ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಜ್ಞಾನ

ಸತಿಪುತ್ರರ್ ಮಿತ್ರರಾಪ್ತರ್ ತನುಧನಮನಮೆಂಬಿಂತಿವಂ ನಿತ್ಯಮೆಂದು-
ಚ್ಚತರವ್ಯಾಸಂಗದಿಂ ಮೈಯಱಿಯದೆ ಮರುಳಾಗಿರ್ದೆನೆನ್ನಂ ದುರಾಶಾ-
ವೃತನಂ ದುರ್ಮೋಹಿಯಂ ದುಸ್ತರತರವಿಷಯವ್ಯಾಪ್ತನಂ ದುರ್ಧರೈನೋ-
ಹತನಂ ದುರ್ಬೋಧನಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ||

ದುರ್ಧರ+ಏನ:= ಕಡುತರವಾದ ಕಷ್ಟ, ತಪ್ಪು

ಅಜ್ಞಾನ

ಸತಿಪುತ್ರರ್ ಮಿತ್ರರಾಪ್ತರ್ ತನುಧನಮೆಂಬಿಂತಿವಂ ನಿತ್ಯಮೆಂದು-
ಚ್ಚತರವ್ಯಾಸಂಗದಿಂ ಮೈಯಱಿಯದೆ ಮರುಳಾಗಿರ್ದೆನೆನ್ನಂ ದುರಾಶಾ-
ವೃತನಂ ದುರ್ಮೋಹಿಯಂ ದುಸ್ತರತರವಿಷಯವ್ಯಾಪ್ತನಂ ದುರ್ಧರೈನೋ-
ಹತನಂ ದುರ್ಬೋಧನಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ||

ದುರ್ಧರ+ಏನ:= ಕಡುತರವಾದ ಕಷ್ಟ, ತಪ್ಪು

ವೀಣೆ

ಏನೂ ಆಗಿದೆ ತಂತಿ ಹರಿದಿದೆ
ಹುಡುಕಲೇ ಬೇಕಿದೆ ಅಪಸ್ವರ ಬರುವ ಮುನ್ನ
ತಾಳ ತಪ್ಪಿದೆ , ಕೈ ನಡುಗಿದೆ
ಹುಡುಕಲೇ ಬೇಕಿದೆ ಶೃತಿ ಜಾರುವ ಮುನ್ನ

ಅಸ್ತೆಯಿಂದಲಿ ನಾನೆ ತಂದ ವೀಣೆ
ಪ್ರೀತಿಯಿಂದಲಿ ನುಡಿಸಿದಂತ ವೀಣೆ
ನಡುಗಿಸಿತಿಂದು ಏಕೆ ನನ್ನೇ
ನುಡಿಯದೆ ಪ್ರೇಮ ರಾಗವನ್ನೇ

ಜೀವ ಜೀವವ ಬೆಸೆದಂತ ತಂತಿ
ಕಣ್ಣು ಕಣ್ಣಲಿ ಕಾಣಿಸಿದಂತ ಪ್ರೀತಿ

ಬೋಸ್: ಇಂಡಿಯನ್ ಅನ್ನುವ ಕಾರಣಕ್ಕೆ ನೊಬೆಲ್ ಸಿಗಲಿಲ್ಲ!!

ಸೆಪ್ಟೆಂಬರ್ ೧೦, ಬುದವಾರ ಶುರುವಾದ ಪ್ರೊಟಾನ್‍ಗಳನ್ನು ಡಿಕ್ಕಿ ಹೊಡೆಸುವ ಒರೆಗಚ್ಚಿಕೆಗೆ(ಪ್ರಯೋಗಕ್ಕೆ) ಕಾರಣಿಗರಾದ ಇಂದಿನ ಮತ್ತು ಹಿಂದಿನ ಮೂರು physicistಗಳಲ್ಲಿ ಒಬ್ಬರಿಗೆ ಆಗಲೇ ನೊಬೆಲ್ ಬಂದಿತ್ತು, ಎರಡನೆಯವರಿಗೆ ಇನ್ನೇನು ಈ ಒರೆಗಚ್ಚಿಕೆ ಸಿದ್ದವೆಂದು ಸಾಬೀತಾದಲ್ಲಿ, ನೊಬೆಲ್ ಸಿಕ್ಕೀತು, ಆದರೆ ಮೂರನೆಯವರಿಗೆ ಅದು ಸಿಗಲೇ ಇಲ್ಲ.

