ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಲ್ಲೇಶ್ವರ ದೇವಾಲಯ - ಬಾಗಳಿ

ಬಾಗಳಿಯಲ್ಲಿರುವ ಕಲ್ಲೇಶ್ವರ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎನ್ನುತ್ತಾರೆ. ಕೆರೆಯ ಬದಿಯಲ್ಲಿರುವ ದೇವಾಲಯವನ್ನು ನವೀಕರಿಸಿ ಪುರಾತತ್ವ ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದೆ. ನವರಂಗ ಚಾಳುಕ್ಯ ಶೈಲಿಯಲ್ಲಿದೆ. ಮುಖಮಂಟಪ/ಸುಖನಾಸಿ ಹೊಯ್ಸಳ ಶೈಲಿಯಲ್ಲಿದೆ. ಕಡೆಯದಾಗಿ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕು ಶೈಲಿಗಳ ಮಿಲನ ಬೇರೆಲ್ಲಾದರೂ ಕಾಣಸಿಕ್ಕೀತೆ?

ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವನ್ನು ಇಸವಿ ೧೧೧೮ರಲ್ಲಿ ಚಾಲುಕ್ಯ ದೊರೆ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಶಾಸನಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಸಿಕ್ಕಿರುವ ೧೬ ಶಾಸನಗಳಲ್ಲಿ ೧೨ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನ ಕಾಲದ್ದಾಗಿವೆ. ಬಾಗಳಿ ಊರಿನಲ್ಲಿ ಸುಂದರ ವೀರಗಲ್ಲುಗಳೂ ದೊರೆತಿವೆ. ಗರ್ಭಗುಡಿಯಲ್ಲಿರುವ ಕಲ್ಲೇಶ್ವರನ ಮೇಲೆ ಯುಗಾದಿಯ ಶುಭ ದಿನದಂದು ಸೂರ್ಯನ ಕಿರಣಗಳು ಬೀಳುತ್ತವಂತೆ. ಗರ್ಭಗುಡಿಯ ಮೇಲೆ ಗೋಪುರವಿದ್ದರೂ ಯುಗಾದಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ಹೇಗೆ ಒಳಗೆ ತೂರಿ ಬರುತ್ತವೆಂದು ಕಾರಣವನ್ನು ಕಂಡು ಹಿಡಿಯಲು ಇದುವರೆಗೆ ಆಗಿಲ್ಲವಂತೆ. ಆದರೆ ಇದನ್ನು ವೀಕ್ಷಿಸಲು ಯುಗಾದಿಯಂದು ಬಹಳಷ್ತು ಜನರು ಇಲ್ಲಿ ಸೇರುತ್ತಾರೆ.

ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ !

೧೮೫೧ ರಲ್ಲಿ ಮಿಸ್ಸೂರಿರಾಜ್ಯದ ವಿಶ್ವವಿದ್ಯಾಲಯ "ಫುಲ್ಟನ್ ವಿಶ್ವವಿದ್ಯಾಲಯದ ಹೆಸರನ್ನು ಪಡೆಯಿತು. ನಂತರ ಕಾಲಕ್ರಮೇಣ ಇದರ ಹೆಸರನ್ನು, ’ದ ವೆಸ್ಟ್ ಮಿನ್ಸ್ಟರ್ ಕಾಲೇಜ್,’ ಯೆಂದು ಬದಲಾಯಿಸಲಾಯಿತು. ಈ ಖಾಸಗೀ ವಿಶ್ವ ವಿದ್ಯಾಲಯದಲ್ಲಿ ಹುಡುಗ-ಹುಡುಗಿಯರಿಗೆ, ಸಹವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಸಕ್ಕೆವ್ಯವಸ್ಥೆಕಲ್ಪಿಸಿದ್ದಾರೆ.

ಮರಳ (ಲಾರದ) ಶಿಲ್ಪ!

ಪುಟ್ಟ ಗೆಳತಿಗೊಂದು ನುಡಿನಮನ

ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್‌ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್‌. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್‌ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.

ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್‌‌ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್‍ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ.

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.

ನೀಗಿಸಬೇಕು ನಮ್ಮಲ್ಲಿರುವ ’ಅಹಂ’...

ಇದನ್ನು ಓದುವುದಕ್ಕೆ ನಿಮ್ಮ ಅತ್ಯಮೂಲ್ಯವಾದ ಸಮಯದಲ್ಲಿ ಎರಡೇ ಎರಡು ನಿಮಿಷದ ಕಾಲವನ್ನು ದಯವಿಟ್ಟು ವ್ಯಯ ಮಾಡಿ...

ಈ ಸಂಕ್ಷಿಪ್ತ ಕತೆಯನ್ನು ಓದಿ ಹಾಗೇ ಸುಮ್ಮನೆ ಒಂದು ಊಹೆ ಮಾಡಿ...

