ಬೋಸ್: ಇಂಡಿಯನ್ ಅನ್ನುವ ಕಾರಣಕ್ಕೆ ನೊಬೆಲ್ ಸಿಗಲಿಲ್ಲ!!

ಬೋಸ್: ಇಂಡಿಯನ್ ಅನ್ನುವ ಕಾರಣಕ್ಕೆ ನೊಬೆಲ್ ಸಿಗಲಿಲ್ಲ!!

ಬರಹ

ಸೆಪ್ಟೆಂಬರ್ ೧೦, ಬುದವಾರ ಶುರುವಾದ ಪ್ರೊಟಾನ್‍ಗಳನ್ನು ಡಿಕ್ಕಿ ಹೊಡೆಸುವ ಒರೆಗಚ್ಚಿಕೆಗೆ(ಪ್ರಯೋಗಕ್ಕೆ) ಕಾರಣಿಗರಾದ ಇಂದಿನ ಮತ್ತು ಹಿಂದಿನ ಮೂರು physicistಗಳಲ್ಲಿ ಒಬ್ಬರಿಗೆ ಆಗಲೇ ನೊಬೆಲ್ ಬಂದಿತ್ತು, ಎರಡನೆಯವರಿಗೆ ಇನ್ನೇನು ಈ ಒರೆಗಚ್ಚಿಕೆ ಸಿದ್ದವೆಂದು ಸಾಬೀತಾದಲ್ಲಿ, ನೊಬೆಲ್ ಸಿಕ್ಕೀತು, ಆದರೆ ಮೂರನೆಯವರಿಗೆ ಅದು ಸಿಗಲೇ ಇಲ್ಲ.

ಅವರೇ, ಈಗಿನ ಹಿಗ್ಸ್-ಬೋಸಾನ್ ಒರೆಗಚ್ಚಿಕೆಯ ಬೋಸ್, ಸತ್ಯೇಂದ್ರನಾಥ್ ಬೋಸ್.

ಈ ಬೋಸಾನ್ ಎಂಬ ಸಬ್-ಅಟಮಿಕ್ ಪಾರ್ಟಿಕಲ್ ಒಂದಕ್ಕೆ ಹೆಸರು ಬಂದಿರುವದು, ಈ ಬೋಸ್ ಅವರಿಂದಾಗಿಯೇ. ಬಹುಶ ಇಂಗಲೀಶ್ ನುಡಿಯ ಪದಕಣಜದಲ್ಲಿ ಇಂಡಿಯನ್ ಒಬ್ಬರ ಹೆಸರಿನಿಂದ ಬಂದ ಹೆಸರುಪದ(noun) ಇದೊಂದೇ. ಅದಕ್ಕೇ ಏನೋ, ಅದನ್ನೆಂದೂ ಕೆಪಿಟಲ್ ನಲ್ಲಿ ಬರೆಯಲಾಗಿಲ್ಲ.

ಈಗ ನಡೆಯುತ್ತಿರುವ ಈ ಹತ್ತು ಬಿಲಿಯನ್ ಡಾಲರ್ LHC(Large Hardon Collider) ಒರೆಗಚ್ಚಿಕೆ ಈ ಬೋಸ್ ಮತ್ತು ಅಲ್ಬರ್ಟ್ ಐನ್‍ಸ್ಟೈನ್ ಇಲ್ಲದೇ ಆಗುತ್ತಲೇ ಇರಲಿಲ್ಲ.

೧೯೨೪ರಲ್ಲಿ ಬೋಸ್, ಐನ್‍ಸ್ಟೈನ್ ಅವರಿಗೆ ಓಲೆಯೊಂದನ್ನು ಕಳುಹಿದರು, ಅದರಲ್ಲಿ ಅವರು ಮಾಡೆಲ್ ಒಂದನ್ನು ಬಿಡಿಸಿ ಬರೆದಿದ್ದರು, ಅದುವೇ ಮುಂದೆ Bose-Einstein condensate phenomenon ನ ಕಂಡುಕೊಳ್ಳುವಿಕೆಗೆ ನಾಂದಿಯಾಯಿತು.

