ನೀನಾಸಂ ಶಿಬಿರ

ನೀನಾಸಂ ಶಿಬಿರ

ಪ್ರತಿ ವರ್ಷದಂತೆ ಈ ವರ್ಷವೂ ನೀನಾಸಂ ನಲ್ಲಿ ಸಂಸ್ಕೃತಿ ಶಿಬಿರ ಅ.5 ರಿಂದ 11ದರವರೆಗೆ ನಡೆಯಲಿದೆ. ಕಲೆ, ಸಂಸ್ಕೃತಿ, ನಾಟಕ, ಸಿನೆಮಾ ಮುಂತಾದವುಗಳನ್ನು ಕುರಿತು ಸಾಕಷ್ಟು ಚರ್ಚೆಗಳು ನಡೆಯಲಿದೆ. ಮ್ಯಾಗ್ಸೆಸೆ ಪುರಸ್ಕೃತ ಕೆ.ವಿ.ಸುಬ್ಬಣ್ಣ ನವರ ಅನುಪಸ್ಥಿತಿ ಶಿಬಿರವನ್ನು ಕಾಡಲಿದೆ. ಪ್ರತಿ ವರ್ಷ ಒಂದು ವಿಶೇಷವಾದ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗುತ್ತದೆ. ಅಂತೆಯೇ ಈ ವರ್ಷ ಗಾಂಧಿಯವರ ಕೃತಿ "ಹಿಂದ್ ಸ್ವರಾಜ್" ನೆನಪಿನಲ್ಲಿ ಮನೋಭೂಮಿಕೆಯಲ್ಲಿ ಸ್ವರಾಜ್ಯ ಎಂಬ ವಿಷಯವನ್ನು ಶಿಬಿರ ಚರ್ಚಿಸುತ್ತದೆ. ಮೇಧಾ ಪಾಟ್ಕರ್, ಅನಂತಮೂರ್ತಿ, ಶಿವ ವಿಶ್ವನಾಥನ್ ಮುಂತಾದವರು ಭಾಗವಹಿಸುತ್ತಾರೆ. ಶಿಬಿರದಲ್ಲಿ ಭಾಗವಹಿಸುವವರಿಗೆ ನಿಶ್ಚಿತ ಶುಲ್ಕವಿರುತ್ತದೆ. ಪ್ರತಿದಿನ ಸಂಜೆ 7 ರಿಂದ ನಾಟಕ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮವಿರುತ್ತದೆ.

-ಮಾಧವ