ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರೈಲು ಪ್ರಯಾಣ ಬರೀ 5,000 ಕಿ.ಮೀ....!!

ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ.

ಮರೆತರೂ ನೀ, ಮರೆಯಲಿ ಹ್ಯಾಂಗ

ಬೇಸರವೆನಿಸುವುದೋ ಇನಿಯಾ
ನಿನ್ನಯ ದನಿಯನು ಕೇಳದ
ಬೆಳಗೇ ಬೇಸರವೆನಿಸುವುದೋ....

ಉರೋರ ದಿಬ್ಬದ
ಕಲ್ಲಿನ ಸುತ್ತಲು ಹಸಿರೆಲೆ
ಚಿಗುರಿಹುದೋ ಇನಿಯಾ
ಹಸಿರೆಲೆ ಉಸಿರಲಿ
ನಿನ್ ನಗು ಇರದಿರೆ
ದಿಬ್ಬದ ಹುಲ್ಲಿನ
ಹಾಸೇ ಬೇಸರವೆನಿಸುವುದೋ....

ಹಿತ್ತಿಲ ಮರೆಯ
ಗುಟ್ಟಿನ ಜಾಗದಿ ಮಲ್ಲಿಗೆ
ಹಬ್ಬಿಹುದೋ ಇನಿಯಾ
ಮಲ್ಲೆಯ ಮೂಡಿದ
ನನ್ನೀ ಅಂದವ
ನೋಡಲು ಬರದಿರೆ

ಮತದ ಪಥ

ಮತದ
ಪಥ ಹಿಡಿಯಿರೆಂಬುದು
ಸಂತರ ತುಡಿತ
ಮತದ ಪಥ
ತಮದ ಪಥವೆಂಬುದು
ಬರೀ ಕುಹಕ...
ಮತದ ಪಥದಿ
ಇರಲು ಸತತ
ಗೆಲವು ಎಂದೂ ಖಚಿತ...

--ಶ್ರೀ

ಪುಳಿ/ಹುಳಿ, ಪುಳಿಸೇಹಣ್ಣು/ಹುಳಿಸೇಹಣ್ಣು, ಪುಣಿಸೇಹಣ್ಣು/ಹುಣಿಸೇಹಣ್ಣು, ಪುೞಿ/ಹುೞಿ

ಹುಳಿ=ಹುಳಿಸೇ/ಹುಣಿಸೇಹಣ್ಣಿಗೆ ಹೆಸರು. ಸಾಮಾನ್ಯವಾಗಿ ಹುಳಿಯಾಗಿರುವುದಕ್ಕೂ ಹೆಸರು. ಉದಾಹರಣೆ=ನಿಂಬೆಹುಳಿ, ಮಾವಿನ ಹುಳಿ ಇತ್ಯಾದಿ. ಸುಮ್ಮನೆ ಹುಳಿಯೆಂದರೆ ಹುಣಿಸೇಹಣ್ಣಿಗೆ ಹೆಸರು.
ಪ್ರಾಯಶಃ ಹುಳಿಸಿಹಿ->ಹುಳಿಸಿಯ್->ಹುಳಿಸಿ->ಹುಳಿಸೆ->ಹುಣಿಸೆ ಆಗಿರಬಹುದೆಂದು ನಮ್ಮ ಊಹೆ. ಹುಣಿಸೆಹಣ್ಣು ಸ್ವಲ್ಪಮಟ್ಟಿಗೆ ಸಿಹಿಯೂ ಇರುತ್ತದೆ.