ಬೋಸ್ ಕಳಿಸಿದ್ದ ಆ ಓಲೆ, ಪರಮಾಣು ಇಲ್ಲವೇ atom ಅಂತ ನಾವು ಕರೆಯುವದರ, ಮಾಟಕ್ಕೆ ಕಾರಣವಾದ ಬಹು ಮುಕ್ಕೆಯಾದ ಎರಡು elementary particleಗಳ ಕಂಡುಕೊಳ್ಳುವಿಕೆಗೆ ನಾಂದಿಯಾಯಿತು, ಅವೇ ಬೋಸಾನ್ ಮತ್ತು ಫೆರ್ಮಿಯಾನ್, ಇಟಲಿಯ physicist ಎನ್ರಿಕೋ ಫೆರ್ಮಿ(Enrico Fermi) ಯಿಂದಾಗಿ ಇನ್ನೊಂದಕ್ಕೆ ಆ ಹೆಸರು ಬಂತು.

ಐನ್‍ಸ್ಟೈನ್ ಅವರಿಗೆ photoelectric effect ನ ಕಟ್ಟಳೆ(law)ನ್ನು ತಿಳಿಸಿ ಕೊಟ್ಟಿದ್ದಕ್ಕೆ ೧೯೨೧ರಲ್ಲೇ ನೊಬೆಲ್ ಬಂದಾಗಿತ್ತು, ಫೆರ್ಮಿ ಅವರಿಗೆ ೧೯೩೮ರಲ್ಲಿ ನೊಬೆಲ್ ಸಿಕ್ಕಿತು.

ಇದಾದ ಹತ್ತಾರು ವರುಶಗಳ ನಂತರ ೧೯೬೪ರಲ್ಲಿ ಬ್ರಿಟಿಶ್ ಸೈಂಟಿಸ್ಟ್ ಪೀಟರ್ ಹಿಗ್ಸ್(peter higgs) ಅವರಿಗೆ ದೊಡ್ಡದೊಂದು ಎಣಿಕೆ ಹೊಳೆಯಿತು, ಬಿಗ್ ಬ್ಯಾಂಗ್ ಆದ ಒಂದು ಸೆಕೆಂಡ್‍ನ,ಬಿಲ್ಲಿಯನ್ ನ ಒಂದು ಪಾಲಿನಸ್ಟು ಗಳಿಗೆಯಲ್ಲಿ, ಮ್ಯಾಟರ್‍ಗೆ(matter) ಮಾಸ್(mass) ಹೇಗೆ ಸಿಕ್ಕಿತು ಅಂಬುದನ್ನು ಕಂಡುಕೊಳ್ಳಲು, ಒರೆಗಚ್ಚಿಕೆಯೊಂದನ್ನು ಮಾಡಬಹುದೆಂದು ತೋರಿತು.

ಹಿಗ್ಸ್, ಹಿಗ್ಸ್ ಬೋಸಾನ್ ಪಾರ್ಟಿಕಲ್ ಬಗ್ಗೆ ತನ್ನ ಥಿಯರಿ ಒಂದನ್ನು ಮುಂದಿಟ್ಟರು, ಇದರಂತೆ, ಈ ಹಿಗ್ಸ್-ಬೋಸಾನ್‍ ಪಾರ್ಟಿಕಲ್‍ ಅನ್ನು ಹಿಗ್ಸ್ ಫೀಲ್ಡಿನಲ್ಲಿ ಸೋಕುವ ಯಾವುದೇ ಸಬ್-ಅಟಮಿಕ್ ಪಾರ್ಟಿಕಲ್ ತನ್ನ ಮಾಸ್ ಅನ್ನು ಪಡೆದುಕೊಳ್ಳುತ್ತದೆ. ಹೆಚ್ಚು ಬಾರಿ ಇದನ್ನು ಸೋಕಿದಂತೆ ಆ ಸಬ್-ಅಟಮಿಕ್ ಪಾರ್ಟಿಕಲ್‍ನ ತೂಕ ಹೆಚ್ಚುತ್ತ ಹೋಗುತ್ತದೆ. ಸೋಕದೇ ಇದ್ದಲ್ಲಿ ಅದು ತನ್ನ ಮಾಸ್ ಅನ್ನು ಪಡೆದುಕೊಳ್ಳುವದೇ ಇಲ್ಲ. ಹಾಗಾಗಿ ಈ ಹಿಗ್ಸ್-ಬೋಸಾನ್ ಅನ್ನು ಗಾಡ್ ಪಾರ್ಟಿಕಲ್ ಅಂತ ಕರೆಯುತ್ತಾರೆ.

