ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.

ಅವರು "ಮಹಾತ್ಮ"

ಓದುತ್ತಾ ಹೋದಂತೆ ಅಬ್ಬಾ... "ನನ್ನ ಸತ್ಯಾನ್ವೇಷಣೆ" ಪುಸ್ತಕ ಓದಿ ನನಗಾದ ಅನುಭವ ಇದು. ನಿಜಕ್ಕೂ ಅಸಮಾನ್ಯ ವ್ಯಕ್ತಿ ಅವರು. ವ್ಯಕ್ತಿಯೊಬ್ಬ ಬೆಳೆದ ಬಗೆಯನ್ನು ತಿಳಿಯಬೇಕೆಂದರೆ ಗಾಂಧೀಜಿಯವರ ಆತ್ಮಕತೆ ಓದಬೇಕು.

ಗಾಂಧೀಜಿಯವರು ಬಾಲ್ಯದಿಂದಲೂ ಅವರ ಕಡೆಯ ದಿನದವರೆಗೆ ಅನೇಕ ಏಕವ್ಯಕ್ತಿ ಕೆಲವೊಮ್ಮೆ ಸಾಂಘಿಕ ಪ್ರಯತ್ನಗಳನ್ನು ಮಾಡುತ್ತಲೇ ಬದುಕಿದವರು. ಶಾಕಾಹಾರಿಗಳಾಗಿ, ಪರಮ ದೈವಭಕ್ತರಾಗಿ, ಸಸ್ಯಹಾರಿ, ಆಯುರ್ವೇದ ಚಿಕಿತ್ಸೆ ಬಳಸುತ್ತಾ, ವಿದೇಶಗಳಲ್ಲೂ ತಮ್ಮ ಶ್ರಮ ಸಂಕಲ್ಪವನ್ನು ಓರೆಗೆ ಹಚ್ಚಿದವರು. ತಮ್ಮ ಮಗ "ಮಣಿಪಾಲ"ನ ಮೇಲೆ ನೀರಿನ ಪ್ರಯೋಗ ಹಾಗೂ ಸ್ವತಃ ತಾವೇ ಮಣ್ಣಿನ ಚಿಕಿತ್ಸೆಗೆ ಒಳಗಾಗಿದ್ದರು. ಹೀಗೆ ಅನೇಕ ವಿಚಾರಗಳನ್ನು ಪ್ರಯೋಗಾತ್ಮಕವಾಗಿ ಅನುಭವಿಸಿದ್ದರಿಂದಲೇ ಅವರ ಘನತೆ ಮತ್ತು ಮೌಲ್ಯಗಳು ಹೆಚ್ಚಿದ್ದನ್ನು ಕಾಣಬಹುದು.

ಹಡಗಿನ ನಾವಿಕನ ಮಾತಿಗೆ ಮರುಳಾಗಿ ವೇಶ್ಯಾಗೃಹದ ಬಳಿ ತೆರಳಿ ಬಳಿಕ ಧಿಕ್ಕರಿಸಿದ್ದು. ತಾಯಿಗೆ ಕೊಟ್ಟಿದ್ದ ವಚನವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪತ್ನಿ ಕಸ್ತೂರಿ ಬಾರವರ ಬಳಿ ಬ್ರಹ್ಮಚರ್ಯ ಪಾಲಿಸಿದ್ದು, ಟ್ರಾನ್ಸವಾಲ್ ಮತ್ತು ಜೋಹಾನ್ಸ್ಬರ್ಗ್‌‌ನಲ್ಲಿ ಭಾರತದ ಕೂಲಿ ಅಳುಗಳ ಪರವಾಗಿ ಹೋರಾಡಿ ಜಯಶೀಲರಾಗಿದ್ದು. ಇಂತಹ ಅನೇಕ ಹೋರಾಟದಿಂದ ಗಾಂಧೀಜಿಯವರು ಇತರರಿಗೆ ಮಾದರಿಯಾಗುತ್ತಾರೆ.

ನಾ ಹೇಗೆ ಹೇಳಲಿ.....

ನಿನ್ನುಸಿರು ನನ್ನುಸಿರಿಗೆ ತಾಕುವುದ ತಡೆಯಲಾಗದೆ
ಕೋಪಿಸಿಕೊಳ್ಳುವ ನಿನ್ನ ಮೂಗುಬಳೆಗೆ,
ನಾ ಹೇಗೆ ಹೇಳಲಿ.....
ಆ ಉಸಿರು ನನದೆಂದು.....

ನಿನ್ನ ಬೆವರ ಹನಿಗಳು, ನೀ ಮುಡಿದ ಮಲ್ಲಿಗೆಯನು ತೋಯಿಸಿದಾಗೆದ್ದ
ಘಮವನ್ನೆತ್ತಿ, ತಪ್ಪಿಸಿಕೊಳ್ಳಲಾಗದೆ-ನನ್ನೆಡೆಗೇ ತೇಲಿ ಬರುವ ಆ ಗಾಳಿಗೆ,
ನಾ ಹೇಗೆ ಹೇಳಲಿ.....
ಆ ಘಮವು ನನದೆಂದು.....

ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

’ಸರಕಾರದ ವತಿಯಿಂದಲೇ ನವಂಬರ ಹದಿನೈದರಂದು ಕನಕ ದಾಸರ ಜಯಂತಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

ವಿಜಯನಗರ, ನಾಗರಭಾವಿ ಬಳಿ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು

ಬೆಂಗಳೂರಿನಲ್ಲಿ ವಿಜಯನಗರ, ನಾಗರಭಾವಿಗೆ ಹತ್ತಿರವಿರುವಂತೆ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು ಯಾರಾದರೂ ನಿಮಗೆ ಪರಿಚಯವಿದ್ದರೆ contact ಕಳುಹಿಸುತ್ತೀರಾ?

ವಂದನೆಗಳು,

ಇನ್ನೊಂದು ಜೋಗಿಕತೆ

ಹಿಂದೊಮ್ಮೆ ಚಮತ್ಕಾರಿಕ ಜೋಗಿಕತೆಯೊಂದನ್ನು ಹೇಳಿದ್ದೆ ( ಮರೆತಿದ್ದರೆ / ನೋಡಿಲ್ಲದಿದ್ದರೆ ಈಗ ನೋಡಿ ( http://sampada.net/blog/shreekantmishrikoti/23/01/2008/7163 ) ವಾಪಸ್ ಬನ್ನಿ )

ಜೀವನಕಲೆ

ಕರ್ಣಾಟಕದ ಕಲೆ ಎಂಬ ಲೇಖನದಲ್ಲಿ ಮಾಸ್ತಿಯವರು ಹೀಗೆ ಬರೆದಿದ್ದಾರೆ

ಬಹುಕಾಲ ಬದುಕಬೇಕು. ತುಂಬ ಸುಖಪಡಬೇಕು. ಜೊತೆಯ ಜೀವನಗಳನ್ನು ಆದಷ್ಟು ಸುಖ ಪಡಿಸಬೇಕು ಎನ್ನುವುದು ಜೀವನದ ಆಳದಲ್ಲಿರುವ ಆಸೆ , ಹಂಬಲಿಕೆ ; ಮನುಷ್ಯನ ಇತಿಹಾಸವೆಲ್ಲ ಇದರಿಂದ ಬೆಳೆದಿದೆ.

ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ.

ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು. ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು.