ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?

ಬರಹ

’ಸರಕಾರದ ವತಿಯಿಂದಲೇ ನವಂಬರ ಹದಿನೈದರಂದು ಕನಕ ದಾಸರ ಜಯಂತಿಯನ್ನು ವಿಧಾನಸೌಧದ ಮುಂಭಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಇದು ಓಕೆ. ಆದರೆ ನೌಕರರಿಗೆ ರಜೆ ಯಾಕೆ?
ಸಮಾಜದ ಒಂದು ವರ್ಗದ ಓಟನ್ನು ಕಸಿಯಲು ಆಡಳಿತದಾರರು ಕಂಡುಕೊಂಡ ಸುಲಭದ ಹಾದಿ ಈ ರಜೆ ಘೋಷಣೆ. ಸತ್ತಿದ್ದಕ್ಕೂ ರಜೆ, ಹುಟ್ಟಿದ್ದಕ್ಕೂ ರಜೆ. ತೆರಿಗೆ ದಾರರ ಹಣವನ್ನು ಈ ರೀತಿ ಅಪವ್ಯಯ ಮಾಡುವುದರ ಬದಲು ಬೇರೆ ಉತ್ತಮ ಮಾರ್ಗವನ್ನು ಆಡಳಿತದಾರರು ಏಕೆ ಯೋಚಿಸುವುದಿಲ್ಲ. ಕನಕದಾಸರ ಜಯಂತಿ ದಿವಸ ಖಾಸಗೀ ನೌಕರರು ದುಡಿಯುತ್ತಿರುವಾಗ. ಸರಕಾರಿ ನೌಕರರಿಗೆ ಪುಗಸಟ್ಟೇ ಸಂಬಳವನ್ನು ಕೊಟ್ಟು ಅವರನ್ನು ಮಜಾಮಾಡಲು ಬಿಡುವುದು ಸರಿಯೇ ಇದರ ಬದಲು ಕಛೇರಿಯಲ್ಲೇ ಒಂದರ್ಧಗಂಟೆ ಕನಕದಾಸರ ಬಗ್ಗೆ ಮಾತನಾಡುವುದು ಅವರ ಹಾಡುಗಳನ್ನು ಹಾಡುವುದು ಇತ್ಯಾದಿ ಜೀವಂತ ಕಾರ್ಯಕೃಮವನ್ನು ಹಮ್ಮಿಕೊಂಡರೆ ಓಟಿನ ಸಂಖ್ಯೆ ಕಡಿಮೆ ಆದೀತೆ? ಕನಕದಾಸರ ಹಾಡುಗಳ ಸಿ ಡಿ ಯನ್ನು ನಾಗರಿಕರಿಗೆ ಹಂಚಿದರೆ ಕನಕದಾಸರಿಗೆ ಸರಕಾರ ಗೌರವ ನೀಡಿದಂತಾಗುವುದಿಲ್ಲವೇ?
ನಾನು ನಿವೃತ್ತ ಸರಕಾರಿ ಅಧಿಕಾರಿ. ರಜೆಗಳು ನನಗೆ ತಲೆನೋವಾಗುತ್ತಿತ್ತು. ರಜೆಯ ಹಾವಳಿಗಳಿಂದಾಗಿ ಕಛೇರಿಯ ಕೆಲಸವು ಕುಂಟಿತವಾಗುತ್ತಿದ್ದುದು ನನ್ನ ಅನುಭವ. ಸಾರ್ವಜನಿಕ ಗೋಳಿನಬಗ್ಗೆಯೂ ಸಾಕಷ್ಟು ಪುಕಾರುಗಳಿವೆ. ನಾನು ಆಗೆಲ್ಲಾ ಯೋಚಿಸುತ್ತಿದ್ದೆ, ಈ ದಿನ ಈ ಕಛೇರಿಗೆ ರಜೆ ಬೇಕಾಗಿತ್ತೇ? ಏಕೆಂದರೆ ಈ ದಿನ ನಮ್ಮ ಕಛೇರಿಯ ಯಾವೊಬ್ಬ ನೌಕರದಾರನಿಗೂ ಮನೆಯಲ್ಲಿ ಹಬ್ಬವಿರಲಿಲ್ಲ! ಹಾಗಾದರೆ ಈ ರಜೆ ಏಕೆ!!
