ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮ ಅಣ್ಣನ ಮಗನ ಕ್ಲಾಸ್ ಅಲ್ಲಿ ಹೀಗೊಂದು ಪ್ರಸಂಗ

ಶಿಕ್ಷಕಿ: ಏನ್ ತಲೆ ಹರಟೆ ಮಾಡ್ತಾ ಇದಿಯಾ ? ಹಿಂದಿ ರಾಷ್ಟ್ರ ಭಾಷೆ ಅನ್ನೋದು ಸುಳ್ಳು ಅಂತಿಯಲ್ಲ..                                                      

ಮೈಸೂರು ರಸ್ತೆ ಮೇಲು ಸೇತುವೆ

ಅದು ನಾನು ಬೆ೦ಗಳೂರಿನಲ್ಲಿ ಬಹು ಮೆಚ್ಚುವ ಮೇಲು ಸೇತುವೆ ... ಮೈಸೂರು ರಸ್ತೆ ಮೇಲು ಸೇತುವೆ. ಅದನ್ನು ಸಾರ್ವಜನಿಕರಿಗೆ ನಮ್ಮ ನಾಡಿಗೆ ಸಮರ್ಪಿಸಿ ಹಲವು ವರ್ಷಗಳು ಕಳೆಯಿತು.

ಎರಡು ಗಜಲ್ ಗಳು

ಗಜಲ್ ೧
ಬದುಕು ಕತ್ತಲಲ್ಲಿದೆ ನಿನ್ನ ಕಣ್ಣ ಬೆಳಕನ್ನಾದರೂ ನೀಡಬಾರದೆ
ಒಡಲ ತುಂಬ ನೋವಿದೆ ನಿನ್ನ ತುಟಿಯ ಬಿಸುಪನ್ನಾದರೂ ನೀಡಬಾರದೆ

ಮೈಯ ಕಸುವನ್ನೆಲ್ಲ ಬಳಸಿ ತಲೆಯೆತ್ತಿ ದೀಪದಂತೆ ಉರಿಯುತಿಹೆ ನಾನು
ಸುಳಿಗಾಳಿ ಬೀಸಿ ಆರುವ ಮುನ್ನ ಕೈತಡೆಯನ್ನಾದರೂ ನೀಡಬಾರದೆ

ಹಕ್ಕಿಕೊರಳ ಹಿಸುಕಿ ಕೇಳಲು ಅನುಗಾಲ ಯತ್ನಿಸುತಿದೆ ಜಗವು

ಮತಾಂತರ ಏನು ಎತ್ತ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ.

ಒರಿಸ್ಸಾ ಮತ್ತು ಮತಾಂತರ

ಒರಿಸ್ಸಾದ ಗುಡ್ಡಗಾಡು ಪ್ರದೇಶಗಳ ಹಾಗೂ ಅಲ್ಲಿನ ಜನಜೀವನಶೈಲಿಯ ಕುರಿತ ಪರಿಚಯ ನನಗಿದೆ. ನನ್ನಂತೆಯೇ ಇಲ್ಲಿ ನೀರಿನ ಸದುಪಯೋಗದ ಬಗ್ಗೆ ತಿಳಿಸುವ ಕನ್ನಡಿಗರದೇ ಆದ ’ಕಾವಾ’ ಎಂಬ ಎನ್ ಜಿ ಓ ಹಾಗೂ ಇಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಯ ಕನ್ನಡಿಗರು ಈ ಜನರ ಬಗ್ಗೆ ಚೆನ್ನಾಗಿ ಬಲ್ಲೆವು. ಪರಿಸ್ಥಿತಿಯ ವಾಸ್ತವ ನಮಗೆ ಗೊತ್ತು.

ಶಿಲ್ಪಾ ಮಾತಾಡು ಪ್ಲೀಸ್..!

ಶಿಲ್ಪಾ. ಈ ಹೆಸರು ಕೇಳಿದರೆ ಈಗಲೂ ಮನಸ್ಸು ಕಲಕುತ್ತದೆ. ಕಣ್ತುಂಬಿಕೊಳ್ಳುತ್ತದೆ. ಅವಳ ಆಕಸ್ಮಿಕ ಸಾವು ಇನ್ನು ಅರಗಿಸಿಕೊಳ್ಳುವ ಮನಸ್ಸಾಗುತ್ತಿಲ್ಲ. ಯಾಕೆಂದರೆ, ಅವಳು ಅವಳ ಸಾವಿನ ಹಿಂದಿನ ದಿನವಷ್ಟೆ ನನಗೆ ಎಸ್ಎಂಎಸ್ ಮಾಡಿ ಗುಡ್ ನೈಟ್ ಹೇಳಿದ್ದಳು. ಆದರೆ ಮರುದಿನವೇ ಗುಡ್ ಬೈ ಹೇಳಿಬಿಟ್ಟಳು. ದೇವರು ಅವಳನ್ನು ಬಲವಂತವಾಗಿ ಈ ಜಗತ್ತಿನಿಂದ ಕರೆದುಕೊಂಡು ಬಿಟ್ಟ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ - ಗ್ನು/ಲಿನಕ್ಸ್ ಹಬ್ಬ

 ಇದು ಗ್ನು/ಲಿನಕ್ಸ್ ಹಬ್ಬ ಮೈಸೂರು -೨೦೦೮  ಮೊದಲ ಚಿತ್ರ. ಕಾರ್ಯಕ್ರಮ ನೆಡೀಬೇಕಾದಾಗ ಅಪ್ಲೋಡ್ ಮಾಡಿದ ಮೊದಲ ಚಿತ್ರ.