ಪತ್ರಗಳು

"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ ಹೊರಟಿರುವ ಆ-ಮೈಲ್ನ ಸುಳಿವು ಸಿಗಬಹುದು.

ತಿಳಿ ನೀಲಿ ಬಣ್ಣದ "ಅಂತರ್ದೇಶೀಯ ಪತ್ರ", ಹಳದಿ ಬಣ್ಣದ "ಪೋಸ್ಟ್ ಕಾರ್ಡ್", ಕಾವಿ ಬಣ್ಣದ್ದೋ, ಖಾಕಿ ಬಣ್ಣದ್ದೋ, ಇಲ್ಲ ಹಲವು ವರ್ಣ ಸಂಯೋಜನೆಗಳ "ಪೋಸ್ಟ್ ಕವರ್"ಎಂಬಿತ್ಯಾದಿ ಹಲವು ಬಗೆಯ ವೈವಿಧ್ಯತೆಯಿಂದ ಕೂಡಿದ ಸಂದೇಶವಾಹಕಗಳು. ಈ ಮೇಲೆ ಹೇಳಿದ ಬರೀ ಪತ್ರಗಳಿಗೆ ಸಂದೇಶವಾಹಕಗಳು ಎಂದು ಕರೆದದ್ದನ್ನು ನೀವು ಆಕ್ಷೇಪಿಸಬಹುದೋ ಎನೋ, ಪತ್ರಕ್ಕೆ ಕಾಲುಂಟೆ, ರೆಕ್ಕೆ ಉಂಟೆ ಎಂದು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪೇಚಿಗೆ ಸಿಲುಕಿಸಬಹುದು.ಆದರೆ ಈ ಹಲವು ಬಗೆಯ ಪತ್ರಗಳೊಂದಿಗೆ ಅವನ್ನು ವಿವಿಧೆಡೆಗೆ ಸಾಗಿಸುವ ಅಂಚೆಯವರನ್ನೂ ಸೇರಿಸಿ, ಈ ಶಬ್ದ ಪ್ರಯೋಗಿಸಿದ್ದಾದರೆ ನೀವು ಆಕ್ಷೇಪಿಸಲಾರಿರಿ.

ರಂಗೋಲಿ ನಾಯಕಿ

ಮನೆಯ ಮುಂದಿರುವ ರಂಗೋಲಿ ನಲಿಯುತಲಿ
ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ
ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ
ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ
ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ
ಕಾಣುತಿಹಳು ಅತಿಸುಂದರ ಅಲಂಕಾರಗಳೇ ಇಲ್ಲದಂತೆ
ಕಣ್ಣ್ ರೆಪ್ಪೆಗಳು ಏನನ್ನೋ ಸನ್ನೆ ಮಾಡುತ್ತಿವೆ ಅವಳಿಗೆ ಅರಿವಿಲ್ಲದಂತೆ

ಬೆಂಗಳೂರಿನಲ್ಲಿ ಭೂಕಂಪ!!!

ನಾನು ಇಂದು ಬೆಳಿಗ್ಗೆ ಆಫೀಸಿಗೆ ಹೊರಡೋ ಸಮಯದಲ್ಲಿ ಎನೋ ಶಬ್ದ ಬಂದ ಹಾಗಾಯಿತು... ಭೂಮಿ ನಡುಗಿದ ಹಾಗಾಯಿತು...
ನಾನು ನಮ್ಮ ಮನೆಯ ಬಳಿ ಯಾವುದೋ ದೊಡ್ಡ ಲಾರಿ(Truck) ಹೋಗ್ತಿದೆ ಅಂತ ತಿಳಿದು ಸುಮ್ಮನಾದೆ...

ಆದರೆ ಈಗತಾನೆ ಅಪ್ಪ ಫೋನ್ ಮಾಡಿ ಈ ವಿಷಯದ ಬಗ್ಗೆ ತಿಳಿಸಿದರು... ಆಗಲೇ ಗೊತ್ತಾದದ್ದು ಬೆಳಿಗ್ಗೆ ಭೂಕಂಪ ಆಯ್ತು ಅಂತ... ಟಿವಿ೯ ನಲ್ಲಿ ಅದೆ ಸುದ್ಧಿ ಅಂತೆ...

ಜಣ ಜಣ ಕಾಂಚಾಣ

ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ
ಸಾದಿಸೋಕೆ ಪಡಲೇಬೇಕು ಕಷ್ಟ
ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ
ದುಡಿಯುವವನ ಬಳಿ ಮೆರೆಯುವುದು ಜಣ ಜಣ

-Vರ ( Venkatesha ರಂಗಯ್ಯ )