ಸರಕಾರಿ ನೌಕರನಿಗೆ ತನ್ನ ವಯಕ್ತಿಕ ಕೆಲಸಕಾರ್ಯಗಳಿಗಾಗಿ ಸಾಕಷ್ಟು ವಯಕ್ತಿಕ ರಜೆಗಳು ಅವಶ್ಯವಿರುತ್ತವೆ. ಅದನ್ನು ಈಗಿನದಕ್ಕಿಂತ ಹೆಚ್ಚು ಮಾಡಲಿ. ಜೊತೆಗೆ ಎಲ್ಲಾ ಸಾರ್ವಜನಿಕ ರಜೆಗಳನ್ನು ರದ್ದು ಮಾಡಲಿ. ಯಾರು ಮನೆಯಲ್ಲಿ ಹಬ್ಬಮಾಡುತ್ತಾರೋ ಅಂದಿನ ದಿನ ಅವನೊಬ್ಬನಿಗೆ ಮಾತ್ರ ರಜೆಯು ಸೀಮಿತವಾಗಿರಲಿ. ಮನೆಯಲ್ಲಿ ಹಬ್ಬ ಇಲ್ಲದವನು ಕಛೇರಿ ಕೆಲಸ ಮಾಡಲಿ. ಕೃಷ್ಣಾಷ್ಟಮಿ ಅನಂತನ ಚತುರ್ದಶಿ ಇತ್ಯಾದಿಗಳನ್ನು ರಿಸ್ಟ್ರಿಕ್ಟೆಡ್ ಹಾಲಿಡೇಗಳನ್ನಾಗಿ ಘೋಷಿಸಿದಂತೆ ಎಲ್ಲಾ ಹಬ್ಬ ಹರಿದಿನ ಜಯಂತಿ ಪುಣ್ಯ ತಿಥಿಗಳನ್ನು ರಿಸ್ಟ್ರಿಕ್ಟೆಡ್ ಹಾಲಿಡೇ ಎಂದು ಘೋಷಿಸಬೇಕು. ಹಾಗೂ ಅಂದಿನದಿನ ಕಛೇರಿಯಲ್ಲಿ ಆ ಮಹಾತ್ಮರ ಗುಣಗಾನ ಮಾಡುವ ಕಾರ್‍ಯಕೃಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು.
ಮಹಾಲಯ ಅಮವಾಸೆ/ ಆಯುಧ ಪೂಚೆ/ನರಕಚತುರ್ದಶಿ/ ಇತ್ಯಾದಿಗಳನ್ನು ಆಚರಿಸುವವರೂ ಸಹ ಮಧ್ಯಾನ್ಹದ ನಂತರ ಮನೆಯಲ್ಲಿ ಏನೂ ಕಾರ್ಯಕೃಮಗಳನ್ನು ಹಮ್ಮಿಕೂಳ್ಳೂವುದಿಲ್ಲ. ಹೀಗಾಗಿ ಅಂದು ಬೆಳಿಗ್ಗೆ ಮಾತ್ರ ಸಾರ್ವಜನಿಕ ರಚೆಯನ್ನು ಘೋಶಿಸಬಹುದು.
ಪುಣ್ಯಭೂಮಿ ಭಾರತದಲ್ಲಿ ದೇವರು ಹಾಗೂ ದಾಸವರೇಣ್ಯರಿಗೆ ಕೊರತೆ ಇಲ್ಲ. ಆದರೆ ಅವರೆಲ್ಲರ ಹೆಸgನಲಿ ಸರಕಾರ ರಜೆ ರಜೆ ಘೋಷಿಸುತ್ತ ಹೋದರೆ, ವರ್ಷದಲ್ಲಿರುವ ೩೬೫ ದಿನಗಳು ಕೊರತೆ ಬೀಳಬಹುದು.
ಜಾಗತೀಕರಣದ ಈ ಜಾಗರಣೆ ದಿನಗಳಲ್ಲಿ ನಾವು ಮುಮ್ಮುಖವಾಗಿ ಚಲಿಸಿ ಬದುಕಬೇಕೇ ಹೊರತು ಹಿಮ್ಮುಖವಾಗಿ ಚಲಿಸಿ ಅವಸಾನವನ್ನು ಹತ್ತಿರ ಮಾಡಿಕೊಳ್ಳಬಾರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet