ಧೂಮಪಾನ ನಿಷೇಧ ಎದುರಿಸಲು ಇ-ಸಿಗರೇಟು!

ಧೂಮಪಾನ ನಿಷೇಧ ಎದುರಿಸಲು ಇ-ಸಿಗರೇಟು!

ಬರಹ

ನಾಳೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿಗೆ ಬರಲಿದೆ. ಧೂಮಪಾನ ಮಾಡಬೇಕೆಂದರೆ, ಯಾವುದಾದರೂ ತೆರೆದ ಜನರಹಿತ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕು. ಈ ತೆರನ ನಿಷೇಧದ ನಡುವೆ ಧೂಮಪಾನ ವ್ಯಸನಿಗಳು ಬದುಕುವುದು ಹೇಗೆ? ಇ-ಸಿಗರೇಟ್ ಇದೆ!

ಏನಿದು ಇ-ಸಿಗರೇಟು?

ಈ ಹೈಟೆಕ್ ಸಿಗರೇಟು ಮೇಲ್ನೋಟಕ್ಕೆ ಸಿಗರೇಟಿನ ಹಾಗೇ ಇದೆ. ಸಿಗರೇಟಿನಲ್ಲಿ ಐಸಿ  ಚಿಪ್ ಬಳಕೆಯಾಗಿದೆ. ಒಂದು ಕೋಶ,ಲಿಥಿಯಮ್ ಬ್ಯಾಟರಿ,ನಿಕೋಟಿನ್ ಕೂಡಾ ಇದರಲ್ಲಿದೆ. ಚಾಲೂ ಮಾಡಿದಾಗ, ನಿಕೋಟಿನ್ ಕಾದು, ಅದರ ಭಾಷ್ಪ ಬಿಡುಗಡೆಯಾಗಿ ಸಿಗರೇಟಿನ ಕೊಳವೆಯ ಮೂಲಕ ಧೂಮಪಾನಿಯ ಉಸಿರನ್ನು ಸೇರುತ್ತದೆ.ವ್ಯಸನಿಗೆ ಸಿಗರೇಟಿನ ಹೊಗೆ ಇಲ್ಲದೆ,ಅವನ ಚಟದ ಕಾರಣ ಬೇಕಾದ ನಿಕೋಟಿನ್ ಆತನ ರಕ್ತ ಸೇರುತ್ತದೆ. ಸಿಗರೇಟು ಸೇದಿದ ತೃಪ್ತಿ(?) ಆತನಿಗೆ ಲಭಿಸುತ್ತದೆ.

ಇದನ್ನು ಚಟಮುಕ್ತಿಗೂ ಬಳಸಬಹುದು ಎಂದು ಜನಪ್ರಿಯಗೊಳಿಸುವ ಹುನ್ನಾರ ಬೇರೆ ನಡೆದಿದೆ. ಪ್ರತಿದಿನ, ನಿಕೋಟಿನ್ ಭಾಷ್ಪದ ಪ್ರಮಾಣವನ್ನು ತಗ್ಗಿಸುವಂತೆ ಸೆಟ್ ಮಾಡಿ, ಕ್ರಮೇಣ ಚಟದಿಂದ ಹೊರಗೆ ಬರಬಹುದು ಎಂದು ಜಾಹೀರು ಮಾಡಲಾಗುತ್ತಿದೆ. ಇದರ ವಿರುದ್ಧವಾದ ಕ್ರಿಯೆಗೂ ಅವಕಾಶವಿದೆಯಲ್ಲ!ಬೆಲೆ ಸುಮಾರು ನಾಲ್ಕು ಸಾವಿರ.

ನಮ್ಮ ದೇಶದ ಕಾನೂನು ಪರಿಪಾಲನೆಯ ವೈಖರಿ ಗೊತ್ತಿದ್ದವರು ಇದನ್ನು ನೋಡಿ ನಗದಿರುತ್ತಾರೆಯೇ?