ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

ಇವತ್ತು ನವರಾತ್ರಿಯ ಏಳನೇ ದಿನ. ಮತ್ತೆ ಇವತ್ತೇ ಹೆಚ್ಚು ಜನರ ಮನೆಯಲ್ಲಿ ಸರಸ್ವತೀ ಪೂಜೆ ಕೂಡ. ಕೆಲವರು ಮಹಾನವಮಿಯ ಆಯುಧಪೂಜೆಯ ದಿನ ಸರಸ್ವತೀ ಪೂಜೆ ಮಾಡುವುದೂ ಉಂಟು.ಸರಸ್ವತಿ ಎಂದರೆ ನನಗೆ ನೆನಪಾಗುವುದು ಶೃಂಗೇರಿಯ ಶಾರದೆ. ಅದೆಂತಹ ಪ್ರಶಾಂತ ಸ್ಥಳ? ಅಲ್ಲಿ ದಸರೆಯ ಸಮಯದಲ್ಲಿ ನಡೆಯುವುವ ಪೂಜೆಗಳೂ ಹೆಚ್ಚಾಯದ್ದೇ. ಮಳಗಾಲ ಮುಗಿಯುತ್ತ ಬಂದಿರುವುದರಿಂದ ತಿಳಿಯಾಗಿ ಹರಿಯುವ ತುಂಗೆ. ಅದಕ್ಕೇ ಇರಬೇಕು ಶೃಂಗೇರಿಯ ಶಾರದೆಯ ಮೇಲಿರುವ ಸಂಗೀತ ರಚನೆಗಳಿಗೂ ಕೊರತೆ ಇಲ್ಲ.

ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಕನ್ನಡಕ್ಕೆ(ಭಾವಾನುವಾದದಲ್ಲಿ) ತಂದಿರುವೆ. ಓದಿ, ನಂತರ ಹಾಡು ಕೇಳಬಹುದು. ಅಲ್ಲವೇ?

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸೂಚಿ

ಆಕ್ವಗಾರ್ಡ್ ಮುಂದೆ ನಿಂತುಕೊಳ್ಳಿ, ವಿದ್ಯುತ್ ಹರಿಸುವ ಗುಂಡಿಯೊತ್ತಿ. ಕೆಂಪು ದೀಪ ಹತ್ತುತ್ತದೆ.ನಿಲ್ಲಿ ಎನ್ನುವ ಸೂಚನೆ! ಕಾಯುತ್ತಿರಿ, ಹಳದಿ ದೀಪಕ್ಕೆ ಬದಲಾಗುತ್ತದೆ. ಇನ್ನೇನು ನಿಮ್ಮ ದಾರಿ ಸುಗಮ ಎನ್ನುತ್ತದೆ. ಮತ್ತೆ ಕೆಲವು ಕ್ಷಣಗಳಲ್ಲಿ ಹಸಿರು ದೀಪ ಮತ್ತು ಶುದ್ಧ (!)ನೀರು ಬರುತ್ತದೆ. ನೀರು ಹಿಡಿಯಲು ಆರಂಭಿಸಿರಿ. ಇದರ ಚಲನ ಚಿತ್ರ ಇಲ್ಲಿ ನೋದಿ

ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

ಮೊನ್ನೆ ಅಂದರೆ 24ನೇ ತಾರೀಖು ಸಾಗರಕ್ಕೆ ಬೇಟಿ ನೀಡಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ನಲ್ಲಿ ಹೊರಟೆ ರೈಲು ಬೆಳಿಗ್ಗೆ 5:30ಗೆ ಹೋಗಬೇಕಾದದ್ದು 2 ಗಂಟೆ ತಡವಾಗಿ ಹೋಯಿತು, ಶಿವಮೊಗ್ಗ ಹತ್ತಿರ ಹೋಗುತ್ತಿದ್ದಾಗೆ ಜಿಟೆ ಜಿಟೆ ಮಳೆ ಬೀಳುತ್ತಿತ್ತು ಆ ಮಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅದರ ಮಜಾನೆ ಬೇರೆ.

