ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡೈರಿಯ ಕೆಲವು ಹಾಳೆಗಳು - ಭಾಗ ೧

ನಮಸ್ಕಾರ ಸ್ನೇಹಿತರೆ,
ಇತ್ತೀಚಿಗೆ ಒಂದು ಇಂಗ್ಲಿಷ್ ಬ್ಲಾಗ್ ಓದಬೇಕಾದರೆ ಈ ಕಥೆ ಅಲ್ಲಿ ಇತ್ತು. ಇದನ್ನು ಯಾರು ಬರೆದಿದ್ದಾರೆ ಅನ್ನೋದು ಗೊತ್ತಿಲ್ಲ, ಆದ್ರೆ ಈ ಕಥೆ ನಿಮ್ಮ ಮನಸ್ಸಿನ ಭಾವನೆಗಳ ಜೊತೆ ಖಂಡಿತ ಮಾತನಾಡುತ್ತೆ. ಓದುವ ಖುಷಿ ನಿಮಗಿರಲಿ :-)

ದಿನಾಂಕ : ೧೫-ಜನವರಿ

ಅವನು:

ತುಳಸಿ ಲಿಡಿಯಾ ಆದ ಕತೆ

ತುಳಸಿಯನ್ನು ನಾನು ಬಹಳ ವರ್ಷದಿಂದ ಬಲ್ಲೆ . ಸುಮಾರು ೮ ವರ್ಷಗಳಿಂದ ಆಕೆ ಆಗಾಗ ಕೆಲಸಕ್ಕಾಗೋ ಅಥವ ಓದಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕೋ ನನ್ನನ್ನು ಭೇಟಿ ಮಾಡುತ್ತಿದ್ದಳು.
ಮನೆಯಲ್ಲಿ ಬಹಳ ಬಡತನ, ಜೊತೆಗೆ ಅವಳ ಅತೀ ಸಾಧಾರಣಾ ರೂಪದಿಂದಾಗಿ ಅವಳಿಗೆ ಮದುವೆಯೂ ಆಗಿಲ್ಲ, ಅವಳಿಗೆ ಈಗ ಸುಮಾರು ೩೫ ವರ್ಷಗಳಿರಬಹುದು, ಆಕೆಯೂ ವಿದ್ಯಾವಂತೆ , ಬಿಕಾಂ ಮಾಡಿದ್ದಳು
.

ಗೋಪ ಕವಿ ಹೆಸರಿಸಿದ ಮರಗಳು

ಹಾಲೆ ತಾಲಂಕೋಲೆ ದಿಂಡದುಂಡಿಗ ಬೋರೆ
ಜಾಲಿಯಾಲಂ ನೆಲ್ಲಿ ಬೆಲ್ಲವತ ಬೆಳಲಣಿಲೆ
ಬೇಲ ಸಾಲ ರುಟಾಳ ಬೋಳ ನವಿಲಾಡಿಯಿಬ್ಬಡಿ ಬಂಗರಳಿಯರಳಿಯು
ಹೂಲೆ ಹಾಲವಿ ಹುಣಿಸೆ ಹೊನ್ನೆ ಚನ್ನಂಗಿ ಕಂ
ಚಾಲ ಗೊಣ್ಯಾಲವಗರಗಿಲೆಲವ ಬೂರಾರ
ನೀಲಿ ಕುಲಿಚೇಲಿಯತ್ತಿಯು ತೋರಮತ್ತಿ ಪೇರುಪ್ಪೆ ತುಪ್ಪೆಗಳಿರ್ಪುವು||
ಹಾಲೆ= Mimosops kauki, Wrightia tinctoria
ತಾಲಂಕೋಲೆ=?
ಆಲ=Ficus bengalensis
ದಿಂಡ=Anogeissus latifolia
ದುಂಡಿಗ=?
ಬೋರೆ=jujube tree, Zizipus zizuba
ಜಾಲಿ=Acacia arabica,

ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

ಮೊನ್ನೆ ಸ್ನೇಹಿತರೊಬ್ಬರು ಪ್ರತಾಪ ಸಿಂಹರು ಬರೆದಿರುವ ಈ ಪುಸ್ತಕದ ಲಿಂಕು ಕೊಟ್ಟರು. ಅಲ್ಪ ಕಾಲದಲ್ಲಿ ತಮ್ಮ ಸಾಧನೆಯಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಈ ವ್ಯಕ್ತಿಯಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇತ್ತು. ಅವರ ಜೀವನದ ಬಗ್ಗೆ ಬರೆದಿರುವುದನ್ನು ಓದುತ್ತಾ ಹೋದಂತೆ ಕುತೂಹಲ ಮೂಡಿಸುತ್ತದೆ. .

ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ.

ಮೊನ್ನೆ ಸ್ನೇಹಿತರೊಬ್ಬರು ಪ್ರತಾಪ ಸಿಂಹರು ಬರೆದಿರುವ ಈ ಪುಸ್ತಕದ ಲಿಂಕು ಕೊಟ್ಟರು. ಅಲ್ಪ ಕಾಲದಲ್ಲಿ ತಮ್ಮ ಸಾಧನೆಯಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಈ ವ್ಯಕ್ತಿಯಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇತ್ತು. ಅವರ ಜೀವನದ ಬಗ್ಗೆ ಬರೆದಿರುವುದನ್ನು ಓದುತ್ತಾ ಹೋದಂತೆ ಕುತೂಹಲ ಮೂಡಿಸುತ್ತದೆ. .

ಷಡ್ಯಂತ್ರ

’ಷಡ್ಯಂತ್ರ’ -ಷಟ್ ಅಂದರೆ ಆರು. ’ಆರು ಯಂತ್ರಗಳು’ - ಹಾಗೆಂದರೇನು? ಮೇಲ್ನೋಟಕ್ಕೆ ಪಿತೂರಿ ಅಂತಲೋ ಏನೋ ಅರ್ಥ ಇರಬಹುದು. ಇತ್ತೀಚೆಗೆ ಈ ಪದದ ಬಳಕೆ ಹೆಚ್ಚಾಗುತ್ತಿದೆ. :-) ಹಾಗಾಗಿ ತಿಳಿದುಕೊಳ್ಳುವ ಕುತೂಹಲ.

ಬೇಗ ಈ ಸ೦ಶಯ ನಿವಾರಿಸಿ

ನಾನು ಈ ಹಿ೦ದೆ LIC of Indiaದ development officers ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈಗ ಆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇನೆ. LICಯವರು ಈಗ ನಾನು ಕೆಲಸ ಮಾಡುತ್ತಿರುವ ಕ೦ಪನಿಯಿ೦ದ "No objection Certificare " ತರುವ೦ತೆ ತಮ್ಮ ಪತ್ರದಲ್ಲಿ ನಮೂದಿಸಿದ್ದಾರೆ.ನನ್ನ ಸ೦ಶಯವೇನೆ೦ದರೇ ನಾನೀಗ ಕೆಲಸ ಮಾಡುತ್ತಿರುವುದು ಖಾಸಗಿ ಕ೦ಪನಿಯೊ೦ದರಲ್ಲಿ .ಖಾಸಗಿ ಕ೦ಪನಿಯಲ್ಲಿ ಕೆಲಸ ಮಾಡುವವರೂ ಈ "NOC" ಕೊಡಬೇಕಾ..?

ಧೂಮಪಾನ ನಿಷೇಧ ಎದುರಿಸಲು ಇ-ಸಿಗರೇಟು!

ನಾಳೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೆ ಬರಲಿದೆ. ಧೂಮಪಾನ ಮಾಡಬೇಕೆಂದರೆ, ಯಾವುದಾದರೂ ತೆರೆದ ಜನರಹಿತ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕು. ಈ ತೆರನ ನಿಷೇಧದ ನಡುವೆ ಧೂಮಪಾನ ವ್ಯಸನಿಗಳು ಬದುಕುವುದು ಹೇಗೆ? ಇ-ಸಿಗರೇಟ್ ಇದೆ!

ಏನಿದು ಇ-ಸಿಗರೇಟು?

ದಾನದ ಹಬ್ಬ ಈದ್ -ಉಲ್ - ಫಿತರ್

ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್ -ಉಲ್ - ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ - ಶ್ರೀಮಂತ ರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್ -ಉಲ್ - ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆ ಯ ಪಾಠದಿಂದ ಬಡತನ -ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ 'ಝಕಾತ್' ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್ -ಉಲ್ - ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್ -ಉಲ್ - ಫಿತರ್ ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ - ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು!!!. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.