ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಗರಹೊಳೆಯಲ್ಲಿ ಒಂಟಿ ಸಲಗ...

೨೭.೦೯.೦೮ ರಂದು ನಾವು ಬೆಂಗಳೂರಿನಿಂದ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...

ದಸರಾ ಹಬ್ಬ

ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ 10-50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ್ ಸ್ವಾಮೀಜಿಯವರು ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸಾಂಸ್ಕೃತಿಕ ನಗರದಾದ್ಯಂತ ಪ್ರವಾಸಿಗರ ಮಹಾಪೂರವೇ ತುಂಬಿದ್ದು,ಎಲ್ಲೆಡೆ ಶೃಂಗಾರದಿಂದ ಕಂಗೊಳಿಸುತ್ತಿರುವ ದಸರಾಕ್ಕೆ ಇಂದು ಚಾಲನೆ ದೊರೆತಿದೆ.

ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು

ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ ಮಾಲ್ಗುಡಿ ಡೇಸ್ ಧಾರವಾಹಿಯನ್ನು ನೋಡಿಬರ್ತಿದ್ವಿ.

ಆ ಧಾರವಾಹಿ ನಿರ್ಮಿಸಿದ ನಮ್ಮ ಮೆಚ್ಚಿನ ನಟ ಶಂಕರ್ ನಾಗ್ ನಮ್ಮನ್ನಗಲಿದ ದಿನ ಇಂದು. ನಾಟಕ,ರಂಗಭೂಮಿ,ದೂರದರ್ಶನ,ಚಲನ ಚಿತ್ರರಂಗವನ್ನ ಶ್ರೀಮಂತಗೊಳಿಸಿದ ಅವರ ಸಾಧನೆಗೆ, ನೆನಪಿಗೆ ನನ್ನ ನಮನ.

ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.

ಗುಲಾಬಿ ಹೂ

ಆಕೆ ದಿನಾ ಆ ಬಸ್ ಸ್ಟಾಂಡ್‍ನಲ್ಲಿ ನಿಂತಾಗೊಮ್ಮೆ ಆ ಮನೆಯ ಕಾಂಪೌಂಡ್‌ನಲ್ಲಿ ದಿನಾ ನಿಂತು ಇವಳನ್ನೇ ದಿಟ್ಟಿಸುತ್ತಿದ್ದ ಆ ಚೆಲುವನನ್ನೂ ಅವನ ಪಕ್ಕದಲ್ಲಿ ಇದ್ದ ಹೂವಾಗುತ್ತಿದ ಗುಲಾಬಿ ಮೊಗ್ಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಳು.
ಆ ಹೂ ಹಾಗು ಆ ಚೆಲುವ ತನ್ನದಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದಳು

ಮೊಬೈಲ್ಲ್ಲಿ ಬ್ರೌಸಿಂಗ್‍ನಲ್ಲಿ ಕನ್ನಡ ಕಾಣುವಿಕೆ ಹೇಗೆ

ನನ್ನ ನೋಕಿಯ N73ಯಲ್ಲಿ ಸಂಪದದ ತಾಣ ತೆರೆದುಕೊಂಡಿತು
ಆದರೆ ಕನ್ನಡ ಕಾಣ ಸಿಗಲಿಲ್ಲ
ಬರಹ ತಾಣಕ್ಕೆ ಹೋಗಿ ಐ ಎಮ್ ಇ ಅಳವಡಿಸಿಕೊಳ್ಳಲು ಆಗಲಿಲ್ಲ
ಯಾರಾದ್ರೂ ಹೇಳುತ್ತೀರಾ?

