಗಿಸ ಬಹುದು. ಹ್ಯಾಗೆ ಅಂತೀರಾ? ಇಲ್ಲಿದೆ ನೋಡಿ "ಡಾಸ್ ಬಾಕ್ಸ್".

 MS-Dos
ಅಪ್ಲಿಕೇಷನ್ಗಳು ಮತ್ತು ಗೇಮ್ಸ್ ಗಳನ್ನ, ಸೌಂಡ್, ಗ್ರಾಫಿಕ್ಸ್, ನೆಟ್ವರ್ಕಿಂಗ್
ಮುಂತಾದವುಗಳನ್ನೊಳಗೊಂಡ ಕಂಪ್ಯಾಟಿಬಲ್ ಎನ್ವಿರಾನ್ಮೆಂಟ್ (compatible environment)
ಅಂದ್ರೆ ಆ ಒಂದು ಪರಿಸರದಲ್ಲಿ ಮಾತ್ರ ಕೆಲಸ ಮಾಡ್ತವೆ. ಆದ್ರೆ ಇಂದಿನ ವಿಂಡೋಸ್ ಕೂಡ
ಹಳೆಯ ಡಾಸ್ ಗೇಮ್ ಗಳಿಗೆ ಯೋಗ್ಯವಲ್ಲ.

ಈ ಒಂದು ಸಮಸ್ಯೆಯನ್ನ
ಬಗೆಹರಿಸಲಿಕ್ಕೆಂದೇ ಹುಟ್ಟಿದ್ದು ಡಾಸ್ ಬಾಕ್ಸ್(Dosbox) ಅನ್ನೋ ಸ್ವತಂತ್ರ
ತಂತ್ರಾಂಶ.  ವಿಂಡೋಸ್ ಜೊತೆಗೆ ಲಿನಕ್ಸ್ ನಲ್ಲಿ ಕೂಡ ಇಂತಹ ಗೇಮ್ ಗಳನ್ನ ಆಡಲಿಕ್ಕೆ
ಇಂದು ಸಾಧ್ಯವಾಗಿರೋದು ಇದರಿಂದಲೇ.

ನೀವು ಉಬುಂಟು ಉಪಯೋಗಿಸ್ತಿದೀರಾ? ಹಾಗಿದ್ರೆ ಡಾಸ್ಬಾಕ್ಸ್ ಇನ್ಟಾಲ್ ಮಾಡಿಕೊಳ್ಲಿಕ್ಕೆ ಮಾಡ್ಬೇಕಾಗಿದ್ದು ಇಷ್ಟೇ.

sudo aptitude install dosbox

 ಅನ್ನೋ
ಕಮ್ಯಾಂಡನ್ನ  ನಿಮ್ಮ ಲಿನಕ್ಸ್ ನ ಕನ್ಸೋಲಿನಲ್ಲಿ ಟೈಪಿಸಿ "ಎಂಟರ್" ಬಟನ್ ಪ್ರೆಸ್
ಮಾಡಿದರಾಯಿತು. ಇಲ್ಲಾಂದ್ರೆ, ಹಿಂದಿನ ಲೇಖನಗಳಲ್ಲಿ ಹೇಳಿದ ಸಿನ್ಯಾಪ್ಟೆಕ್ ಬಳಸಿ ಡಾಸ್
ಬಾಕ್ಸ್ ಇನ್ಸ್ಟಾಲ್ ಮಾಡಿಕೊಳ್ಳ ಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿದೆ

ಇದುವರೆಗೂ ೧೦ ಮಿಲಿಯನ್ಗೂ ಹೆಚ್ಚು ಜನ ಇದನ್ನ ಇನ್ಸ್ಟಾಲ್ ಮಾಡಿಕೊಂಡು ಉಪಯೋಗಿಸಿದ್ದಾರೆ. ನೀವೂ ಟ್ರೈ ಮಾಡ್ತೀರಲ್ಲ?

Rating
No votes yet