 ನಿಮಗೆ ಇನ್ನೊಂದ್ ವಿಷಯಗೊತ್ತಾ? ಗ್ನು/ಲಿನಕ್ಸ್ ನೆನ್ನೆಗೆ ೨೫ ವರ್ಷ ವಯಸ್ಸು. ಹ್ಯಾಪಿ ಬರ್ತ್ ಡೇ ಗ್ನು.

 

ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ

ಇದು ನಮಗೆ ಬಹುದೊಡ್ಡದಾಗಿ ಕಾಣಿಸುವ ದೃಷ್ಯ. ದಿನನಿತ್ಯದ ಜೀವನದ ಕಾರ್ಯಾಚರಣೆಗಳಾದ, ಅಡುಗೆ, ಊಟ, ಪಾತ್ರೆಪದಾರ್ಥಗಳ ಶುಚಿತ್ವ, ಸಾಗಾಣಿಕೆ, ಪ್ರಯಾಣ, ಮುಂತಾದ ಯಾವುದೇಕ್ಷೇತ್ರದಲ್ಲಿ ಮಾನವ-ಕೈಗಳ ಸಹಾಯ ನಮ್ಮದೇಶದಲ್ಲಿದ್ದಂತೆ ಅಮೆರಿಕದಲ್ಲಿಲ್ಲ. ಇದರಿಂದ ಹಲವು ಸಮಸ್ಯೆಗಳು ಪರಿಹಾರವಾಗಿವೆ ; ಕೆಲವೊಂದು ಸನ್ನಿವೇಷಕ್ಕೆ ನಾಂದಿಯಾಗಿರಲೂ ಉಂಟು. ನಿರುದ್ಯೋಗವೆಂಬ ನಮ್ಮದೇಶದ ಬೃಹದಾಕಾರದ ಪಿಡುಗಿಗೆ ಯಂತ್ರೀಕರಣಮಾರಕವಲ್ಲವೆ ! ಅಲ್ಲಿನ ಕಟ್ಟಡನಿರ್ಮಾಣದಲ್ಲಿ ಕೂಲಿಗಳಿಲ್ಲ ; ಕೆಲಸ ಅತ್ಯಂತ ಅಚ್ಚುಕಟ್ಟಾಗಿಯೂ ತ್ವರಿತವಾಗಿಯೂ ನೆರವೇರುತ್ತದೆ. ಕಡಿಮೆ ದಿನ-ಗೂಲಿಯ ಆಸೆಗೆ ಅಮೆರಿಕಕ್ಕೆ ದಾಳಿಯಿಡುವ ಜನರಿಗೆ ಅದೊಂದು ಸ್ವರ್ಗ. ಬಹುಶಃ, ಬಂಗ್ಲಾದೇಶ, ಭಾರತ, ಪಾಕೀಸ್ತಾನದವರು, ನಾನುಮುಂದೆ- ತಾನುಮುಂದೆ ಎಂದು ಬಂದಾರು ! ಅಂತೆಯೇ ಅಂತಹ ವ್ಯವಸ್ಥೆಗಳಿಂದ ’ ಕೊಳೆಗೇರಿ ’ ಗಳನ್ನು ಹುಟ್ಟುಹಾಕಿ, ಅದರಿಂದ ಉದ್ಭವಿಸುವ ಸಾಮಾಜಿಕ ಅಸಮಾನೆತೆ, ಅವ್ಯವಸ್ಥೆಗಳ ಅನಂತ ಪರಿಸರಮಾಲೀನ್ಯತೆ, ಮುಂತಾದ ಅನಿಷ್ಟಗಳನ್ನು ನಿರ್ಮೂಲಿಸುವಲ್ಲಿ ಆ ದೇಶ, ಜಯವನ್ನು ಪಡೆದಿದೆ.

ಪೆಟ್ರೋಲ್ ತುಂಬಿಸಲು ಜನರ ಸಹಾಯವೇಕೆ ? ಅತ್ಯಂತ ಸಮರ್ಪಕವಾಗಿ ಕೆಲಸಮಾಡುವ ಯಂತ್ರಗಳಿರುವಾಗ ! ಇದೊಂದು ಅಧ್ಬುತವಾದ ಕಲ್ಪನೆ. ಅಮೆರಿಕದ ರಸ್ತೆಯ ವ್ಯವಸ್ಥೆಯನ್ನು ಪ್ರೆಸಿಡೆಂಟ್ ಡ್ವೈಟ್ ಐಸನ್ ಹೋವರ್ ಸಮಯದಲ್ಲಿ ಮಾಡಿದರಂತೆ ! ಅಮೆರಿಕದ ಹಳ್ಳಿಹಳ್ಳಿಗಳನ್ನು ನಗರಗಳಿಗೆ ಸೇರಿಸಿ ಸಮಗ್ರ ದೇಶಕ್ಕೆ ಎಂತಹ ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳನ್ನು ಕೊಟ್ಟಿದ್ದಾರಲ್ಲ, ಅವರ ದೂರದೃಷ್ಟಿಗೆ ನಮಿಸಬೇಕು. ಹಳ್ಳಿ, ನಗರ, ಭಾರಿ-ಮೆಟ್ರೋನಗರಗಳನ್ನು ಎಷ್ಟು ಸುವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಈಗಲೂ ಸೂರ್ಯಕಿರಣ, ಗಾಳಿಗಳಂತಹ ಶಕ್ತಿಗಳ ಉಪಯೋಗಪಡೆದು ಪಡೆಯುತ್ತಿರುವ ಇಂಥನಶಕ್ತಿ, ಅನುಮೋದನೆಗೆ ಪಾತ್ರವಾಗಿದೆ.