ಗುಲಾಬಿ ಟಾಕೀಸ್

ಅಬುಧಾಬಿ ಚಲನಚಿತ್ರ ಉತ್ಸವದಲ್ಲಿ ಒಂದೇ ಚಿತ್ರ ಸ್ಪರ್ಧಿಸುತ್ತಿದೆಯಂತೆ.
ಅದುವೆ ಗಿರೀಶ್ ಕಾಸರವಳ್ಳಿಯವರ ಕನ್ನಡ ಚಲನಚಿತ್ರ "ಗುಲಾಬಿ ಟಾಕೀಸು"
ನಿವ್ಯಾರಾದರೂ ಚಿತ್ರ ನೋಡಿದ್ದೀರಾ? ಬಹುಮಾನ ಬರಬಹುದೇ? ಒಟ್ಟಿಗೆ ಹದಿನಾಲ್ಕು ಚಿತ್ರಗಳು ಸ್ಪರ್ಧೆಯಲ್ಲಿವೆಯಂತೆ.
http://tinyurl.com/3rs63m

ಕೊನೆಗೂ ಸಿಕ್ಕ ಜಯ

ಎಲ್ಲಾ ಹೇಗಿದ್ದೀರಾ?
ಸಂಪದ ನೋಡದೆ ತುಂಬಾ ದಿನಗಳಾಗಿದ್ದವು , ಸಂಪದ ಗೀಳಿದ್ದರೂ ಈ ದಿನಗಳಲ್ಲಿ ಮನಸಿಗೆ ಏನೂ ಒಂದು ಬಗೆಯ ತೃಪ್ತಿಯಂತೂ ಸಿಕ್ಕಿತು.

ನಮ್ಮಲ್ಲಿ ಧನರಾಜ ಎಂಬ ಗುಲ್ಬರ್ಗಾದ ಹುಡುಗನೊಬ್ಬ ಬಿಸಿಎ(BCA)ಗೆ ಸೇರಿದ್ದ.

ಗಾಳಿಗೊಡ್ಡಿದ ದೀಪದ೦ತೆ ನಮ್ಮ ಬಾಳುವೇ...ಆಗಲೋ ಈಗಲೋ ....

ನಾನು ಎ೦ಟನೇ ತರಗತಿಯಲ್ಲಿ ಇದ್ದಾಗ ನನ್ನ ಸಹಪಾಟಿಯೊಬ್ಬ ಹಾಡಿದ ನೆನಪು...

ಈ ಹಾಡು ಪೂರ್ಣ ಗೊತ್ತಿದ್ದರೆ ದಯವಿಟ್ಟು ತಿಳಿಸಿ...

ಮುರಿದ ಮಂಚ - ಮುಲ್ಲಾ ನಸ್ರುದ್ದೀನನ ಕತೆ

ಮುಲ್ಲಾ ನಸ್ರುದ್ದಿನನು ಹೆಂಡತಿ ತೀರಿಕೊಂಡ ಮೇಲೆ ಒಬ್ಬ ವಿಧವೆಯನ್ನ ಮದುವೆ ಆದ.

ಒಂದು ದಿನ ರಾತ್ರಿ ಮಲಗುವ ಸಮಯದಲ್ಲಿ ತನ್ನ ಹೊಸ ಹೆಂಡತಿಗೆ ಹೇಳಿದ - "ನನ್ನ ಮೊದಲ ಹೆಂಡತಿ ನೋಡಲಿಕ್ಕೆ ಬಹಳ ಚೆಲುವಿ ಆಗಿದ್ದಳು "

ಹೊಸ ಹೆಂಡತಿ ತನ್ನ ಹಳೆಯ ಗಂಡನನ್ನ ನೆನೆದುಕೊಂಡು =" ನನ್ನ ಹಿಂದಿನ ಗಂಡ ಬಹಳ ಒಳ್ಳೇಯವನಿದ್ದ ; ನನ್ನನ್ನು ಚೆನ್ನಾಗಿ ನೋಡಿಕೊಂಡ "

ಆಮೇಲೆ ಅವರು ಮಲಗಿದರು .
ಸ್ವಲ್ಪ ಹೊತ್ತಿಗೆ ಮಂಚ ಮುರಿದು ಬಿಟ್ಟಿತು ,

ಆಗ ಮುಲ್ಲಾ ಉದ್ಗರಿಸಿದ - "ಪಾಪ , ಇಬ್ಬರಿಗೆಂದು ಮಾಡಿದ ಮಂಚ ನಾಲ್ಕು ಜನರ ಭಾರ ಹೇಗೆ ತಾನೇ ತಾಳೀತು? ! "