೧೦೦ ವರ್ಷಗಳಿ೦ದ ಟಾಟಾ

೧೦೦ ವರ್ಷಗಳು ಕಳೆದರೂ ಕೂಡ ಇನ್ನೂ ನಾವು ಐ.ಐ.ಎಸ್.ಸಿ ಯನ್ನು ಟಾಟಾ ಇನ್ಸ್ಟಿಟ್ಯೂಟ್ ಎ೦ದೇ ಕರೆಯುತ್ತೇವೆ. ಧಾರವಾಡದಲ್ಲಿ ಆಗಲೇ ೬೦೦ ಎಕರೆ ಜಾಗವನ್ನು ಹೊ೦ದಿರುವ ಟಾಟಾರವರಿಗೆ, ಹೋದ ವರ್ಷ ಇನ್ನೂ ೩೦೦ ಎಕರೆ ಜಾಗವನ್ನು ಸರ್ಕಾರ ನೇಮಿಸಿದೆ. ಈ ಜಾಗದಲ್ಲಿ ಬಹುಬೆಲೆಯ ಬಸ್ ನಿರ್ಮಾಣಕ್ಕೆ ಟಾಟಾರವರು ಬ್ರೆಜಿಲ್ ನ ಮಾರ್ಕೊಪೋಲೋ ಕ೦ಪನಿಯ ಜೊತೆ ಒಡ೦ಬಡಿಕೆ ಮಾಡಿಕೊ೦ಡಿದೆ.

‘ಧರಣಿ’ - ಕವನ

ಧರಣಿ

ಉದ್ಯಾನವನದ ಕೊನೆಯಲ್ಲಿ
ಶುರುವಾಗಿತ್ತೊಂದು ಧರಣಿ
ಸರಕಾರವನು ಖಂಡಿಸಿ,
ಅವರವರ ಕಷ್ಟಗಳ ಬಣ್ಣಿಸಿ
ಹಸ್ತಾಕ್ಷರಗಳ ಸಂಗ್ರಹಿಸಿ,
ಆರಂಭದ ಮೊದಲೇ
ಕೊನೆ ಕಂಡಿತಲ್ಲಿ
ಬಹು ಜನರ ಕನಸು ಧರಣಿ.

ಬಾವುಟಗಳ ಹಿಡಿದು
ಧರಣಿಕರ್ತರೆಲ್ಲರೂ ಅಣಿ,
ಗುಡುಗು ಸಿಡಿಲಿನ
ಚುರುಕು ಮಾತಿನ ದನಿ,
ಜೊತೆ ನೀಡುವಂತೆ
ತುಂತುರು ಮಳೆಹನಿ.

ಸಂಪದ ಒಂದು ಮೈಲಿಗಲ್ಲನ್ನು ದಾಟಲಿದೆ!

ಕ್ರಿಕೆಟಿನಲ್ಲಿ ಸಾವಿರ,ನೂರು ಇವನ್ನೆಲ್ಲಾ ಒಂದು ಮೈಲಿಗಲ್ಲು ಅಂತ ತೆಗೆದುಕೊಂಡು ಅದನ್ನು ದಾಟುವ ಕ್ಷಣದ ಪ್ರತೀಕ್ಷೆಯಲ್ಲಿ ಆಟ ಸಾಗುತ್ತದೆ.

ಆ ರೀತಿ ನೋಡಿದರೆ ಸಂಪದವೂ ಒಂದು ಮೈಲಿಗಲ್ಲಿನ ಸಮೀಪ ಇದೆ. ಅದನ್ನು ಯಾವಾಗ ದಾಟುತ್ತದೋ ಎಂಬ ಕ್ಷಣಗಣನೆ ಆರಂಭಿಸಬಹುದು.

ಹುಡುಕಾಟ

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆಲ್ಲಾ ಕರಗಿ ನೀರಾದವನು,