ಈ ಹಿಗ್ಸ್ ಬೋಸಾನ್‍ನ ಇರುವಿಕೆಯನ್ನು ಕಂಡುಕೊಳ್ಳುವ ಜತನವೇ ಈ ಒರೆಗಚ್ಚಿಕ(ಪ್ರಯೋಗ). ಈ ಒರೆಗಚ್ಚಿಕೆಯಿಂದ ವಿಶ್ವ ಹೇಗೆ ಆಯಿತು ಅಂಬುದಸ್ಟೇ ಅಲ್ಲ, ಅದರ ಮಾಟ ಹೇಗಿದೆ ಅಂಬುವದೂ ತಿಳಿಯುತ್ತದೆ.

ಇದೇ ೨೧ನೇ ನೋರೇಡಿನಲ್ಲಿ ಮೂವರು ಅಮೇರಿಕನ್ನರಿಗೆ(Eric Cornell, Carl Wieman ಮತ್ತು Wolfgang Ketterle) ಒಟ್ಟಾಗಿ ನೊಬೆಲ್ ಕೊಡಲಾಯಿತು. ಇವರು ಬೋಸ್ ಮತ್ತು ಐನ್‍ಸ್ಟೈನ್‍ರು ಹೇಳಿದ್ದ, condensate ಅನ್ನುವ ಹೊಸ ಬಗೆಯ matter ಅನ್ನು ಹುಟ್ಟಿಸಿದ್ದಕ್ಕೆ, ನೊಬೆಲ್ ಸಿಕ್ಕಿತು.

ಬೋಸ್ ಅವರ ಮೊಮ್ಮಗ ಫಾಲ್ಗುನಿ ಸರ್ಕಾರ್(Falguni Sarkar) ಹೇಳುವಂತೆ, ಬೋಸ್ ಸ್ಟಾಟಿಸ್ಟಿಕ್ಸ್ ಮೇಲೆ ಕೆಲಸ ಮಾಡಿದ ಮತ್ತೆ ಆರು ಸೈಂಟಿಸ್ಟ್ ರುಗಳಿಗೆ ನೊಬೆಲ್ ಸಿಕ್ಕಿದೆ. ಆದರೆ ಬೋಸ್ ಅವರಿಗೇ ಸಿಕ್ಕಿಲ್ಲ.

ಬ್ರಿಟಿಶ್ ಸೈನ್ಸ್ ಬರಹಗಾತಿ ಮತ್ತು broadcaster ಆಗಿರುವ ಶಾರೋನ್(Sharon Ann Holgate) ಅವರು ಹೇಳುವದು, ಬೋಸ್ ಅವರಿಗೆ ನೊಬೆಲ್ ದೊರಕಬೇಕಿತ್ತು, ಅದರಲ್ಲಿ ಅವರಿಗೆ ಯಾವುದೇ ಅಳುಕಿಲ್ಲ ಎಂದು. ಅವರು ಬಿ.ಬಿ.ಸಿನಲ್ಲಿ ಬೋಸ್ ಅವರ ಮೇಲೊಂದು ಹಿಂದೊಮ್ಮೆ ಡಾಕುಮೆಂಟರಿಯೊಂದನ್ನು ಮಾಡಿದ್ದಾರೆ.

’ನಾನು ಈ ಡಾಕುಮೆಂಟರಿ ಮಾಡುವಾಗ, ಈ ವೆಕ್ತಿ ಎಸ್ಟೊಂದು ಬ್ರಿಲಿಯಂಟ್ ಆಗಿದ್ದರು, ಆದರೂ ಇವರನ್ನು ಕಡೆಗಣಿಸಲಾಗಿದೆ, institutionalised racism ಇದಕ್ಕೆ ಕಾರಣವಿದ್ದೀತು, ಆತ ಒಬ್ಬ ಇಂಡಿಯನ್ ಆಗಿದ್ದರು ಅನ್ನುವ ಕಾರಣಕ್ಕೆ ಅವರನ್ನು ಕಡೆಗಣಿಸಲಾಯಿತು’ ಅಂದಿದ್ದಾರೆ.

’ನನಗೆ ದಿಟವಾಗಿ ತುಂಬ ಸಿಟ್ಟು ಬಂದಿತ್ತು, ಅವರ ಹೆಸರನ್ನು ತುಸು ಪಸರಿಸುವದು ನನಗೆ ಬೇಕಿತ್ತು’ ಅಂತ ಶಾರೋನ್ ಹೇಳುತ್ತಾರೆ.

ಬುಡ -

http://in.news.yahoo.com/43/20080910/982/tsc-bose-the-indian-behind-the-big-bang.html