ಇಂಥವರನ್ನು ನೀವೂ ಸಹ ನಿಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿರುತ್ತೀರಿ...

"ಅಪಶಕುನ"

ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖವನ್ನು ನೋಡಬಾರದು ಅಪಶಕುನ ಅನ್ನುತ್ತರೆ ಆದರೆ ಮನೆಯಲ್ಲಿಯೆ ಬೆಕ್ಕು ಸಾಕಿರುತ್ತಾರೆ.

ಮಳೆ ನಿಂತು ಹೋದ ಮೇಲೆ.................

ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ ಮುನ್ಸುಚನೆ ಇಲ್ಲದೆ ಮಳೆ ಬರಲು ಶುರುವಾಯಿತು.ಸ್ನೆಹಿತನಿಗೆ ಪೋನ್ ಹಚ್ಚಿದೆ ಮೂದಲ ಬಾರಿ ನಾಟ್ ರಿಚೆಬಲ್ ಅಂತ ಆ

ಪ್ರೀತಿ - ಭಕ್ತಿ

ಸಖೀ,
ನಾನು ಹಗಲೆಲ್ಲಾ ರವಾನಿಸೋ ಪ್ರೀತಿಯ ಸಂದೇಶಗಳಿಗೆ,
ನಾನು ಆಗಿಂದಾಗ್ಗೆ ನಿನಗೆ ನೀಡುವ ಆ ಎಲ್ಲಾ ಹುಸಿಕರೆಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ, ನನಗೆಳ್ಳಷ್ಟೂ ಬೇಸರವಿಲ್ಲ;


ಪ್ರೀತಿ ಎನ್ನುವುದು ದೇವರ ಮೇಲಿರುವ ನಮ್ಮ ಭಕ್ತಿಯಂತೆ,
ಈ ಸಂದೇಶ ಮತ್ತು ಹುಸಿಕರೆಗಳು ನಮ್ಮ ಪ್ರಾರ್ಥನೆಯಂತೆ;


ದೇವರ ಪ್ರತಿಕ್ರಿಯೆಗೆ ಅಲ್ಲಿ ಯಾರೂ ಎಂದೂ ಕಾಯುವುದಿಲ್ಲ,
ನಿನ್ನ ಪ್ರತ್ಯುತ್ತರಕ್ಕಾಗಿ ನಾನೂ ಇಲ್ಲಿ ಎಂದೂ ಕಾಯುವುದಿಲ್ಲ;


ದೇವರು ನಮ್ಮನ್ನೆಲ್ಲಾ ಕಾಪಾಡುತ್ತಾರೆಂಬ ದೃಢ ನಂಬಿಕೆ ಅಲ್ಲಿ,
ನೀನು ಸದಾ ನನಗಾಗಿಯೇ ಕಾಯುತ್ತಿರುವೆ ಎಂಬ ನಂಬಿಕೆ ಇಲ್ಲಿ;


ಭಕ್ತಿ ಪ್ರೀತಿಗಳೆರಡೂ ನಂಬಿಕೆಯ ಮೇಲೆ ಭದ್ರವಾಗಿ ನಿಂತಿವೆ,
ಹಾಗಾಗಿಯೇ ಮಾನವೀಯತೆ ಇನ್ನೂ ಛಿದ್ರವಾಗದೆ ಉಳಿದಿದೆ;

ರಾಷ್ಟ್ರ ಭಾಷೆ ಸೋಗಿನಲ್ಲಿ ಹಿಂದಿ ಹೇರಿಕೆ!

ಭಾರತ ದೇಶದ ಒಟ್ಟು ಐಕಮತ್ಯ, ಸಮಗ್ರತೆ ಮತ್ತು ಪರಿಪೂರ್ಣತೆಯನ್ನು ಭದ್ರಗೊಳಿಸಲು, ಅದರ ಎಲ್ಲಾ ಭಾಷಾವಾರು ಜನಾಂಗಗಳ ಪ್ರಾದೇಶಿಕ ಸ್ವಾಯತ್ತತೆಯ ಅಖಂಡತೆಯನ್ನು ಕಾಪಾಡುವುದು ಹಾಗು ಬೆಳೆಸುವುದು ಬಹುಮುಖ್ಯವಾದದ್ದು.

ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿನ ತಲೆನೋವು

ಬೆಂಗಳೂರು ನಗರದ ಟ್ರಾಫಿಕ್ ಸಿಗ್ನಲುಗಳಲ್ಲಿ ಇತ್ತೀಚೆಗೆ ಒಂದು ತಲೆನೋವು ನಮ್ಮೆಲ್ಲರನ್ನೂ ಕಾಡುತ್ತಿದೆ.